Press Club: BSY ವರ್ಷದ ವ್ಯಕ್ತಿ, ಸುವರ್ಣ ನ್ಯೂಸ್‌ನ ಪ್ರಶಾಂತ್ ನಾತು ಸೇರಿ 16 ಮಂದಿಗೆ ಪ್ರೆಸ್‌ಕ್ಲಬ್ ಪ್ರಶಸ್ತಿ
* ಪ್ರಶಾಂತ್ ನಾತು, ಬಾಲಸುಬ್ರಹ್ಮಣ್ಯಂ, ವೀರೇಶ್, ಬೆಳವಾಡಿಗೆ ಗೌರವ
* ಬಿ.ಎಸ್. ಯಡಿಯೂರಪ್ಪ ವರ್ಷದ ವ್ಯಕ್ತಿ
* ಹಾಜಬ್ಬ, ಸುಧಾಕರ್‌ಗೆ ವಿಶೇಷ ಪುರಸ್ಕಾರ
ಬೆಂಗಳೂರು(ಜ.02): ಬೆಂಗಳೂರು ಪ್ರೆಸ್‌ಕ್ಲಬ್(Bengaluru Press Club) 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು(Award) ಪ್ರಕಟಿಸಿದ್ದು, ಸುವರ್ಣ ನ್ಯೂಸ್‌ನ(Suvarna News) ರಾಜಕೀಯ ವಿಶ್ಲೇಷಕ ಮತ್ತು ಕನ್ನಡಪ್ರಭದ(Kannada Prabha) ಅಂಕಣಕಾರ ಪ್ರಶಾಂತ್ ನಾತು(Prashant Natu), ಹಿರಿಯ ಪತ್ರಕರ್ತರಾದ ಕೆ.ಆರ್.ಬಾಲಸುಬ್ರಹ್ಮಣ್ಯಂ, ಬಿ.ವಿ.ಶಿವಶಂಕರ್, ಸುದರ್ಶನ ಚನ್ನಂಗಿಹಳ್ಳಿ, ಭಾನುಪ್ರಕಾಶ್ ಚಂದ್ರ ಸೇರಿದಂತೆ 16 ಮಂದಿ ಆಯ್ಕೆಯಾಗಿದ್ದಾರೆ.
ವಾರ್ಷಿಕ ಪ್ರಶಸ್ತಿ ವಿಜೇತ ಪತ್ರಕರ್ತರು- ಪ್ರಶಾಂತ್ ನಾತು, ಎಂ.ಕೆ.ಭಾಸ್ಕರ್‌ರಾವ್, ಪದ್ಮರಾಜ ದಂಡಾವತಿ, ರಂಜಾನ್ ದರ್ಗಾ, ಕೆಸ್ತೂರು ಗುಂಡಪ್ಪ ವಾಸುಕಿ, ಡಾ.ಎನ್. ಜಗದೀಶ್ ಕೊಪ್ಪ, ಕೆ.ಆರ್.ಬಾಲಸುಬ್ರಹ್ಮಣ್ಯಂ, ಬಿ.ವಿ.ಶಿವಶಂಕರ, ಜಿ.ಡಿ.ಯತೀಶ್ ಕುಮಾರ್, ಸುದರ್ಶನ್ ಚನ್ನಂಗಿಹಳ್ಳಿ, ದೊಡ್ಡ ಬೊಮ್ಮಯ್ಯ, ಕೆ.ಎಂ.ವೀರೇಶ್, ವಾಸಂತಿ ಹರಿಪ್ರಕಾಶ್, ಪ್ರಕಾಶ್ ಬೆಳವಾಡಿ, ಎಸ್.ಎಚ್.ಮಾರುತಿ ಮತ್ತು ಭಾನುಪ್ರಕಾಶ್ ಚಂದ್ರ.
ಪ್ರಶಸ್ತಿ ವಿಜೇತರಿಗೆ ಜನವರಿ 6ರಂದು ಸಂಜೆ 6ಕ್ಕೆ ಬೆಂಗಳೂರಿನ ಅರಮನೆ ಮೈದಾನದ(Bengaluru Palace Ground) ಗಾಯತ್ರಿ ವಿಹಾರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಬೆಂಗಳೂರು ಪ್ರೆಸ್ ಕ್ಲಬ್ 2020ರ ವಾರ್ಷಿಕ ಪ್ರಶಸ್ತಿ ಪ್ರಕಟ
ಇದೇ ಸಂದರ್ಭದಲ್ಲಿ 2020ನೇ ಸಾಲಿನ ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್‌ಜಿ(Azim Premji), ಚಿತ್ರನಟ ಸುದೀಪ್(Sudeep) ಹಾಗೂ ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ(Dr Deveprasad) ಅವರಿಗೆ ವಿಶೇಷ ಪ್ರಶಸ್ತಿ ಮತ್ತು ಪ್ರೆಸ್‌ಕ್ಲಬ್‌ನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದ 25 ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಗುವುದು ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷ ಕೆ.ಸದಾಶಿವ ಶೆಣೈ(K Sadashiva Shenoy) ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ವರ್ಷದ ವ್ಯಕ್ತಿ
ಇದೇ ವೇಳೆ ಪ್ರೆಸ್‌ಕ್ಲಬ್‌ನ ವರ್ಷದ ವ್ಯಕ್ತಿ ಹಾಗೂ ವಿಶೇಷ ಪ್ರಶಸ್ತಿಗಳನ್ನೂ ಪ್ರಕಟಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yediyurappa) ಅವರು ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪದ್ಮಶ್ರೀ(Padma Shri) ಪುರಸ್ಕೃತ ಹರೇಕಳ ಹಾಜಬ್ಬ(Harekala Hajabba) ಮತ್ತು ಕೊರೋನಾ ನಿರ್ವಹಣೆಯಲ್ಲಿ ತೋರಿದ ಗಮನಾರ್ಹ ಸಾಧನೆಗಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್(Dr K Sudhakar) ಅವರು ಪ್ರೆಸ್‌ಕ್ಲಬ್‌ನ ವಿಶೇಷ ಪ್ರಶಸ್ತಿಗೆ(Press Club Special Award) ಪಾತ್ರರಾಗಿದ್ದಾರೆ.
ಕನ್ನಡದ ಮೂವರು ಲೇಖಕರಿಗೆ ಒಲಿದ ಪ್ರಶಸ್ತಿ
ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು(Sahitya Akademi) ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು(Awards) ಇಂದು(ಗುರುವಾರ) ಘೋಷಿಸಲಾಗಿದ್ದು ಕನ್ನಡದ(Kannada) ಪ್ರಮುಖ ಲೇಖಕರಾದ ಡಿ.ಎಸ್.ನಾಗಭೂಷಣ್(DS Nagabhushan) ಅವರ 'ಗಾಂಧಿ ಕಥನ' ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. 'ಬಾಲ ಪುರಸ್ಕಾರ' ಕ್ಕೆ ಬಸು ಬೇವಿನಗಿಡದ(Basu Bevinagidad) ಅವರ 'ಓಡಿ ಹೋದ ಹುಡುಗ' ಮಕ್ಕಳಿಗಾಗಿ ಬರೆದ ಕಾದಂಬರಿ ಆಯ್ಕೆಯಾಗಿದೆ. ಅಕಾಡೆಮಿಯು ನೀಡುವ 'ಯುವ ಪುರಸ್ಕಾರ' ಕ್ಕೆ ಎಚ್. ಲಕ್ಷೀನಾರಾಯಣ ಸ್ವಾಮಿ(H Lakshiminayarana) ಅವರ 'ತೊಗಲ ಚೀಲದ ಕರ್ಣ' ಮಹಾ ಕಾವ್ಯವು ಆಯ್ಕೆಯಾಗಿದೆ.
ಮುಖ್ಯ ಪ್ರಶಸ್ತಿಯು ಒಂದು ಲಕ್ಷ ರುಪಾಯಿ ಹಾಗೂ ಸನ್ಮಾನ ಒಳಗೊಂಡಿದ್ದರೆ ಯುವ ಹಾಗೂ ಬಾಲ ಪುರಸ್ಕಾರಗಳು ಐವತ್ತು ಸಾವಿರ ರುಪಾಯಿ ಹಾಗೂ ಸನ್ಮಾನಗಳು ಒಳಗೊಂಡಿರುತ್ತವೆ.
ಹೆಗ್ಗಡೆ, ಜಿವಿ, ಜೆಪಿ ಶೆಟ್ಟಿಗೆ ಪ್ರೆಸ್‌ಕ್ಲಬ್ ಪ್ರಶಸ್ತಿ
ಯುವ ಸಾಹಿತ್ಯ ಪ್ರಶಸ್ತಿಯ ಜ್ಯೂರಿಗಳಾಗಿ ಕಮಲಾ ಹಂಪನಾ, ಜಗದೀಶ್ ಕೊಪ್ಪ ಹಾಗೂ ವಿಜಯಕುಮಾರಿ ಕೆಲಸ ನಿರ್ವಹಿಸಿದ್ದರೆ ಬಾಲ ಸಾಹಿತ್ಯ ಪ್ರಶಸ್ತಿಗೆ ಟಿ.ಪಿ. ಅಶೋಕ, ಮಾಲತಿ ಪಟ್ಟಣಶೆಟ್ಟಿ ಹಾಗೂ ಎಸ್.ದಿವಾಕರ ಅವರು ಜ್ಯೂರಿಗಳಾಗಿದ್ದರು. ಪ್ರಮುಖ ಕೃತಿ ಆಯ್ಕೆಯ ಜ್ಯೂರಿಗಳಾಗಿ ಬೊಳುವಾರ್ ಮಹಮ್ಮದ ಕುಂಯಿ, ಅಮರೇಶ ನುಗಡೋಣಿ ಹಾಗೂ ಸಬೀಹಾ ಭೂಮಿಗೌಡ ಅವರಿದ್ದರು. ಪುಸ್ತಕ ಆಯ್ಕೆ ಪ್ರಕ್ರಿಯೆಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕರಾದ ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ನಡೆದಿದೆ.
ಪ್ರಶಸ್ತಿಗಳನ್ನು ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ವಿಜೇತರರನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಚಂದ್ರಶೇಖರ ಕಂಬಾರ(Chandrashekhara Kambara) ಅವರು ಅಭಿನಂದಿಸಿದ್ದಾರೆ.