Asianet Suvarna News Asianet Suvarna News

ಹರಿಪ್ರಸಾದ್‌ ನನ್ನ ಹೆಸರು ಎಲ್ಲೂ ಹೇಳಿಲ್ಲ; ನಾನು ಆ ಬಗ್ಗೆ ಮಾತಾಡಲ್ಲ: ಸಿಎಂ ಸಿದ್ದರಾಮಯ್ಯ

 ‘ಬಿ.ಕೆ.​ಹ​ರಿ​ಪ್ರ​ಸಾದ್‌ ಎಲ್ಲೂ ನನ್ನ ಹೆಸರು ಹೇಳಿ ಟೀಕೆ ಮಾಡಿಲ್ಲ. ಹೀಗಾಗಿ ಅವರ ಹೇಳಿ​ಕೆಗೆ ನಾನು ಪ್ರತಿಕ್ರಿಯೆ ನೀಡಬೇಕಿಲ್ಲ’ ಎಂದು ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಹೇಳಿ​ದ್ದಾ​ರೆ.

CM Siddaramaiah said that I will not comment on BK Hariprasad at dharwad rav
Author
First Published Sep 10, 2023, 5:09 AM IST

ಧಾರ​ವಾ​ಡ (ಸೆ.10) : ‘ಬಿ.ಕೆ.​ಹ​ರಿ​ಪ್ರ​ಸಾದ್‌ ಎಲ್ಲೂ ನನ್ನ ಹೆಸರು ಹೇಳಿ ಟೀಕೆ ಮಾಡಿಲ್ಲ. ಹೀಗಾಗಿ ಅವರ ಹೇಳಿ​ಕೆಗೆ ನಾನು ಪ್ರತಿಕ್ರಿಯೆ ನೀಡಬೇಕಿಲ್ಲ’ ಎಂದು ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಹೇಳಿ​ದ್ದಾ​ರೆ.

ರಾಜ್ಯ​ದಲ್ಲಿ ಯಾರೋ ಒಬ್ಬರು ಸಮಾ​ಜ​ವಾ​ದಿ ಹೆಸ​ರಲ್ಲಿ ಮಜಾ​ವಾ​ದಿ​ಯಾ​ಗಿ​ದ್ದಾರೆ. ಹ್ಯುಬ್ಲೋ ವಾಚ್‌ ಕಟ್ಟಿ​ಕೊಂಡು, ಪಂಚೆ​ಯುಟ್ಟು ಒಳಗೆ ಖಾಕಿ ಚಡ್ಡಿ ಹಾಕಿ ಓಡಾ​ಡು​ತ್ತಿ​ದ್ದಾರೆಂಬ ಕಾಂಗ್ರೆ​ಸ್‌ನ ಹಿರಿಯ ನಾಯ​ಕ ಬಿ.ಕೆ.​ಹ​ರಿ​ಪ್ರ​ಸಾದ್‌ ತಮ್ಮ ಹೆಸ​ರೆ​ತ್ತದೆ ಮಾಡಿದ ಟೀಕೆ ಕುರಿತು ಸುದ್ದಿ​ಗಾ​ರರ ಪ್ರಶ್ನೆಗೆ ಶನಿ​ವಾ​ರ ಯಾವುದೇ ಪ್ರತಿ​ಕ್ರಿಯೆ ನೀಡಲು ನಿರಾ​ಕ​ರಿ​ಸಿ​ದ್ದಾ​ರೆ.

ನನ್ನನ್ನು ಮಂತ್ರಿ ಮಾಡದ್ದಕ್ಕೆ ಧನ್ಯವಾದ, ಜನರೇ ಇವರಿಗೆ ಪಾಠ ಕಲಿಸ್ತಾರೆ, ಸಿದ್ದು ವಿರುದ್ಧ ಹರಿಪ್ರಸಾದ್‌ ವಾಗ್ದಾಳಿ

ಬಿ.ಕೆ.​ಹ​ರಿ​ಪ್ರ​ಸಾದ್‌ ಅವರು ನನ್ನ ಹೆಸರು ಹೇಳಿ ಟೀಕೆ ಮಾಡಿಲ್ಲ. ಹೀಗಾಗಿ ಅವರ ಜನ​ರಲ್‌ ಸ್ಟೇಟ್‌​ಮೆಂಟ್‌​ಗಳ ಕುರಿತು ನಾನು ಮಾತ​ನಾ​ಡಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದ​ರು.

ಬೆಂಗಳೂರಿನಲ್ಲಿ ಶನಿವಾರ ನಡೆದ ‘ಈಡಿಗ, ಬಿಲ್ಲವ, ನಾಮಧಾರಿ, ದೀವರು ಸೇರಿ ಅತೀ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆ’ ವೇಳೆ ಮಾತನಾಡಿದ ಬಿಕೆ ಹರಿಪ್ರಸಾದ್ ಸಿದ್ದರಾಮಯ್ಯ ವಿರುದ್ಧ ಹೆಸರೆತ್ತದೆ ವಾಗ್ದಾಳಿ ನಡೆಸಿದ್ದರು.‘ರಾಜ್ಯದಲ್ಲಿ ಯಾರೋ ಒಬ್ಬರು ಸಮಾಜವಾದಿ ಹೆಸರಿನಲ್ಲಿ ಮಜಾವಾದಿಯಾಗಿದ್ದಾರೆ. ಹ್ಯೂಬ್ಲೋ ವಾಚ್‌ ಕಟ್ಟಿಕೊಂಡು, ಪಂಚೆಯುಟ್ಟು, ಒಳಗೆ ಖಾಕಿ ಚಡ್ಡಿ ಹಾಕಿ ಓಡಾಡುತ್ತಿದ್ದಾರೆ’ಭಾಷಣದ ಉದ್ದಕ್ಕೂ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವರ ಹೆಸರು ಹೇಳದೆ ತೀವ್ರ ಟೀಕಾಪ್ರಹಾರ ನಡೆಸಿದ್ದರು. 

ಪಂಚೆ ಹಾಕೊಂಡು, ಹ್ಯೂಬ್ಲೋಟ್ ವಾಚ್ ಕಟ್ಕೊಂಡ್ರೆ ಸಮಾಜವಾದಿ ಆಗೋಲ್ಲ: ಸಿದ್ದರಾಮಯ್ಯಗೆ ಟಾಂಗ್‌ ಕೊಟ್ಟ ಹರಿಪ್ರಸಾದ್‌

Follow Us:
Download App:
  • android
  • ios