Asianet Suvarna News Asianet Suvarna News

ಡಿ.14ಕ್ಕೆ 'ನಮ್ಮ ಕ್ಲಿನಿಕ್‌'ಗೆ ಸಿಎಂ ಚಾಲನೆ: ಸಚಿವ ಸುಧಾಕರ್‌

ಡಿಸೆಂಬರ್‌ ಅಂತ್ಯದೊಳಗೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ 438 ‘ನಮ್ಮ ಕ್ಲಿನಿಕ್‌’ಗಳನ್ನು ಆರಂಭಿಸಲಾಗುವುದು. ಡಿ.14 ರಂದು ಮುಖ್ಯಮಂತ್ರಿಗಳು ಈ ಯೋಜನೆÜಗೆ ಚಾಲನೆ ನೀಡುವರು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್‌ ತಿಳಿಸಿದರು.

CM will inauguration 'Namma Clinic' on December 14 says Minister Sudhakar rav
Author
First Published Nov 30, 2022, 9:09 PM IST

ಹಾಸನ (ನ.30) : ಡಿಸೆಂಬರ್‌ ಅಂತ್ಯದೊಳಗೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ 438 ‘ನಮ್ಮ ಕ್ಲಿನಿಕ್‌’ಗಳನ್ನು ಆರಂಭಿಸಲಾಗುವುದು. ಡಿ.14 ರಂದು ಮುಖ್ಯಮಂತ್ರಿಗಳು ಈ ಯೋಜನೆÜಗೆ ಚಾಲನೆ ನೀಡುವರು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್‌ ತಿಳಿಸಿದರು.

ನಗರದ ಹಿಮ್ಸ್‌ ಸಭಾಂಗಣದಲ್ಲಿ ಬುಧವಾರ ನಡೆಯುತ್ತಿದ್ದ ಸಚಿವರ ಸಭೆಯ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ನಮ್ಮ ಕ್ಲಿನಿಕ್‌ ಪ್ರಾರಂಭಿಸಲಾಗುತ್ತಿದ್ದು, ರಾಜ್ಯಾದ್ಯಂತ 438 ಕ್ಲಿನಿಕ್‌ ತೆರೆಯುತ್ತಿದ್ದೇವೆ. ಹಾಸನ ಜಿಲ್ಲೆಯಲ್ಲಿ 5 ನಮ್ಮ ಕ್ಲಿನಿಕ್‌ ಆರಂಭ ಮಾಡುತ್ತೇವೆ. ಈ ಕ್ಲಿನಿಕ್‌ಗಳಿಂದ ನಗರ ಪ್ರದೇಶದ ಕೊಳೆಗೇರಿಗಳು ಹಾಗೂ ದುರ್ಬಲ ವರ್ಗದವರು ವಾಸಿಸುವ ಸ್ಥಳಗಳಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಸೌಲಭ್ಯ ಒದಗಿಸಲು ನಮ್ಮ ಕ್ಲಿನಿಕ್‌ ನೆರವಾಗಲಿವೆ ಎಂದರು.

ನಮ್ಮ ಕ್ಲಿನಿ​ಕ್‌​ನಲ್ಲಿ ಎಲ್ಲರಿಗೂ ಶುಗರ್‌ ಟೆಸ್ಟ್‌: ಸಚಿವ ಸುಧಾಕರ್‌

ಹಾಸನ ಜಿಲ್ಲೆಯಲ್ಲಿ 18 ತಜ್ಞ ವೈದ್ಯರ ಕೊರತೆ ಇದ್ದು, ವೈದ್ಯರ ಕೊರತೆ ನೀಗಿಸಲಾಗಿದ್ದು, ಶೇ. 10ರಷ್ಟುತಜ್ಞರ ನೇಮಕಾತಿಗೆ ಸರ್ಕಾರವು ಚಿಂತನೆ ನಡೆಸಿದೆ. ಲ್ಯಾಬ್‌ ಟೆಕ್ನಿಷಿಯನ್ಸ್‌, ಫಾರ್ಮಸಿಸ್ಟ್‌ ಹಾಗೂ ‘ಡಿ’ ಗ್ರೂಪ್‌ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು. ನಾನು ಈ ಹಿಂದೆ ಕೊವೀಡ್‌ ಸಮಯದಲ್ಲಿ ಹಾಸನ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಮಯದಲ್ಲಿ ಜಿಲ್ಲೆಯಲ್ಲಿ 75 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರÜ ಕೊರತೆ ಇತ್ತು. ಈ ಬಗ್ಗೆ ಹಾಸನ ಜಿಲ್ಲೆಯ ಜನಪ್ರತಿನಿ​ಧಿಗಳು ನನ್ನ ಗಮನ ಸೆಳೆದಿದ್ದರು. ನಂತರ ಹೊಸದಾಗಿ 75 ವೈದ್ಯರ ಹುದ್ದೆ ಭರ್ತಿ ಮಾಡಿದ್ದೇವೆ. ಈ ವರ್ಷದ ಡಿಸೆಂಬರ್‌ ಅಂತ್ಯದ ವೇಳೆಗೆ ಹಾಸನ ನಗರದ ಸೂಪರ್‌ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ಹಾಗೂ ತಾಯಿ ಮಕ್ಕಳ ಹಾಸ್ಪಿಟಲ್‌ ಉದ್ಘಾಟನೆ ಮಾಡಲಾಗುತ್ತದೆ. ಮಾಚ್‌ರ್‍ ವೇಳೆಗೆ ಎರಡು ಕಟ್ಟಡಗಳ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.

ರಾಜ್ಯದಲ್ಲಿ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ಸಮುದಾಯ ಕೇಂದ್ರಗಳಲ್ಲಿ ಫಿಜಿಷಿಯನ್‌ ಸೇರಿದಂತೆ ತಜ್ಞ ವೈದ್ಯರು ಇರಲಿದ್ದು ಇದರಿಂದ ಜಿಲ್ಲಾ ಮಟ್ಟದ ಆಸ್ಪತ್ರೆ ಮೇಲೆ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.

ಶ್ರವಣದೋಷ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದ್ದು, ಹುಟ್ಟಿನಿಂದಲೆ ಶ್ರವಣದೋಷವಿರುವ 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಚಿಕಿತ್ಸೆ ಹಾಗೂ ಕಿವಿ ಪ್ಲಾಂಟ್‌ ಆಳವಡಿಸಲಾಗುವುದು. 60 ವರ್ಷ ಮೇಲ್ಪಟ್ಟಎಲ್ಲರಿಗೂ ಕಣ್ಣಿನ ತಪಾಸಣೆ ಮಾಡಲಾಗುತ್ತದೆ. ಅವರಿಗೆ ಯಾವುದೇ ದೃಷ್ಟಿದೋಷ ಇದ್ದರೆ ಸರಿಮಾಡಲಾಗುತ್ತದೆ. ಇದಕ್ಕಾಗಿ ಮುನ್ನೂರು ಕೋಟಿ ಹಣ ಇಡಲಾಗಿದೆ. ಡಿ ಗ್ರೂಪ್‌ ಸಿಬ್ಬಂದಿಯನ್ನು ಹೊರ ಗುತ್ತಿಗೆ ಮೂಲಕ ಭರ್ತಿ ಮಾಡಲಾಗುತ್ತಿದೆ. ಆಯಷ್‌ಮಾನ್‌ ಭಾರತ, ಆರೋಗ್ಯ ಕರ್ನಾಟಕ ಪ್ರತಿ ಕುಟುಂಬದ ಪ್ರತಿ ವ್ಯಕ್ತಿಗೆ ಉಚಿತ ಸ್ಮಾರ್ಚ್‌ ಕಾರ್ಡ್‌ ವಿತರಣೆ ಮಾಡಲಾಗುವುದು. ಜನವರಿ ಅಂತ್ಯದೊಳಗೆ 5 ಕೋಟಿ ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಚಿಕಿತ್ಸಾ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಇದರಿಂದ ಜಿಲ್ಲಾ ಆಸ್ಪತ್ರೆ ಮೇಲೆ ಒತ್ತಡ ಕಡಿಮೆ ಆಗಲಿದೆ ಎಂದರು.

ಜನವರಿ ಅಂತ್ಯದೊಳಗೆ 108 ಗೆ ಹೊಸ ವ್ಯವಸ್ಥೆ ಕಲ್ಪಿಸಿ ಹೊಸಬರಿಗೆ ಗುತ್ತಿಗೆ ನೀಡಲಾಗುವುದು. ವೈದ್ಯರ ಹುದ್ದೆಗಳನ್ನು ತುಂಬುವ ಕೆಲಸ ಮಾಡಿದ್ದೇವೆ. ತಾಲ್ಲೂಕು ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಹೆಲ್ಪ್‌ ಡೆಸ್‌್ಕ ತೆರೆಯಲಾಗಿದೆ. ದಿನದ 24 ಗಂಟೆ ಈ ಹೆಲ್ಪ್‌ ಡೆಸ್‌್ಕ ಕರ್ತವ್ಯ ನಿರ್ವಹಿಸಲಿದೆ ಎಂದರು.

ಡಿಸೆಂಬರ್‌ ವೇಳೆಗೆ 438 ನಮ್ಮ ಕ್ಲಿನಿಕ್‌ ಆರಂಭ: ಸಚಿವ ಸುಧಾಕರ್‌

ಚುನಾವಣೆ ಸಂದರ್ಭದಲ್ಲಿ ಯಾತ್ರೆಗಳು ಸಾಮಾನ್ಯ

ಚುನಾವಣೆ ಹತ್ತಿರ ಬರುತ್ತಿರುವಂತೆ ಭಾರತ್‌ ಜೋಡೋ ಯಾತ್ರೆ. ಜೆಡಿಎಸ್‌ ನವರ ಪಂಚರತ್ನ ಯಾತ್ರೆ ಇವೆಲ್ಲಾ ಸಾಮಾನ್ಯವಾಗಿ ನಡೆಯುತ್ತವೆ. ಅದರಂತೆ ನಾವು ಜನಪರ ಕೆಲಸ ಮಾಡಿ ಇದೀಗ ಸಂಕಲ್ಪ ಯಾತ್ರೆ ಕೈಗೊಂಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರೌಡಿ ಶಿಟರ್‌ಗಳ ಜೊತೆ ಬಿಜೆಪಿ ನಾಯಕರ ಸಹಭಾಗಿತ್ವ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ನಮ್ಮ ಪಕ್ಷ ಅಂತಹ ರೌಡಿ ಶೀಟರ್‌ಗಳನ್ನು ಸೇರಿಸುವುದಿಲ್ಲ ಎಂದು ಈಗಾಗಲೇ ಈ ಬಗ್ಗೆ ರಾಜ್ಯಾಧ್ಯಕ್ಷರು ಸ್ವಷ್ಟವಾಗಿ ತಿಳಿಸಿದ್ದಾರೆ. ಹಿಂದೂ ಧರ್ಮದವರು ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುರಿಂದ ಅವರುಗಳಿಗೆ ಅನ್ಯಾಯವಾಗಬಾರದು ಎನ್ನುವ ದೃಷ್ಟಿಯಿಂದ ಸಿ.ಟಿ. ರವಿ ಮಾತನಾಡಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ರಮೇಶ್‌ ಜಾರಕಿಹೊಳಿ ಮನೆಯಲ್ಲಿ ಮಠಾಧಿ​ೕಶರ ಸಭೆ ವಿಚಾರವಾಗಿ ಮಾತನಾಡುತ್ತಾ, ರಮೇಶ್‌ ಜಾರಕಿಹೊಳಿ ಅವರಿಗೆ ಅವರದ್ದೇ ಆದ ಶಕ್ತಿ ಇದೆ. ಆ ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸಲು ರಮೇಶ್‌ ಜಾರಕಿ ಹೊಳಿ ಅವರು ಮಠಾಧೀಶರನ್ನೊಳಗೊಂಡಂತೆ ಸಭೆ ನಡೆಸಿದ್ದಾರೆ ಎಂದು ಹೇಳಿದರು. ಇದೆ ವೇಳೆ ಕ್ಷೇತ್ರದ ಶಾಸಕರಾದ ಪ್ರೀತಮ್‌ ಜೆ. ಗೌಡ ಇತರರು ಇದ್ದರು.

Follow Us:
Download App:
  • android
  • ios