Amarnath Yatra: ಕರ್ನಾಟಕದ 100ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸುರಕ್ಷಿತ: ಸಿಎಂ ಬೊಮ್ಮಾಯಿ!

ಪವಿತ್ರ ಹಿಮಲಿಂಗ ಇರುವ ಅಮರನಾಥ ಗುಹೆ ಪ್ರವೇಶದಲ್ಲಿ ಮೇಘಸ್ಪೋಟ ಸಂಭವಿಸಿ 1 ಕ್ಕೂ ಹೆಚ್ಚು ಮಂದಿ ಸಾವನ್ನಪಿದ್ದಾರೆ. ಇದರಿಂದ ಸಹಜವಾಗಿ ಅಮರನಾಥ ಯಾತ್ರೆಗೆ ತೆರಳಿದ ಯಾತ್ರಾರ್ಥಿಗಳ ಬಗ್ಗೆ ಅವರ ಕುಟುಂಬಸ್ಥರು ಆತಂಕಕ್ಕಿಡಾಗಿದ್ದಾರೆ ಅಮರನಾಥ ಯಾತ್ರೆಗೆ ರಾಜ್ಯದಿಂದಲ್ಲೂ ಹಲವಾರು ಜನ ತೆರಳಿದ್ದಾರೆ. 

cloudburst near amarnath cave in jammu kashmir cm basavaraja bommai response gvd

ಬೆಂಗಳೂರು (ಜು.09): ಪವಿತ್ರ ಹಿಮಲಿಂಗ ಇರುವ ಅಮರನಾಥ ಗುಹೆ ಪ್ರವೇಶದಲ್ಲಿ ಮೇಘಸ್ಪೋಟ ಸಂಭವಿಸಿ 1 ಕ್ಕೂ ಹೆಚ್ಚು ಮಂದಿ ಸಾವನ್ನಪಿದ್ದಾರೆ. ಇದರಿಂದ ಸಹಜವಾಗಿ ಅಮರನಾಥ ಯಾತ್ರೆಗೆ ತೆರಳಿದ ಯಾತ್ರಾರ್ಥಿಗಳ ಬಗ್ಗೆ ಅವರ ಕುಟುಂಬಸ್ಥರು ಆತಂಕಕ್ಕಿಡಾಗಿದ್ದಾರೆ ಅಮರನಾಥ ಯಾತ್ರೆಗೆ ರಾಜ್ಯದಿಂದಲ್ಲೂ ಹಲವಾರು ಜನ ತೆರಳಿದ್ದಾರೆ. 

ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪ್ರತಿಕ್ರಿಯಿಸಿದ್ದು, ಅಮರನಾಥ ಯಾತ್ರೆಗೆ ಪ್ರಾಥಮಿಕ ಮಾಹಿತಿ ಪ್ರಕಾರ ನಮ್ಮ ರಾಜ್ಯದ 100 ಕ್ಕೂ ಹೆಚ್ಚು ಯಾತ್ರಾರ್ಥಿಗಳು ತೆರಳಿದ್ದಾರೆ. ಆ ಯಾತ್ರಾರ್ಥಿಗಳೆಲ್ಲರೂ ಸೇಫ್ ಆಗಿದ್ದಾರೆ. ಯಾವುದೇ ತೊಂದರೆಯಲ್ಲಿ ಆ ಯಾತ್ರಾರ್ಥಿಗಳು ಎಲ್ಲಿಯೂ ಸಿಲುಕಿಕೊಂಡಿರುವ ಸುದ್ದಿ ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲಿನ ಸ್ಥಳೀಯ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಹಾಗೂ ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. 

ಅಮರನಾಥ ಗುಹೆ ಬಳಿ ಮೇಘ ಸ್ಪೋಟ: ಬಂಟ್ವಾಳದ 30 ಯಾತ್ರಿಕರು ಸುರಕ್ಷಿತ

ನಮ್ಮ ರಾಜ್ಯದಲ್ಲೂ ನಾವು ಯಾತ್ರಾರ್ಥಿಗಳಿಗಾಗಿ ಹೆಲ್ಪ್‌ ಲೈನ್ ತೆರೆಯಲಾಗಿದೆ. ಈಗಾಗಲೇ ಈ ಹೆಲ್ಪ್ ಲೈನ್‌ನಿಂದ 15 ರಿಂದ 20 ಜನ ಮಾಹಿತಿ ಪಡೆದುಕೊಂಡಿದ್ದಾರೆ. ಯಾತ್ರಾರ್ಥಿಗಳ ಬಗ್ಗೆ ಏನಾದರೂ ಸಮಸ್ಯೆ ಇದ್ದಲ್ಲಿ ಹೆಲ್ಪ್ ಲೈನ್ ಬಳಕೆ ಮಾಡಿಕೊಳ್ಳಬಹುದು. ಕೂಡಲೇ ರಕ್ಷೆಣೆ‌ ಮಾಡುವ ಕೆಲಸವನ್ನ ರಾಜ್ಯ ಸರ್ಕಾರ ಮಾಡಲಿದೆ. ಶ್ರೀನಗರದ ಅಮರನಾಥ ಮೇಘಸ್ಪೋಟವಾದ ಸ್ಥಳದಲ್ಲಿ ಕೇಂದ್ರ ರಕ್ಷಣಾ ಪಡೆ ಮತ್ತು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಸ್ಥಳದಲ್ಲೇ ಮೊಕ್ಕಾಂ ಹೊಡಿದ್ದಾರೆ. 

ಅಗತ್ಯ ರಕ್ಷಣಾ ಕಾರ್ಯವನ್ನ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಹೆಲ್ಪ್ ಲೈನ್ ಮೂಲಕ ಸಮಸ್ಯೆ ಇದ್ದವರು ಕರೆ ಮಾಡಬಹುದಾಗಿದೆ. ಅಲ್ಲದೇ ಕೇಂದ್ರ ಸರ್ಕಾರದ ಜೊತೆ ನಮ್ಮ ಮುಖ್ಯ ಕಾರ್ಯದರ್ಶಿಗಳು ನಿರಂತರ ಸಂಪರ್ಕದಲ್ಲಿದ್ದಾರೆ..ಏನೇ ಸಮಸ್ಯೆ ಎದುರಾದ್ರೂ ಕೂಡಲೇ ಕಾರ್ಯಪ್ರವೃತ್ತರಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ರಾಜ್ಯದ ಹಲವೆಡೆ ಮಳೆ ಅನಾಹುತ: ರಾಜ್ಯದ ಮಳೆ ಹಾನಿ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಶುಕ್ರವಾರ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಎಲ್ಲಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದೇನೆ.. ಕೆಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಇನ್ನೂ ಕೆಲವೆಡೆ ಇನ್ನೂ ಎರಡ್ಮೂರು ದಿನ ಮಳೆ ಆಗುವ ಸಾಧ್ಯತೆ ಇದೆ. ಇದರ ಅನುಗುಣವಾಗಿ ಕಾರ್ಯಾಚರಣೆ ಮಾಡ್ತೇವೆ ಎಂದು ಬಸವರಾಜ್ ಬೊಮ್ಮಾಯಿ‌ ತಿಳಿಸಿದ್ದಾರೆ.

Amarnath : ಮೇಘಸ್ಫೋಟಕ್ಕೆ ಈವರೆಗೂ 16 ಭಕ್ತರ ಸಾವು, ಸೇನಾ ಹೆಲಿಕಾಪ್ಟರ್‌ ಬಳಸಿ ರಕ್ಷಣಾ ಕಾರ್ಯ

ಸಹಾಯವಾಣಿಯ ವಿವರ:
ಎನ್.ಡಿ.ಆರ್.ಎಫ್: 011-23438252, 011-23438253
ಕಾಶ್ಮೀರ್ ಡಿವಿಷನಲ್ ಹೆಲ್ಪ್ ಲೈನ್: 0914- 2496240
ದೇವಸ್ಥಾನ ಮಂಡಳಿಯ ಸಹಯಾವಾಣಿ: 0194-2313149
ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ : 080-1070, 22340676

Latest Videos
Follow Us:
Download App:
  • android
  • ios