Asianet Suvarna News Asianet Suvarna News

ಕರಾರಿನಂತೆ ಸಂಸ್ಕರಿಸಿದ ನೀರನ್ನು ಕೋಲಾರಕ್ಕೆ ಹರಿಸಿ: ಸಚಿವ ಬೈರತಿ ಸುರೇಶ್‌

ನಗರದ ಕೋರಮಂಗಲ ಮತ್ತು ಚಲ್ಲಘಟ್ಟ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ತಾಲೂಕಿನ 126 ಕೆರೆಗಳಿಗೆ ಈ ಹಿಂದೆ ಆಗಿರುವ ಕರಾರಿನಂತೆ ನೀರು ಹರಿಸಬೇಕೆಂದು ಕೋಲಾರ ಉಸ್ತುವಾರಿ ಸಚಿವ ಬಿ.ಎಸ್‌.ಸುರೇಶ್‌ (ಬೈರತಿ) ಸೂಚಿಸಿದರು. 

Pour the treated water into the kolar as per contract Says Byrathi Suresh gvd
Author
First Published Jun 20, 2024, 7:19 PM IST

ಬೆಂಗಳೂರು (ಜೂ.20): ನಗರದ ಕೋರಮಂಗಲ ಮತ್ತು ಚಲ್ಲಘಟ್ಟ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ತಾಲೂಕಿನ 126 ಕೆರೆಗಳಿಗೆ ಈ ಹಿಂದೆ ಆಗಿರುವ ಕರಾರಿನಂತೆ ನೀರು ಹರಿಸಬೇಕೆಂದು ಕೋಲಾರ ಉಸ್ತುವಾರಿ ಸಚಿವ ಬಿ.ಎಸ್‌.ಸುರೇಶ್‌ (ಬೈರತಿ) ಸೂಚಿಸಿದರು. ವಿಧಾನಸೌಧದ ಕಚೇರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ। ಎಂ.ಸಿ.ಸುಧಾಕರ್‌ ಸೇರಿದಂತೆ ಕೋಲಾರ ಜಿಲ್ಲೆಯ ಶಾಸಕರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕೆ.ಸಿ.ವ್ಯಾಲಿ ಸಂಸ್ಕರಣ ಘಟಕದಿಂದ ಕರಾರಿನಂತೆ 126 ಕೆರೆಗಳಿಗೆ 310 ದಶಲಕ್ಷ ಲೀಟರ್‌ ನೀರು ಹರಿಸಬೇಕಿತ್ತು. ಆದರೆ ಕಳೆದ ಕೆಲ ತಿಂಗಳಿನಿಂದ ಕೇವಲ 140 ದಶಲಕ್ಷ ಲಿಟರ್‌ ನೀರನ್ನು ಮಾತ್ರ ನೀಡಲಾಗುತ್ತಿದೆ ಎಂದರು.

ಕೆ.ಸಿ ವ್ಯಾಲಿ ತ್ಯಾಜ್ಯ ನೀರನ್ನು ಸಂಸ್ಕರಿಸುವ ಎರಡು ಘಟಕಗಳ ಯಂತ್ರೋಪಕರಣಗಳಲ್ಲಿ ಒಂದು ದುರಸ್ತಿಯಲ್ಲಿದೆ ಎಂದು ಹೇಳುತ್ತೀರಿ. ಇನ್ನೊಂದು ಯಂತ್ರದ ಮೂಲಕ ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿಗೆ ಹರಿಸುವುದನ್ನು ಬಿಟ್ಟು ಆನೇಕಲ್ ತಾಲೂಕಿಗೆ ಏಕೆ ನೀರು ಹರಿಸುತ್ತಿದ್ದಿರೀ, ಕೋಲಾರ ಜಿಲ್ಲೆಗೆ ಮೊದಲು ನೀರನ್ನು ಹರಿಸಿ ನಂತರ ಬೇಕಿದ್ದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮತ್ತು ಆನೇಕಲ್‌ಗೆ ನೀರು ಹರಿಸಿ ಎಂದು ಸಚಿವರು ಹೇಳಿದರು.

108 ದಶಲಕ್ಷ ತ್ಯಾಜ್ಯ ನೀರು ಸಂಸ್ಕರಣ ಘಟಕ ದುರಸ್ತಿಯಲ್ಲಿದೆ ಎಂಬ ಕಾರಣ ನೀಡಿ ಅದೇ ನೀರನ್ನು ಆನೇಕಲ್‌ ಪೂರೈಸುತ್ತಿರುವ ಬಗ್ಗೆ ಸಚಿವರು, ಶಾಸಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್‌ ಮನೋಹರ್‌ ಪ್ರಸಾದ್‌ ಅವರು, ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆ.ಸಿ ವ್ಯಾಲಿ ಘಟಕಕ್ಕೆ ಹರಿಸುವುದಷ್ಟೆ ನಮ್ಮ ಕೆಲಸ. ಯಾವ ಜಿಲ್ಲೆಗೆ ಯಾವ ತಾಲೂಕಿಗೆ ಎಷ್ಟು ನೀರು ಬೀಡಬೇಕು ಅಥವಾ ಹರಿಸುವ ಕೆಲಸ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.

ಗ್ಯಾರಂಟಿಗಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ತೈಲ ಬೆಲೆ ಏರಿಕೆ: ಸಿಎಂ ‌ಸಿದ್ದರಾಮಯ್ಯ

218 ದಶಲಕ್ಷ ಲೀಟರ್ ಸಂಸ್ಕರಣ ಘಟಕದ ಉನ್ನತಿಕರಣ ಕಾಮಗಾರಿಯನ್ನು ಬೆಂಗಳೂರು ಜಲಮಂಡಳಿ ಕೈಗೆತ್ತಿಕೊಂಡಿದ್ದು, ಅದನ್ನು ಅದಷ್ಟು ಬೇಗ ಪೂರ್ಣಗೊಳಿಸಬೇಕು. ಕೆ.ಸಿ.ವ್ಯಾಲಿ ಘಟಕದಿಂದ ಸಂಸ್ಕರಿಸಿದ ತ್ಯಾಜ್ಯ ನೀರು ಕೋಲಾರ ತಾಲೂಕಿನ ನರಸಾಪುರ ಕೆರೆ ನಂತರ ಮಾಲೂರು ಕೆರೆಗಳು ತದನಂತರ ಬಂಗಾರಪೇಟೆ, ಕೆ.ಜಿ.ಎಫ್, ಮುಳಬಾಗಿಲು ಮತ್ತು ಶ್ರೀನಿವಾಸಪುರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕೆರೆಗಳಿಗೆ ಹರಿಸಬೇಕು ಎಂದು ಸಚಿವರು ಸಣ್ಣ ನೀರಾವರಿ ಅಧಿಕಾರಿಗಳಿಗೆ ಸೂಚಿಸಿದರು.

Latest Videos
Follow Us:
Download App:
  • android
  • ios