Asianet Suvarna News Asianet Suvarna News

ಏರ್‌ಪೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಎಂಬಿಪಾ, ಕೆ.ಎನ್‌.ರಾಜಣ್ಣ ಗಂಭೀರ ಚರ್ಚೆ !

ತಾಲೂಕಿನ ಬಸಾಪುರದಲ್ಲಿ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಕೆಲ ಸಹೋದ್ಯೋಗಿಗಳು ಸುಮಾರು ಅರ್ಧ ಗಂಟೆ ಕಾಲ ಚರ್ಚೆ ನಡೆಸಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

CM siddaramaiah MB Patil and KN Rajanna serious discussion in airpot at koppal rav
Author
First Published Nov 21, 2023, 5:19 AM IST

ಕೊಪ್ಪಳ (ನ.21) :  ತಾಲೂಕಿನ ಬಸಾಪುರದಲ್ಲಿ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಕೆಲ ಸಹೋದ್ಯೋಗಿಗಳು ಸುಮಾರು ಅರ್ಧ ಗಂಟೆ ಕಾಲ ಚರ್ಚೆ ನಡೆಸಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ವಿಜಯಪುರದಲ್ಲಿ ಸಹಕಾರ ಸಪ್ತಾಪದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನ ಮೂಲಕ ಮುಂಜಾನೆ ಆಗಮಿಸಿದ್ದ ಸಿದ್ದರಾಮಯ್ಯ ಸಂಜೆ ಮರಳಿ ಬೆಂಗಳೂರಿಗೆ ತೆರಳುವ ವೇಳೆ ಈ ಚರ್ಚೆ ನಡೆಯಿತು.

ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಸಿದ್ದರಾಮಯ್ಯ, ಸಚಿವರಾದ ಎಂ‌.ಬಿ.ಪಾಟೀಲ್, ಕೆ.ಎನ್.ರಾಜಣ್ಣ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗಂಭೀರ ಚರ್ಚೆ ನಡೆಸಿದರು.

ಕಾಂಗ್ರೆಸ್‌ ಮುಖಂಡನಿಂದ ಅತ್ಯಾಚಾರ: ಒಬ್ಬಳನ್ನು ಒಬ್ಬನೇ ವ್ಯಕ್ತಿ ರೇಪ್‌ ಮಾಡೋಕೆ ಅಸಾಧ್ಯವೆಂದ ಮಾಜಿ ಶಾಸಕ ಬಯ್ಯಾಪುರ

ಈ ಕುರಿತು ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ಎಂ.ಬಿ. ಪಾಟೀಲರನ್ನು ಪ್ರಶ್ನಿಸಿದಾಗ ಯಾವುದೇ ಸಭೆ, ಚರ್ಚೆ ಆಗಿಲ್ಲ. ಸುಮ್ಮನೆ ಕೂತಿದ್ದೆವು ಎಂದು ಉತ್ತರಿಸಿದರು.

ದೆಹಲಿಯಿಂದ ಕಾಲ್ ಬಂದಿತ್ತು ಎಂಬ ವಿಚಾರವೂ ತೇಲಿ ಬಂತು, ಈ ಬಗ್ಗೆ ಪಾಟೀಲರ ಬಳಿ ಪ್ರಶ್ನೆ ಎತ್ತಿದಾಗ, ನಿಮಗೇನಾದರೂ ಹೇಳಿದ್ರಾ? ಯಾವುದೇ ಕಾಲ್ ಇಲ್ಲ, ಏ‌ನಿಲ್ಲ ಎನ್ನುತ್ತ ಮುಂದೆ ಸಾಗಿದರು. 

ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಗೆದ್ದಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಿಡಿಗೇಡಿಗಳು!

Follow Us:
Download App:
  • android
  • ios