Asianet Suvarna News Asianet Suvarna News

ಐತಿಹಾಸಿಕ ಜಯ ನನ್ನದಲ್ಲ, ಈ ರಾಜ್ಯದ ಜನರದ್ದು: ಕೃತಜ್ಞತಾ ಸಮಾವೇಶದಲ್ಲಿ ಸಿದ್ದು ಭಾವುಕ ನುಡಿ

ಈ ಭಾರಿ ನಾನು ಚುನಾವಣೆಗೆ ನಿಂತಾಗ ನೀವೆಲ್ಲರೂ ಹಗಲಿರುಳು ಹೋರಾಟ ಮಾಡಿದ್ದೀರಿ. ನನಗೆ ಒಂದು ಐತಿಹಾಸಿಕವಾದ ಜಯ ತಂದುಕೊಟ್ಟಿದ್ದೀರಿ. ಅದಕ್ಕಾಗಿ ವರುಣ ಕ್ಷೇತ್ರದ ಎಲ್ಲಾ ಮತದಾರರಿಗೆ , ಕಾರ್ಯಕರ್ತರಿಗೆ ಕೋಟಿ ಕೋಟಿ ನಮನ ಸಲ್ಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

CM Siddaramaiah speechin  ongress convention at Varuna constituency rav
Author
First Published Jun 10, 2023, 3:26 PM IST

ಮೈಸೂರು (ಜೂ.10) : ಈ ಭಾರಿ ನಾನು ಚುನಾವಣೆಗೆ ನಿಂತಾಗ ನೀವೆಲ್ಲರೂ ಹಗಲಿರುಳು ಹೋರಾಟ ಮಾಡಿದ್ದೀರಿ. ನನಗೆ ಒಂದು ಐತಿಹಾಸಿಕವಾದ ಜಯ ತಂದುಕೊಟ್ಟಿದ್ದೀರಿ. ಅದಕ್ಕಾಗಿ ವರುಣ ಕ್ಷೇತ್ರದ ಎಲ್ಲಾ ಮತದಾರರಿಗೆ , ಕಾರ್ಯಕರ್ತರಿಗೆ ಕೋಟಿ ಕೋಟಿ ನಮನ ಸಲ್ಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಂದು ವರುಣ ಕ್ಷೇತ್ರದ ಕೃತಜ್ಞತ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದರು.

ಈ ಜಯ ನನ್ನದಲ್ಲ, ನಿಮ್ಮೆಲ್ಲರ ಜಯ. ನಾನು ಈ ಮೊದಲೇ ಕೆಪಿಸಿಸಿ ಅಧ್ಯಕ್ಷರ ಕಛೇರಿಯಲ್ಲಿ ಹೇಳಿದ್ದೇನೆ. ಈ ಜಯ ರಾಜ್ಯದ ಜನರದ್ದು ಎಂದು. ಕಾಂಗ್ರೆಸ್ ಪಕ್ಷ 135+1 136 ಸ್ಥಾನ ಗೆಲ್ಲಬೇಕಾದ್ರೆ ಕರ್ನಾಟಕದ ಮತದಾರರು ಕಾಂಗ್ರೆಸ್ ಪರವಾಗಿ ತೀರ್ಪು ಕೊಟ್ಟಿದ್ದ ಕಾರಣ. ಹೀಗಾಗಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ರಾಜ್ಯದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು

ಆ.1ರಿಂದ ಗೃಹಜ್ಯೋತಿ ಯೋಜನೆ ಆರಂಭಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಬಿಜೆಪಿ ಸರ್ಕಾರದಿಂದ ಬೇಸತ್ತಿದ್ದ ಜನರು:

ಕರ್ನಾಟಕದ ಜನ ಬಿಜೆಪಿ ಸರ್ಕಾರದಿಂದ ಬೇಸತ್ತಿದ್ರು. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೆಲೆ ಏರಿಕೆ ಗಗನಕ್ಕೇರಿದೆ. ಯುವಕ ಯುವತಿಯರು ನೊಂದಿದ್ದಾರೆ.
ದುರಾಡಳಿತದಿಂದ ಜನರು ಬದಲಾವಣೆ ಬಯಸಿದ್ರು. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂಬ ಮಾತು ಹೇಳಿದ್ದೆ ಎಂದರು.

ಹೌದು ಹುಲಿಯಾ ಎಂದ ಜನರು

ಸರ್ವೆ ಪ್ರಕಾರ ಕಾಂಗ್ರೆಸ್ ಪಕ್ಷ 108, 105 ಸ್ಥಾನ ಗೆಲ್ಲುತ್ತೇ ಅಂಥ ಹೇಳಿದ್ರು.. ಆದ್ರೆ ನಾನು‌ 135 ಕ್ಕು ಹೆಚ್ಚು ಸ್ಥಾನ ಗೆಲ್ಲುತ್ತೆ ಅಂಥ ಹೇಳಿದೆ. ಜನರ ನಾಡಿ ಮಿಡಿತ ಅರ್ಥ ಮಾಡಿಕೊಳ್ಳುವ ಶಕ್ತಿ ನನಗಿದೆ. ಜನರ ಭಾವನೆ ನೋಡಿದಾಗ 135 ರಿಂದ 150 ಸ್ಥಾನ ಗೆಲ್ಲುವ ಭರವಸೆ ಇತ್ತು. ರಾಜ್ಯದ ಜನರು 136 ಸ್ಥಾನ ಗೆಲ್ಲಿಸಿಕೊಟ್ಟಿದ್ದಾರೆ. ಇದು ಸಣ್ಣದೇನಲ್ಲ, ಐತಿಹಾಸಿಕ ನಿರ್ಣಯ. 2008, 2013 ರಲ್ಲಿ ವರುಣ ಆಯ್ಕೆ ಮಾಡಿಕೊಂಡಿದೆ. ಆಗ ನನ್ನನ್ನು ದೊಡ್ಡ ಮಟ್ಟದಲ್ಲಿ  ಗೆಲ್ಲಿಸಿದ್ರು.

ಈ ಭಾರಿ‌ 50 ಸಾವಿರ ಮತಗಳಿಂದ ಗೆಲ್ಲಿಸಿದ್ರಿ. ಆದ್ರೆ ಯತೀಂದ್ರನಷ್ಟು ಹೆಚ್ಚು ಬಹುಮತಗಳಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಭಾರಿ 50 ಸಾವಿರ ಮತಗಳಿಂದ ಗೆದಿದ್ದೇನೆ ಇದೇ ಅತ್ಯಂತ ದೊಡ್ಡ ಮತ. ಇದು ನನ್ನ ಕೊನೆ ಚುನಾವಣೆ,  ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ನಿರ್ಧರಿಸಿದ್ದೆ. ಆದರೆ ರಾಜ್ಯದ ಜನರು ಮೂಲೆಮೂಲೆಗಳಿಂದ ಬಂದು ನೀವು ಚುನಾವಣೆಗೆ ನಿಲ್ಲಲೇಬೇಕು ಎಂದು ಒತ್ತಾಯಿಸಿದರು. ರಾಜ್ಯದ ಜನರು ನನ್ನ ಮೇಲಿನ ಅಭಿಮಾನ, ಪ್ರೀತಿಗೆ ನಾನು ಚಿರಋಣಿ. ಕೊನೆ ಉಸಿರು ಇರೊವರೆಗೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಭಾವುಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ.

ಎರಡನೇ ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ:

ಈ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನಿಂದ ನನಗೆ ಎರಡನೇ ಬಾರಿಗೆ ಸಿಎಂ ಆಗುವ ಅವಕಾಶ ಸಿಕ್ಕಿದೆ. ಇವತ್ತು ಸಿಎಂ ಸ್ಥಾನ ಸಿಕ್ಕಿರುವುದಕ್ಕೆ ನಿಮ್ಮೆಲ್ಲರ ಸಹಕಾರ ಕಾರಣ. ನನಗೆ ಜಯ ಸಿಕ್ಕಿದ್ರೆ ಅದು ನಿಮಗೆ ಸಿಕ್ಕಿದೆ ಅಂದುಕೊಳ್ಳಬೇಕು. ನಾವು ನುಡಿದಂತೆ ನಡೆದಿದ್ದೇವೆ, ಆದ್ರೆ ಬಿಜೆಪಿ ವಚನ ಭ್ರಷ್ಟರಾಗಿ ನಾಡಿನ ಜನತೆಗೆ ದ್ರೋಹ ಮಾಡಿದ್ದಾರೆ ಅದಕ್ಕಾಗಿ ರಾಜ್ಯದ ಜನರು ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆದಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನುಡಿದಂತೆ ನಡೆಯುತ್ತೇವೆ :

ಚುನಾವಣೆಯಲ್ಲಿ ಘೊಷಿಸಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ. ಬಸವಾದಿ ಶರಣರು ನುಡಿದಂತೆ ನಡೆದ್ರು. ಅವರಂತೆ ನಾವೂ ನಡೆಯುತ್ತೇವೆ. 5 ವರ್ಷಗಳ ಕಾಲ ಆಡಳಿತ ನಡೆಸುವ ಅವಕಾಶ ಸಿಕ್ಕಿತ್ತು. ದೇವರಾಜ ಅರಸು ನಂತರ ನಿಮ್ಮ ಸಿದ್ದರಾಮಯ್ಯಗೆ ಈ ಅವಕಾಶ ಸಿಕ್ಕಿತ್ತು. ಹೀಗಾಗಿ ಸಿದ್ದರಾಮಯ್ಯ ಸಿಎಂ ಆಗಬೇಕು ಅಂಥಾ ಬಯಸಿ ಮತ್ತೊಮ್ಮೆ ಅಧಿಕಾರ ಕೊಟ್ಟಿದ್ದಾರೆ ಎಂದರು.

ಬಾಡಿಗೆದಾರರಿಗೆ ಗುಡ್‌ ನ್ಯೂಸ್‌ ..!: ಫ್ರೀ ವಿದ್ಯುತ್‌ ಗೊಂದಲಕ್ಕೆ ತೆರೆ ಎಳೆದ ಸಿಎಂ ಸಿದ್ದರಾಮಯ್ಯ

ಇದು ಸುಪ್ಪತ್ತಿಗೆ ಕುರ್ಚಿ ಅಲ್ಲ,ಜನಸೇವೆ ಮಾಡುವ ಕುರ್ಚಿ

ರಾಜ್ಯದ ಸಿಎಂ ಆಗಿ ನಾನು ಕುಳಿತಿರುವ ಕುರ್ಚಿ ಸುಪ್ಪತ್ತಿಗೆಯ ಕುರ್ಚಿ ಅಲ್ಲ. ಜನರ ಸೇವೆ ಮಾಡಲು ಕುಳಿತಿರುವ ಕುರ್ಚಿ. ಗ್ಯಾರೆಂಟಿ‌ ಯೋಜನೆಗೆ ಖರ್ಚಾಗುವ ಹಣ 59 ಸಾವಿರ ಕೋಟಿ ರೂ. ಉಳಿದ ಅವಧಿಗೆ ಬೇಕಾಗಿರುವ ಹಣ 41ಸಾವಿರಕೋಟಿ ರೂ. ಆಗುತ್ತದೆ. ಪ್ರಧಾನಿ ಮೋದಿ ಗ್ಯಾರಂಟಿ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ. ರಾಜ್ಯ ದಿವಾಳಿ ಆಗುತ್ತೆ ಅಂದ್ರು. ಆದರೆ ನಾವು ಜಾರಿಗೆ ತಂದಿದ್ದೇವೆ. ಅಭಿವೃದ್ಧಿಯನ್ನು ಮಾಡುತ್ತೇವೆ. 13 ತಾರೀಕು ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ 20 ರಂದು ಪ್ರಮಾನ ವಚನ ಸ್ವೀಕರಿಸಿದ್ದೇವೆ. 20. ದಿನಗಳಲ್ಲಿ ಎರೆಡನೇ ಕ್ಯಾಬಿನೆಟ್ ನಲ್ಲಿ ‌5 ಗ್ಯಾರೆಂಟಿ ಇಡೇರಿಸಿದ್ದೇವೆ. ನಮ್ಮ ಸರ್ಕಾರ ಬಡವರ ಪರವಾಗಿದೆ  ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದದರು.

Follow Us:
Download App:
  • android
  • ios