‘2019ರ ಚುನಾವಣೆ : ಕಾಂಗ್ರೆಸಿಗೆ ಅಧಿಕಾರ’
ಇನ್ನೇನು ದೇಶದಲ್ಲಿ ಲೋಕಸಭಾ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಉಳಿದಿದ್ದು ವಿವಿಧ ಪಕ್ಷಗಳು ತಮ್ಮ ತಮ್ಮ ತಯಾರಿಯಲ್ಲಿ ತೊಡಗಿಕೊಂಡಿವೆ. ಇದೆ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಇಬ್ರಾಹಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬುರವುದಿಲ್ಲ ಎಂದು ಹೇಳಿದ್ದಾರೆ.
ವಿಜಯಪುರ : ವಿಜಯಪುರದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿ. ಪ್ರವಾಸೋದ್ಯಮದ ಅಭಿವೃದ್ಧಿಗೆ ಶ್ರಮಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ ನಗರದಲ್ಲಿ ಶೇ. 80 ಜನ ಮುಸ್ಲಿಂರೇ ಇದ್ದಾರೆ. ಆದರೆ ಇಲ್ಲಿರುವ ಮುಸ್ಲಿಮರು ಹೊರಹೋಗಲಿ ಎಂದು ಹೇಳುವುದು ಎಷ್ಟು ಸರಿ. ಸರ್ವೆ ಜನಃ ಸುಖಿನೊ ಭವಂತು ಎಂದು ನಮ್ಮ ದೇಶ ಹೇಳುತ್ತದೆ. ಆದರೆ ಈ ವಿಚಾರದಲ್ಲಿ ಯತ್ನಾಳ್ ಅವರ ನಡೆ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ ಎಂದಿದ್ದಾರೆ.
ಚುನಾವಣೆ ಬಂತೆಂದರೆ ಇವರಿಗೆ ಶ್ರೀರಾಮನ ನೆನಪು ಬರುತ್ತದೆ. ದೇಶದ ಪರಿಸ್ಥಿತಿ ಜಿಎಸ್ಟಿ ಬಂದಾಗಿಂದ ಅದೋಗತಿಗೆ ಬಂದು ತಲುಪಿದೆ. ವ್ಯಾಪಾರಸ್ಥರು ಮಾಡಿದ ವ್ಯಾಪಾರದಲ್ಲಿ ಮುಕ್ಕಾಲು ಭಾಗ ಜಿಎಸ್ ಟಿ ಕಟ್ಟಬೇಕಿದೆ. ವ್ಯಾಟ್ ಇದ್ದಾಗ ಸರಳವಾಗಿತ್ತು. ಜಿಎಸ್ ಟಿ ಬಂದಾಗಿಂದ ಡೋಲಾಯಮಾನವಾಗಿದೆ. ಅರುಣ ಜೇಟ್ಲಿ ಅವರಿಗೆ ಜಿಎಸ್ ಟಿ ಬಗ್ಗೆ ತಿಳಿಯುತ್ತಿಲ್ಲ. ನೋಟ್ ಬ್ಯಾನ್ ಆಗಿ ಎರಡು ವರ್ಷ ಆದರೂ ಎಷ್ಟು ಕಪ್ಪು ಹಣ ಪತ್ತೆ ಆಯಿತು ಎಂಬ ಬಗ್ಗೆ ಹೇಳುತ್ತಿಲ್ಲ ಎಂದಿದ್ದಾರೆ.
ಇನ್ನು ಗೋ ಹತ್ಯೆ ಬಗ್ಗೆಯೂ ಪ್ರಸ್ತಾಪಿಸಿದ ಅವರು ರಾಜ್ಯದಲ್ಲಿ ಗೋ ಹತ್ಯೆ ಮಾಡಬಾರದು ಅಂತಾರೆ. ಗೋವಾ, ಮೇಘಾಲಯ ಹಾಗೂ ಮಣಿಪುರದಲ್ಲಿ ಗೋ ಮಾತೆ ಮಲತಾಯಿನಾ. ಹಿಂದೆಂದಿಗಿಂತಲೂ ಕೂಡ ಗೋ ಮಾಂಸ ಹೆಚ್ಚು ಸಪ್ಲೈ ಆಗುತ್ತಿದೆ ಎಂದು ಹೇಳಿದರು.
ಆದ್ರೆ ಬಿಜೆಪಿಯಲ್ಲಿ ಮೋದಿ ಅವರನ್ನು ಬಿಟ್ರೆ ಬೇರ್ಯಾರೂ ಇಲ್ಲ. ಮೋದಿ ಸಂಪುಟದಲ್ಲಿ ಹತ್ತು ಮಂದಿ ಸಚಿವರ ಹೆಸ್ರು ಹೇಳಿ ತೊರಿಸಲಿ. ಮೋದಿ ಒಬ್ಬರೇ ಏಕಮೇವ ಸರ್ವಾಧಿಕಾರಿ. ಎಷ್ಟು ಬಾರಿ ಸಂಪುಟ ಸಭೆ ನಡೆಸಿದ್ದಾರೆ ಉತ್ತರ ಕೊಡಲಿ ಎಂದು ಇಬ್ರಾಹಿಂ ಸವಾಲು ಹಾಕಿದ್ದಾರೆ.
2019ರ ಚುನಾವಣೆ ಬಗ್ಗೆ ಪ್ರಸ್ತಾಪ : ಅಲ್ಲದೇ 2019 ಕ್ಕೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ನಮಗೆ ಪ್ರಧಾನಿ ಅಭ್ಯರ್ಥಿ ಮುಖ್ಯವಲ್ಲ. ರಾಹುಲ್ ಗಾಂಧಿ ಅವರಿಗೆ ಇತಿಹಾಸ ಇದೆ ಎಂದು ಅವರು ಹೇಳಿದ್ದಾರೆ.