Asianet Suvarna News Asianet Suvarna News

10 ಪಾಲಿಕೆ ಸಫಾಯಿ ಕರ್ಮಚಾರಿಗಳಿಗೆ ಸ್ಕೂಟರ್‌: ಸಿಎಂ ಬೊಮ್ಮಾಯಿ

ಸಫಾಯಿ ಕರ್ಮಚಾರಿಗಳಿಗೆ ದ್ವಿಚಕ್ರವಾಹನ ವಿತರಿಸುವ ಯೋಜನೆಯು ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ವಿಸ್ತರಣೆಯಾಗಿದ್ದು, ಒಟ್ಟು 600 ಮಂದಿಗೆ ಒದಗಿಸಲಾಗುತ್ತಿದೆ. ಮೊದಲ ಹಂತದಲ್ಲಿ 400 ಜನರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

cm basavaraj bommai distribute electric two wheelers to female sanitation workers gvd
Author
First Published Sep 17, 2022, 3:45 AM IST

ಬೆಂಗಳೂರು (ಸೆ.17): ಸಫಾಯಿ ಕರ್ಮಚಾರಿಗಳಿಗೆ ದ್ವಿಚಕ್ರವಾಹನ ವಿತರಿಸುವ ಯೋಜನೆಯು ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ವಿಸ್ತರಣೆಯಾಗಿದ್ದು, ಒಟ್ಟು 600 ಮಂದಿಗೆ ಒದಗಿಸಲಾಗುತ್ತಿದೆ. ಮೊದಲ ಹಂತದಲ್ಲಿ 400 ಜನರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಶುಕ್ರವಾರ ವಿಧಾನಸೌಧದ ಬೃಹತ್‌ ಮೆಟ್ಟಿಲುಗಳ ಮುಂದೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವತಿಯಿಂದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.

ಸಫಾಯಿ ಕರ್ಮಚಾರಿಗಳಿಗೂ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿ ಅವರ ಬದುಕಿಗೆ ಶಕ್ತಿಯನ್ನು ತುಂಬುವ, ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಬದುಕನ್ನು ನಿರಾಳ ಮಾಡುವ ಅವಶ್ಯಕತೆ ಇದೆ. ಅವರು ಮಾಡುತ್ತಿರುವ ಕೆಲಸ ಅತ್ಯಂತ ಪ್ರಮುಖ ಕೆಲಸ. ನಾವು ಸೃಷ್ಟಿಮಾಡುವ ಕಸವನ್ನು ಪ್ರತಿನಿತ್ಯ ನಿರಂತರವಾಗಿ ದಣಿವಿಲ್ಲದೆ ಮಾಡುತ್ತಿದ್ದಾರೆ. ಆ ಕಾಯಕವನ್ನು ಗುರುತಿಸಿ ಪುರಸ್ಕರಿಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು. ವಿದೇಶದಲ್ಲಿ ಕರ್ಮಚಾರಿಗಳು ಕಾರುಗಳಲ್ಲಿ ಓಡಾಡುವುದನ್ನು ಕೇಳಿದ್ದೆವು. ಈಗ ಇದು ನಮ್ಮ ದೇಶದಲ್ಲಿಯೂ ಆಗುತ್ತಿದೆ. 

ಕಲಬುರಗಿ: ಶಾಲಾ ಕಟ್ಟಡಕ್ಕಾಗಿ ಸಿಎಂ ಭೇಟಿಗೆ ಮಕ್ಕಳ ಪಾದಯಾತ್ರೆ..!

ಈಗ ಸ್ಕೂಟರ್‌ನಲ್ಲಿ ಓಡಾಡುವಂತಾಗಿದ್ದು, ಬರುವ ದಿನದಲ್ಲಿ ಅವರಿಗೆ ಕಾರುಗಳನ್ನು ಒದಗಿಸುವಂತಾಗುವ ವಿಶ್ವಾಸ ಇದೆ. ಅವರ ಎಲ್ಲಾ ವಿಚಾರಗಳಿಗೆ ಸರ್ಕಾರ ಸ್ಪಂದಿಸುತ್ತಿದೆ. ವಾಹನಗಳಿಗೆ ಇದಕ್ಕೆ ಬಾಕ್ಸ್‌ ಜೋಡಿಸಲು ಸೂಚಿಸಿದ್ದು, ಬಾಬು ಜಗಜೀವನ್‌ ರಾಮ್‌ ಹೆಸರಲ್ಲಿ ಪ್ರತಿ ಕ್ಷೇತ್ರಕ್ಕೆ ಬಾಕ್ಸ್‌ವುಳ್ಳ 100 ಸ್ಕೂಟರ್‌ಗಳನ್ನು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಒದಗಿಸಲು ತೀರ್ಮಾನಿಸಿ ಆದೇಶಿಸಲಾಗಿದೆ ಎಂದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಸಚಿವ ಶ್ರೀನಿವಾಸ ಪೂಜಾರಿ, ಶಾಸಕ ಸಿ.ಟಿ.ರವಿ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಕಾರಂಜಾ ರೈತರಿಗೆ ಹೆಚ್ಚುವರಿ ಪರಿಹಾರ ಇಲ್ಲ: ಬೀದರ್‌ ಜಿಲ್ಲೆಯ ಕಾರಂಜಾ ಯೋಜನೆಗೆ ಭೂಮಿ ನೀಡಿದ್ದ ರೈತರು 30 ವರ್ಷಗಳ ನಂತರ ಹೆಚ್ಚುವರಿ ಪರಿಹಾರ ನೀಡಬೇಕೆಂದು ಬೇಡಿಕೆ ಇಟ್ಟಿದ್ದು, ಈಡೇರಿಸಲು ಸಾಧ್ಯವಿಲ್ಲ. ಆದರೆ, ಕಾನೂನಾತ್ಮಕವಾಗಿ ಬೇರೆ ರೀತಿ ಸಹಾಯ ಮಾಡಲು ಸಾಧ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸಚಿವ ಗೋವಿಂದ ಕಾರಜೋಳ ಅವರು ಪರಿಹಾರ ನೀಡಿಕೆ ಅಸಾಧ್ಯ ಎಂದು ಉತ್ತರ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್‌ನ ಅರಳಿ ಅವರು ಸಭಾಪತಿಗಳ ಮುಂದೆ ಧರಣಿಗೆ ಮುಂದಾದಾಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಯವರು, ಬುಧವಾರ ಆ ಭಾಗದ ರೈತರು ಸೇರಿದಂತೆ ಶಾಸಕ ಖಂಡ್ರೆ ಅವರು ನಮ್ಮ ಜೊತೆ ಚರ್ಚಿಸಿದರು. 

ಬಳ್ಳಾರಿ ದುರಂತ: ವಿಮ್ಸ್‌ ಐಸಿಯುನಲ್ಲಿ 3 ಸಾವು, ತನಿಖೆಗೆ ಸಿಎಂ ಬೊಮ್ಮಾಯಿ ಆದೇಶ

ಈ ವೇಳೆ ತಾವೂ ಕೂಡ ಹೆಚ್ಚು ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಮನವರಿಕೆ ಮಾಡಿದ್ದೇನೆ. ಕಾನೂನಾತ್ಮಕವಾಗಿ ಬೇರೆ ಯಾವ ರೀತಿ ಸಹಾಯ ಮಾಡಲು ಸಾಧ್ಯ ಎಂಬುದನ್ನು ಪರಿಶೀಲಿಸಲಾಗುವುದು ಎಂದರು. ಇದಕ್ಕೂ ಮುನ್ನ ಅರಳಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕಾರಜೋಳ ಅವರು, ಸದರಿ ರೈತರಿಗೆ ಭೂಸ್ವಾಧೀನ ಕಾಯ್ದೆಗಳ ಮಾರ್ಗಸೂಚಿ ಪ್ರಕಾರ ಆಯಾ ಹಂತದಲ್ಲಿ ಪರಿಹಾರ ನೀಡಲಾಗಿದೆ. ಕೆಲವರು ನ್ಯಾಯಾಲಯಕ್ಕೆ ಹೋಗಿ ಹೆಚ್ಚಿನ ಪರಿಹಾರ ಸಹ ಪಡೆದಾಗ, ಕೋರ್ಚ್‌ಗೆ ಹೋಗದವರು ಸಹ ಮೂರು ತಿಂಗಳ ಅವಧಿಯಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈಗ ಹೆಚ್ಚುವರಿ ಪರಿಹಾರ ನೀಡುವಂತೆ ಒತ್ತಾಯಿಸಿ ಬೀದರ್‌ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತಿರುವ ರೈತರು ಅರ್ಜಿ ಹಾಕಿಲ್ಲ. ಅಷ್ಟೇ ಅಲ್ಲ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ)ಪ್ರಕಾರ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ವಿವರಿಸಿದರು.

Follow Us:
Download App:
  • android
  • ios