Asianet Suvarna News Asianet Suvarna News

ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್‌ ಮಿಸ್‌ ಸಾಧ್ಯತೆ, ಭಾವುಕರಾಗಿ ಮಾತನಾಡಿದ ಪ್ರತಾಪ್‌ ಸಿಂಹ!

ಮೈಸೂರು ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ನಡೆದಿರುವ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ಫೇಸ್‌ಬುಕ್ ಲೈವ್ ನಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ನನಗೆ ಟಿಕೆಟ್ ಸಿಗುತ್ತಾ ಇಲ್ವಾ ಅಂತಾ ಯಾರೂ ಕುತೂಹಲ ಇಟ್ಟುಕೊಳ್ಳಬೇಡಿ ದೇವರು ಒಳ್ಳೆಯದು ಮಾಡ್ತಾನೆ ಎಂದಿದ್ದಾರೆ.

MP Pratap Simha emotional speech on facebook live  about mysuru kodagu loksabha constituency ticket issue rav
Author
First Published Mar 11, 2024, 11:40 PM IST

ಮೈಸೂರು (ಮಾ.11): ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್‌ಗೆ ಟೆನ್ಷನ್ ಶುರುವಾಗಿದೆ. ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಪುತ್ರ, ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಂಸದ ಪ್ರತಾಪ್ ಸಿಂಹರಿಗೆ ಟಿಕೆಟ್ ನೀಡಲೇಬೇಕೆಂದು ಕಾರ್ಯಕರ್ತರ  ಅಸಮಾಧಾನ ಭುಗಿಲೆದ್ದಿದೆ. ಈ ನಡುವೆ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಸಿಗುತ್ತಾ, ಇಲ್ಲವಾ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಗಳು ನಡೆದಿರುವ ಬೆನ್ನಲ್ಲೇ ಸ್ವತಃ ಸಂಸದ ಫೇಸ್‌ಬುಕ್ ಲೈವ್ ನಲ್ಲಿ ಲೋಕಸಭಾ ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡಿದ್ದಾರೆ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ನನಗೆ ಟಿಕೆಟ್ ಸಿಗುತ್ತಾ ಇಲ್ವಾ ಅಂತಾ ಕುತೂಹಲ ಇಟ್ಟುಕೊಳ್ಳಬೇಡಿ. ದೇವರು ಒಳ್ಳೆಯದು ಮಾಡ್ತಾನೆ ಎಂದು ಬೆಂಬಲಿಗರಿಗೆ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ನಾನು ಗೆದ್ದರೇ ಸಿದ್ದರಾಮಯ್ಯ ಸೀಟು ಅಲುಗಾಡುತ್ತೆ, ನನ್ನ ಸೋಲಿಸಲು ಆಗುವುದಿಲ್ಲ: ಪ್ರತಾಪ್‌ ಸಿಂಹ

 

ದೇಶಕ್ಕೆ ಮೋದಿ ಬೇಕು, ನಮ್ಮಲ್ಲೂ ಸಣ್ಣ ಮೋದಿ ಬೇಕು ಅಂತಾ ಜನ ಬಯಸುತ್ತಾರೆ. ಹೀಗಾಗಿ ನಾನು ಜನರ ನಿರೀಕ್ಷೆಗೆ ತಕ್ಕಂತೆ ಇರಬೇಕಾಗುತ್ತೆ. ಸಂಸದನಾಗಿ 10 ವರ್ಷ ಪೂರೈಸಿದ್ದೇನೆ. ಕೆಲಸ ಮಾಡಲು 3-4 ದಿನ ಮಾತ್ರ ಬಾಕಿ ಇದೆ. ಏಕೆಂದರೆ ಮಾರ್ಚ್ 15ರೊಳಗೆ ಚುನಾವಣೆ ಜಾರಿ ಆಗುತ್ತೆ. ನಾನು ಪತ್ರಕರ್ತನಾಗಿದ್ದಾಗ ನೇರ, ನಿಷ್ಠುರವಾಗಿ ಬರೆಯುತ್ತಿದ್ದೆ. ಅದು ನನ್ನ ಸ್ಟ್ರೆಂಥ್ ಆಗಿತ್ತು. ಬಳಿಕ ನಾನು ರಾಜಕೀಯಕ್ಕೆ ಬಂದೆ. ನನಗೆ ಸಿಕ್ಕ ಅಧಿಕಾರಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದಿದ್ದಾರೆ.

ಕೊಡಗು ಜಿಲ್ಲೆಯ ಜನರ ಡಿಎನ್‌ಎ, ರಕ್ತದಲ್ಲೇ ದೇಶಭಕ್ತಿ ಇದೆ, ಮೈಸೂರಿನಲ್ಲಿ ಜಾತಿ, ರಾಜಕೀಯ ಒಡಕು ಇದೆ. ನಾನು ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಚುನಾವಣೆ ಗೆದ್ದೆ. ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ  ಗೆಲ್ಲಿಸಬೇಕು ಅಂದರು. ಪಕ್ಷ ಸಂಘಟನೆ ಮಾಡಬೇಕು ಅಂದರು. ಬಳಿಕ ಹೈರಾಣಾಗಿ ಹೋದೆ.  ಈ ಹತ್ತು ವರ್ಷದಲ್ಲಿ ಹಲವಾರು ಕೆಲಸ ಮಾಡಿದ್ದೇನೆ. ಆ ಬಗ್ಗೆ ನನಗೆ ತೃಪ್ತಿ ಇದೆ. ಹೀಗಾಗಿ ನಾನು ದೇವರಲ್ಲಿ ವೈಯಕ್ತಿಕವಾಗಿ ಏನೂ ಕೇಳೊಲ್ಲ. ನನಗೆ ರಕ್ಷನೆ ಕೊಡು, ಜನರ ಕೆಲಸ ಮಾಡಲು ಅವಕಾಶ ಕೊಡು ಅಂತಾ ಕೇಳುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಸಂಸದರ ಟಿಕೆಟ್ ನಿರ್ಧಾರ ಮಾಡೋದು ಜನರು: ಸಂಸದ ಪ್ರತಾಪ್ ಸಿಂಹ

 

Follow Us:
Download App:
  • android
  • ios