ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಆರ್ಥಿಕ ಸಮಸ್ಯೆ?: ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಸರ್ಕಾರದ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್ .ಯಡಿಯೂರಪ್ಪ ಅವರು ಕರ್ನಾಟಕದ ಆರ್ಥಿಕತೆಯನ್ನು ಹಾಳು ಮಾಡಿದ್ದರು. ಅದನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ 

CM Siddaramaiah React to Financial problem for Development from Guarantee Schemes in Karnataka grg

ಸುವರ್ಣ ವಿಧಾನಸಭೆ(ಡಿ.20):  ಬಿಜೆಪಿಯವರು ಆರೋಪಿಸುತ್ತಿರುವಂತೆ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಗೆ ಆರ್ಥಿಕ ಸಮಸ್ಯೆ ಆಗಿಲ್ಲ. ಆದರೆ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಆರ್ಥಿಕ ಅಶಿಸ್ತು ಹಾಗೂ ಕೇಂದ್ರ ಸರ್ಕಾರದಿಂದ ಬರಬೇಕಾದ ರಾಜ್ಯದ ಪಾಲಿನ ತೆರಿಗೆ ಹಣ ಹಾಗೂ ವಿಶೇಷ ಅನುದಾನದ ಕೊರತೆ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

ಗುರುವಾರ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲಿನ ಚರ್ಚೆ ವೇಳೆ, ಬಿಜೆಪಿ ಸದಸ್ಯರಾದ ಸುನಿಲ್‌ಕುಮಾ‌ರ್, ಸುರೇಶ್ ಗೌಡ ಇತರರು ಮಾಡಿದ್ದ ಆರೋಪಗಳನ್ನು ಪ್ರಸ್ತಾಪಿಸಿ ಉತ್ತರ ನೀಡಿದರು. ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಸರ್ಕಾರದ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್ .ಯಡಿಯೂರಪ್ಪ ಅವರು ಕರ್ನಾಟಕದ ಆರ್ಥಿಕತೆಯನ್ನು ಹಾಳು ಮಾಡಿದ್ದರು. ಅದನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಬೊಮ್ಮಾಯಿ ಅವರಿಗೆ ಸ್ವಲ್ಪ ಆರ್ಥಿಕತೆ ಅರ್ಥವಾಗುತ್ತೆ ಎಂದು ಕೊಂಡಿದ್ದೆ. ಆದರೆ, ಅವರ ಅವಧಿಯಲ್ಲಿ ಬಜೆಟ್‌ನಲ್ಲಿ ಯಾವುದೇ ಅನುದಾನ ಮೀಸಲಿಡದೆಯೇ ₹2.9 ಲಕ್ಷ ಕೋಟಿ ಮೊತ್ತದ ಕಾಮಗಾರಿಗಳನ್ನು ಹೆಚ್ಚುವರಿ ಯಾಗಿ ತೆಗೆದುಕೊಂಡು ಕಾರ್ಯಾದೇಶ ನೀಡಿದ್ದರು. 40 ಪರ್ಸೆಂಟ್ ಭ್ರಷ್ಟಾಚಾರ ಆರಂಭವಾಗಿದ್ದೇ ಇಲ್ಲಿ. ಪರಿಣಾಮ ಅವರ ಅವಧಿಯಲ್ಲಿ ₹29,600 ಕೋಟಿ ಕಾಮಗಾರಿಗಳ ಬಿಲ್ ಬಾಕಿ ಉಳಿ ಸಿ ಹೋಗಿದ್ದರು. ನಮ್ಮ ಸರ್ಕಾರ ಬಂದ ಮೇಲೆ ₹18,150 ಕೋಟಿ ತೀರಿಸಿದ್ದೇವೆ. ಉಳಿದದ್ದು ಹಂತ ಹಂತ ವಾಗಿ ಬಿಡುಗಡೆ ಮಾಡಲಾಗುವುದು ಎಂದರು. 

ಬೆಂಗ್ಳೂರಲ್ಲಿ ಕಸ ವಿಲೇವಾರಿಗೆ ಮಾಫಿಯಾದ್ದೇ ಅಡ್ಡಿ: ಡಿ.ಕೆ.ಶಿವಕುಮಾ‌ರ್

ಕೇಂದ್ರದಿಂದ ತೆರಿಗೆ ಅನ್ಯಾಯ: 

ಇನ್ನು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಬೇಕಾದ ತೆರಿಗೆ ಪಾಲು ಸರಿಯಾಗಿ ಬರುತ್ತಿಲ್ಲ. ನಾವು ಒಂದು ರು. ತೆರಿಗೆ ಕಟ್ಟಿದರೆ ಅದರಲ್ಲಿ 13ರಿಂದ 14 ಪೈಸೆಯನ್ನಷ್ಟೇ ವಾಪಸ್ ನೀಡುತ್ತಿದ್ದಾರೆ. ಇದರಿಂದ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ದೊಡ್ಡ ಅನ್ಯಾವಯಾಗುತ್ತಿದೆ. ಇನ್ನು 15ನೇ ಹಣಕಾಸು ಆಯೋಗದ ಶಿಫಾರಸಿ ನಂತೆ ರಾಜ್ಯಕ್ಕೆ ನೀಡಬೇಕಾಗಿದ್ದ 5,495 ಕೋಟಿ ವಿಶೇಷ ಅನುದಾನ, ಬೆಂಗಳೂರು ಕೆರೆಗಳ ಅಭಿವೃದ್ಧಿ ಹಾಗೂ ಪೆರಿಫರಲ್ ರಿಂಗ್ ರಸ್ತೆ ಯೋಜನೆಗೆ ನೀಡಬೇಕಾದ ತಲಾ 3000 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ನೀಡಿಲ್ಲ ಎಂದು ದೂರಿದರು. 

ಬೆಂಗ್ಳೂರಿಗೆ ಯಾಕೆ 2ನೇ ಏರ್ಪೋರ್ಟ್‌, ಯಾರ ಪ್ರೇರಣೆಯಿಂದ ಮಾಡಲು ಹೊರಟಿದ್ದೀರಿ: ಯತ್ನಾಳ್‌

ಭದ್ರಾ ಮೇಲ್ದಂಡೆ ಯೋಜನೆಗೆ ಹಿಂದಿನ ಕೇಂದ್ರ ಸರ್ಕಾರದ ಬಜೆಟ್ ನಲ್ಲೇ ₹5300 ಕೋಟಿ ಘೋಷಿಸಿದರೂ ಇದುವರೆಗೂ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತು ಮತ್ತು ಕೇಂದ್ರದಿಂದ ಆರ್ಥಿಕ ಅನ್ಯಾಯದ ಪರಿಣಾಮ ಯೋಜನೆಗಳಿಗೆ ಹಣಕಾಸಿನ ಕೊರತೆ ಆಗಿದೆ ಎಂದು ತಿಳಿಸಿದರು. 

ಇಂತಹ ಸಂದರ್ಭದಲ್ಲಿಯೂ ನಾವು ನುಡಿದಂತೆ ನಡೆದಿದ್ದೇವೆ. 5 ಗ್ಯಾರಂಟಿ ಯೋಜನೆಗಳಿಗಾಗಿ ಇದುವರೆಗೆ ₹640 00 ಕೋಟಿ ವಿನಿಯೋಗಿಸಿದ್ದೇವೆ. ಈ ಗ್ಯಾರಂಟಿ ಯೋಜನೆಗಳಿಗಾಗಿ ನಮ್ಮ ಸರ್ಕಾರ ಬಜೆಟ್ಟಿನಲ್ಲಿ 2023-24 ರಲ್ಲಿ 36858 ಕೋಟಿ ಮತ್ತು 2024-25ರಲ್ಲಿ ₹52009 288867 ಕೋಟಿಗಳನ್ನು ಬಜೆಟ್ಟಿನಲ್ಲಿ ಒದಗಿಸಿದ್ದೇವೆ ಎಂದು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios