Asianet Suvarna News Asianet Suvarna News

ಸರ್ಕಾರಿ ಜಾಗ ರಕ್ಷಣೆಗೆ ಪಣ: ಸಿಎಂ ಸಿದ್ದರಾಮಯ್ಯ

ವಕ್ಫ್‌ ಆಸ್ತಿ ಒತ್ತುವರಿ ತೆರವು ಕಾರ್ಯಕ್ಕೆ ವೇಗ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಇದೇ ವೇಳೆ ಸಿದ್ದರಾಮಯ್ಯ ಸೂಚಿಸಿದರು. ರಾಜ್ಯದಲ್ಲಿ ವಕ್ಫ್‌ಗೆ ಸಂಬಂಧಿಸಿದ 217 ಆಸ್ತಿಗಳ ಒತ್ತುವರಿ ತೆರವು ಕಾರ್ಯ ಬಾಕಿ ಉಳಿದಿದ್ದು, ಶೀಘ್ರ ದಲ್ಲಿ ಒತ್ತುವರಿ ತೆರವು ಮಾಡಿ. 22,581 ಖಾತೆ ಮ್ಯುಟೇಶನ್ ಬಾಕಿ ಯಿದ್ದು, ಅದನ್ನು ತ್ವರಿತವಾಗಿ ಮುಗಿಸಬೇಕು ಎಂದು ಸಿಎಂ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 
 

committed to protecting government land in karnataka says cm siddaramaiah grg
Author
First Published Jul 10, 2024, 8:04 AM IST

ಬೆಂಗಳೂರು(ಜು.10):  'ಗೋಮಾಳ ಸೇರಿದಂತೆ ಎಲ್ಲಾ ಮಾದರಿ ಸರ್ವೆ ಮಾಡಿ, ಒತ್ತುವರಿ ತೆರವುಗೊಳಿಸಬೇಕು. ರಾಜ್ಯದಲ್ಲಿ ಒಟ್ಟಾರೆ ಎಷ್ಟು ಸರ್ಕಾರಿ ಜಮೀನಿದೆ ಎಂಬ ಬಗ್ಗೆ ಲ್ಯಾಂಡ್‌ ಬ್ಯಾಂಕ್‌ ತಯಾರಿಸಿ ಪ್ರತಿ ತಾಲೂಕಿನಲ್ಲೂ ಸರ್ಕಾರಿ ಜಮೀನು ಎಷ್ಟಿದೆ ಎಂಬುದನ್ನು ಆಯಾ ತಹಶೀಲ್ದಾರರ ಕಚೇರಿಗೆ ಇಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟಾಜ್ಞೆ ವಿಧಿಸಿದ್ದಾರೆ. 

ಮಂಗಳವಾರ ಕೂಡ ಬೆಳಗ್ಗೆಯಿಂದ ರಾತ್ರಿವರೆಗೂ ಇಡೀ ದಿನ ಎಲ್ಲ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಇಲಾಖಾ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಯವರು ಈ ವಿಷಯ ತಿಳಿಸಿದರು.

ರಾಮನಗರ ಮರುನಾಮಕರಣದ ಬಗ್ಗೆ ಸದ್ಯಕ್ಕೆ ಏನೂ ಹೇಳಲ್ಲ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಈಗಾಗಲೇಶೇ.75ರಷ್ಟು ಸರ್ಕಾ ಶೇ.25ರಷ್ಟು ಜಾಗಗಳ ಸರ್ವೆ ಕಾರ್ಯವನ್ನು ರಾಜ್ಯದಲ್ಲಿ ಒಟ್ಟಾರೆ ಎಷ್ಟು ಸರ್ಕಾರಿ ಜಾಗವಿದೆ ಎಂಬ ಲ್ಯಾಂಡ್ ಬ್ಯಾಂಕ್ ಮಾಡಿ ಸಲ್ಲಿಸಬೇಕು. ಪ್ರತೀ ತಾಲ್ಲೂಕಿನ ತಹಶೀಲ್ದಾರರ ಕಚೇರಿ ಯಲ್ಲೂ ತಮ್ಮ ತಾಲ್ಲೂಕಿನಲ್ಲಿರುವ ಸರ್ಕಾರಿ ಜಾಗ ಎಷ್ಟು ಎಂಬ ಮಾಹಿತಿಯನ್ನು ಪ್ರಕಟ ಸಬೇಕು ಎಂದು ಸೂಚಿಸಲಾಗಿದೆ. ಸರ್ವೆ ಕಾರ್ಯಕ್ಕೆ 750 ಸರ್ವೆ ಯರ್‌ಗಳ ನೇಮಕಾತಿಗೆ ಆದೇಶಿಸಲಾಗಿದೆ. ಅಗತ್ಯ ಬಿದ್ದರೆ ಇನ್ನಷ್ಟು ನೇಮಕಾತಿಗೂ ಕ್ರಮ ವಹಿಸಲಾಗುವುದು ಎಂದು ಹೇಳಿದರು

ವಕ್ಸ್ ಆಸ್ತಿ ಒತ್ತುವರಿ ತೆರವು ಮಾಡಿ: 

ವಕ್ಫ್‌ ಆಸ್ತಿ ಒತ್ತುವರಿ ತೆರವು ಕಾರ್ಯಕ್ಕೆ ವೇಗ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಇದೇ ವೇಳೆ ಸಿದ್ದರಾಮಯ್ಯ ಸೂಚಿಸಿದರು. ರಾಜ್ಯದಲ್ಲಿ ವಕ್ಫ್‌ಗೆ ಸಂಬಂಧಿಸಿದ 217 ಆಸ್ತಿಗಳ ಒತ್ತುವರಿ ತೆರವು ಕಾರ್ಯ ಬಾಕಿ ಉಳಿದಿದ್ದು, ಶೀಘ್ರ ದಲ್ಲಿ ಒತ್ತುವರಿ ತೆರವು ಮಾಡಿ. 22,581 ಖಾತೆ ಮ್ಯುಟೇಶನ್ ಬಾಕಿ ಯಿದ್ದು, ಅದನ್ನು ತ್ವರಿತವಾಗಿ ಮುಗಿಸಬೇಕು ಎಂದು ಸಿಎಂ ತಿಳಿಸಿದರು. 

ಡೆಂಘೀ ತಡೆಗೆ ಜಿಲ್ಲಾ ಕಾರ್ಯಪಡೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಘೀ ಪ್ರಕರಣಗಳ ತಡೆಗೆ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚನೆಗೆ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿ ಜಿಲ್ಲಾಸ್ಪತ್ರೆಗ ಳಲ್ಲೂ ಡೆಂಘೀ ಚಿಕಿತ್ಸೆಗೆ 10 ಬೆಡ್ ಗಳ ವಿಶೇಷ ವಾರ್ಡ್ ಸಜ್ಜುಗೊಳಿಸಬೇಕು ಎಂದು ಸೂಚಿಸಿದ್ದಾರೆ. 

ಕಾಂಗ್ರೆಸ್‌ ಗ್ಯಾರಂಟಿ: ಅನ್ನಭಾಗ್ಯದಡಿ ಹಣ ನೀಡುವ ಯೋಜನೆಗೆ ನಾಳೆ 1 ವರ್ಷ..!

2 ದಿನ, 30 ಇಲಾಖೆ, 68 ವಿಷಯ

2 ದಿನಗಳ ಸಭೆಯಲ್ಲಿ ಒಟ್ಟು 30 ಇಲಾಖೆ ಗಳ 88 ವಿಷಯಗಳನ್ನು ಪ್ರಸ್ತಾಪಿಸಿ ಎಲ್ಲೆಲ್ಲಿ ನ್ಯೂನತೆಗಳಿವೆ. ಏನೇನು ಸರಿಪಡಿಸಬೇಕು ಎಂಬುದನ್ನು ಡಿಸಿ, ಸಿಇಒ,ಎಸ್‌ಪಿಗಳಿಗೆ ತಿಳಿಸಲಾಗಿದೆ. ಚೆನ್ನಾಗಿ ಕೆಲಸ ಮಾಡುವವರಿಗೆ ಬೆನ್ನು ತಟ್ಟುತ್ತೇವೆ. ಲೋಪ ಎಸಗಿದರೆ ಕಿವಿ ಹಿಂಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿಎಂ ಪ್ರಮುಖ ಸೂಚನೆಗಳು

ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿದರೆ ಸಿಇಒ, ಡಿಡಿಪಿಐಗಳೇ ಹೊಣೆ
ಹೊಸ ಪ್ರವಾಸೋದ್ಯಮ ನೀತಿಗೆ ಬೇಕಾದ ನೀಲನಕ್ಷೆ ಸಿದ್ಧಪಡಿಸಿ
ಮಳೆ ಜೋರಾಗುತ್ತಿದೆ, ಪ್ರವಾಹ ಸ್ಥಿತಿ ಎದುರಿಸಲು ಸಿದ್ಧರಾಗಿ
ಅಂಗನವಾಡಿಗಳ 13500 ಹುದ್ದೆ ಗಳ ಭರ್ತಿಗೆ ಕ್ರಮ ಕೈಗೊಳ್ಳಿ
33,841 ಅರ್ಜಿ ತಕ್ಷಣ ವಿಲೇವಾರಿ ಮಾಡಿ
ಬಾಲ್ಯ ವಿವಾಹ, ಬಾಲ ಗರ್ಭಿಣಿ ಯರ ಪ್ರಕರಣಗಳನ್ನು ತಡೆಯಿರಿ

Latest Videos
Follow Us:
Download App:
  • android
  • ios