ಜಲಮಂಡಳಿ ಟೆಂಡರ್ ರದ್ದು ಅಧಿಕಾರ ಸಿಎಂಗೂ ಇಲ್ಲ: ಸಚಿವ ಬೈರತಿ ಸುರೇಶ್
ಒಂದು ವೇಳೆ ಟೆಂಡರ್‌ಗಳಲ್ಲಿ ತಪ್ಪುಗಳಾಗಿದ್ದರೆ ಸಚಿವನಾಗಿ ಪರಿಶೀಲಿಸುತ್ತೇನೆ. ಗುತ್ತಿಗೆದಾರರು ಬೈರತಿ ಸುರೇಶ್ ಆಪ್ತರಾಗಲಿ, ವಿನಯ್ ಕುಲಕರ್ಣಿ ಆಪ್ತರಾಗಲಿ, ಯಾವುದೇ ನಾಯಕರ ಬೆಂಬಲಿಗರಾಗಲಿ ಕಪ್ಪು ಪಟ್ಟಿಗೆ ಸೇರಿಸುತ್ತೇವೆ. ಜತೆಗೆ ಜೈಲಿಗೂ ಹಾಕಿಸುತ್ತೇವೆ' ಎಂದು ಎಚ್ಚರಿಕೆ ನೀಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್
ಬೆಂಗಳೂರು(ಜೂ.29): 'ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿಗಳ ಟೆಂಡರ್ ವಿಚಾರವಾಗಿ ಕ್ರಮ ಕೈಗೊಳ್ಳಲು ಮಂಡಳಿ ಅಧ್ಯಕ್ಷರಿಗೆ ಮಾತ್ರವಲ್ಲ ಸಚಿವರು, ಮುಖ್ಯಮಂತ್ರಿಗಳಿಗೇ ಅಧಿಕಾರ ಇಲ್ಲ. ಇಲಾಖೆ ಹೆಚ್ಚುವರಿ ಮುಖ್ಯಕಾರ್ಯ ದರ್ಶಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿ ತಿಯು ಟೆಂಡರ್ ಬಗೆಗಿನ ನಿರ್ಧಾರಗಳನ್ನು ಮಾಡುತ್ತದೆ' ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ.
'ಒಂದು ವೇಳೆ ಟೆಂಡರ್‌ಗಳಲ್ಲಿ ತಪ್ಪುಗಳಾಗಿದ್ದರೆ ಸಚಿವನಾಗಿ ಪರಿಶೀಲಿಸುತ್ತೇನೆ. ಗುತ್ತಿಗೆದಾರರು ಬೈರತಿ ಸುರೇಶ್ ಆಪ್ತರಾಗಲಿ, ವಿನಯ್ ಕುಲಕರ್ಣಿ ಆಪ್ತರಾಗಲಿ, ಯಾವುದೇ ನಾಯಕರ ಬೆಂಬಲಿಗರಾಗಲಿ ಕಪ್ಪು ಪಟ್ಟಿಗೆ ಸೇರಿಸುತ್ತೇವೆ. ಜತೆಗೆ ಜೈಲಿಗೂ ಹಾಕಿಸುತ್ತೇವೆ' ಎಂದು ಎಚ್ಚರಿಕೆ ನೀಡಿದರು.
ಕರಾರಿನಂತೆ ಸಂಸ್ಕರಿಸಿದ ನೀರನ್ನು ಕೋಲಾರಕ್ಕೆ ಹರಿಸಿ: ಸಚಿವ ಬೈರತಿ ಸುರೇಶ್
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚ ರಂಡಿ ಮಂಡಳಿ ಅಧ್ಯಕ್ಷ ವಿನಯ್ ಕುಲಕರ್ಣಿ ಅವರು ಮಂಡಳಿ ವತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ತಡೆ ಹಿಡಿಯುವ ಕುರಿತು ಬರೆದಿರುವ ಪತ್ರದ ಬಗೆಗಿನ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಟೆಂಡರ್‌ವಿಚಾರ ದಲ್ಲಿ ಮುಖ್ಯಮಂತ್ರಿ, ಮಂತ್ರಿಗಳಿಗೆ ಕೂಡ ಅಧಿಕಾರ ಇರುವುದಿಲ್ಲ. ಟೆಂಡರ್ ಪ್ರಸ್ತಾವನೆ, ಅಂತಿಮಗೊಳಿಸುವುದು, ಎಲ್‌ಸಿ ನೀಡು ವುದು ಎಲ್ಲವನ್ನೂ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಮಾಡುತ್ತದೆ. ಈ ವಿಚಾರದಲ್ಲಿ ರಾಜಕಾ ರಣಿಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಇದರಲ್ಲಿ ತಪ್ಪುಗಳಾಗುತ್ತಿದ್ದರೆ ಸರಿಪಡಿಸುವ ಕೆಲಸವನ್ನು ಸಚಿವನಾಗಿ ಮಾಡುತ್ತೇನೆ ಎಂದು ಹೇಳಿದರು.
ಮಂಡಳಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದೀರಿ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಮಂಡಳಿ ಕುರಿತು ಯಾವುದೇ ಸೂಚನೆ ನೀಡಿಲ್ಲ. ಮಂಡಳಿಗೆ ಸೂಚಿಸುವ ಅಧಿಕಾರವೂ ನನಗೆ ಅಥವಾ ಅಧ್ಯಕ್ಷರಿಗೆ ಇಲ್ಲ. ಏನೇ ಇದ್ದರೂ ಎಲ್ಲವನ್ನೂ ಉನ್ನತ ಮಟ್ಟದ ಸಮಿತಿಯಲ್ಲಿರುವ ಐಎಎಸ್ ಅಧಿಕಾರಿಗಳೇ ಮಾಡುತ್ತಾರೆ ಎಂದರು.