ಸಿಎಂ ಬೊಮ್ಮಾಯಿ ಪುತ್ರ, ಭರತ್‌ ಬೊಮ್ಮಾಯಿಗೆ ‘ಟೈಟಾನ್‌ ಬಿಸಿನೆಸ್‌’ ಪ್ರಶಸ್ತಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ, ಯುವ ಉದ್ಯಮಿ ಭರತ್‌ ಬೊಮ್ಮಾಯಿ ಅವರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಟೈಟಾನ್‌ ಬಿಸಿನೆಸ್‌ ಅವಾರ್ಡ್‌ ಸೀಸನ್‌-2 ಪ್ರಶಸ್ತಿ ದೊರೆತಿದೆ. 

cm basavaraj bommais son bharath bommai won an international award gvd

ಬೆಂಗಳೂರು (ಅ.08): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ, ಯುವ ಉದ್ಯಮಿ ಭರತ್‌ ಬೊಮ್ಮಾಯಿ ಅವರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಟೈಟಾನ್‌ ಬಿಸಿನೆಸ್‌ ಅವಾರ್ಡ್‌ ಸೀಸನ್‌-2 ಪ್ರಶಸ್ತಿ ದೊರೆತಿದೆ. ಅಶ್ವ ಎನರ್ಜಿ ಮತ್ತು ವಾಲ್ಟೆಕ್‌ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಭರತ್‌ ಬೊಮ್ಮಾಯಿ ಅವರು ಸೀಸನ್‌ 2 ರಲ್ಲಿ ಉತ್ಪಾದನೆ ವಿಭಾಗದ ವರ್ಷದ ಜಾಗತಿಕ ವಾಣಿಜ್ಯೋದ್ಯಮಿಯಾಗಿ ಹೊರಹೊಮ್ಮಿದ್ದಾರೆ ಎಂದು ಟೈಟಾನ್‌ ಬಿಸಿನೆಸ್‌ ಅವಾರ್ಡ್‌ ಆಯೋಜಕರಾದ ಇಂಟರ್‌ ನ್ಯಾಷನಲ್‌ ಅವಾರ್ಡ್ಸ್ ಅಸೋಸಿಯೇಟ್‌ ತಿಳಿಸಿದೆ.

ಅಮೆರಿಕ, ಆಸ್ಪ್ರೇಲಿಯಾ, ಕೆನಡಾ, ಚೀನಾ, ಭಾರತ, ಓಮನ್‌, ಫಿಲಿಪೈನ್ಸ್‌, ಪೋರ್ಚುಗಲ್‌, ಯುಎಇ ಸೇರಿದಂತೆ ಸುಮಾರು 55 ದೇಶಗಳಿಂದ ಸಾವಿರಕ್ಕೂ ಅಧಿಕ ಪ್ರವೇಶಗಳು ಬಂದಿದ್ದವು. ವಿಶ್ವದಾದ್ಯಂತ ಇರುವ ಉದ್ಯಮಿ ಮತ್ತು ಸಂಸ್ಥೆಗಳ ಸಾಧನೆಯನ್ನು ಗುರುತಿಸುವ ಏಕಮಾತ್ರ ಉದ್ದೇಶದೊಂದಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. 15 ದೇಶಗಳ ಸುಮಾರು 27 ತಜ್ಞರು ತೀರ್ಪುಗಾರರಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಕನ್ನಡ ರಾಜ್ಯೋತ್ಸವದಂದು ಯಶಸ್ವಿನಿ ಯೋಜನೆ ಮರು ಜಾರಿ: ಸಿಎಂ ಬೊಮ್ಮಾಯಿ

ಒಳಮೀಸಲು ಬಗ್ಗೆ ತಜ್ಞರ ಜತೆ ಚರ್ಚಿಸಿ ಕ್ರಮ: ಒಳಮೀಸಲಾತಿ ಕುರಿತು ತಜ್ಞರೊಂದಿಗೆ ಸಮಾಲೋಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸರ್ವಪಕ್ಷ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಮೀಸಲಾತಿ ಸೇರಿದಂತೆ ಇನ್ನೂ ಹತ್ತು ಹಲವು ಬೇಡಿಕೆಗಳಿದ್ದು, ಮೀಸಲಾತಿಯ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆ ಇದೆ. ಎಲ್ಲಾ ಸಮಾಜದಲ್ಲಿ, ಎಲ್ಲಾ ಜನಾಂಗಗಳಲ್ಲಿಯೂ ಆಕಾಂಕ್ಷೆಗಳು ಹೆಚ್ಚಾಗಿವೆ. ಎಸ್‌ಸಿ/ಎಸ್‌ಟಿ ಸಮುದಾಯದೊಳಗೆ ಕೆಲವರಿಗೆ ನ್ಯಾಯ ದೊರೆತಿಲ್ಲ ಎನ್ನುವ ಒಂದು ಕೂಗಿದೆ. ಅದರ ಬಗ್ಗೆಯೂ ಸಹ ಈಗಾಗಲೇ ಆಯೋಗಗಳು ತೀರ್ಮಾನ ನೀಡಿರುವ ಹಿನ್ನೆಲೆಯಲ್ಲಿ ಅದನ್ನೂ ಸಹ ಸಮಗ್ರವಾಗಿ ಅಧ್ಯಯನ ನಡೆಸಿ ಒಳ್ಳೆಯ ತೀರ್ಮಾನ ಕೈಗೊಳ್ಳಲು ಸರ್ಕಾರ ಮುಂದಾಗಲಿದೆ ಎಂದರು.

ಒಳಮೀಸಲಾತಿ ಬಗ್ಗೆ ಸಿದ್ದು ಮೌನ?: ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ತಾಳಿದ್ದರು ಎಂದು ತಿಳಿದು ಬಂದಿದೆ. ಮುಂಬರುವ ದಿನದಲ್ಲಿ ಸರ್ಕಾರ ಆ ನಿಟ್ಟಿನಲ್ಲಿಯೂ ಎಸ್‌ಸಿ/ಎಸ್‌ಟಿ ಒಳಮೀಸಲಾತಿಗೂ ಸಹ ಎಲ್ಲರೊಂದಿಗೆ ಚರ್ಚಿಸಿ, ಯಾವುದೇ ಸಮಾಜಕ್ಕೆ ಅನ್ಯಾಯವಾಗದಂತೆ, ಕೈಬಿಡದಂತೆ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲಾಗುವುದು. ಅಲ್ಲದೇ, ಎಲ್ಲಾ ಪಕ್ಷಗಳ ಜತೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಇದಲ್ಲದೇ, ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ನಡೆಯುತ್ತಿರುವ ಚರ್ಚೆ ಬಗ್ಗೆಯೂ ವರದಿಗಳನ್ನು ಆಧರಿಸಿ ಆಯಾ ಸಮಾಜಕ್ಕೆ ನ್ಯಾಯ ದೊರಕಿಸಲು ಸರ್ಕಾರ ಮುಂದಾಗಲಿದೆ ಎಂದರು. 

ಚನ್ನಪಟ್ಟಣ ಹೈಡ್ರಾಮಾ ಬಗ್ಗೆ ಸಿಎಂ ಬೊಮ್ಮಾಯಿಗೆ ಎಚ್‌ಡಿಕೆ ದೂರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಸಭೆಯಲ್ಲಿ ಒಳಮೀಸಲಾತಿ ಕಲ್ಪಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು ಎನ್ನಲಾಗಿದೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಕುರಿತು ಚಕಾರವೆತ್ತಲಿಲ್ಲ ಎಂದು ತಿಳಿದುಬಂದಿದೆ. ಈ ನಡುವೆ ಕಾಂಗ್ರೆಸ್‌ನ ಪ್ರಕಾಶ್‌ ರಾಥೋಡ್‌ ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದಾಗಲೂ ಸಿದ್ದರಾಮಯ್ಯ ಮೌನಕ್ಕೆ ಜಾರಿದ್ದರು. ಅಲ್ಲದೇ, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಸಹ ಒಳಮೀಸಲಾತಿ ಬಗ್ಗೆ ಚರ್ಚೆಯಾಗುವಾಗಲೂ ಸುಮ್ಮನಿದ್ದರು ಎಂದು ಹೇಳಲಾಗಿದೆ.

Latest Videos
Follow Us:
Download App:
  • android
  • ios