ಆರೋಗ್ಯದಲ್ಲಿ ಏರುಪೇರು: ಮತ್ತೆ ಮರುಘಾ ಶ್ರೀಗಳು ಆಸ್ಪತ್ರೆಗೆ ಶಿಫ್ಟ್!
ಚಿತ್ರದುರ್ಗದ ಮುರುಘಾ ಮಠದ ಶ್ರೀಗಳಿಗೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿತ್ರದುರ್ಗ, (ಸೆಪ್ಟೆಂಬರ್.03): ಪೋಕ್ಸೋ ಕೇಸ್‌ನಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠಧ ಶರಣರಿಗೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಪೊಲೀಸರು ಇಂದು(ಶನಿವಾರ) ಮುರುಘಾ ಶ್ರೀಗಳನ್ನು ತೀವ್ರ ವಿಚಾರಣೆ ಮಾಡುತ್ತಿರುವಾಗ ಸುಸ್ತಾಗಿದ್ದಾರೆ. ಇದರಿಂದ ಕೂಡಲೇ ಶ್ರೀಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನಿರಂತರ ವಿಚಾರಣೆಯಿಂದ ಸುಸ್ತಾಗಿರುವ ಮುರುಘಾ ಶ್ರೀಗಳನ್ನು ಜಿಲ್ಲಾ ಆಸ್ಪತ್ರೆಯ ತಾಯಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಶ್ರೀಗಳು ಇರುವ ರೂಮ್‌ಗೆ ಆಸ್ಪತ್ರೆ ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಹೋಗಿದ್ದು, ಮುರುಘಾ ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸ ಆಗಿರುವ ಸಾಧ್ಯತೆಗಳಿವೆ.
Murugha Sri case: ಮುರುಘಾ ಶರಣರಿಗೆ ಪುರುಷತ್ವ ಪರೀಕ್ಷೆ, ವರದಿಯಲ್ಲಿ ಗಂಡಸ್ತನ ಸಾಬೀತು
ಮುರುಘಾಶ್ರೀ ವಿಚಾರಣೆ
ನ್ಯಾಯಾಂಗ ಬಂಧನದಲ್ಲಿದ್ದ ಶರಣರನ್ನು ಶುಕ್ರವಾರ ಸಂಜೆ ಪೊಲೀಸ್ ವಶಕ್ಕೆ ಪಡೆದ ತನಿಖಾಧಿಕಾರಿಗಳು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿ DYSP ಕಚೇರಿಗೆ ಕರೆತಂದು ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ.
ರಾತ್ರಿ ತನಿಖಾಧಿಕಾರಿಗಳ ಕಚೇರಿಯಲ್ಲಿ ವಾಸವಿದ್ದ ಶರಣರನ್ನು ಶನಿವಾರ ಬೆಳಗ್ಗೆ ಪುನಃ ವಿಚಾರಣೆಗೊಪಡಿಸಲಾಗಿದೆ. ತನಿಖಾಧಿಕಾರಿ ಅನಿಲ್ ನೇತೃತ್ವದಲ್ಲಿ ವಿಚಾರಣೆ ನಡೆದಿದೆ. ಆದ್ರೆ, ವಿಚಾರಣೆ ಆರಂಭದಲ್ಲೇ ಶರಣರು ಮೌನಕ್ಕೆ ಶರಣಾಗಿದ್ದಾರೆ. ಪ್ರಶ್ನೆಗಳಿಗೆ ಉತ್ತರ ನೀಡದೇ ಮೌನವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಮುರುಘಾ ಶ್ರೀಗಳ ವಿಚಾರಣೆ ಮುಕ್ತಾಯ.?
ಸಿದ್ದಪಡಿಸಿಕೊಂಡಿದ್ದ ಎಲ್ಲಾ ಪ್ರಶ್ನೆಗಳನ್ನ ಪೊಲೀಸರು ಕೇಳಿದ್ದಾರೆ. ಆದ್ರೆ, ಶ್ರೀಗಳು ಬಹುತೇಕ ಪ್ರಶ್ನೆಗಳಿಗೆ ಮೌನ, ಕೆಲವು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ್ದಾರೆ ಎನ್ನಲಾಗಿದೆ.
ವಿಚಾರಣೆ ಮುಗಿಸಿಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವ ಪೊಲೀಸರು, ಆರೋಗ್ಯದಲ್ಲಿ ಏರುಪೇರು ಹಿನ್ನಲೆ ವಿಚಾರಣೆ ಸಾಕು ಎಂಬ ನಿರ್ಧಾರಕ್ಕೆ ಪೊಲೀಸರು ಬಂದಂತಿದೆ. ಇದರಿಂದ ವೈದ್ಯಕೀಯ ಪರೀಕ್ಷೆ ನಡೆಸಿ ಕೋರ್ಟ್ ಗೆ ಹಾಜರು ಪಡಿಸುವ ಸಾಧ್ಯತೆಗಳಿವೆ.
ಇಂದು(ಶನಿವಾರ) ಸಂಜೆ ಒಳಗೆ ಶ್ರೀಗಳನ್ನ ಕೋರ್ಟ್ ಗೆ ಹಾಜರುಪಡಿಸುವ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದ್ದು, ವಿಚಾರಣೆ ಮುಕ್ತಾಯ ಆಗಿರೋದ್ರಿಂದ ನ್ಯಾಯಾ ಬಂಧನಕ್ಕೆ ನೀಡಿ ಎಂದು ಪೊಲೀಸರು ಕೋರ್ಟ್‌ಗೆ ಮನವಿ ಮಾಡುವ ಸಾಧ್ಯತೆಗಳಿವೆ.
ಮುರುಘಾ ವನ ಮೌನ
ಹೌದು..ಮಠದ ಅನುಯಾಯಿಗಳ ನಡುವೆ ಮಠದಲ್ಲಿ ನಿರಾತಂಕದಿಂದ ಇರುತ್ತಿದ್ದ ಶಿವಮೂರ್ತಿ ಸ್ವಾಮೀಜಿಗಳ ಬಂಧನವಾಗಿದ್ದಾರೆ. ಇದರಿಂದ ಮಠದಲ್ಲಿನ ಮುರುಘಾ ವನ ಜನರಿಲ್ಲದೇ ನಿಶ್ಯಬ್ಧವಾಗಿದೆ.
ಮುರುಘಾ ವನಕ್ಕೆ ಪ್ರತಿದಿನ ಸಾವಿರಾರು ಜನ ಭೇಟಿ ನೀಡುತ್ತಿದ್ದರು. ಶನಿವಾರ ಭಾನುವಾರ 2 ಲಕ್ಷದವರೆಗೂ ಕಲೆಕ್ಷನ್ ಆಗುತಿತ್ತು. ಇಂದು ಭಕ್ತರು ಸಾರ್ವಜನಿಕರಿಲ್ಲದೇ ನೀರವ ಮೌನ ಆವರಿಸಿದೆ. ಭಾರತೀಯ ಕಲೆ ಪರಂಪರೆ ಕರ್ನಾಟಕ ಸಂಸ್ಕೃತಿ ಬಿಂಬಿಸುವ ಮುರುಘಾ ವನ. ಸಾರ್ವಜನಿಕರಿಲ್ಲದೆ ಸೊರಗಿದ ವನದಲ್ಲಿ ಬರೀ ಕಲಾಕೃತಿಗಳು ಮಾತ್ರ ಕಾಣಿಸುತ್ತಿವೆ.