ಮಹಿಳೆಯರಿಗೆ ಗ್ಯಾರೆಂಟಿ ಉಚಿತ ಪ್ರಯಾಣ, ಫ್ರೀ ಬಸ್ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ?
ಕಾಂಗ್ರೆಸ್ ಐದು ಉಚಿತ ಗ್ಯಾರೆಂಟಿ ಯೋಜನೆಗಳ ಜಾರಿ ಘೋಷಣೆಯಾಗಿದೆ. ಈ ಪೈಕಿ ಜೂನ್ 11 ರಿಂದ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣ ಸೌಲಭ್ಯ ಸಿಗಲಿದೆ. ರಾಜ್ಯದ ಯಾವುದೇ ಮೂಲೆಗೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ತೆರಳಲು ಅವಕಾಶ ನೀಡಲಾಗಿದೆ. ಹಾಗಾದರೆ ಮಹಿಳೆಯರು ಉಚಿತ ಬಸ್ ಟಿಕೆಟ್ ಬುಕ್ ಮಾಡುವುದು ಹೇಗೆ? ಉಚಿತ ಬಸ್ ಪ್ರಯಾಣಕ್ಕಿರುವ ಷರತ್ತುಗಳೇನು?
ಬೆಂಗಳೂರು(ಜೂನ್.02): ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಆಶ್ವಾಸನೆ ನೀಡಿದ್ದ ಐದು ಗ್ಯಾರೆಂಟಿ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಐದೂ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಇದರಲ್ಲಿ ಮಹಿಳಾ ಶಕ್ತಿ ಯೋಜನೆ ಅಂದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜೂನ್ 11 ರಿಂದ ಜಾರಿಯಾಗುತ್ತಿದೆ. ವಿಶೇಷ ಅಂದರೆ ಕೆಎಸ್‌ಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಕೆಲವೇ ಕೆಲವು ಕಂಡೀಷನ್ ಮೂಲಕ ಮಹಿಳಾ ಉಚಿತ ಬಸ್ ಪ್ರಯಾಣ ಯೋಜನೆ ಜಾರಿ ಮಾಡಲಾಗಿದೆ.ಹಾಗಾದರೆ ಮಹಿಳೆಯರು ಈ ಉಚಿತ ಬಸ್ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ?
ಜೂ.11 ರಿಂದ ರಾಜ್ಯದೊಳಗೆ ಸರ್ಕಾರದ ಸಾಮಾನ್ಯ ಸಾರಿಗೆ ಬಸ್, ಎಕ್ಸ್ ಪ್ರೆಸ್ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾದಿದೆ. ಆದರೆ ಎಸಿ, ನಾನ್ ಎಸಿ ಸ್ಲೀಪರ್, ರಾಜಹಂಸ ಹಾಗೂ ಲಕ್ಸ್ಯುರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಕರ್ನಾಟಕ ರಾಜ್ಯದೊಳಗೆ ಯಾವುದೇ ಮೂಲೆಗೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ. ಸಾರಿಗೆ ಬಸ್‌ನಲ್ಲಿ ದೂರ ಪ್ರಯಾಣಕ್ಕೆ ಇಚ್ಚಿಸುವ ಮಹಿಳೆ, ಫ್ರೀ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ? ಬುಕಿಂಗ್ ವೇಳೆ ಮಹಿಳೆ(ಫೀಮೇಲ್) ಎಂದು ಉಲ್ಲೇಖಿಸಿದ ತಕ್ಷಣ ಟಿಕೆಟ್ ಪ್ರಯಾಣ ದರ ಶೂನ್ಯವಾಗುತ್ತಾ? ಅಥವಾ ಸಾಮಾನ್ಯ ಸಾರಿಗೆ ಬಸ್‌ನಲ್ಲಿ ಮಹಿಳೆ ಯಾವುದೇ ಬುಕಿಂಗ್ ಮಾಡದೇ ಪ್ರಯಾಣ ಮಾಡಲು ಅವಕಾಶವಿದೆಯಾ? ಇಂತಹ ಹಲವು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಐದು ಗ್ಯಾರೆಂಟಿ ಪಡೆಯಲು ಏನು ಮಾಡಬೇಕು? ಯಾರಿಗೆಲ್ಲ ಸಿಗಲಿದೆ ಉಚಿತ ಯೋಜನೆ!
ಹೊರ ರಾಜ್ಯದಿಂದ ಬಂದು ಇಲ್ಲಿಯ ಆಧಾರ ಕಾರ್ಡ್ ಮಾಡಿಸಿಕೊಂಡ ಮಹಿಳೆಯರಿಗೂ ರಾಜ್ಯದೊಳಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆಯಾ? KSRTC ಬಸ್‌ಗಳಲ್ಲಿ ಶೇಕಡಾ 50 ರಷ್ಟು ಮಹಿಳೆಯರಿಗೆ, ಶೇಕಡಾ 50 ರಷ್ಟು ಪುರುಷಕರಿಗೆ ಆಸನಗಳು ಮೀಸಲಾಗಿದೆ. ಪತಿ ಹಾಗೂ ಪತ್ನಿ ಜೊತೆಯಾಗಿ ಪ್ರಯಾಣಕ್ಕೆ ಎರಡು ಟಿಕೆಟ್ ಬುಕ್ ಮಾಡಿದರೆ ಪತ್ನಿಯ ಟಿಕೆಟ್ ಬೆಲೆ ಉಚಿತವಾಗುತ್ತಾ? ಮಹಿಳೆಯರಿಗೆ ಫ್ರೀ ಅನ್ನೋ ಕಾರಣದಿಂದ ಯಾವುದೇ ಬುಕಿಂಗ್ ಇಲ್ಲದೆ ದೂರ ಪ್ರಯಾಣಕ್ಕೆ ಮುಂದಾದರೆ, ಬಸ್‌ನಲ್ಲಿ ಸೀಟು ಸಿಗದೆ ಪ್ರಯಾಣ ರದ್ದಾಗುವ ಸಾಧ್ಯತೆ ಇದೆ. ಹೀಗಾಗಿ ಈ ಎಲ್ಲಾ ಗೊಂದಲ ಹಾಗೂ ಈ ಮಾರ್ಗಸೂಚಿಯಲ್ಲಿ ಈ ಎಲ್ಲಾ ಗೊಂದಲಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ.
ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರ ಉಚಿತ ಪ್ರಯಾಣ ಹೇಗೆ? ಮಹಿಳೆಯರು ಆಧಾರ್ ಕಾರ್ಡ್ ಹಿಡಿದು ಬಸ್ ಹತ್ತಬೇಕೆ? ಬಸ್ ಹತ್ತುವ ಮಹಿಳೆ ರಾಜ್ಯದವರೇ ಅಥವಾ ಹೊರ ರಾಜ್ಯದವರೇ ಅನ್ನೋದನ್ನು ಕಂಡಕ್ಟರ್ ಪರಿಶೀಲಿಸಬೇಕಾ? ಅಥವಾ ಈ ಸಮಸ್ಯೆಗೆ ಮುಕ್ತಿ ಹಾಡಲು ಬಿಎಂಟಿಸಿ ಬಸ್‌ನಲ್ಲಿ ಓಡಾಡಲು ಮಹಿಳೆಯರಿಗೆ ಉಚಿತ ಪಾಸ್ ನೀಡಲಾಗುತ್ತಾ? ಈ ಎಲ್ಲಾ ಗೊಂದಲಕ್ಕೂ ಮಾರ್ಗಸೂಚಿ ಉತ್ತರ ನೀಡಲಿದೆ.
ಕಟೀಲ್‌ಗೂ ಫ್ರೀ, ಬೊಮ್ಮಾಯಿಗೂ ಫ್ರೀ; ಉಚಿತ ಗ್ಯಾರೆಂಟಿ ಜಾರಿ ಬೆನ್ನಲ್ಲೇ ಬಿಜೆಪಿ ಕಾಲೆಳೆದ ಕಾಂಗ್ರೆಸ್!
ಸಾರಿಗೆ ಇಲಾಖೆ ಹಾಗೂ ಸರ್ಕಾರ ಸತತ ಸಭೆ ನಡೆಸಿ ಮಾರ್ಗಸೂಚಿ ಸಿದ್ಧಪಡಿಸುತ್ತಿದೆ. ಈ ಮಾರ್ಗಸೂಚಿಯಲ್ಲಿ ಮಹಿಳೆಯರು ಉಚಿತ ಸಾರಿಗೆ ಪ್ರಯಾಣ ಸೌಲಭ್ಯ ಪಡೆದುಕೊಳ್ಳುವುದು ಹೇಗೆ ಅನ್ನೋದರ ಸ್ಪಷ್ಟ ಚಿತ್ರಣ ಸಿಗಲಿದೆ. ಅಲ್ಲೀವರೆಗೆ ಈ ಗೊಂದಲಗಳು ಹೀಗೆ ಮುಂದುವರಿಯುವ ಸಾಧ್ಯತೆ ಇದೆ.
ಕಾಂಗ್ರೆಸ್ ಶಕ್ತಿ ಯೋಜನೆ: ಸಮಾಜದಲ್ಲಿ ಶೇ.50 ರಷ್ಟು ಮಹಿಳೆಯರಿದ್ದಾರೆ. ಸ್ಥಾನಮಾನ ಪರಿಗಣಿಸದೆ ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂ.11 ರಿಂದ ರಾಜ್ಯದೊಳಗೆ ಸರ್ಕಾರದ ಸಾಮಾನ್ಯ ಬಸ್, ಎಕ್ಸ್ ಪ್ರೆಸ್, (ಎಸಿ, ನಾನ್ ಎಸಿ ಸ್ಲೀಪರ್, ಲಕ್ಸ್ಯುರಿ ಬಸ್ ಬಿಟ್ಟು) ಉಚಿತ ಪ್ರಯಾಣ. ಕೆಎಸ್ಆರ್ಟಿಸಿಯಲ್ಲಿ ಶೇ.50 ರಷ್ಟು ಆಸನ ಮೀಸಲು. ಹೆಣ್ಣು ಮಕ್ಕಳಿಲ್ಲದಿದ್ದರೆ, ಗಂಡಸರು ಕುಳಿತು ಹೋಗಬಹುದು.ಬಿಎಂಟಿಸಿಯಲ್ಲೂ ಮಹಿಳೆಯರಿಗೂ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಆದರೆ ಇಲ್ಲಿ ರಿಸರ್ವೇಶನ್ ಇರುವುದಿಲ್ಲ ಎಂದು ಸಿದ್ದಾರಾಮಯ್ಯ ಹೇಳಿದ್ದಾರೆ.