ತಮಿಳು ಗೊತ್ತಿಲ್ಲದೇ ತಮಿಳುನಾಡಿನಲ್ಲಿ ಬದುಕೋಕಾಗಲ್ಲ, ಇಲ್ಲಿ ಕನ್ನಡ ಬರದಿದ್ರೂ ಬದುಕಬಹುದು: ಸಿಎಂ ಸಿದ್ದರಾಮಯ್ಯ
ನಾವು ತಮಿಳುನಾಡಿಗೆ ಹೋಗಿ ತಮಿಳು ಗೊತ್ತಿಲ್ಲದೆ ನಾವು ಬದಕುವುದು ಆಗುತ್ತಾ? ಆದ್ರೆ, ಇಲ್ಲಿ ಮಾತ್ರಾ ಕನ್ನಡ ಗೊತ್ತಿಲ್ಲದೆ ಇದ್ದರೂ ಬದಕಬಹುದು ಹೇಗಿದೆ ನೋಡಿ? ಸಿಎಂ ಸಿದ್ದರಾಮಯ್ಯ ಕಿಡಿ.

ಬೆಂಗಳೂರು (ಅ.17): ಕನ್ನಡ ನಾಡಿನಲ್ಲಿ ವಾಸ ಮಾಡುತ್ತಿರುವ ಪ್ರತಿಯೊಬ್ಬರು ಕನ್ನಡ ಮಾತನಾಡಬೇಕು. ನಾವು ತಮಿಳುನಾಡಿಗೆ ಹೋಗಿ ತಮಿಳು ಗೊತ್ತಿಲ್ಲದೆ ನಾವು ಬದಕುವುದು ಆಗುತ್ತಾ? ಆದ್ರೆ, ಇಲ್ಲಿ ಮಾತ್ರಾ ಕನ್ನಡ ಗೊತ್ತಿಲ್ಲದೆ ಇದ್ದರೂ ಬದಕಬಹುದು ಹೇಗಿದೆ ನೋಡಿ ? ಕರ್ನಾಟಕದವರು ವಿಶಾಲ ಹೃದಯದವರು ಎಂದು ಮುಖ್ಯಮಂತ್ರಿ ಸಿದ್ದರಾಂಯ್ಯ ಕಿಡಿಕಾರಿದರು.
ಕರ್ನಾಟಕದ 50ನೇ ವರ್ಷದ ಸಂಭ್ರಮಾಚರಣೆ ಹಿನ್ನೆಯಲ್ಲಿ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ಕರ್ನಾಟಕ ನಾಮಕರಣ ಆಗಿ ನವೆಂಬರ್ ತಿಂಗಳಿಗೆ 50ವರ್ಷ ತುಂಬುತ್ತಿವೆ. ಈ ಸಂಧರ್ಭದಲ್ಲಿ ಕನ್ನಡ ಹಬ್ಬಕ್ಕೆ ಲಾಂಛನ ಬಿಡುಗಡೆ ಮಾಡಿದ್ದೇವೆ. ಅದನ್ನ ವಿನ್ಯಾಸ ಗೊಳಿಸದವರು ರವಿರಾಜ್ ಜಿ. ಹುಲಗುರು ಆಗಿದ್ದಾರೆ. ವಾಸ್ತವವಾಗಿ ಕರ್ನಾಟಕ 50ರ ಸಂಭ್ರಮವನ್ನ ಕಳೆದ ವರ್ಷ ಆಚರಣೆ ಮಾಡಬೇಕಾಗಿತ್ತು. ಆದರೆ ಹಿಂದಿನ ಸರ್ಕಾರ ಮಾಡಿಲ್ಲ. ಹೀಗಾಗಿ, ನಾನು ಬಜೆಟ್ ನಲ್ಲಿಯೇ ಕರ್ನಾಟಕ 50ನೇ ವರ್ಷದ ಸಂಭ್ರಮಾಚರಣೆ ಬಗ್ಗೆ ಉಲ್ಲೇಖಿಸಿದ್ದೇನೆ. ಇಡೀ ವರ್ಷ ಈ ಹಬ್ಬ ಆಚರಣೆ ಮಾಡಲಿದ್ದೇವೆ. ಈಗ ಸಿದ್ಧಪಡಿಸಿರುವ ಲಾಂಛನದಲ್ಲಿ ಹೆಸರಾಯಿತು ಕನ್ನಡ ಉಸಿರಾಯಿತು ಕನ್ನಡ ಎಂಬ ಘೋಷಣಾ ವ್ಯಾಕ್ಯ ಇದೆ ಎಂದು ಹೇಳಿದರು.
ದೇಶದ 8 ಹೆಸರಾಂತ ಉದ್ಯಮಿಗಳೊಂದಿಗೆ, ಜಿಂದಾಲ್ ನೇತೃತ್ವದಲ್ಲಿ ಇನ್ವೆಸ್ಟ್ ಕರ್ನಾಟಕ ಫೋರಂ
ನಾವು ಹೊರಗಿಂದ ಬಂದವರಿಗೆ ಕನ್ನಡ ಕಲಿಸೊಲ್ಲ: ಕನ್ನಡ ನಮ್ಮ ಮಾತೃ ಭಾಷೆಯಾಗಿದೆ. ನಮ್ಮ ಕನ್ನಡ ನಾಡಿನಲ್ಲಿ ವಾಸ ಮಾಡುತ್ತಿರುವ ಪ್ರತಿಯೊಬ್ಬರು ಕನ್ನಡ ಮಾತನಾಡಬೇಕು. ಒಂದು ವೇಳೆ ತಮಿಳುನಾಡಿಗೆ ಹೋಗಿ ತಮಿಳು ಗೊತ್ತಿಲ್ಲದೆ ನಾವು ಬದಕುವುದು ಆಗುತ್ತಾ? ಆದರೆ, ಇಲ್ಲಿ ಮಾತ್ರಾ ಕನ್ನಡ ಗೊತ್ತಿಲ್ಲದೆ ಇದ್ದರೂ ಬದಕಬಹುದು ಹೇಗಿದೆ ನೋಡಿ? ಕರ್ನಾಟಕದವರು ವಿಶಾಲ ಹೃದಯದವರು. ನಮ್ಮಲ್ಲಿ ಏನು ದೋಷ ಆಗಿರಬೇಕಲ್ಲಾ, ಅದೇನೆಂದರೆ ನಮ್ಮಲ್ಲಿ ಉದಾರತೆ ಹೆಚ್ಚಾಗಿದೆ. ನಾವು ಬೇರೆ ಭಾಷೆ ಅವರಿಗೆ ನಮ್ಮ ಭಾಷೆ ಕಲಿಸಲಿಲ್ಲ, ಆದ್ರೆ ಅವರ ಭಾಷೆ ಕಲಿಯುತ್ತೇವೆ ಎಂದು ಅಳಲು ತೋಡಿಕೊಂಡರು.
ಕಂಡ ಕಂಡಲೆಲ್ಲಾ ಕಸ ಹಾಕಿದ್ರೆ ಭಾರಿ ದಂಡ: ನೀರಿನ ಮೂಲ ಕಲುಷಿತ ಮಾಡಿದ್ರೆ ಜಾಮೀನೂ ಸಿಗಲ್ಲ
ಅಧಿಕಾರಿಗಳು, ಮಂತ್ರಿಗಳಿಗೆ ಕನ್ನಡ ಟಿಪ್ಪಣಿ ಹೊರಡಿಸಲು ಸೂಚನೆ: ರಾಜ್ಯದಲ್ಲಿ ನನ್ನ ಅನೇಕ ಜನ ಭೇಟಿ ಮಾಡ್ತಾರೆ. ಅವರು ಅವರವರ ಭಾಷೆಯಲ್ಲಿ ಮಾತಾಡುತ್ತಾರೆ. ನಾನು ಅದಕ್ಕೆ ಕನ್ನಡದಲ್ಲಿ ಮಾತಾಡಯ್ಯ ಎಂದು ಹೇಳುತ್ತೇನೆ. ಇಂಗಿಷ್‌ನ ವ್ಯಾಮೊಹನೋ ಏನೋ ಗೊತ್ತಿಲ್ಲ. ಇನ್ನು ನಮ್ಮ ಅಧಿಕಾರಿಗಳು, ಮಂತ್ರಿಗಳು ಕೂಡ ಇಂಗ್ಲೀಷ್‌ನಲ್ಲಿ ಟಿಪ್ಪಣಿ ಬರೆಯುತ್ತಾರೆ. ಎಲ್ಲಾರೂ ಕನ್ನಡವನ್ನ ಬಳಸಿ ಎಂದು ಸೂಚನೆ ಕೊಡಲಾಗಿದೆ. ಬೇರೆ ಭಾಷೆಯನ್ನ ಪ್ರೀತಿಸಬೇಕು, ಆದರೆ, ನಮ್ಮ ಭಾಷೆಯನ್ನು ಎಂದಿಗೂ ಮರೆಯಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.