ಪಾಂಡವರ ಇಂದ್ರಪ್ರಸ್ಥ ನೋಡಿ ಕೌರವರು ಉರಿದುಕೊಂಡಿದ್ರು, ಈಗ ಸಂಸತ್ ನೋಡಿ ಕಾಂಗ್ರೆಸ್‌ಗೆ ಉರಿ: ಸಿಟಿ ರವಿ
ಈಗ ಸಂಸತ್ ಕಟ್ಟಿದ್ದು ಬ್ರಿಟಿಷರು ಎನ್ನುವ ಹಾಗಿಲ್ಲ. ನಮ್ಮವರೇ ಕಟ್ಟಿದ್ರು ಎಂದು ಹೇಳಬೇಕು. ಇದು ಕಾಂಗ್ರೆಸ್‌ಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದರು.

ಬೆಂಗಳೂರು (ಜೂ.1) :ಈಗ ಸಂಸತ್ ಕಟ್ಟಿದ್ದು ಬ್ರಿಟಿಷರು ಎನ್ನುವ ಹಾಗಿಲ್ಲ. ನಮ್ಮವರೇ ಕಟ್ಟಿದ್ರು ಎಂದು ಹೇಳಬೇಕು. ಇದು ಕಾಂಗ್ರೆಸ್‌ಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದರು.
ಸಂಸತ್ ಉದ್ಘಾಟನೆಗೆ ಕಾಂಗ್ರೆಸ್ ಬೈಕಾಟ್ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು. ನೂತನ ಸಂಸತ್ತು ಕಟ್ಟಿರುವುದು ಕಾಂಗ್ರೆಸ್ ಗೆ ಸಹಿಸೋಕೆ ಆಗ್ತಾ ಇಲ್ಲ. ಬಿಜೆಪಿಗರು ಕಟ್ಟಿದರು, ಮೋದಿ ಕಟ್ಟಿದ್ರು ಎಂಬ ನೋವು ಕಾಂಗ್ರೆಸ್ ಇದೆ. ಪಾಂಡವರ ಇಂದ್ರಪ್ರಸ್ತಕ್ಕೆ ಹೋಗಿದ್ದ ದುರ್ಯೋಧನಾದಿ ಕೌರವರು ಅದನ್ನು ನೋಡಿ ಹೊಟ್ಟೆ ಉರಿದುಕೊಂಡಿದ್ರು. ಈಗ ಅದೇ ರೀತಿ ಹೊಸ ಸಂಸತ್'ನ ವೈಭೋಗ ನೋಡಿ ಕಾಂಗ್ರೆಸ್ ಹೊಟ್ಟೆ ಉರಿದು ಕೊಳ್ಳುತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಕೌರವರಿಗೆ ಹೋಲಿಸಿದರು. ಇದು ಭಾರತದ ಪ್ರಜಾಪ್ರಭುತ್ವದ ದೇಗುಲ ಅಂತಾ ದೇವೇಗೌಡರು ಚೆನ್ನಾಗಿ ಹೇಳಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗ್ತಿದ್ದಂತೆ ಅರ್ಬನ್ ನಕ್ಸಲ್ ಚಟುವಟಿಕೆ ಆರಂಭ: ಸಿಟಿ ರವಿ
ಬುದ್ಧಿಜೀವಿಗಳ ವಿರುದ್ಧ ತೀವ್ರ ವಾಗ್ದಾಳಿ:
ಗುಂಡು-ತುಂಡು, ಸಿಗರೆಟ್ ಕೈಯಲ್ಲಿ ಇದ್ದರೆ ಮಾತ್ರ ಬುದ್ದಿ ಓಡುವ ಜನ ಅವರು. ಅವರು ಮಾತ್ರ ಬುದ್ದಿಜೀವಿಗಳಾ? ಬುದ್ದಿಜೀವಿಗಳ ಬಗ್ಗೆ ಸಿಟಿ ರವಿ ತೀವ್ರ ವಾಗ್ದಾಳಿ ನಡೆಸಿದರು.
ಈ ಬುದ್ದಿಜೀವಿಗಳು ಯಾರು? ಮೆಕಾಲೆ ಗರಡಿಯಲ್ಲಿ ಪಳಗಿದವರು. ಮೆಕಾಲೆ ಸದಾ ಭಾರತದ ಬಗ್ಗೆ ದಾಸ್ಯದ ಚಿಂತನೆಯಲ್ಲೇ ಇದ್ದ ನಮ್ಮ ಸಂಸ್ಕೃತಿಗಳ ವಿರುದ್ಧ ಇದ್ದವರು.
ದಾಸ್ಯದಲ್ಲೆ ಇರಬೇಕು ಎನ್ನುವ ಯೋಚನೆಯಲ್ಲಿ ಜನರನ್ನು ತಯಾರು ಮಾಡುವ ಯೋಚನೆ ಅವನದ್ದಾಗಿತ್ತು ಎಂದರು.
ಅಲೆಕ್ಸಾಂಡ್, ಅಕ್ಬರ್‌ಗೆ ಗ್ರೇಟ್ ಅನ್ನೋ ಜನ ಇವರು
ಕಾರ್ಲ್ ಮಾರ್ಕ್ಸ್ ಗರಡಿಯಲ್ಲಿ ಪಳಗಿರುವ ಬುದ್ಧಿಜೀವಿಗಳು. ಯಾವಾಗಲೂ ಕುಟುಂಬ ಒಂದು ಸಂಸ್ಥೆ ಎಂತಿದ್ದ ಮಾರ್ಕ್ಸ್. ರಾಜ್ಯ ಇರಬಾರದು ಎನ್ನುವ ಚಿಂತನೆ ಮಾರ್ಕ್ಸ್ ದಾಗಿತ್ತು.. ಅವರ ಚಿಂತನೆಯಲ್ಲಿರುವ ಇವರು ಎಂದಾದರೂ ಭಾರತ ಶ್ರೇಷ್ಠ ಎಂದು ಹೇಳಿದ್ದಾರಾ? ಸತ್ಯ ಹೇಳಿದ್ದಾರಾ? ಇವರೆಲ್ಲ ಅಲೆಗ್ಸಾಂಡರ್ ದಿ ಗ್ರೇಟ್, ಅಕ್ಬರ ದಿ ಗ್ರೇಟ್ ಎನ್ನೋ ಜನ. ಇವರೆಲ್ಲ ಯಾರು? ದೇಶ ಲೂಟಿ ಮಾಡಿದವರು, ದಾಳಿಕೋರರು, ನಮ್ಮ ಸಂಸ್ಕೃತಿ ನಾಶ ಮಾಡಿದವರು, ನಮ್ಮ ತಾಯಂದಿರ ಶೀಲವನ್ನು ಕೆಡಿಸೋದಕ್ಕೆ ಕೈ ಹಾಕಿದವರು, ಇಂಥವರನ್ನು ದಿ ಗ್ರೇಟ್ ಎಂದು ನಮ್ಮ ದೇಶದಲ್ಲಿ ಹೇಳಿಕೊಳ್ತೇವೆ ಎನ್ನೋದೆ ದೇಶಕ್ಕೆ ಅಪಮಾನ ಎಂದು ಬುದ್ಧಿಜೀವಿಗಳ ವಿರುದ್ಧ ಕಿಡಿಕಾರಿದರು.
ನಮ್ಮ ದೇಶದಲ್ಲಿ ಸಾಧನೆ ಮಾಡಿದವರು ಇಲ್ವಾ?
ದಾಳಿಕೋರರನ್ನು, ಮತಾಂಧರನ್ನು ದಿ ಗ್ರೇಟ್ ಎಂದು ಹೊಗಳು ಇವರಿಗೆ ನಮ್ಮ ದೇಶದಲ್ಲಿ ಸಾಧನೆ ಮಾಡಿದವರು ಸಿಗಲಿಲ್ಲವ? ಆರ್ಯಭಟ, ಚಾಣಕ್ಯ , ಅಶೋಕ ಚಕ್ರವರ್ತಿ, ರಾಜರಾಜ ಚೋಳ ಇವರೆಲ್ಲ ಎಲ್ಲಿಯವರು? ಅವರ ಇತಿಹಾಸದ ಬಗ್ಗೆ ಎಲ್ಲಾದರೂ ಹೇಳಿದ್ರಾ? ಈ ಬುದ್ಧಿಜೀವಿಗಳು? ರಾಜ ರಾಜ ಚೋಳ ರಾಜೇಂದ್ರ ಚೋಳ, ಕರಿಕಾಳ ಚೋಳ, ಇವರೆಲ್ಲಾ ಇಂಡೊನೇಷ್ಯ ಕಾಂಬೋಡಿಯಾವರೆಗೆ ಭಾರತವನ್ನು ವಿಸ್ತರಣೆ ಮಾಡಿದ್ರು ಎನ್ನೋದು ಇತಿಹಾಸದಲ್ಲಿ ಓದಿದ್ದೇವಾ.? ಅಶೋಕ್ ಚಕ್ರವರ್ತಿ ಸಾಮ್ರಾಜ್ಯ ಪರ್ಶಿಯಾವನ್ನು ದಾಟಿ ಹೋಗಿತ್ತು ಅದನ್ನು ಓದೀದ್ದೇವಾ? ಮಕ್ಕಳಿಗೆ ಇದನ್ನು ಕಲಿಸಿದ್ದೇವಾ? ನಾವು ಹೇಳಿಕೊಟ್ಟಿದ್ದು ಅಕ್ಬರ್ ಗ್ರೇಟ್, ಅಲೆಗ್ಸಾಂಡರ್ ಗ್ರೇಟ್ ಅನ್ನೋದು.
ಬಿಜೆಪಿ ಸರ್ಕಾರದ ಕಾಮಗಾರಿ, ಯೋಜನೆಗಳ ಕಡಿತ: ಸರ್ಕಾರದ ವಿರುದ್ಧ ಸಿಟಿ ರವಿ ಆಕ್ರೋಶ
ಈ ಬುದ್ಧಿಜೀವಿಗಳಿಗೆ ರಾಷ್ಟ್ರೀಯತೆ, ಭಾರತದ ಹಿರಿಮೆ ಗರಿಮೆಗಳ ಬಗ್ಗೆ ಹೇಳುವುದು ಅಪತ್ಯವಾಗಿ ಕಂಡಿದೆ. ಇಂಥ ಜನಗಳು ಇವತ್ತು ಸಿದ್ದರಾಮಯ್ಯ ಕಿವಿಗೆ ಪದೇಪದೆ ಊದುತ್ತಾ ಇದ್ದಾರೆ. ಭಾರತದ ಶ್ರೇಷ್ಠತೆಯನ್ನು ಹೇಳುವ ಕೆಲಸ ಆಗಬೇಕು ಆಗ ಭಾರತ ಎದ್ದು ನಿಲ್ಲುತ್ತೆ. ಸಾಮಾನ್ಯ ಜನ ದೇಶಕ್ಕೆ ಸಮರ್ಪಣೆ ಮಾಡಿದ್ದನ್ನು ಹೇಳಬೇಕು, ವಿಜ್ಞಾನ ತಂತ್ರಜ್ಞಾನ ಹೇಳಿದರೆ ಭಾರತ ಎದ್ದು ನಿಲ್ಲುತ್ತದೆ. ಆದರೆ ಈ ಬುದ್ಧಿಜೀವಿಗಳಿಗೆ ಭಾರತ ಎದ್ದು ನಿಲ್ಲುವುದು ಬೇಕಿಲ್ಲ. ಹೀಗಾಗಿ ಪಠ್ಯ ಪುಸ್ತಕ ನೆಪ ಮಾಡಿಕೊಂಡಿದ್ದಾರೆ. ಹಾಗಾದರೆ ಇವರು ಮಾತ್ರ ತಜ್ಞರಾ? ಪಠ್ಯಪುಸ್ತಕ ಬಗ್ಗೆ ಅವರು ಮಾತ್ರ ವಿರೋಧ ಮಾಡ್ತಾ ಇದ್ದಾರೆ. ಬುದ್ಧಿಜೀವಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.