KPSCಗೆ 3 ಸದಸ್ಯರ ನೇಮಕಕ್ಕೆ ಸಿಎಸ್‌ಗೆ ಸಿಎಂ ಸಿದ್ದು ಶಿಫಾರಸು
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಮೂರು ಸದಸ್ಯ ಸ್ಥಾನಕ್ಕೆ ನೇಮಕ ಮಾಡುವಂತೆ ಮೂವರ ಹೆಸರನ್ನು ಶಿಫಾರಸು ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಬೆಂಗಳೂರು (ಆ.20) : ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಮೂರು ಸದಸ್ಯ ಸ್ಥಾನಕ್ಕೆ ನೇಮಕ ಮಾಡುವಂತೆ ಮೂವರ ಹೆಸರನ್ನು ಶಿಫಾರಸು ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಕೆಪಿಎಸ್‌ಸಿ ಸದಸ್ಯರಾಗಿ ಬೀದರ್‌ನ ಬಸವರಾಜ ಮಲ್ಗೆ, ಬೆಂಗಳೂರಿನ ಡಾ.ಆರ್.ಕಾವಲಮ್ಮ ಹಾಗೂ ಎಚ್.ಎಸ್.ಭೋಜ್ಯನಾಯ್‌್ಕ ಅವರನ್ನು ನೇಮಕ ಮಾಡಿ ಆದೇಶಿಸುವಂತೆ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮುಖ್ಯ ಕಾರ್ಯದರ್ಶಿಗೆ ಬರೆದ ಟಿಪ್ಪಣಿಯಲ್ಲಿ ಸೂಚಿಸಿದ್ದಾರೆ.
ಕೆಪಿಎಸ್‌ಸಿಗೆ ಭ್ರಷ್ಟರನ್ನು ನೇಮಿಸಲು ಮುಂದಾದ ಕಾಂಗ್ರೆಸ್ ಸರ್ಕಾರ
ಈ ಟಿಪ್ಪಣಿ ಸುದ್ದಿ ಹೊರಬರುತ್ತಿದ್ದಂತೆಯೇ ನಾಮಕರಣಕ್ಕೆ ಸೂಚಿತರಾಗಿರುವವರ ವಿರುದ್ಧ ಆರೋಪಗಳು ಕೇಳಿಬಂದಿವೆ. ಮೂವರು ಸದಸ್ಯರ ಪೈಕಿ ಎಚ್.ಎಸ್.ಭೋಜ್ಯನಾಯ್‌್ಕ ವಿರುದ್ಧ ಗಂಭೀರ ಆರೋಪಗಳಿದ್ದು, ಕೆಲ ಪ್ರಕರಣಗಳಲ್ಲಿ ತನಿಖೆ ಸಹ ನಡೆಯುತ್ತಿದೆ. ಭೋಜ್ಯನಾಯ್‌್ಕ ಅವರು ಈ ಹಿಂದೆ ಶಿವಮೊಗ್ಗದ$ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲ ಸಚಿವರಾಗಿದ್ದ ವೇಳೆ ಅಕ್ರಮ ಎಸಗಿದ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯಿಂದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಕುವೆಂಪು ವಿವಿಯಲ್ಲಿ ಕೆಟಿಟಿಪಿ ನಿಯಮ ಉಲ್ಲಂಘಿಸಿ ಅಕ್ರಮ ಎಸಗಿದ್ದಾರೆಂಬ ಆರೋಪ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಸುಮಾರು 50-60 ಕೋಟಿ ರು. ಅಕ್ರಮ ಎಸಗಿರುವ ಆರೋಪ ಸಂಬಂಧ ದೂರು ದಾಖಲಾಗಿದೆ ಎಂದು ಹೇಳಲಾಗಿದೆ.
ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರ ನೇಮಕದಲ್ಲಿ ಪಾರದರ್ಶಕತೆಗೆ ಹೈಕೋರ್ಟ್ ಸೂಚನೆ
2022ರಲ್ಲಿ ಮೈಸೂರು ವಿವಿ ಕುಲಸಚಿವರ ಆಯ್ಕೆ ವೇಳೆ ಭೋಜ್ಯನಾಯ್‌್ಕ ಅವರ ಮೇಲಿದ್ದ ಆರೋಪಗಳ ಕಾರಣ ಅವರ ಹೆಸರನ್ನು ತಿರಸ್ಕರಿಸಲಾಗಿತ್ತು. ಯುಜಿಸಿ ನಿಯಮದ ಪ್ರಕಾರ ಅವರಿಗೆ ಯಾವುದೇ ಉನ್ನತ ಹುದ್ದೆ ನೀಡಲು ಆಗುವುದಿಲ್ಲ ಎಂದು ತಿರಸ್ಕರಿಸಲಾಗಿತ್ತು ಎನ್ನಲಾಗಿದೆ.