Bengaluru Press Club Awards: ಪತ್ರಕರ್ತ-ರಾಜಕಾರಣಿ ನಂಟು ಅವಿನಾಭಾವ: ಸಿಎಂ ಬೊಮ್ಮಾಯಿ

*   ಭಿನ್ನಾಭ್ರಿಪಾಯ ವೈಯಕ್ತಿಯವಾಗಬಾರದು: ಬಸವರಾಜ ಬೊಮ್ಮಾಯಿ
*  ಬಿಎಸ್‌ವೈ, ಪ್ರೇಮ್‌ ಜೀಗೆ ಪ್ರೆಸ್‌ ಕ್ಲಬ್‌ ವರ್ಷದ ವ್ಯಕ್ತಿ ಪ್ರಶಸ್ತಿ
*  ಹಾಜಬ್ಬ, ಸುದೀಪ್‌, ಸುಧಾಕರ್‌, ದೇವಿಶೆಟ್ಟಿಗೆ ವಿಶೇಷ ಪ್ರಶಸ್ತಿ
 

CM Basavaraj Bommai React on Journalist Politician Relationship grg

ಬೆಂಗಳೂರು(ಫೆ.26): ಸಮಾಜದಲ್ಲಿ ರಾಜಕಾರಣಿಗಳು(Politicians) ಹಾಗೂ ಪತ್ರಕರ್ತರ(Journalists) ನಡುವಿನದ್ದು ಅವಿನಾಭಾವ ಸಂಬಂಧ. ಇಬ್ಬರ ನಡುವೆ ಉಂಟಾಗುವ ಭಿನ್ನಾಭಿಪ್ರಾಯಗಳನ್ನು ಆಯಾ ವಿಚಾರಕ್ಕಷ್ಟೇ ಸೀಮಿತಗೊಳಿಸಿ ವೈಯಕ್ತಿಕ ಸಂಬಂಧಗಳನ್ನು ಗೌರವಿಸಿಕೊಂಡು ಉತ್ತಮವಾಗಿಟ್ಟುಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್‌(Bengaluru Pressclub) ವತಿಯಿಂದ ಗುರುವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪ್ರೆಸ್‌ ಕ್ಲಬ್‌ ವರ್ಷದ ವ್ಯಕ್ತಿ, ವಿಶೇಷ ವ್ಯಕ್ತಿ ಮತ್ತು ವಾರ್ಷಿಕ ಪ್ರಶಸ್ತಿ(Award) ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

Press Club: BSY ವರ್ಷದ ವ್ಯಕ್ತಿ, ಸುವರ್ಣ ನ್ಯೂಸ್‌ನ ಪ್ರಶಾಂತ್‌ ನಾತು ಸೇರಿ 16 ಮಂದಿಗೆ ಪ್ರೆಸ್‌ಕ್ಲಬ್‌ ಪ್ರಶಸ್ತಿ

ರಾಜ್ಯವನ್ನು ಬೆಳೆಸಲು ಕೇವಲ ಆಡಳಿತಗಾರರಿಂದ ಮಾತ್ರ ಸಾಧ್ಯವಿಲ್ಲ. ಮಾಧ್ಯಮ(Media) ರಂಗದ ಪಾತ್ರವೂ ಇದರಲ್ಲಿ ದೊಡ್ಡದಿರುತ್ತದೆ. ಮಾಧ್ಯಮಗಳಿಲ್ಲದಿದ್ದರೆ ರಾಜಕಾರಣಿಗಳ ಸುದ್ದಿಗಳು ಯಾರೂ ತೋರುತ್ತಿಲ್ಲ ಎಂಬುದು ಎಷ್ಟುಸತ್ಯವೋ ರಾಜಕಾರಣಿಗಳ ಸುದ್ದಿ ಇಲ್ಲದಿದ್ದರೆ ಮಾಧ್ಯಮಗಳಿಗೂ ರೋಮಾಂಚನ ಸುದ್ದಿಗಳ ಕೊರತೆ ಉಂಟಾಗುತ್ತಿತ್ತು ಎಂಬುದು ಅಷ್ಟೇ ಸತ್ಯ. ಹೀಗಾಗಿ ಎರಡೂ ಕ್ಷೇತ್ರಗಳ ನಡುವಿನ ಸಂಬಂದ ಅವಿನಾಭಾವದ್ದು ಎಂದರು.
ಯಡಿಯೂರಪ್ಪ ಅವರು ಅಧಿಕಾರ ಇರಲಿ ಇಲ್ಲದಿರಲಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯದಲ್ಲಿ ತೊಡಗಿರುತ್ತಾರೆ. ಅವರ ಅಧಿಕಾರದಲ್ಲಿ ಕೊಟ್ಟಿರುವ ಕಾರ್ಯಕ್ರಮಗಳು ಶಾಶ್ವತವಾಗಿ ಉಳಿದಿವೆ. ಕಟ್ಟಕಡೆಯ ಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದು ಕೊಂಡಾಡಿದರು.

ಜೀವನದುದ್ದಕ್ಕೂ ಮಾಧ್ಯಮಗಳ ಸ್ಮರಣೆ:

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yediyurappa) ಮಾತನಾಡಿ, ಸಾರ್ವಜನಿಕ ಬದುಕಿನ ಆರಂಭದಿಂದ ಹಿಡಿದು ಇಂದಿನವರೆಗೂ ನನ್ನ ಪರವಾಗಿ ನಿಂತಿದ್ದು ಮಾಧ್ಯಮಗಳು. ಜೀವನದುದ್ದಕ್ಕೂ ಇದನ್ನು ಸ್ಮರಿಸುತ್ತಿದ್ದೇನೆ. ರಾಜ್ಯದ ಮಾಧ್ಯಮ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಈಗಿನವರೆಗೂ ಸಮಾಜಕ್ಕೆ ಕೊಡುಗೆ ನೀಡಿರುವ ಎಲ್ಲ ಪ್ರರ್ತಕರ್ತರನ್ನು ಸ್ಮರಿಸುತ್ತೇನೆ. ಅತ್ಯಂತ ಸಂತೋಷದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ. ಪ್ರಜಾಪ್ರಭುತ್ವದ 4ನೇ ಅಂಗವೆಂದು ಪರಿಗಣಿಸಿರುವ ಈ ಮಾಧ್ಯಮ ಕ್ಷೇತ್ರದ ನಂಬಿಕೆ ಎಂದಿಗೂ ಕಡಿಮೆಯಾಗಬಾರದು ಎಂದು ಸಲಹೆ ನೀಡಿದರು.

ನಟ ಸುದೀಪ್‌(Sudeep) ಮಾತನಾಡಿ, ತುಂಬಾ ವರ್ಷದ ನಂತರ ವೇದಿಕೆಯಲ್ಲಿ ಸಾಧಕರನ್ನು ನೋಡಲು ಸಾಧ್ಯವಾಯಿತು. ಮೊದಲ ದಿನ ಹಾಗೂ ಕೆಟ್ಟದಿನಗಳ ಸಂದರ್ಭದಲ್ಲಿ ನನ್ನ ಲೇಖನಗಳನ್ನು ಬರೆದಿರುವವರನ್ನು ಮೆರೆಯುವುದಿಲ್ಲ. ನನ್ನನ್ನು ಸನ್ಮಾನಿಸಿದವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಇದೇ ವೇಳೆ ಪ್ರೆಸ್‌ ಕ್ಲಬ್‌ ಆಫ್‌ ಬೆಂಗಳೂರು ಯ್ಯೂಟೂಬ್‌ ಚಾನಲ್‌ನ್ನು ಸಚಿವ ಮುರುಗೇಶ ನಿರಾಣಿ(Murugesh Nirani) ಅನಾವರಣ ಮಾಡಿದರು. ಸಚಿವ ಮುನಿರತ್ನ, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಮತ್ತಿತರರಿದ್ದರು.

ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತರು:

2021 ನೇ ಸಾಲಿನ ಪ್ರೆಸ್‌ ಕ್ಲಬ್‌ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ 2020ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ವಿಪ್ರೋ ಸಂಸ್ಥೆ ಅಧ್ಯಕ್ಷ ಅಜೀಂ ಪ್ರೇಮ್‌ ಜೀ(Azim Premji) ಅವರಿಗೆ ನೀಡಿ ಗೌರವಿಸಲಾಯಿತು. ಅದೇ ರೀತಿ 2020 ನೇ ಸಾಲಿನ ವಿಶೇಷ ಪ್ರಶಸ್ತಿಗೆ ಅಕ್ಷರಸಂತ ಮತ್ತು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಸಚಿವ ಡಾ.ಕೆ.ಸುಧಾಕರ್‌ ಹಾಗೂ 2021 ಸಾಲಿನ ವಿಶೇಷ ಪ್ರಶಸ್ತಿಯನ್ನು ನಾರಾಯಣ ಹೆಲ್ತ್‌ ಸಿಟಿ ಮುಖ್ಯಸ್ಥ ಡಾ. ದೇವಿಪ್ರಸಾದ್‌ ಶೆಟ್ಟಿ, ನಟ ಕಿಚ್ಚ ಸುದೀಪ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಂಗಳೂರು ಸಿನಿಮೋತ್ಸವದಲ್ಲಿ ಪೆದ್ರೋ ಕಡೆಗಣನೆ: ರಿಷಬ್ ಶೆಟ್ಟಿ ಆರೋಪ

2020ನೇ ಸಾಲಿನ ಪ್ರಶಸ್ತಿ ಪುರಸ್ಕೃತರು:

ಕನ್ನಡಪ್ರಭ(Kannada Prabha) ಮುಖ್ಯ ಕಲಾವಿದ ಸುಧಾಕರ ಕೆ ದರ್ಬೆ, ಉದಯ ಮರಕಿಣಿ, ಇಂದ್ರಜಿತ್‌ ಲಂಕೇಶ್‌, ಎಸ್‌. ದೇವನಾಥ, ಎಸ್‌.ಕೆ. ಶೇಷಚಂದ್ರಿಕ, ಪಿ.ರಾಮಕೃಷ್ಣ ಉಪಾಧ್ಯ, ಜಿ.ಎಸ್‌. ನಾರಾಯಣರಾವ್‌ (ಜೇಸುನಾ), ಎಚ್‌.ಬಿ.ದಿನೇಶ್‌, ಡಾ.ಸಿ.ಎಸ್‌.ದ್ವಾರಕಾನಾಥ್‌, ಮುಂಜಾನೆ ಸತ್ಯ, ಗೇಬ್ರಿಯಲ್‌ ವಾಜ್‌, ಸಾಗ್ಗೆರೆ ರಾಮಸ್ವಾಮಿ, ಶಾಂತಲಾ ಧರ್ಮರಾಜ್‌, ಎಸ್‌.ಕೆ.ಶ್ಯಾಂಸುಂದರ್‌(SK Shamasundar), ಎಂ.ಸಿ.ಪಾಟೀಲ್‌, ಆರ್‌.ಶ್ರೀಧರ್‌, ವೈ.ಗ.ಜಗದೀಶ್‌, ಕೆ.ಎಂ.ಮನು ಅಯ್ಯಪ್ಪ, ಎಸ್‌. ಲಕ್ಷ್ಮೀನಾರಾಯಣ, ಪರಮೇಶ್ವರ್‌ ಗುಂಡ್ಕಲ್‌, ರಾಘವೇಂದ್ರ ಹುಣಸೂರು, ಕೆ.ಆದಿನಾರಾಯಣಮೂರ್ತಿ, ವಿಶ್ವನಾಥ್‌ ಸುವರ್ಣ, ಡಾ.ಎಂ.ಎಸ್‌.ಮಣಿ, ಆರ್‌.ಎಚ್‌.ನಟರಾಜ್‌.

2021ನೇ ಸಾಲಿನ ಪ್ರಶಸ್ತಿ ಪುರಸ್ಕೃತರು

ಎಂ.ಕೆ. ಭಾಸ್ಕರ್‌ ರಾವ್‌, ಪದ್ಮರಾಜ ದಂಡಾವತಿ, ರಂಜಾನ್‌ ದರ್ಗಾ, ಕೆಸ್ತೂರು ಗುಂಡಪ್ಪ ವಾಸುಕಿ, ಡಾ.ಎನ್‌. ಜಗದೀಶ್‌ ಕೊಪ್ಪ, ಕೆ.ಆರ್‌. ಬಾಲಸುಬ್ರಮಣ್ಯ, ಬಿ.ವಿ. ಜಿ.ಡಿ. ಶಿವಶಂಕರ, ಯತೀಶ್‌ ಕುಮಾರ್‌, ಸುದರ್ಶನ ಚೆನ್ನಂಗಿಹಳ್ಳಿ, ದೊಡ್ಡ ಬೊಮ್ಮಯ್ಯ, ಕೆ.ಎಂ.ವೀರೇಶ್‌, ವಾಸಂತಿ ಹರಿಪ್ರಕಾಶ್‌, ಪ್ರಶಾಂತ್‌ ನಾತೂ, ಪ್ರಕಾಶ್‌ ಬೆಳವಾಡಿ, ಎಸ್‌.ಎಚ್‌. ಮಾರುತಿ, ಭಾನು ಪ್ರಕಾಶ್‌ ಚಂದ್ರ.
 

Latest Videos
Follow Us:
Download App:
  • android
  • ios