ಬೆಂಗ್ಳೂರಲ್ಲಿ ಕಸ ವಿಲೇವಾರಿಗೆ ಮಾಫಿಯಾದ್ದೇ ಅಡ್ಡಿ: ಡಿ.ಕೆ.ಶಿವಕುಮಾರ್
ಯಾರ ಕಾಲದಲ್ಲೂ ಈ ಕಸ ಮಾಫಿಯ ನಿಯಂತ್ರಿಸಲು ಆಗಿಲ್ಲ. ಕಸ ವಿಲೇವಾರಿ ಮಾಡುವವರದೇ ಒಂದು ಮಾಫಿಯಾ ಆಗಿದೆ. ಬಿಗಿ ಮಾಡಿದರೆ ಕಸ ತೆಗೆಯಲ್ಲ ಎಂದು ಬೆದರಿಸುತ್ತಾರೆ. ಗಾಂಧಿ ಲೆಕ್ಕ, ತಿರುಪತಿ ಲೆಕ್ಕ ಇದೆ. ಈಗಿರುವ ವಿಲೇವಾರಿ ಘಟಕದಿಂದ ದುರ್ವಾಸನೆ ಬರುತ್ತಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆಂದು ಘಟಕದ ಅಭಿವೃದ್ಧಿಗೆ 200 ಕೋಟಿ ರು. ವಸೂಲಿ ಮಾಡಲಾಗಿದೆ.
ಸುವರ್ಣ ವಿಧಾನ ಪರಿಷತ್(ಡಿ.20): ಬೆಂಗಳೂರು ನಗರದಲ್ಲಿ ತ್ಯಾಜ್ಯ ಸಂಗ್ರಹ, ವಿಲೇವಾರಿ ವಿಷಯದಲ್ಲಿ ದೊಡ್ಡ ಮಾಫಿಯಾ ಇದ್ದು, ಸುಳ್ಳು ಲೆಕ್ಕ, ಬೆದರಿಕೆ ಒಡ್ಡುವಿಕೆ ನಡೆಯುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ. ಆದರೆ ಯಾರು ಏನೇ ಹೇಳಲಿ, ನಗರದ 4 ಕಡೆ ತಲಾ 100 ಎಕರೆ ಜಾಗದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಬಿಜೆಪಿ ಎಂಎಲ್‌ಸಿ ಎಸ್. ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಸ ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಸೇರಿದಂತೆ ಬೇರೆ ಬೇರೆ ಕ್ರಮ ಕೈಗೊಳ್ಳಲಾಗುವುದು, ತಾವು ನಗರದ ನಾಲ್ಕು ಕಡೆ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವ ಬಗ್ಗೆ ಹೇಳಿದಾಗ ಬಿಜೆಪಿ ಅಧ್ಯಕ್ಷರು 15,500 ಕೋಟಿ ರು.ಗಳ ಭ್ರಷ್ಟಾಚಾರದ ಆರೋಪ ಮಾಡಿದರು. ಆದರೆ, ನಾನು ಇಂತಹ ಮಾತಿಗೆ ಜಗ್ಗುವ ಮಗನೇ ಅಲ್ಲ. ಕಸ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದು ಹೇಳಿದರು.
ಬೆಂಗ್ಳೂರಿಗೆ ಯಾಕೆ 2ನೇ ಏರ್ಪೋರ್ಟ್, ಯಾರ ಪ್ರೇರಣೆಯಿಂದ ಮಾಡಲು ಹೊರಟಿದ್ದೀರಿ: ಯತ್ನಾಳ್
ಯಾರ ಕಾಲದಲ್ಲೂ ಈ ಕಸ ಮಾಫಿಯ ನಿಯಂತ್ರಿಸಲು ಆಗಿಲ್ಲ. ಕಸ ವಿಲೇವಾರಿ ಮಾಡುವವರದೇ ಒಂದು ಮಾಫಿಯಾ ಆಗಿದೆ. ಬಿಗಿ ಮಾಡಿದರೆ ಕಸ ತೆಗೆಯಲ್ಲ ಎಂದು ಬೆದರಿಸುತ್ತಾರೆ. ಗಾಂಧಿ ಲೆಕ್ಕ, ತಿರುಪತಿ ಲೆಕ್ಕ ಇದೆ. ಈಗಿರುವ ವಿಲೇವಾರಿ ಘಟಕದಿಂದ ದುರ್ವಾಸನೆ ಬರುತ್ತಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆಂದು ಘಟಕದ ಅಭಿವೃದ್ಧಿಗೆ 200 ಕೋಟಿ ರು. ವಸೂಲಿ ಮಾಡಲಾಗಿದೆ. ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಘಟಕಗಳು ಕೆಲಸ ಮಾಡುತ್ತಿಲ್ಲ. 25-50 ಕೋಟಿ ರು. ವೆಚ್ಚದಲ್ಲಿ ಇಂತಹ ಘಟಕ ಸ್ಥಾಪನೆ ಉಪಯೋಗವಿಲ್ಲ. ಏನಿದ್ದರೂ ಸಾವಿರ, ಎರಡು ಸಾವಿರ ಕೋಟಿ ರು.ಗಳ ಘಟಕ ಸ್ಥಾಪಿಸಿದರೆ ಮಾತ್ರ ಸಮರ್ಪಕವಾಗಿ ನಡೆಸಬಹುದು ಎಂದರು.
ಬಿಬಿಎಂಪಿ ಆಸ್ತಿಯಿಂದ ಹೆಚ್ಚು ಆದಾಯ ಪಡೆಯಲು ಹೊಸ ನೀತಿ ಜಾರಿ: ಡಿಸಿಎಂ
ಸುವರ್ಣ ವಿಧಾನ ಪರಿಷತ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೇರಿದ ಬೆಲೆ ಬಾಳುವ ಜಾಗದಿಂದ ಹೆಚ್ಚಿನ ಆದಾಯ ಪಡೆಯಲು ಹೊಸ ನೀತಿ ಜಾರಿಗೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.!
ಗುರುವಾರ ಶಾಸಕ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಬಿಎಂಪಿ ಆಸ್ತಿಗಳಲ್ಲಿ ಕೆಲವನ್ನು ಬಾಡಿಗೆ, ಇಲ್ಲವೇ ಗುತ್ತಿಗೆ ಮೇಲೆ ನೀಡಲಾಗಿದೆ. ಕೆಲವು ಜಾಗಗಳಲ್ಲಿ ಶಾಲೆ, ಸಮುದಾಯ ಭವನ, ದೇವಸ್ಥಾನ ಕಟ್ಟಲಾಗಿದೆ. ಇವುಗಳನ್ನು ತೆರವುಗೊಳಿಸಲು ಆಗದಂತಹ ಸ್ಥಿತಿ ಇದೆ. ಕೆಲವು ಆಸ್ತಿಗಳನ್ನು ಅತ್ಯಂತ ಕಡಿಮೆ ಬಾಡಿಗೆಗೆ ನೀಡಲಾಗಿದೆ. ಹೀಗಾಗಿ ಇಂತಹ ಆಸ್ತಿಗಳನ್ನು ಸಕ್ರಮ ಮಾಡಬೇಕೇ ಅಥವಾ ಒನ್ ಟೈಮ್ ಸೆಟಲ್ ಮೆಂಟ್ ಯೋಜನೆಯಡಿ ಇತ್ಯರ್ಥ ಮಾಡಬೇಕೇ, ಇಲ್ಲವೇ ಮಾರ್ಗಸೂಚಿ ದರ ಅಡಿಯಲ್ಲಿ ಅವರಿಗೆ ಮಾರಾಟ ಮಾಡಬೇಕೆ ಬಗ್ಗೆ ಪರಿಶೀಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹೊಸ ನೀತಿ ಜಾರಿಗೆ ತರಲಾಗುವುದು. ಒಟ್ಟಾರೆ ಪಾಲಿಕೆಯ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಗೋವಿಂದರಾಜು ಅವರು, ಬಿಬಿಎಂಪಿ 50 ಸಾವಿರ ಕೋಟಿ ರು. ಬೆಲೆಯ ಆಸ್ತಿ ಇದ್ದರೂ ಅನೇಕ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಹಲವಾರು ದಶಕಗಳಿಂದ ಕೇವಲ 30-40 ರು. ಬಾಡಿಗೆ ಪಡೆಯುತ್ತಿವೆ. ಕಡಿಮೆ ಬಾಡಿಗೆ ಕೊಡುವ ಆಸ್ತಿಗಳನ್ನು ಖಾಲಿ ಮಾಡಿಸಿ ಹೆಚ್ಚಿನ ಬಾಡಿಗೆ ವಸೂಲಿ ಮಾಡಬೇಕು. ಒಟ್ಟಾರೆ 600 ಕೋಟಿ ರು. ಗಿಂತ ಹೆಚ್ಚು ಬಾಡಿಗೆ ತೆಗೆದುಕೊಳ್ಳುವ ಅವಕಾಶವಿದೆ ಎಂದು ತಿಳಿಸಿದರು.
ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಹಾಲುಣಿಸುವ ಕೇಂದ್ರ: ಡಿಕೆಶಿ
ಸುವರ್ಣ ವಿಧಾನ ಪರಿಷತ್: ಬೆಂಗಳೂರಿನ ಎಲ್ಲ ಮೆಟ್ರೋ ನಿಲ್ದಾಣ ಕೇಂದ್ರಗಳಲ್ಲಿ ಮಗುವಿಗೆ ಹಾಲುಣಿ ಸುವ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಕ್ಫ್ ಗೊಂದಲ ನಿವಾರಣೆಗೆ ಸಮಿತಿ: ಸಿಎಂ ಸಿದ್ದರಾಮಯ್ಯ
ಗುರುವಾರ ಕಾಂಗ್ರೆಸ್‌ನ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಮೆಜೆಸ್ಟಿಕ್, ಯಶವಂತಪುರ, ಚಿಕ್ಕಪೇಟೆ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣಗಳಲ್ಲಿ ಹಾಲುಣಿಸುವ ಕೇಂದ್ರಗಳು ಇವೆ. ಯಾವುದೇ ರೈಲನ್ನಾದರೂ 5 ನಿಮಿಷಗಳಿಗಿಂತ ಹೆಚ್ಚು ಕಾಲ ನಿಲ್ಲಿಸುವುದಿಲ್ಲ. ಹೀಗಾಗಿ ಆಯ್ಕೆ ನಿಲ್ದಾಣಗಳಲ್ಲಿ ಮಾತ್ರ ಈ ಕೇಂದ್ರ ಸ್ಥಾಪಿಸಲಾಗಿದೆ. ಉಳಿದ ಕಡೆ ಸ್ಥಾಪಿಸುವ ಬಗ್ಗೆ ಪರಿಶೀಲಿಸ ಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಉಮಾಶ್ರೀ ಅವರು, ನಿತ್ಯ ಲಕ್ಷಾಂತರ ಜನರು ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಾರೆ. ಇರುವ 69 ನಿಲ್ದಾಣದ ಪೈಕಿ ಕೇವಲ 4 ನಿಲ್ದಾಣದಲ್ಲಿ ಆರೈಕೆ ಕೇಂದ್ರವಿದೆ. ತಾಯಂದಿರು ಮಗುವಿಗೆ ಹಾಲುಣಿಸಲು ಜಾಗ ಇಲ್ಲದೇ ಪರದಾಡಬೇಕಾಗಿದೆ. ಒಂದು ನಿಲ್ದಾಣ ದಲ್ಲಿರುವ ಕೇಂದ್ರ ಅತ್ಯಂತ ಚಿಕ್ಕದಾಗಿದೆ. ಹಾಗಾಗಿ ಎಲ್ಲ ನಿಲ್ದಾಣಗಳಲ್ಲಿ ಈ ಕೇಂದ್ರಗಳಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.