ಬಿಜೆಪಿ ಸರ್ಕಾರದ ಕಾಮಗಾರಿ, ಯೋಜನೆಗಳ ಕಡಿತ: ಸರ್ಕಾರದ ವಿರುದ್ಧ ಸಿಟಿ ರವಿ ಆಕ್ರೋಶ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಕಾಮಗಾರಿಗಳನ್ನು ಸ್ಥಗಿತಗೊಳಿಸಬಾರದು ಎಂದು ಮಾಜಿ ಶಾಸಕ ಸಿ.ಟಿ. ರವಿ ಒತ್ತಾಯಿಸಿದ್ದಾರೆ.

CT Ravi demanded BJP government works implemented in Chikkamagaluru not be stopped sat

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮೇ 29): ರಾಜ್ಯ ಸರ್ಕಾರದಿಂದ ಅನುದಾನ ತಡೆ ವಿಚಾರಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶೀ ಸಿ.ಟಿ. ರವಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ತಡೆಹಿಡಿದಿರುವ ಅಭಿವೃದ್ಧಿಕಾಮಗಾರಿಗಳನ್ನು ಸರ್ಕಾರ ಪುನರಾಂಭಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಸಿ.ಡಿ. ರವಿ, ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ತಕ್ಷಣ   ಕಾಮಗಾರಿ, ಅನುದಾನ ಸ್ಥಗಿತ ಮಾಡಿದೇ ಸಾಧನೆ ಎಂದು ಲೇವಡಿ ಮಾಡಿದ್ದಾರೆ. ಅನುದಾನದ ತಡೆ ಹಿಡಿಯುವುದು ರಾಜಕಾರಣ, ಅಭಿವೃದ್ಧಿ ಭಾಗವಲ್ಲ ,ಜನ ವೋಟ್ ಹಾಕಿದ್ದು ಅಭಿವೃದ್ಧಿ ಕಾರ್ಯ ಮಾಡಲಿ ಅಂತಾ ತಡೆ ಹಿಡಿಯುವುದಕ್ಕೆ ಅಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಸರ್ಕಾರದ ಕರ್ತವ್ಯವಾಗಿದ್ದು ಸರ್ಕಾರ ತಪ್ಪು ಮಾಡಿದಾಗ ಅದನ್ನು ಎಚ್ಚರಿಸುವ ಕೆಲಸವನ್ನು ವಿರೋಧಪಕ್ಷವಾಗಿ ನಾವು ಮಾಡಿದ್ದೇವೆ. ಚಿಕ್ಕಮಗಳೂರು ಅಂತ ಜಿಲ್ಲೆಯಲ್ಲಿ ಮಳೆಗಾಲ  ಆರಂಭವಾಗುತ್ತೆ, ಅಲ್ಲಿ ಕಾಮಗಾರಿಗಳನ್ನು  ಬೇಗ ಮುಗಿಸಬೇಕು, ತಡೆಹಿಡಿಯುವ ಆದೇಶ ಮಾಡಿದ್ರೆ ಅಭಿವೃದ್ಧಿ ಕಾಮಗಾರಿ ಎಲ್ಲಿಂದ ಮಾಡುವುದು ಸರ್ಕಾರ ಅನುದಾನ ತಡೆ ಹಿಡಿದಿರುವುದು ಆಸ್ಪತ್ರೆ, ಸೇತುವೆ,  ರಸ್ತೆಯ ಕಾಮಗಾರಿಗಳು ಸ್ಥಗಿತವಾಗಿದೆ ಎಂದರು. 

Bengaluru- ಬಿಬಿಎಂಪಿ ಚುನಾವಣೆಗೆ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚನೆ

ನಾವು ಹೇಳಿದ್ದೇವಾ... ಹಾಗಂತ ಡಂಗೂರು ಸಾರಿಸಿದ್ದೇವಾ... : ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುತ್ತೇವೆ ಎಂದು ನಾವು ಹೇಳಿದ್ದೇವಾ? ಹಾಗಂತ ಡಂಗೂರು ಸಾರಿಸಿದ್ದೇವಾ? ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹೇಳದೆ ರೈತರ ಖಾತೆಗೆ 10 ಸಾವಿರ ಹಾಕಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾವು ಉಚಿತ ಗ್ಯಾಸ್ ಕನೆಕ್ಷನ್ ಕೊಟ್ಟಿದ್ದೇವೆ. 500 ರೂ.ಗೆ ಗ್ಯಾಸ್ ಎಂದು ನೀವು ಹೇಳಿದ್ದೀರಾ, ಈಗ ಕೊಡಿ. ಮನೆಗೆ 2 ಸಾವಿರ ಎಂದಿದ್ದೀರಾ ಈಗ ಕೊಡಿ ಎಂದಿದ್ದಾರೆ. ಸ್ವಿಸ್ ಬ್ಯಾಂಕಿನಿಂದ ಹಣ ಬಂದರೆ 15 ಲಕ್ಷ ಹಂಚಬಹುದು ಎಂದು ಹೇಳಿದ್ದೇವೆ. ಅದನ್ನ ತರುವ ಪ್ರಯತ್ನ ನಿರಂತರವಾಗಿದೆ. ಅದು ಅಂತರಾಷ್ಟ್ರೀಯ ಕಾನೂನು. ಮೊದಲೆಲ್ಲಾ ಮಾಹಿತಿಯನ್ನೇ ಹಂಚಿಕೆ ಮಾಡುತ್ತಿರಲಿಲ್ಲ. ಈಗ ಮಾಹಿತಿ ಹಂಚಿಕೆ ಆಗುತ್ತಿದೆ ಎಂದರು. 

ಗ್ಯಾರಿಂಟಿ ಕಾರ್ಡ್  ಕೊಟ್ಟ ಮಾತು ಉಳಿಸಿಕೊಳ್ಳಿ :  ಸಿದ್ದರಾಮಯ್ಯನವರು ಚುನಾವಣಾ ಪ್ರಚಾರ ಮಾಡುವಾಗ ಹೇ ಮಾದೇವಪ್ಪ... ನಿಂಗೂ ಫ್ರೀ... ನಂಗೂ ಫ್ರೀ ಎಂದು ಹೇಳಿದ್ದರು. ಸಿಎಂ ಹಾಗೂ ಮಹದೇವಪ್ಪ ಇಬ್ಬರ ಬಳಿಯೂ ಬಿಪಿಎಲ್ ಕಾರ್ಡ್ ಅಲ್ಲ. ಎಲ್ಲರಿಗೂ ಫ್ರೀ ಎಂದು ಹೇಳಿ, ಈಗ ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಕಾರಣ ಏಕೆ ಹುಡುಕುತ್ತಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಮುನ್ನ ಜಾರಿ ಮಾಡಿ. ಅಂದು ಯಾವುದೇ ಕಂಡಿಷನ್‌ ಹಾಕದೇ ಹೇಳಿಕೆ ನೀಡುವ ಮೂಲಕ ಜನರನ್ನ ನಂಬಿಸಿದ್ದೀರಾ... ಈಗ ಕೊಟ್ಟ ಮಾತು ಉಳಿಸಿಕೊಳ್ಳಿ. ಯಾವುದೇ ಸಬೂಬು, ತಕರಾರು ಇಲ್ಲದೆ ಎಲ್ಲಾ ಜಾರಿ ಮಾಡಲಿ. 

ವಿರೋಧ ಪಕ್ಷದ ನಾಯಕನಿಲ್ಲದ್ದಕ್ಕೆ ಖುಷಿಪಡಿ: ಬಿಜೆಪಿಯಿಂದ ವಿರೋಧ ಪಕ್ಷದ ನಾಯಕ ಸ್ಥಾನ ಆಯ್ಕೆಯಾಗದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ಸಿಗರಿಗೆ ಒಳ್ಳೆದೇ ಆಯ್ತಲ್ಲ. ವಿರೋಧ ಪಕ್ಷದ ನಾಯಕನ ಸ್ಥಾನ ಆಗಿಲ್ಲ ಅಂದ್ರೆ ಸಂತೋಷ ಪಡ್ಬೇಕು, ಕಾಂಗ್ರೆಸ್ಸಿಗರಿಗೆ ಸಂಕಟ ಯಾಕೆ ಎಂದು ಪ್ರಶ್ನಿಸಿ, ಕಾಂಗ್ರೆಸ್ಸಿನಲ್ಲೆ ಅವರ ಆಡಳಿತಕ್ಕೆ ವಿರೋಧ ಮಾಡುವವರು ಬಹಳ ಜನ ಇದ್ದಾರೆ. ಅದೇ ಕಾರಣಕ್ಕೆ ನಾವಿನ್ನು ವಿಪಕ್ಷ ನಾಯಕನ ಸ್ಥಾನ ಆಯ್ಕೆ ಮಾಡಿಲ್ಲ ಎಂದರು.

ಕಾಮಗಾರಿಗಳನ್ನು ಸ್ಥಗಿತಗೊಳಿಸದಂತೆ ಪ್ರತಿಭಟನೆ: ಮತ್ತೊಂದೆಡೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ತಡೆಹಿಡಿದಿರುವ ಅಭಿವೃದ್ಧಿಕಾಮಗಾರಿಗಳನ್ನು ಸರ್ಕಾರ ಪುನರಾಂಭಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ತಾಲೂಕು ಕಚೇರಿ ಆವರಣದಿಂದ ಬಿಜೆಪಿ ಬಾವುಟ, ಭಿತ್ತಿ ಫಲಕಗಳನ್ನು ಹಿಡಿದ ಹಲವಾರು ಕಾರ್ಯಕರ್ತರು ಹನುಮಂತಪ್ಪ ವೃತ್ತ, ಎಂಜಿ ರಸ್ತೆ ಮೂಲಕ ಆಜಾದ ಪಾರ್ಕ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಿಜೆಪಿ ಮುಖಂಡ ರವೀಂದ್ರ ಬೆಳವಾಡಿ ಮಾತನಾಡಿ, ಹಿಂದಿನ ಸರ್ಕಾರದ ಅವಯಲ್ಲಿ ಜಿಲ್ಲೆಯ ನೀರಾವರಿ ಯೋಜನೆಗೆ 1,241 ಕೋಟಿ ರೂ.ಗಳನ್ನು ಶಾಸಕರು ಮಂಜೂರು ಮಾಡಿಸಿದ್ದಾರೆ. ಈಗ ಕಾಂಗ್ರೆಸ್ ಸರ್ಕಾರ ಹಲವು ಕಾಮಗಾರಿ ತಡೆಹಿಡಿಯುವ ಮೂಲಕ ಅಭಿವೃದ್ಧ ವಿರೋಧಿ ಎಂಬುದನ್ನು ತೋರ್ಪಡಿಸಿದೆ ಎಂದು ಆರೋಪಿಸಿದರು.

ಗ್ಯಾರಂಟಿ ಅನುಷ್ಠಾನದಲ್ಲಿ ಕಾಂಗ್ರೆಸ್‌ನಿಂದ ಜನತೆಗೆ ದೋಖಾ : ಬಸವರಾಜ ಬೊಮ್ಮಾಯಿ

ಕಾಂಗ್ರೆಸ್‌ಗೆ ನೈತಿಕತೆ ಏನಿದೆ ? ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಮಾತನಾಡಿ, ಅಧಿಕಾರ ಮತ್ತು ಅಭಿವೃದ್ಧಿ ಮಾಡಲಿ ಎಂದು ಜನಾದೇಶ ಕೊಟ್ಟಿದ್ದಾರೆ ವಿನಾ ಕಾಮಗಾರಿ ತಡೆಯಿರಿ ಎಂದಲ್ಲ.ಜಿಲ್ಲೆಗೆ ಅನೇಕ ಕನಕ ಭವನಗಳು, ಅಂಬೇಡ್ಕರ್ ಭವನಗಳು ಮತ್ತಿತರೆ ಅಭಿವೃದ್ಧಿ ಕಾಮಗಾರಿಗಳು ಮಂಜೂರಾಗಿವೆ. ಆ ಕೆಲಸವನ್ನು ತಡೆಯಲು ನಿಮಗೆ ನೈತಿಕತೆ ಏನಿದೆ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಗ್ಯಾರಂಟಿ ಗಳ ಬಗ್ಗೆ ನಾವು ಈಗಲೇ ಹೋರಾಟಕ್ಕಿಳಿಯುವುದಿಲ್ಲ. ಸಮಯ ಕೊಡುತ್ತೇವೆ ನಂತರ ಸರಿಯಾದ ಉತ್ತರ ನೀಡುತ್ತೇವೆ ಎಂದರು.  ಮುಖಂಡರಾದ ಕೆ.ಪಿ.ವೆಂಕಟೇಶ್, ಕೋಟೆ ರಂಗನಾಥ್ ಮಧುಕುಮಾರರಾಜ್ ಅರಸ್, ಬೀಕನಹಳ್ಳಿ ಸೋಮಶೇಖರಪ್ಪ, ನಗರಸಭೆ ಅಧ್ಯಕ್ಷ  ವರಸಿದ್ದಿವೇಣುಗೋಪಾಲ, ಈಶ್ವರಳ್ಳಿ ಮಹೇಶ್ ಮತ್ತಿತರರಿದ್ದರು.

Latest Videos
Follow Us:
Download App:
  • android
  • ios