Asianet Suvarna News Asianet Suvarna News

ಬೆಂಗಳೂರು: ಇಂದು BESCOMನ 17 ಹೊಸ ಕಟ್ಟಡಗಳಿಗೆ ಸಿಎಂ ಚಾಲನೆ

ಬೆಸ್ಕಾಂ ಸಂಸ್ಥೆಯು ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಕಟ್ಟಡ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿನ ಒಟ್ಟು 17 ಹೊಸ ಕಟ್ಟಡಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ (ಮಾ.6) ಉದ್ಘಾಟನೆ ಮಾಡಲಿದ್ದಾರೆ.

CM Basavaraj bommai inaugurated 17 new buildings of BESCOM today at bengaluru rav
Author
First Published Mar 6, 2023, 7:52 AM IST | Last Updated Mar 6, 2023, 7:56 AM IST

ಬೆಂಗಳೂರು (ಮಾ.6) : ಬೆಸ್ಕಾಂ ಸಂಸ್ಥೆಯು ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಕಟ್ಟಡ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿನ ಒಟ್ಟು 17 ಹೊಸ ಕಟ್ಟಡಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಸೋಮವಾರ (ಮಾ.6) ಉದ್ಘಾಟನೆ ಮಾಡಲಿದ್ದಾರೆ.

ಜತೆಗೆ, 8 ಹೊಸ ಕಚೇರಿ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನೂ ಇದೇ ಸಮಯದಲ್ಲಿ ನೆರವೇರಿಸಲಿದ್ದಾರೆ.

ಬೆಂಗಳೂರು ನಗರ(Bengaluru city), ರಾಮನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ತುಮಕೂರು, ಜಿಲ್ಲೆಗಳಲ್ಲಿ .77.15 ಕೋಟಿ ವೆಚ್ಚದಲ್ಲಿ ಬೆಸ್ಕಾಂನ ಹೊಸ ಉಪ ವಿಭಾಗೀಯ ಕಚೇರಿ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ನೈಸ್‌ ರಸ್ತೆಯಲ್ಲಿ ಬೈಕ್‌ ನಿಲ್ಲಿಸಿದ ಮಹಿಳಾ ಬೈಕರ್‌ಗಳು ಸ್ಥಳೀಯರ ಜತೆ ಜಗಳ

ಎಚ್‌ಎಸ್‌ಆರ್‌ ಬಡಾವಣೆ(HSR Layout)ಯಲ್ಲಿ ತಲೆ ಎತ್ತಿರುವ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಕಟ್ಟಡ(Center of Excellence Building)ವನ್ನು .28.96 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ರಾಮನಗರದಲ್ಲಿರುವ ಬೆಸ್ಕಾಂ ತರಬೇತಿ ಕೇಂದ್ರವನ್ನು .26.55 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಕೇಂದ್ರ ಬೆಸ್ಕಾಂನ ವ್ಯವಸ್ಥೆ ಸುಧಾರಣೆಗೆ ಅನುವಾಗಲಿದೆ. ವಿದ್ಯುತ್‌ ಉತ್ಪಾದನೆ, ಪ್ರಸರಣೆ ಮತ್ತು ವಿತರಣಾ ಜಾಲದ ಸ್ಕೇಲ್ಡ್‌ ಡೌನ್‌ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ಕೇಂದ್ರ ಕೆಲಸ ಮಾಡಲಿದೆ. ಜತೆಗೆ ಉನ್ನತ ಗುಣಮಟ್ಟನಿರಂತರ ಸುಧಾರಣೆಯನ್ನು ನಿರ್ವಹಿಸಲಿದೆ. ಕಾರ್ಯಕ್ರಮದಲ್ಲಿ ಇಂಧನ ಸಚಿವ ಸುನಿಲ್‌ಕುಮಾರ್‌ ಹಾಜರಿರಲಿದ್ದಾರೆ.

Latest Videos
Follow Us:
Download App:
  • android
  • ios