ಮೈಸೂರಿನಲ್ಲಿ ಸಿಎಂ ಮನೆ ರಸ್ತೆ ಅಂದ ಹೆಚ್ಚಿಸಲು ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ಕುವೆಂಪುನಗರದಲ್ಲಿ ಸಿಎಂ ಐಷಾರಾಮಿ ಮನೆ ನಿರ್ಮಾಣವಾಗುತ್ತಿದ್ದು, ರಸ್ತೆ ಬದಿಯ ವ್ಯಾಪಾರಿಗಳಿಗೆ ಜಾಗ ಖಾಲಿ ಮಾಡಲು ಸೂಚಿಸಲಾಗಿದೆ.
ಮೈಸೂರು (ಮಾ.1): ಸಿಎಂ ಮನೆ ರಸ್ತೆ ಅಂದ ಹೆಚ್ಚಿಸಲು ವ್ಯಾಪಾರಿಗಳಿಗೆ ಬರೆ ಹಾಕಲಾಗಿದೆ. ಸಿಎಂ ಮನೆಯ ಅಂದ ಹೆಚ್ಚಿಸುವ ಸಲುವಾಗಿ ವ್ಯಾಪಾರಿಗಳ ಹೊಟ್ಟೆ ಮೇಲೆ ಮೈಸೂರು ಪಾಲಿಕೆ ತಣ್ಣೀರು ಬಟ್ಟೆ ಇಡುವ ಕೆಲಸ ಮಾಡಿದೆ. ಜಾಗ ಖಾಲಿ ಮಾಡುವಂತೆ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. 30ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ. ಮೈಸೂರಿನ ಕುವೆಂಪುನಗರದಲ್ಲಿ ಸಿಎಂ ಐಷಾರಾಮಿ ಮನೆ ನಿರ್ಮಾಣ ಮಾಡುತ್ತಿದ್ದು, ಎದುರಿಸನ ಬೀದಿಗಳಲ್ಲಿ ಅಂಗಡಿ ಇಟ್ಟುಕೊಂಡಿದ್ದ ಬಡ ವರಿಗೆ ಜಾಗ ಖಾಲಿ ಮಾಡುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ವಿಶ್ವ ಮಾನವ ನೂರಡಿ ಜೋಡಿ ರಸ್ತೆಯಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಇದೇ ರಸ್ತೆಯಲ್ಲಿ 30 ವರ್ಷಗಳಿಂದ ವ್ಯಾಪರಸ್ಥರು ಜೀವನ ನಡೆಸಿಕೊಂಡು ಬರುತ್ತಿದ್ದರು.30ಕ್ಕೂ ಹೆಚ್ಚು ಅಂಗಡಿಗಳ ತೆರವಿಗೆ ಪಾಲಿಕೆ ನೋಟಿಸ್ ನೀಡಿದೆ. ಈ ಬೀದಿಯಲ್ಲಿ ವ್ಯಾಪಾರ ಮಾಡದಂತೆ ಪಾಲಿಕೆ ನಾಮ ಫಲಕ ಹಾಕಿದೆ. ಪಾದಚಾರಿಗಳಿಗೆ ತೊಂದರೆ ಎಂದು ನೋಟಿಸ್ ಕೊಡಲಾಗಿದೆ. ರಸ್ತೆ ಬದಿ ವ್ಯಾಪರಸ್ಥರನ್ನು ಎತ್ತಂಗಡಿಗೆ ಪಾಲಿಕೆ ತಂತ್ರ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.
ಶಾಸಕರ ಭವನದ ಕೋಣೆಯ ಸ್ಮಾರ್ಟ್ ಲಾಕ್ ಭದ್ರತೆಗೆ 3 ಕೋಟಿ, ರಾಜ್ಯದಲ್ಲಿ ಬಾಣಂತಿಯರ ಜೀವಕ್ಕಿಲ್ಲ ಸೆಕ್ಯುರಿಟಿ!
ಪಾಲಿಕೆ ನಡೆಗೆ ಬೀದಿ ಬದಿ ವ್ಯಾಪಾರಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ‘ಇಷ್ಟು ದಿನ ರಸ್ತೆಯಲ್ಲೇ ವ್ಯಾಪಾರ ಮಾಡುತ್ತಿದ್ದೆವು. ಈಗ ಬೇರೆ ಜಾಗಕ್ಕೆ ಹೋಗಿ ವ್ಯಾಪಾರ ಮಾಡಿ ಎಂದು ಹೇಳುತ್ತಿದ್ದಾರೆ.ಬೇರೆ ಕಡೆ ಹೋದರೆ ನೆರಳೂ ಇಲ್ಲ, ವ್ಯಾಪಾರವೂ ಇಲ್ಲ. ಸಿಎಂ ಕೆಲವೇ ದಿನದಲ್ಲಿ ಹೊಸ ಮನೆಗೆ ಬರುತ್ತಾರೆ. ರಸ್ತೆ ನೀಟಾಗಿರಬೇಕು ಎಂಬ ಕಾರಣ ಹೇಳುತ್ತಿದ್ದಾರೆ' ಎಂದು ಹೇಳಿದ್ದಾರೆ. ಫುಟ್ ಪಾತ್‌ನಲ್ಲಿ ಹೆಚ್ಚು ಜನ ಓಡಾಡುವುದಿಲ್ಲ. ಸಿಎಂ ಓಲೈಸಲು ಅಧಿಕಾರಿಗಳಿಂದ ನೋಟಿಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನುಡಿದಂತೆ ನಡೆವ ಸಿಎಂ ಸಿದ್ದರಾಮಯ್ಯನವರೇ.., ಈ ಬಡವನಿಗೆ ಕೊಟ್ಟ ಮಾತು ಮರೆತೋಯ್ತಾ?

