ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ರಾಣಿ ಝಾನ್ಸಿ ಲಕ್ಷ್ಮಿಬಾಯಿ ಅಲ್ಲ, ಕಿತ್ತೂರು ಚೆನ್ನಮ್ಮ: ಸಿಎಂ ಬೊಮ್ಮಾಯಿ
ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ರಾಣಿ ಝಾನ್ಸಿ ಲಕ್ಷ್ಮಿಬಾಯಿ ಅಲ್ಲ, ಕಿತ್ತೂರು ರಾಣಿ ಚೆನ್ನಮ್ಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿತ್ತೂರು ಉತ್ಸವದ ಉದ್ಘಾಟನೆ ಭಾಷಣದಲ್ಲಿ ತಿಳಿಸಿದ್ದಾರೆ.
ಚನ್ನಮ್ಮನ ಕಿತ್ತೂರು (ಅ.24): ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ರಾಣಿ ಝಾನ್ಸಿ ಲಕ್ಷ್ಮಿಬಾಯಿ ಅಲ್ಲ, ಕಿತ್ತೂರು ರಾಣಿ ಚೆನ್ನಮ್ಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿತ್ತೂರು ಉತ್ಸವದ ಉದ್ಘಾಟನೆ ಭಾಷಣದಲ್ಲಿ ತಿಳಿಸಿದ್ದಾರೆ. ಬ್ರಿಟಿಷರ ವಿರುದ್ಧ ಝಾನ್ಸಿ ಲಕ್ಷ್ಮಿಬಾಯಿ ಹೋರಾಡಿದ್ದು 1857ರಲ್ಲಿ. ಆದರೆ ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಹೋರಾಡಿದ್ದು 1824ರಲ್ಲಿ. ಹಾಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಝಾನ್ಸಿ ಲಕ್ಷ್ಮಿಬಾಯಿ ಅಲ್ಲ, ನಮ್ಮ ಕಿತ್ತೂರು ಚೆನ್ನಮ್ಮ ಎಂದು ಹೇಳಿದರು. ಇನ್ನು ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಝಾನ್ಸಿ ಲಕ್ಷ್ಮಿಬಾಯಿ ಎಂದು ಇತಿಹಾಸದಲ್ಲಿ ಬರೆಯಲಾಗಿದೆ. ಸತ್ಯವನ್ನು ದೇಶಕ್ಕೆ ತಿಳಿಸುವ ಕೆಲಸವನ್ನು ನಮ್ಮ ಸರ್ಕಾರ ಕ್ರಮ ವಹಿಸಲಿದೆ ತಿಳಿಸಿದರು.
ಚನ್ನಮ್ಮ ಉತ್ಸವ ರಾಷ್ಟ್ರಮಟ್ಟದ ಉತ್ಸವವಾಗಲಿ: ಐತಿಹಾಸಿಕ ಕಿತ್ತೂರು ಉತ್ಸವವನ್ನು ಸರ್ಕಾರ ಈ ಬಾರೀ ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ. ಗಂಡು ಮೆಟ್ಟಿದ ನಾಡಿನ ಚನ್ನಮ್ಮಾಜೀ ಉತ್ಸವ ಬರುವ ದಿನಗಳಲ್ಲಿ ರಾಷ್ಟ್ರ ಮಟ್ಟದ ಉತ್ಸವವಾಗಿ ಆಚರಣೆಯಾಗುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಕಿತ್ತೂರು ಚನ್ನಮ್ಮನ ವೀರಜ್ಯೋತಿಯನ್ನು ಶಾಸಕ ಮಹಾಂತೇಶ ಕೌಜಲಗಿ, ತಾಲೂಕು ಆಡಳಿತ, ಪುರಸಭೆ ಹಾಗೂ ವಿವಿಧ ಸಂಘಟನೆಗಳಿಂದ ಪೂಜೆ ಸಲ್ಲಿಸುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡು ನಂತರ ಅವರು ಮಾತನಾಡಿದರು.
1.7 ಲಕ್ಷ ಕೋಟಿ ಯೋಜನೆಗೆ ಅಸ್ತು: ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿ ಅನುಮೋದನೆ
ಉತ್ಸವಗಳು ಸರ್ಕಾರಿ ಉತ್ಸವಗಳಾಗದೇ ಜನೋತ್ಸವವಾಗಿ ಹೊರ ಹೊಮ್ಮಬೇಕು. ಉತ್ಸವದ ದಿನಗಳಲ್ಲಿ ಜನತೆ ಸಾಗರೋಪಾದಿಯಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕು. ಹಬ್ಬದ ವಾತಾವರಣದಂತೆ ಉತ್ಸವ ಆಚರಣೆಯಾದಾಗ ಮಾತ್ರ ಉತ್ಸವಕ್ಕೆ ಮೆರಗು ಬರಲಿದೆ. ಚನ್ನಮ್ಮಾಜೀ ದೇಶಪ್ರೇಮ, ಶೌರ್ಯ, ಸಾಹಸಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರಪ್ರೇಮ ಮೆರೆದು ಉತ್ಸವದ ಉದ್ದೇಶ ಈಡೇರಿಸಬೇಕೆಂದರು. ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ ಮಾತನಾಡಿ, ಸರ್ಕಾರದ ಆದೇಶದಂತೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಚನ್ನಮ್ಮಾಜೀ ಜ್ಯೋತಿಯನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿಕೊಂಡು, ಬೀಳ್ಕೊಟ್ಟರು, ವೀರಜ್ಯೋತಿಯ ಸಂಚರಿಸುವ ಹೊಣೆ ಹೊತ್ತಿದ್ದು ನನ್ನ ಸೌಭಾಗ್ಯವಾಗಿದ್ದು, ನನ್ನ ಜೀವನದ ಮರೆಯದ ದಿನವಾಗಿದೆ ಎಂದರು.
ಕಿತ್ತೂರು ಉತ್ಸವಕ್ಕೆ 2 ಕೋಟಿ ಅನುದಾನ ಬಿಡುಗಡೆ: ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ 2 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಉತ್ಸವದಲ್ಲಿ ಹಲವಾರು ಸಚಿವರು ಪಾಲ್ಗೊಳ್ಳುವರು. ಗಾಂಧಿ ಜಯಂತಿಯಂದೇ ಬೆಂಗಳೂರಿನಲ್ಲಿ ಚನ್ನಮ್ಮಾಜಿ ಜ್ಯೋತಿ ಯಾತ್ರೆಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದರು. ಕಿತ್ತೂರು ಉತ್ಸವದ ಪ್ರಚಾರ ಸಾಮಗ್ರಿಯನ್ನೂ ಬಿಡುಗಡೆ ಮಾಡಿದ್ದರು. ಹಾಗಾಗಿ, ನಾವು ಇಲ್ಲಿ ಬಿಡುಗಡೆ ಮಾಡಿಲ್ಲ ಎಂದರು.
ಶತಮಾನ ಕಳೆದರೂ ಕೆಂಪೇಗೌಡ ಅಜರಾಮರ: ಸಿಎಂ ಬೊಮ್ಮಾಯಿ
ಜಿಲ್ಲಾ ಉಸ್ತುವಾರಿ ಸಚಿವರೇ ಕಿತ್ತೂರು ಉತ್ಸವದ ಕುರಿತು ಸುದ್ದಿಗೋಷ್ಠಿ ನಡೆಸಬೇಕಿತ್ತು. ಚನ್ನಮ್ಮನ ಜ್ಯೋತಿ ಯಾತ್ರೆಯನ್ನು ಸ್ವಾಗತಿಸುವರು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಅಧಿಕಾರಿಗಳೊಂದಿಗೆ ಸಮನ್ವಯ ಕೊತರೆಯೂ ಇಲ್ಲ. ಕೆಲವೊಂದು ತಪ್ಪು ಆಗುವುದು ಸಹಜ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದರು. ಕಿತ್ತೂರು ಉತ್ಸವದಲ್ಲಿ ಪರಂಪರೆ ಮುರಿಯಲಾಗುತ್ತಿಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಶಾಸಕರು ಬಂದಾಗ ಬದಲಾವಣೆಯಾಗಲ್ಲ, ಬೆಳವಣಿಗೆಯಾಗುತ್ತದೆ. ಪರಂಪರೆಯನ್ನು ನಾವು ಮುರಿದಿಲ್ಲ ಎಂದು ಸ್ಪಷ್ಟಪಡಿಸಿದರು.