ಬೆಳಗಾವಿ (ಏ.15):  ಅನಾರೋಗ್ಯದ ನಡುವೆಯೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೆಳಗಾವಿ ಲೋಕಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರ  ಪ್ರಚಾರ ನಡೆಸಿದರು.

ಮೂರು ಕ್ಷೇತ್ರಗಳ ಉಪ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಇಳಿವಯಸ್ಸಲ್ಲೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಬಿಡುವಿಲ್ಲದ ಕಾರ್ಯದೊತ್ತಡದಿಂದಾಗಿ ಜ್ವರದಿಂದ ಬಳಲುತ್ತಿದ್ದ ಅವರಿಗೆ ಬಿಮ್ಸ್‌ ವೈದ್ಯರು ಮತ್ತು ಖಾಸಗಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. 

'ಮಂಗಲ ಅಂಗಡಿಗೆ 4 ಲಕ್ಷ ಅಂತರದಿಂದ ಗೆಲುವು' ...

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಖಾಸಗಿ ಹೋಟೆಲ್‌ನಲ್ಲಿ ಕೆಲಕಾಲ ವಿಶ್ರಾಂತಿಯನ್ನೂ ಪಡೆದುಕೊಂಡರು. ಕೊಂಚ ಸುಧಾರಿಸಿದ ಬಳಿಕ ಅರಬಾವಿಯತ್ತ ತೆರಳಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡರು.

ಬೆಳಗಾವಿಗೆ ಆಗಮಿಸಿದಾಗಲೇ ಮಾಧ್ಯಮದವರು, ಈ ವಯಸ್ಸಿನಲ್ಲೂ ಬಿರುಸಿನ ಪ್ರಚಾರಕ್ಕೆ ಮುಂದಾಗಿದ್ದೀರಲ್ವಾ ಎಂದು ಪ್ರಶ್ನಿಸಿದ್ದರು. ಆಗ ಯಡಿಯೂರಪ್ಪ ಅವರು, ಇನ್ನೆರಡು ದಿನಗಳ ಕಾಲವಷ್ಟೇ ಚುನಾವಣೆ ಇರೋದು. ಗುರುವಾರ ಸಂಜೆ ಬೆಂಗಳೂರಿಗೆ ಮರಳುವೆ ಎಂದಷ್ಟೇ ಹೇಳಿ ಮುಂದೆ ಸಾಗಿದ್ದರು.