ಕಟೀಲ್‌ಗೂ ಫ್ರೀ, ಬೊಮ್ಮಾಯಿಗೂ ಫ್ರೀ; ಉಚಿತ ಗ್ಯಾರೆಂಟಿ ಜಾರಿ ಬೆನ್ನಲ್ಲೇ ಬಿಜೆಪಿ ಕಾಲೆಳೆದ ಕಾಂಗ್ರೆಸ್!

ನಳೀನ್ ಕುಮಾರ್ ಕಟೀಲ್ ಮನೆಗೂ ಫ್ರೀ, ಬಸವರಾಜ್ ಬೊಮ್ಮಾಯಿ ಮನೆಗೂ ಫ್ರೀ, ಬಜರಂಗದಳ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಮೂಲಕ ಉಚಿತ ಗ್ಯಾರೆಂಟಿ ಪ್ರಶ್ನಿಸಿದ್ದ ಬಿಜೆಪಿ ಕಾಲೆಳೆದಿದೆ. ಆದರೆ ಕಾಂಗ್ರೆಸ್ ಈ ಟ್ವೀಟ್ ಇದೀಗ ವಿವಾದಕ್ಕೂ ಕಾರಣವಾಗಿದೆ.

Congress trolls Karnataka BJP leaders for mocking Guarantee scheme after CM Siddaramaiah roll out of five poll freebies ckm

ಬೆಂಗಳೂರು(ಜೂನ್.02): ಚುನಾವಣೆ ವೇಳೆ ಘೋಷಣೆ ಮಾಡಿದ್ದ ಉಚಿತ ಗ್ಯಾರೆಂಟಿ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿದೆ. ಎಲ್ಲಾ ಐದು ಉಚಿತ ಯೋಜನೆಗಳು ಕೆಲವೇ ಕೆಲವು ಕಂಡೀಷನ್ ಮೇಲೆ ಜಾರಿಯಾಗುತ್ತದೆ. ಅರ್ಹ ಫಲಾನುಭವಿಗಳ ಪತ್ತೆಗಾಗಿ ಕೆಲ ಕಂಡೀಷನ್ ಹಾಕಲಾಗಿದೆ. ಕ್ಯಾಬಿನೆಟ್ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಬಳಿಕ ಸುದ್ದಿಗೋಷ್ಠಿ ಮೂಲಕ ಉಚಿತ ಗ್ಯಾರೆಂಟಿ ಜಾರಿ ಘೋಷಣೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಯನ್ನು ಪ್ರಶ್ನಿಸಿದ್ದ ಬಿಜೆಪಿ ವಿರುದ್ಧ ಟ್ವೀಟ್ ಮೂಲಕ ತಿರುಗೇಟು ನೀಡಿದೆ. ಸಿದ್ದರಾಮಯ್ಯ ವೇದಿಕೆ ಮೇಲೆ ನೀಡಿದ ನಂಗೂ ಫ್ರೀ, ನಿಂಗೂ ಫ್ರೀ, ಮಹದೇವಪ್ಪ ನಿಂಗೂ ಫ್ರಿ ಹೇಳಿಕೆಯನ್ನೇ ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಇದೀಗ ಇದೇ ದಾಟಿಯಲ್ಲಿ ಕಾಂಗ್ರೆಸ್ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

ಸಿದ್ದರಾಮಯ್ಯ ಐದು ಉಚಿತ ಗ್ಯಾರೆಂಟಿ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಟ್ವೀಟ್‌ನಲ್ಲಿ  ನಳೀನ್ ಕುಮಾರ್ ಕಟೀಲ್ ಅವರೆ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ, ಬಸವರಬಾಜ್ ಬೊಮ್ಮಾಯಿ ಅವರೆ,  ನಿಮ್ಮ ಮನೆಗೂ ಫ್ರೀ, ಶೋಭ ಕರಂದ್ಲಾಜೆ ಅವರೇ,  ನಿಮಗೂ ಪ್ರಯಾಣ ಫ್ರೀ, ಸಿಟಿ ರವಿ ಅವರೆ,  ನಿಮ್ಮ ಮನೆಯವರಿಗೂ ₹2000 ಫ್ರೀ ಎಂದು ಟ್ವೀಟ್ ಮಾಡಿದೆ. ಇದೇ ಟ್ವೀಟ್‌ನಲ್ಲಿ ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)!ಇದು ನಮ್ಮ ಗ್ಯಾರಂಟಿ ಎಂದು ಟ್ವೀಟ್ ಮಾಡಿದೆ.

ಐದು ಗ್ಯಾರೆಂಟಿ ಪಡೆಯಲು ಏನು ಮಾಡಬೇಕು? ಯಾರಿಗೆಲ್ಲ ಸಿಗಲಿದೆ ಉಚಿತ ಯೋಜನೆ!

ಬಿಜೆಪಿ ವಿರುದ್ಧ ಮಾಡಿದ ಟ್ವೀಟ್‌ನಲ್ಲಿ ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ ಅನ್ನೋ ವಾಕ್ಯ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರುದ್ಯೋಗಳಿಗೆ ಫ್ರೀ ಒಕೆ ಇದರಲ್ಲಿ ಬಜರಂಗದಳ ನಿರುದ್ಯೋಗಿಗಳು ಅನ್ನೋ ಪದ ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ. 

 

 

ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಮಾಡಿದ ಭಾಷಣದಲ್ಲಿ 200 ಯುನಿಟ್ ವಿದ್ಯುತ್ ಫ್ರಿ ಕುರಿತು ಮಾತನಾಡಿದ್ದಾರೆ. ಈ ವೇಳೆ ಯಾವುದೇ ಕಂಡೀಷನ್ ಇಲ್ಲ ಅನ್ನೋದನ್ನು ಹೇಳುವ ಸಂದರ್ಭದಲ್ಲಿ ಸಿದ್ದರಾಮಯ್ಯ, ನಂಗೂ ಫ್ರೀ, ನಿಂಗೂ ಫ್ರೀ, ಮಹದೇವಪ್ಪ ನಿಂಗೂ ಫ್ರೀ ಎಂದಿದ್ದರು. ಇದೇ ಹೇಳಿಕೆಯನ್ನು ಟ್ರೋಲ್ ಮಾಡಲಾಗಿತ್ತು. ಬಿಜೆಪಿ ನಾಯಕರು ಸಿದ್ದು ಹೇಳಿಕೆಯನ್ನು ಹಿಡಿದು ಪದೇ ಪದೆ ಷರತ್ತುಗಳಿಲ್ಲದ ಗ್ಯಾರೆಂಟಿ ಎಂದಿದ್ದೀರಿ. ಇದೀಗ ಜನರಿಗೆ ಯಾವುದೇ ಷರತ್ತು ವಿಧಿಸದೇ ಗ್ಯಾರೆಂಟಿ ನೀಡಲು ಆಗ್ರಹಿಸಿತ್ತು. ಇತ್ತ ನಳೀನ್ ಕುಮಾರ್ ಕಟೀಲ್, 200 ಯುನಿಟ್ ಫ್ರಿ ಎಂದಿದ್ದಾರೆ. ನಂಗೂ ಫ್ರಿ, ನಿಂಗೂ ಫ್ರಿ ಎಂದಿದ್ದಾರೆ. ಹೀಗಾಗಿ ಬಿಲ್ ಕಟ್ಟಬೇಡಿ ಎಂದಿದ್ದರು. ಬಿಜೆಪಿ ನಾಯಕರ ಹೇಳಿಕೆಗೆ ಇದೀಗ ಕಾಂಗ್ರೆಸ್ ಟ್ವೀಟ್ ಮೂಲಕ ತಿರುಗೇಟು ನೀಡಿದೆ. 

ಕಾಂಗ್ರೆಸ್ ಉಚಿತ ಗ್ಯಾರೆಂಟಿ ವಿವರ:
ಗೃಹ ಜ್ಯೋತಿ  ಯೋಜನೆ: 1 ವರ್ಷದಲ್ಲಿ ಬಳಕೆ ಮಾಡಿದ ಒಟ್ಟು ವಿದ್ಯುತ್‌ ಸರಾಸರಿ + 10 ರಷ್ಟು ಹೆಚ್ಚುವರಿ ಸೇರಿಸಿ ಗರಿಷ್ಠ 200 ಯೂನಿಟ್‌ವರೆಗೆ ವಿದ್ಯುತ್ ಉಚಿತ. ಈ ಯೋಜನೆ ಜುಲೈ 1ರಿಂದ ಜಾರಿಯಾಗುತ್ತಿದೆ.

ಎಲ್ಲಾ ಐದು ಗ್ಯಾರೆಂಟಿ ಜಾರಿಗೊಳಿಸಿದ ಸರ್ಕಾರ, ಕೆಲವೇ ಕೆಲವು ಕಂಡೀಷನ್ ಅಪ್ಲೈ; ಸಿಎಂ ಸಿದ್ದರಾಮಯ್ಯ!

ಗೃಹ ಲಕ್ಷ್ಮಿ ಯೋಜನೆ: ಪ್ರತಿ ಮನೆಯೊಡತಿಗೆ ಮಾಸಿಕ 2000 ರೂಪಾಯಿ ನೀಡಲಾಗುತ್ತದೆ. ಇದು ಎಲ್ಲಾ ಮಹಿಳೆಯರಿಗೆ ಅನ್ವಯವಾಗಲಿದೆ. ಜೂನ್‌ 15ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು. ಆಗಸ್ಟ್‌ 15ರಿಂದ ಮನೆ ಯಜಮಾನಿ ಅಕೌಂಟ್‌ಗೆ 2000 ರು. ಜಮಾ ಆಗಲಿದೆ. ಬ್ಯಾಂಕ್‌ ಅಕೌಂಟ್‌, ಆಧಾರ್‌ ಮಾಹಿತಿ ಕಡ್ಡಾಯವಾಗಿದೆ.

ಅನ್ನಭಾಗ್ಯ  ಯೋಜನೆ: ಬಿಪಿಎಲ್‌, ಅಂತ್ಯೋದಯ ಕಾರ್ಡುದಾರರಿಗೆ ತಲಾ 10 ಕೆ. ಜಿ ಅಕ್ಕಿ ಜುಲೈ 1ರಿಂದ ಸಿಗಲಿದೆ. ಸದ್ಯ ಆಹಾರ ಸಂಗ್ರಹ ಇಲ್ಲದೆ ಇರುವುದರಿಂದ ಜುಲೈ ತಿಂಗಳಿನಿಂದ ಈ ಯೋಜನೆ ಜಾರಿಯಾಗಲಿದೆ. 

4. ಶಕ್ತಿ - ಸಮಾಜದಲ್ಲಿ ಶೇ.50 ರಷ್ಟು ಮಹಿಳೆಯರಿದ್ದಾರೆ. ಸ್ಥಾನಮಾನ ಪರಿಗಣಿಸದೆ ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂ.11 ರಿಂದ ರಾಜ್ಯದೊಳಗೆ ಸರ್ಕಾರದ ಸಾಮಾನ್ಯ ಬಸ್, ಎಕ್ಸ್ ಪ್ರೆಸ್,  (ಎಸಿ, ನಾನ್ ಎಸಿ ಸ್ಲೀಪರ್, ಲಕ್ಸ್ಯುರಿ, ರಾಜಹಂಸ ಬಸ್ ಬಿಟ್ಟು) ಉಚಿತ ಪ್ರಯಾಣ. ಕೆಎಸ್ಆರ್ಟಿಸಿಯಲ್ಲಿ ಶೇ.50 ರಷ್ಟು ಆಸನ ಮೀಸಲು. ಹೆಣ್ಣು ಮಕ್ಕಳಿಲ್ಲದಿದ್ದರೆ, ಗಂಡಸರು ಕುಳಿತು ಹೋಗಬಹುದು.

ಯುವನಿಧಿ: ನಿರುದ್ಯೋಗಿ ಪದವೀಧರರಿಗೆ ಮಾಸಿಕ ಭತ್ಯೆ  ನೀಡಲಾಗುತ್ತದೆ. ಪದವಿ, ಸ್ನಾತಕೋತ್ತರ, ವೃತ್ತಿ ಶಿಕ್ಷಣ ಪಡೆದವರಿಗೆ ಮಾಸಿಕ  3,000 ರೂಪಾಯಿ ಹಾಗೂ  ಡಿಪ್ಲೋಮಾ ಮಾಡಿವರಿಗೆ 1500 ರೂಪಾಯಿ ಜಮೆ ಮಾಡಲಾಗುತ್ತದೆ.  2022-23ರ ಶೈಕ್ಷಣಿಕ ವರ್ಷದಲ್ಲಿ ಪಾಸಾದವರಿಗೆ 2 ವರ್ಷ ಯುವನಿಧಿ ಯೋಜನೆ ಲಾ ಪಡೆಯಲು ಸಾಧ್ಯವಿದೆ. ಯೋಜನೆ ಲಾಭ ಪಡೆಯುವ ನಡುವೆ ಖಾಸಗಿ, ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡರೆ ಹಣ ಸ್ಥಗಿತಗೊಳ್ಳಲಿದೆ. 
 

Latest Videos
Follow Us:
Download App:
  • android
  • ios