Asianet Suvarna News Asianet Suvarna News

ಕಂಡ ಕಂಡಲೆಲ್ಲಾ ಕಸ ಹಾಕಿದ್ರೆ ಭಾರಿ ದಂಡ: ನೀರಿನ ಮೂಲ ಕಲುಷಿತ ಮಾಡಿದ್ರೆ ಜಾಮೀನೂ ಸಿಗಲ್ಲ

ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಕಸಮುಕ್ತ ರಾಜ್ಯವಾಗಬೇಕು ಎಂಬ ಗುರಿ ಹೊಂದಿರುವ ಕೇರಳ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ 10 ಸಾವಿರ ರು. ದಂಡ ವಿಧಿಸಲು ನಿರ್ಧರಿಸಿದೆ.

Kerala 10 thousand rupees Penalty for littering in Public Place if water source is polluted its nonbailable offense akb
Author
First Published Oct 17, 2023, 1:05 PM IST

ತಿರುವನಂತಪುರ: ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಕಸಮುಕ್ತ ರಾಜ್ಯವಾಗಬೇಕು ಎಂಬ ಗುರಿ ಹೊಂದಿರುವ ಕೇರಳ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ 10 ಸಾವಿರ ರು. ದಂಡ ವಿಧಿಸಲು ನಿರ್ಧರಿಸಿದೆ. ಅಲ್ಲದೇ ಜಲ ಮೂಲಗಳನ್ನು ಕಲುಷಿತಗೊಳಿಸುವುದನ್ನು ಜಾಮೀನು ರಹಿತ ಅಪರಾಧ ಎಂದು ಘೋಷಿಸಲಾಗಿದೆ. ಪಂಚಾಯತ್‌ ರಾಜ್‌ ಮತ್ತು ಮುನ್ಸಪಲ್‌ ಕಾಯ್ದೆಗಳಿಗೆ ತಿದ್ದುಪಡಿ ತರುವ 2 ಸುಗ್ರೀವಾಜ್ಞೆಗಳಿಗೆ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಒಪ್ಪಿಗೆ ಸೂಚಿಸಿದ್ದು, ಇದರಲ್ಲಿ ದಂಡದ ಪ್ರಮಾಣವನ್ನು ಹೆಚ್ಚು ಮಾಡುವ ಪ್ರಸ್ತಾಪ ಮಾಡಲಾಗಿದೆ.

ಈ ಸುಗ್ರೀವಾಜ್ಞೆಗಳು ರಾಜ್ಯದಲ್ಲಿನ ಕಸ ವಿಲೇವಾರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ. 2024ರ ಮಾ.31ರ ವೇಳೆಗೆ ರಾಜ್ಯವನ್ನು ಘನ ತ್ಯಾಜ್ಯ ಮುಕ್ತ (Solid waste free) ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಇದನ್ನು ಸಾಧಿಸುವುದಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದ್ದು ದಂಡದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. 

ಬೆಂಗಳೂರು ಕಸ ರಾಮನಗರಕ್ಕೆ ವಿಲೇವಾರಿಯಾಗುವ ಆತಂಕ: ಕಸದಿಂದ ವಿದ್ಯುತ್ ಉತ್ಪಾದನೆ?

100ಕ್ಕೂ ಹೆಚ್ಚು ಜನ ಭಾಗಿಯಾಗುವ ಸಮಾರಂಭಗಳಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಇಂಥ ಕಾರ್ಯಕ್ರಮ ಆಯೋಜಿಸುವವರು ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಸಚಿವ ಎಂ.ಬಿ.ರಾಜೇಶ್‌ (M B Rajesh)ಹೇಳಿದ್ದಾರೆ.  ಈ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೆ ದಂಡದ ಪ್ರಮಾಣ 250 ರು. ಇತ್ತು. ಇದನ್ನು 10 ಸಾವಿರ ರು.ಗೆ ಏರಿಕೆ ಮಾಡಲಾಗಿದೆ.

ಕಸದಿಂದ ಗೊಬ್ಬರ ತಯಾರಿಸುವ ಯಂತ್ರಗಳಿಗೆ ಚಾಲನೆ 

Latest Videos
Follow Us:
Download App:
  • android
  • ios