Asianet Suvarna News Asianet Suvarna News

1.7 ಲಕ್ಷ ಕೋಟಿ ಯೋಜನೆಗೆ ಅಸ್ತು: ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿ ಅನುಮೋದನೆ

ರಾಜ್ಯದಲ್ಲಿ 1.74 ಲಕ್ಷ ಕೋಟಿ ರು. ಮೌಲ್ಯದ ಒಟ್ಟು 11 ಯೋಜನೆಗಳಿಗೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅನುಮೋದನೆ ನೀಡಿದೆ. ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯು 1,74,381.44 ಕೋಟಿ ರು. ಮೌಲ್ಯದ 11 ಯೋಜನೆಗಳಿಗೆ ಅನುಮೋದನೆ ನೀಡಿತು. 

1 7 lakh crore project approved by the CM Basavaraj Bommai led committee gvd
Author
First Published Oct 23, 2022, 7:42 AM IST

ಬೆಂಗಳೂರು (ಅ.23): ರಾಜ್ಯದಲ್ಲಿ 1.74 ಲಕ್ಷ ಕೋಟಿ ರು. ಮೌಲ್ಯದ ಒಟ್ಟು 11 ಯೋಜನೆಗಳಿಗೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅನುಮೋದನೆ ನೀಡಿದೆ. ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯು 1,74,381.44 ಕೋಟಿ ರು. ಮೌಲ್ಯದ 11 ಯೋಜನೆಗಳಿಗೆ ಅನುಮೋದನೆ ನೀಡಿತು. ರಾಜ್ಯದಲ್ಲಿ ಇಷ್ಟು ಭಾರಿ ಮೊತ್ತದ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಿರುವುದು ಇದೇ ಮೊದಲು. 

ಗ್ರೀನ್‌ ಹೈಡ್ರೋಜನ್‌ ಉತ್ಪಾದಕ ಸಂಸ್ಥೆ ಆಕ್ಮೆಕ್ಲೀನ್‌ ಟೆಕ್‌ ಸೆಲ್ಯೂಷನ್‌ ಸೇರಿದಂತೆ ಎಂಟು ಹೊಸ ಕೈಗಾರಿಕಾ ಪ್ರಸ್ತಾವನೆಗಳು ಮತ್ತು ಮೂರು ಹೆಚ್ಚುವರಿ ಹೂಡಿಕೆ ಯೋಜನೆಗಳ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ. ಈ ಯೋಜನೆಗಳಿಂದ ರಾಜ್ಯದಲ್ಲಿ 41,448 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಸಭೆಯಲ್ಲಿ ಯೋಜನೆಗಳಿಗೆ ಒಪ್ಪಿಗೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಸಿರು ಇಂಧನವೇ ಭವಿಷ್ಯವಾಗಿದ್ದು, 2026ರಿಂದ ಗ್ರೀನ್‌ ಹೈಡ್ರೋಜನ್‌ ರಫ್ತು ಆರಂಭವಾಗಲಿದೆ. ದೇಶದ ಒಟ್ಟು ಗ್ರೀನ್‌ ಹೈಡ್ರೋಜಿನ್‌ ರಫ್ತಿನಲ್ಲಿ ರಾಜ್ಯದ ಪಾಲು ಅಧಿಕವಾಗಿರಲಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಗ್ರೀನ್‌ ಹೈಡ್ರೋಜನ್‌ ಉತ್ಪಾದನೆಗೆ ಮುಂದಾಗಿರುವ ಆಕ್ಮೆಕ್ಲೀನ್‌ ಟೆಕ್‌ ಸಲ್ಯೂಷನ್‌ ಪ್ರೈ.ಲಿ., ಜೆಎಸ್‌ಡಬ್ಲೂ ಗ್ರೀನ್‌ ಹೈಡ್ರೋಜನ್‌ ಲಿ., ಅವದಾ ವೆಂಚರ್ಸ್‌ ಪ್ರೈ.ಲಿ. ಮತ್ತು ರಿನ್ಯೂ ಇ-ಪ್ಯೂಯೆಲ್ಸ್‌ ಪ್ರೈ ಲಿ. ಪ್ರಸ್ತಾವನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.

ಅಭಿವೃದ್ಧಿ ಮಾಡೋದು ತಾಕತ್ತು, ಬರಿ ಬಾಯಿ ಮಾತಲ್ಲಿ ಮಾತಾಡೋದಲ್ಲ: ಸಿದ್ದು ವಿರುದ್ಧ ಸಿಎಂ ವಾಗ್ದಾಳಿ

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯ ಸರ್ಕಾರವು ಗ್ರೀನ್‌ ಹೈಡ್ರೋಜನ್‌ ನೀತಿಯನ್ನು ರೂಪಿಸುತ್ತಿದೆ. ಕಬ್ಬು ಬೆಳೆಯುವ ರಾಜ್ಯಗಳ ಪೈಕಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿರುವ ಕರ್ನಾಟಕ ದೇಶದಲ್ಲಿಯೇ ಅತಿ ಹೆಚ್ಚು ಎಥನಾಲ್‌ ಉತ್ಪಾದಿಸುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು. ಸಭೆಯಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೃಷಿ ಸಚಿವ ಬಿ.ಸಿ.ಪಾಟೀಲ್‌, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಮುಖ ಹೂಡಿಕೆಗಳು
- ಆಕ್ಮೆಕ್ಲೀನ್‌ ಟೆಕ್‌ ಸಲ್ಯೂಷನ್‌ ಪ್ರೈ.ಲಿ. - 51,865 ಕೋಟಿ ರು.
- ಅವದಾ ವೆಂಚರ್ಸ್‌ ಪ್ರೈ.ಲಿ. - 45 ಸಾವಿರ ಕೋಟಿ ರು.
- ಜೆಎಸ್‌ಡಬ್ಲ್ಯೂ ಗ್ರೀನ್‌ ಹೈಡ್ರೋಜನ್‌ ಲಿ. - 40148 ಕೋಟಿ ರು.
- ರಿನ್ಯೂ ಇ-ಫ್ಯೂಯೆಲ್ಸ್‌ ಪ್ರೈ. ಲಿ. - 20 ಸಾವಿರ ಕೊಟಿ ರು.
- ಏಟ್ರಿಯಾ ಪವರ್‌ ಹೋಲ್ಡಿಂಗ್‌್ಸ - 9454 ಕೋಟಿ ರು.
- ಕಿರ್ಲೋಸ್ಕರ್‌ ಫೆರೋಸ್‌ ಇಂಡಸ್ಟ್ರೀಸ್‌ ಲಿ. - 3025 ಕೋಟಿ ರು.
- ಜೆಎಸ್‌ಡಬ್ಲ್ಯೂ ನಿಯೋ ಎನರ್ಜಿ ಲಿ. - 2579 ಕೋಟಿ ರು.
- ಕಾಂಟಿನೆಂಟಲ್‌ ಅಟೋಮೇಟಿವ್‌ ಕಾಂಪೋನೆಂಟ್ಸ್‌ - 920 ಕೋಟಿ ರು.

ಶತಮಾನ ಕಳೆದರೂ ಕೆಂಪೇಗೌಡ ಅಜರಾಮರ: ಸಿಎಂ ಬೊಮ್ಮಾಯಿ

ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು
- ಟೊಯೋಟ ಕಿರ್ಲೋಸ್ಕರ್‌ ಮೋಟಾರ್‌ ಪ್ರೈ.ಲಿ. - 511 ಕೋಟಿ ರು.
- ಜಿ.ಎಂ.ಶುಗರ್‌ ಮತ್ತು ಎನರ್ಜಿ ಲಿ. - 49.44 ಕೋಟಿ ರು.
- ರಿಸೋರ್ಸ್‌ ಪೆಲ್ಲೆಟ್ಸಸ್‌ ಕಾನ್ಸನ್ಟೆ್ರೕಟ್ಸ್‌ ಪ್ರೈ.ಲಿ. - 830 ಕೋಟಿ ರು.

Follow Us:
Download App:
  • android
  • ios