ಜಯದೇವ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತದೆಂದು ಕೇಳಿದ್ದೇನೆ. ನಾನು ಯಾವತ್ತೂ ಅಲ್ಲಿಗೆ ಹೋಗಿಲ್ಲ: ಸಿಎಂ
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮೈಸೂರಿಗೆ ಆಗಬೇಕಾದ ಎಲ್ಲಾ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಮೈಸೂರು ಜನ ನಮ್ಮ ಸರ್ಕಾರವನ್ನು ಬೆಂಬಲಿಸಿದ್ದಾರೆ. ಅವರ ಋಣ ತೀರಿಸುವ ಕೆಲಸವನ್ನು ನಾವು ಮಾಡುತ್ತೇವೆ. ನಿಮ್ಮ ಅಶೀರ್ವಾದ ಇರಲಿ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಮೈಸೂರು (ಡಿ.22): ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮೈಸೂರಿಗೆ ಆಗಬೇಕಾದ ಎಲ್ಲಾ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಮೈಸೂರು ಜನ ನಮ್ಮ ಸರ್ಕಾರವನ್ನು ಬೆಂಬಲಿಸಿದ್ದಾರೆ. ಅವರ ಋಣ ತೀರಿಸುವ ಕೆಲಸವನ್ನು ನಾವು ಮಾಡುತ್ತೇವೆ. ನಿಮ್ಮ ಅಶೀರ್ವಾದ ಇರಲಿ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮೈಸೂರು ನಗರ ಇನ್ನೂ ಕೆಟ್ಟಿಲ್ಲ. ಇಲ್ಲಿ ನಿವೃತ್ತರು ಉಳಿದು ಕೊಳ್ಳಲು ಇಷ್ಟಪಡುತ್ತಾರೆ. ಈ ಊರಿನಲ್ಲಿ ಎಲ್ಲಾ ವ್ಯವಸ್ಥೆ ಮಾಡುವುದು ನಮ್ಮ ಕರ್ತವ್ಯ. ಮೈಸೂರು - ಬೆಂಗಳೂರು ದಶಪಥ ರಸ್ತೆ ಮಾಡಿಸಿದ್ದು ನಾವು. ಬೇರೆಯವರು ಕ್ರೆಡಿಟ್ ತೆಗೆದು ಕೊಳ್ಳುವುದಕ್ಕೆ ಹೋಗುತ್ತಾರೆ. ಸುಳ್ಳು ಹೇಳುವವರು ಸಮಾಜಕ್ಕೆ ಅಪಾಯಕಾರಿ. ಸುಮ್ಮನೆ ಬುರುಡೆ ಬಿಡುವವರನ್ನು ನಂಬಬೇಡಿ ಎಂದರು.
ಅವರು ಮಹಾನ್ ಜ್ಯೋತಿಷಿ; ಅವರ ಬಾಯಿಗೆ ಬೀಗ ಹಾಕುವ ಶಕ್ತಿ ನಮಗಿಲ್ಲ : ಎಚ್‌ಡಿಕೆ ವಿರುದ್ಧ ಡಿಕೆ ಶಿವಕುಮಾರ ಕಿಡಿ
ಜಯದೇವ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತದೆ ಅಂತ ಕೇಳಿದ್ದೇನೆ. ನಾನು ಯಾವತ್ತೂ ಅಲ್ಲಿಗೆ ಹೋಗಿಲ್ಲ. ಜಯದೇವ ಆಸ್ಪತ್ರೆಯಲ್ಲಿ ಸಿಗುವ ಒಳ್ಳೆಯ ಚಿಕಿತ್ಸೆ ವ್ಯವಸ್ಥೆ ಬೇರೆ ಸರ್ಕಾರಿ ಆಸ್ಪತ್ರೆಯಲ್ಲಿ ಯಾಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಅವರು, ನಾನು ಸಿಎಂ ಆಗುವವರೆಗೂ ಮೈಸೂರಲ್ಲಿ ಒಂದು ಜಿಲ್ಲಾಸ್ಪತ್ರೆ ಇರಲಿಲ್ಲ. ಹಿಂದಿನ ಸರ್ಕಾರ ಕಿದ್ವಾಯಿ ಮಾಡಿರಬಹುದು. ಆದರೆ ದುಡ್ಡು ಕೊಡಲಿಲ್ಲ. ನಾನು ದುಡ್ಡು ಕೊಟ್ಟಿದ್ದೇನೆ. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಆರಂಭಿಸಿದ್ದು ನಾನು.ಹಾರ್ಟ್, ಲೀವರ್, ಕಿಡ್ನಿ ಎಲ್ಲವೂ ಟಾರ್ನ್ಸ್ಫರ್ ಮಾಡುತ್ತಾರೆ. ಉಳಿದಿರೋದು ಬ್ರೈನ್ ಮಾತ್ರ ಎಂದು ನಗಾಡಿದ ಸಿಎಂ.
ಮೈಸೂರು ಸಿಂಹ ಕಾಣೆಯಾಗಿದೆ, ಯಾವುದೋ ಗುಹೆಯೊಳಗೆ ಅಡಗಿ ಕುಳಿತಿದೆ: ಸಚಿವ ತಂಗಡಗಿ ವಾಗ್ದಾಳಿ
ವೈದ್ಯರಿಗೆ ಮನುಷ್ಯತ್ವ ಇರಬೇಕು. ಮನುಷ್ಯತ್ವ ಇಟ್ಟುಕೊಂಡು ಕೆಲಸ ಮಾಡಬೇಕು. ನಮ್ಮ ಸರ್ಕಾರ ಹೋದ ಮೇಲೆ ಮೈಸೂರು ನಗರಕ್ಕೆ ಒಂದೇ ಒಂದು ಕೆಲಸ ಆಗಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧವೂ ಹರಿಹಾಯ್ದರು.