ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ಸಾಧ್ಯತೆ, ಸುಳಿವು ಕೊಟ್ಟ ಚುನಾವಣಾ ಆಯೋಗ!

ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಶನಿವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಚುನಾವಣೆಗೆ ನಡೆದಿರುವ ಸಿದ್ಧತೆಯ ಬಗ್ಗೆ ಮಾಹಿತಿ ನೀಡಿದರು.
 

Chief Election Commissioner of India Rajiv Kumar Press Meet on Karnataka assembly Election 2023 san

ಬೆಂಗಳೂರು (ಮಾ.11): ಕರ್ನಾಟಕದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ನಡೆಸಿರುವ ಸಿದ್ಧತೆಯ ಕುರಿತು ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಹಲವಾರು ಮಾಹಿತಿ ಸಂಗ್ರಹ ಮಾಡಿದ್ದೇವೆ. ಮೇ. 24ರ ಒಳಗಾಗಿ ಹೊಸ ಸರ್ಕಾರ ರಚನೆಯಾಗಬೇಕಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 5.21 ಕೋಟಿ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಗ್ರಾಮಾಂತರದಲ್ಲಿ ಈ ಬಾರಿ ಶೇ. 80ರಷ್ಟು ಹೆಚ್ಚಿನ ಮತದಾನವಾಗುವ ನಿರೀಕ್ಷೆ ಇದೆ. ಇನ್ನು ಚುನಾವಣಾ ಸಮಾವೇಶಗಳಿಗೆ ಆನ್‌ಲೈನ್‌ನಲ್ಲೂ ಅನುಮತಿಗೆ ಅರ್ಜಿ ಸಲ್ಲಿಸಬಹುದು. ನಾಮಪತ್ರ ಆನ್‌ಲೈನ್‌ನಲ್ಲೂ ಸಲ್ಲಿಸುವ ಅವಕಾಶವಿದೆ ಎಂದು ಹೇಳಿದ್ದಾರೆ. 2.62 ಕೋಟಿ ಪುರುಷ ಮತದಾರರು ರಾಜ್ಯದಲ್ಲಿದ್ದರೆ, ಮಹಿಳಾ ಮತದಾರರು 2.59 ಕೋಟಿ ಇದ್ದಾರೆ. ಅದರೊಂದಿಗೆ ರಾಜ್ಯದಲ್ಲಿ 100 ವರ್ಷ ಮೇಲ್ಪಟ್ಟ 16, 796 ಮತದಾರರಿದ್ದಾರೆ. ಕಳೆದ ಬಾರಿ ನಗರ ಪ್ರದೇಶದಲ್ಲಿ ಕಡಿಮೆ ಮತದಾನವಾಗಿತ್ತು. ಈ ಬಾರಿ ಮತದಾನ ಪ್ರಮಾಣವನ್ನು ಏರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ. ಈ ನಡುವೆ ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸುವಂತೆ ಮನವಿ ಬಂದಿದ್ದು, ಈ ಕುರಿತಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 4699 ತೃತೀಯ ಲಿಂಗಿ ಮತದಾರರಿದ್ದಾರೆ. 9.17 ಲಕ್ಷ ಮಂದಿ ಇದೇ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಇನ್ನೂ 80 ವರ್ಷಕ್ಕಿಂತ ಹೆಚ್ಚಿನ 12.15 ಲಕ್ಷ ಮತದಾರರಿದ್ದರೆ. 5.55 ಲಕ್ಷ ವಿಕಲಚೇತನ ಮತದಾರರಿದ್ದಾರೆ. ಮೊದಲ ಬಾರಿಯ ಮನೆಯಲ್ಲೇ‌ ಮತದಾನ ಮಾಡುವ ಅವಕಾಶವನ್ನೂ ಈ ಬಾರಿ ನೀಡಲಾಗುತ್ತದೆ. 80 ವರ್ಷ ಮೇಲ್ಪಟ್ಟಿರುವ ಮತ್ತು ವಿಕಲಚೇತನರಿಗೆ ಮನೆಯಲ್ಲೇ ಮತದಾನದ ‌ಮಾಡುವ ಅವಕಾಶ ಇರಲಿದೆ. ಮತಗಟ್ಟೆಗೆ ಬರಲು ಸಾದ್ಯವಾಗದವರಿಗೆ ವಯೋವೃದ್ದರು, ಅಂಗವಿಕಲರಿಗೆ ಮನೆಯಲ್ಲೇ ವೋಟಿಂಗ್ ಸೌಲಭ್ಯ ಇರಲಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಸೇರಿಲ್ಲ.. ಬಿಜೆಪಿಗೆ ಬೆಂಬಲ.. ಏನಿದರ ಗುಟ್ಟು..? ಪಗಡೆಯಾಟಕ್ಕೆ ಲೇಡಿ ರೆಬೆಲ್ ಸ್ಟಾರ್ ರೆಡಿ.. ಆಟ ಶುರು..

ರಾಜ್ಯದಲ್ಲಿ ಒಟ್ಟು 58, 282 ಮತಗಟ್ಟೆಗಳು ಇರಲಿದ್ದು, 24,063 ನಗರ ಮತಗಟ್ಟೆಗಳು ಇರಲಿದ್ದರೆ, 34,219 ಗ್ರಾಮೀಣ ಮತಗಟ್ಟೆ ಇರಲಿದೆ. 1320 ಮತಗಟ್ಟೆಯಗಳನ್ನು ಮಹಿಳೆಯರು ನಿರ್ವಹಿಸಲಿದ್ದರೆ, 224 ಮತಗಟ್ಟೆಗಳನ್ನು ಯುವಕರು, 224 ಮತಗಟ್ಟೆಗಳನ್ನು ವಿಕಲಚೇತನರು ನಿರ್ವಹಿಸಲಿದ್ದಾರೆ. 240 ಮಾದರಿ ಮತಗಟ್ಟೆಗಳು ಕೂಡ ಇರಲಿದೆ ಎಂದು ಮಾಹಿತಿ ನೀಡಿದರು.

 

ಸುಮಲತಾ ಬೆಂಬಲದಿಂದ ಮಂಡ್ಯದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ: ಸಿಎಂ ಬೊಮ್ಮಾಯಿ

ಮತ ಕೇಂದ್ರಗಳ ಮಾಹಿತಿಗೆ ಆಪ್ ವ್ಯವಸ್ಥೆ ಮಾಡಲಾಗುತ್ತದೆ. ಸಂಪೂರ್ಣ ಮಾಹಿತಿ ಆಪ್ ನಲ್ಲಿ ಇರಲಿದೆ ವಿಕಲಚೇತನರಿಗೆ ವಿಶೇಷ ವ್ಯವಸ್ಥೆ ಬೂತ್ ನಲ್ಲಿ ಆಗಲಿದೆ. ಯಾವುದೇ ತೊಂದರೆ ಆಗದಂತೆ ಕ್ರಮ ಆಗಲಿದೆ 2013 ಮತ್ತು 2018 ರಲ್ಲಿ ಬೆಂಗಳೂರು ನಗರ/ಬಿಬಿಎಂಪಿ ಭಾಗದಲ್ಲಿ ಕಡಿಮೆ ಮತದಾನ ಆಗಿದೆ. ಇದು ಉತ್ತಮ ಬೆಳವಣಿಗೆ ಅಲ್ಲ. ಈ ಬಾರಿ ಇದನ್ನ ಹೆಚ್ಚಳ ಮಾಡಲು ಜಾಗೃತಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಈ ಬಾರಿ ಹೆಚ್ಚು ಬೆಂಗಳೂರು ನಗರ ಭಾಗದಲ್ಲಿ ಮತದಾನ ಆಗುವ ವಿಶ್ವಾಸ ಇದೆ. 2013ರಲ್ಲಿ ಶೇ.71.83ರಷ್ಟು ಮತದಾನವಾಗಿದ್ದರೆ, 2018ರಲ್ಲಿ 72.4%ರಷ್ಟು ಮತದಾನವಾಗಿತ್ತು.

ಅಭ್ಯರ್ಥಿಗಳ ಸಂಪೂರ್ಣ ಮಾಹಿತಿ ಈ ವೆಟ್ ಸೈಟ್ ನಲ್ಲಿ ಸಿಗಲಿದೆ. ಸುವಿಧಾ ಮತ್ತು ಸಕ್ಷಮ್ ಆಪ್ ಮೂಲಕ ಮಾಹಿತಿ ಪಡೆಯಬಹುದು. ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನಲೆ ಬಗ್ಗೆಯೂ ಮಾಹಿತಿ ಇರಲಿದೆ. ರಾಜಕೀಯ ‌ಪಕ್ಷಗಳು, ಕ್ರಿಮಿನಲ್ ಹಿನ್ನಲೆ ಇರುವವರ  ಬಗ್ಗೆ  ರಾಜ್ಯ ಮತ್ತು ಸ್ಥಳೀಯ ಪತ್ರಿಕೆಯಲ್ಲಿ ಯಾಕೆ ಆಯ್ಕೆ ಮಾಡಿದ್ದೇವೆ ಅಂತ ಮಾಹಿತಿ ಕೊಡಬೇಕು ಎಂದು ಹೇಳಿದ್ದಾರೆ. 2022-23 ಚುನಾವಣೆಯಲ್ಲಿ ಗುಜರಾತ್, ಹಿಮಾಚಲ ಪ್ರದೇಶ, ಮೇಘಾಲಯ, ನಾಗಾಲಾಂಡ್, ತ್ರಿಪುರದಲ್ಲಿ 1028 ಕೋಟಿ ಹಣ ವಶಪಡಿಕೊಳ್ಳಲಾಗಿತ್ತು‌. 2018-19 ರಲ್ಲಿ ರಾಜ್ಯದಲ್ಲಿ 43 ಕೋಟಿ ವಶಪಡಿಸಿಕೊಳ್ಳಲಾಗಿತ್ತು. ಹೀಗಾಗಿ ಚುನಾವಣೆ ‌ಸಮಯದಲ್ಲಿ ಸಂಪೂರ್ಣ ಬಿಗಿಭದ್ರತೆ ಮಾಡಲಾಗುತ್ತದೆ. ಏರ್ಪೋರ್ಟ್, ಗಡಿ ಭಾಗ ಎಲ್ಲದ್ರ ಮೇಲೆ ನಿಗಾ ಇಡಲಾಗುತ್ತದೆ ಎಂದರು.

Latest Videos
Follow Us:
Download App:
  • android
  • ios