ನಮ್ಮ ಸೊಸೆ ಸೋಫಿಯಾ ಖುರೇಷಿ ಧೈರ್ಯ ನೋಡಿ ನಮಗೆ ಹೆಮ್ಮೆ ಮೂಡಿತು. ನಮ್ಮ ಊರು, ಕರ್ನಾಟಕ ಬಗ್ಗೆ ಗೌರವ ಬಂತು. ನಮ್ಮ ಮಕ್ಕಳು ಇಂದು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ ಎಂದು ಸೋಫಿಯಾ ಅವರ ಮಾವ ಗೌಸ್‌ ಬಾಗೇವಾಡಿ ಹೆಮ್ಮೆಯಿಂದ ಹೇಳಿದರು. 

ಬೆಳಗಾವಿ (ಮೇ.09): ಆಪರೇಷನ್‌ ಸಿಂದೂರ ಕುರಿತು ಪ್ರಪಂಚಕ್ಕೆ ಎಳೆಎಳೆಯಾಗಿ ಮಾಹಿತಿ ಕೊಟ್ಟಿರುವ ನಮ್ಮ ಸೊಸೆ ಸೋಫಿಯಾ ಖುರೇಷಿ ಧೈರ್ಯ ನೋಡಿ ನಮಗೆ ಹೆಮ್ಮೆ ಮೂಡಿತು. ನಮ್ಮ ಊರು, ಕರ್ನಾಟಕ ಬಗ್ಗೆ ಗೌರವ ಬಂತು. ನಮ್ಮ ಮಕ್ಕಳು ಇಂದು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ ಎಂದು ಸೋಫಿಯಾ ಅವರ ಮಾವ ಗೌಸ್‌ ಬಾಗೇವಾಡಿ ಹೆಮ್ಮೆಯಿಂದ ಹೇಳಿದರು.

ನನ್ನ ಮಗ ಮತ್ತು ಸೊಸೆ ಒಂದೇ ಕಡೆಗೆ ಕೆಲಸ ಮಾಡುತ್ತಿದ್ದರು. ಅವರಿಬ್ಬರಿಗೂ ಪರಿಚಯ ಆಗಿ ಇಬ್ಬರು ಪ್ರೀತಿಸಿ ಬಳಿಕ ಮನೆಯವರ ಒಪ್ಪಿಗೆ ಪಡೆದು 2015ರಲ್ಲಿ ಗುಜರಾತ ರಾಜ್ಯದ ಬಡೋದರಾದಲ್ಲಿ ವಿವಾಹವಾದರು. ನಿನ್ನೆ ನಡೆದ ಘಟನೆ ಕುರಿತು ನಾನು ಸೊಸೆ ಜೊತೆಗೆ ಮಾತನಾಡಿಲ್ಲ. ಮಗನ ಜೊತೆಗೆ ಮಾತನಾಡಿದ್ದೇನೆ. ಆತನೇ ನಮಗೆ ಎಲ್ಲ ಮಾಹಿತಿ ಹೇಳಿದ. ನಮ್ಮ ಮನೆ ಮಂದಿಗೆ ಯಾರಿಗೂ ನಿದ್ದೆ ಹತ್ತಿಲ್ಲ.ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಭಯೋತ್ಪಾದಕರಂತಹ ಮೂರ್ಖರು ಯಾರೂ ಇಲ್ಲ. ಧರ್ಮ ನೋಡಿ ಹತ್ಯೆ ಮಾಡುವ ಕೆಲಸ ಅವರು ಮಾಡಿದರು. ನನ್ನ ಮಗ ಮರಡಿಮಠ ಗ್ರಾಮದಲ್ಲಿ ಕನ್ನಡ ಮಾಧ್ಯಮದಲ್ಲಿ ಕಷ್ಟಪಟ್ಟು ಓದಿ ಕರ್ನಲ್‌ ಆಗಿದ್ದಾರೆ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಮಕ್ಕಳ ಬಗ್ಗೆ ನಮಗೆ ಹೆಮ್ಮೆಯಿದೆ ಎಂದರು.

ನನ್ಗೆ ವಯಸ್ಸಾಗಿದೆ ಆದ್ರೆ ಅವಕಾಶ ಸಿಕ್ರೆ ಪಾಕಿಸ್ತಾನ ಮುಗಿಸುತ್ತೇನೆ, ಕರ್ನಲ್ ಸೋಫಿಯಾ ತಂದೆ ಹೇಳಿಕೆ ವೈರಲ್

ಪಾಕಿಸ್ತಾನ ಮೇಲೆ ದಾಳಿ ನಡೆಸಿದ ಆಪರೇಷನ್ ಸಿಂದೂರ ಬಗ್ಗೆ ನಮ್ಮ ಸೊಸೆ ಕರ್ನಲ್ ಸೋಫಿಯಾ ಕುರೇಶಿಗೆ ಜೋಳದ ರೊಟ್ಟಿ ಹಾಗೂ ನಾಟಿ ಕೋಳಿ ತುಂಬಾ ಇಷ್ಟ. ಅವರ ಧೀರತದನ ಬಗ್ಗೆ ನಮಗೆ ಹೆಮ್ಮೆ ಇದೆ. ಕೊಣ್ಣೂರ ಗ್ರಾಮಕ್ಕೆ ಸೊಸೆ ಮತ್ತು ಮಗ ಬರುತ್ತಾರೆ. ಇಲ್ಲಿ ಬಂದಾಗ ಅರಾಮಾಗಿ ಇರುತ್ತಾರೆ. ನನ್ನ ಸೊಸೆಗೆ ಜವಾರಿ ರೊಟ್ಟಿ, ಕೋಳಿ ಬಹಳ ಇಷ್ಟ. ನಿಮ್ಮ ಊರು ಚೆನ್ನಾಗಿದೆ ಅಂತಾ ಸೊಸೆ ಹೇಳುತ್ತಿರುತ್ತಾರೆ. ನಮ್ಮ ಆರೋಗ್ಯದ ಬಗ್ಗೆಯೂ ಸೊಸೆ ಕಾಳಜಿ ಮಾಡುತ್ತಿರುತ್ತಾರೆ. ರಂಜಾನ್ ಹಬ್ಬಕ್ಕೆ ಬರಬೇಕಿತ್ತು. ಬರಲಿಲ್ಲ. ಬಕ್ರೀದ್ ಹಬ್ಬಕ್ಕೆ ಬರುತ್ತಾರೆ ಎಂದರು.

ಆಪರೇಷನ್‌ ಸಿಂದೂರ ಬಗ್ಗೆ ತಿಳಿಸಿದ್ದು ಬೆಳಗಾವಿ ಸೊಸೆ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ದಲ್ಲಿ 26 ಭಾರತೀಯರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆ ಕುರಿತು ಜಗತ್ತಿಗೆ ಎಳೆಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಅವರು ಬೆಳಗಾವಿ ಸೊಸೆ ಎನ್ನುವುದು ಹೆಮ್ಮೆ ಮೂಡಿಸಿದೆ. ಈ ಮೂಲಕ ವೀರವನಿತೆ ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಬೆಳವಡಿ ಮಲ್ಲಮ್ಮನವರ ನಾಡಿಗೆ ಮತ್ತೊಂದು ಹೆಮ್ಮೆ ಮೂಡಿದಂತಾಗಿದೆ.

ಸೋಫಿಯಾ ಖುರೇಷಿ ಅವರು ಬುಧವಾರ ಬೆಳಗ್ಗೆ ಒಂದು ಗಂಟೆಗೆ ಭಾರತೀಯ ಸೈನಿಕರು ವೈಮಾನಿಕ ದಾಳಿ ನಡೆಸಿ ಪಾಕಿಸ್ತಾನದಲ್ಲಿ ಉಗ್ರರ ಹೆಡೆಮುರಿ ಕಟ್ಟಿದ 9 ಸ್ಥಳಗಳ ಮೇಲೆ ದಾಳಿ ಮಾಡಿದ್ದನ್ನು ಎಳೆ ಎಳೆಯಾಗಿ ಆಪರೇಷನ್ ಸಿಂದೂರ ಕಾರ್ಯಾಚರಣೆ ಕುರಿತು ಮಾಹಿತಿ ಕೊಟ್ಟಿದ್ದರು. ಸೋಫಿಯಾ ಖುರೇಷಿ ಅವರು ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದ ಸೊಸೆ. ಇವರು ಬಹುರಾಷ್ಟ್ರೀಯ ಸೇನಾ ತುಕಡಿ ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಹೊತ್ತಿದ್ದಾರೆ. ಕೊಣ್ಣೂರು ಪಟ್ಟಣದ ಕರ್ನಲ್‌ ತಾಜುದ್ದೀನ್‌ ಬಾಗೇವಾಡಿ ಅವರನ್ನು ವಿವಾಹವಾಗಿದ್ದಾರೆ.

ಸೋಫಿಯಾ ಅವರು ಮೂಲತಃ ಗುಜರಾತ ರಾಜ್ಯದ ಬರೋಡಾದವರು. ಇಬ್ಬರೂ ಪರಸ್ಪರ ಪ್ರೀತಿಸಿ 2015ರಲ್ಲಿ ವಿವಾಹವಾಗಿದ್ದಾರೆ. ಸದ್ಯ ಸೋಫಿಯಾ ಅವರು ಜಮ್ಮುವಿನಲ್ಲಿ ಕರ್ನಲ್‌ ಆಗಿದ್ದರೆ, ಪತಿ ತಾಜುದ್ದೀನ್‌ ಬಾಗೇವಾಡಿ ಅವರು ಝಾನ್ಸಿನಲ್ಲಿ ಕರ್ನಲ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೇನೆ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದಿರುವ ಸೋಫಿಯಾ ಅವರ ತಾತ ಮತ್ತು ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜೈವಿಕ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೋಫಿಯಾ ಖುರೇಷಿ, 1999ರಲ್ಲಿ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಮೂಲಕ ನಿಯೋಜಿತಗೊಂಡು, ಭಾರತೀಯ ಸೇನೆಯ ಪ್ರಮುಖ ಶಾಖೆಯಾದ ಕೋರ್ ಆಫ್ ಸಿಗ್ನಲ್ಸ್‌ಗೆ ಸೇರಿದರು. 2006ರಲ್ಲಿ ಕಾಂಗೋದಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಆಪರೇಷನ್ ಸಿಂದೂರ್; ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಕುರೇಶಿ ಸಂಬಳ ಎಷ್ಟು?

ಆಪರೇಷನ್‌ ಸಿಂದೂರ ಕುರಿತು ಪ್ರಪಂಚಕ್ಕೆ ಎಳೆಎಳೆಯಾಗಿ ಮಾಹಿತಿ ಕೊಟ್ಟಿರುವ ನಮ್ಮ ಸೊಸೆ ಸೋಫಿಯಾ ಖುರೇಷಿ ಧೈರ್ಯ ನೋಡಿ ನಮಗೆ ಹೆಮ್ಮೆ ಮೂಡಿತು. ನಮ್ಮ ಊರು, ಕರ್ನಾಟಕ ಬಗ್ಗೆ ಗೌರವ ಬಂದಿತು. ನಮ್ಮ ಮಕ್ಕಳು ಇಂದು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ.
- ಗೌಸ್‌ ಬಾಗೇವಾಡಿ, ಸೋಫಿಯಾ ಮಾವ