ಬೇಲೂರು: ಪುರಸಭೆ ಸಾಮಾನ್ಯ ಸಭೆಯಲ್ಲಿ ಕೋಳಿ ಜಗಳ !

ಪಟ್ಟಣದ ಅಂಬೇಡ್ಕರ್‌ ಭವನದ ಸಮೀಪ ಪ್ರಭಾವಿಯೊಬ್ಬರು ತರಕಾರಿ ಅಂಗಡಿಗೆಂದು ಪುರಸಭೆಯಿಂದ ವಾಣಿಜ್ಯ ಮಳಿಗೆ ಪಡೆದು ಅನಧಿ​ಕೃತವಾಗಿ ಕೋಳಿ ಅಂಗಡಿ ನಡೆಸುತ್ತಿರುವ ಬಗ್ಗೆ ಕಳೆದ ಎರಡು ವರ್ಷದಿಂದ ಸಾಮಾನ್ಯ ಸಭೆ ಮತ್ತು ಅಧ್ಯಕ್ಷರ ಗಮನಕ್ಕೆ ತಂದರೂ ಯಾವ ಪ್ರಯೋಜವಾಗಿಲ್ಲ. ಅಕ್ರಮ ಕೋಳಿ ಅಂಗಡಿಯನ್ನು ತೆರವುಗೊಳಿಸುವಂತೆ ಜೆಡಿಎಸ್‌ ಸದಸ್ಯ ಜಗದೀಶ್‌ ಏಕಾಂಗಿಯಾಗಿ ಧರಣಿ ನಡೆಸಿದರು.

Chicken fight in municipal general meeting in beluru at hassan rav

ಬೇಲೂರು (ಜು.25) :  ಪಟ್ಟಣದ ಅಂಬೇಡ್ಕರ್‌ ಭವನದ ಸಮೀಪ ಪ್ರಭಾವಿಯೊಬ್ಬರು ತರಕಾರಿ ಅಂಗಡಿಗೆಂದು ಪುರಸಭೆಯಿಂದ ವಾಣಿಜ್ಯ ಮಳಿಗೆ ಪಡೆದು ಅನಧಿ​ಕೃತವಾಗಿ ಕೋಳಿ ಅಂಗಡಿ ನಡೆಸುತ್ತಿರುವ ಬಗ್ಗೆ ಕಳೆದ ಎರಡು ವರ್ಷದಿಂದ ಸಾಮಾನ್ಯ ಸಭೆ ಮತ್ತು ಅಧ್ಯಕ್ಷರ ಗಮನಕ್ಕೆ ತಂದರೂ ಯಾವ ಪ್ರಯೋಜವಾಗಿಲ್ಲ. ಶಾಸಕರು ತಕ್ಷಣವೇ ಅಕ್ರಮ ಕೋಳಿ ಅಂಗಡಿಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ ಜೆಡಿಎಸ್‌ ಸದಸ್ಯ ಜಗದೀಶ್‌ ಸದನದ ಬಾವಿಗಿಳಿದು ಏಕಾಂಗಿಯಾಗಿ ಧರಣಿ ನಡೆಸಿದರು.

ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಅಧ್ಯಕ್ಷೆ ತೀರ್ಥಕುಮಾರಿವೆಂಕಟೇಶ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಮಾತಿಗಿಳಿದ ಸದಸ್ಯ ಜಗದೀಶ್‌, ಶಿವು ಎಂಬ ವ್ಯಕ್ತಿ ಕೋಳಿ ಅಂಗಡಿ ನಿರ್ಮಿಸಿದ್ದು, ಆತನಿಗೆ ಪುರಸಭೆಯವರು ಬೆಂಬಲ ನೀಡುತ್ತಿದ್ದಾರೆ ನಮಗೆ ನ್ಯಾಯಬೇಕು. ಇಲ್ಲವಾದರೆ ಪುರಸಭೆ ಮುಂದೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

 

ಹಾಸನ: ಬದುಕಿರುವಾಗಲೇ ವೃದ್ಧೆಯ ಮರಣ ಪತ್ರ ಪಡೆದು ಆಸ್ತಿ ಕಬಳಿಕೆ ಯತ್ನ..!

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಸದಸ್ಯರಾದ ಜಿ.ಶಾಂತಕುಮಾರ್‌, ಸಿ.ಎನ್‌.ದಾನಿ, ಜಮಾಲ್‌, ಆಶೋಕ್‌ ಸೇರಿದಂತೆ ಇನ್ನಿತರರು ಸದಸ್ಯ ಜಗದೀಶ್‌ ಅವರು ತಮ್ಮ ವೈಯಕ್ತಿಕ ಸಮಸ್ಯೆಯನ್ನು ಪುರಸಭೆಗೆ ತಂದು ಅಮೂಲ್ಯ ಕಾಲವನ್ನು ಹರಣ ಮಾಡುತ್ತಿದ್ದಾರೆ ಎಂದ ವೇಳೆ ಉಭಯ ಸದಸ್ಯೆ ಮಾತಿನ ಸಮರಕ್ಕೆ ಕಾರಣವಾಯಿತು. ಮದ್ಯೆ ಪ್ರವೇಶಿಸಿದ ಶಾಸಕರು ಖುದ್ದು ಸಮಸ್ಯೆ ಬಗೆಹರಿಸುವ ಇಂಗಿತ ವ್ಯಕ್ತ ಪಡಿಸಿದ ಬಳಿಕ ಧರಣಿಯನ್ನು ಹಿಂಪಡೆಯಲಾಯಿತು.

ಸದಸ್ಯ ಜಮಾಲುದೀನ್‌ ಮಾತನಾಡಿ, ಹೊಳೆಬೀದಿ ಜನಸಂದಣಿ ಕಡೆ ವಿದ್ಯುತ್‌ ಟಿಸಿ ಬದಲಾವಣೆಗೆ ಇಲಾಖೆ ಮೀನಾಮೇಷ ಎಣಿಸುತ್ತಿದೆ. ಮುಖ್ಯರಸ್ತೆ ಅಗಲೀಕರಣವಿಲ್ಲದೆ ವಾಹನ ದಟ್ಟಣೆ ಪಟ್ಟಣದಲ್ಲಿ ನಿರ್ಮಾಣವಾಗಿದೆ. ಪಟ್ಟಣದ ಹೃದಯ ಭಾಗದ ಜೂನಿಯರ್‌ ಕಾಲೇಜಿಗೆ ತಡೆಗೋಡೆ ಇಲ್ಲದೆ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ. ದೇಗುಲ ರಸ್ತೆ ಕೂಡ ಆಗಲೀಕರಣ ನಡೆಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಸದಸ್ಯ ಬಿ.ಗಿರೀಶ್‌ ಮಾತನಾಡಿ, ಬೇಲೂರು ಪುರಸಭೆ ನಿವೇಶನ ರಹಿತರಿಗೆ ನಿವೇಶನ ನೀಡಲು ರಾಯಾಪುರ ಬಳಿ ಭೂಮಿ ಗುರುತಿಸಿದೆ. ಆದರೆ ಇದೇ ಭೂಮಿಗೆ ಬಗರ್‌ಹುಕುಂ ಸಾಗುವಳಿ ಚೀಟಿ ನೀಡಿದ್ದಾರೆ. ಪುರಸಭೆಗೆ ಬಂದ ವಿಶೇಷ ಅನುದಾನದ ಬಗ್ಗೆ ಶಾಸಕರು ಪರಿಶೀಲನೆ ನಡೆಸಬೇಕು ಎಂದರು.

ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ಕಳೆದ 15 ವರ್ಷದಿಂದ ನಿವೇಶನ ನೀಡಿಲ್ಲ, ಇದ್ದರಿಂದ ಶಾಸಕರು 25 ಎಕರೆ ಭೂಮಿಯನ್ನು ಗುರುತಿಸಿ ಬಡಾವಣೆ ನಿರ್ಮಿಸಬೇಕು. ಯುಜಿಡಿ ಮತ್ತು ಬೇಲೂರು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಸಾಮಾನ್ಯಸಭೆಯಲ್ಲಿ ಶಾಸಕ ಎಚ್‌.ಕೆ.ಸುರೇಶ್‌, ಪುರಸಭಾ ಮುಖ್ಯಾ​ಧಿಕಾರಿ ಎಸ್‌.ಡಿ.ಮಂಜುನಾಥ್‌, ಉಪಾಧ್ಯಕ್ಷೆ ಜಮೀಲಾತೌಫಿಕ್‌ ಸೇರಿದಂತೆ ಇನ್ನಿತರರು ಹಾಜರಿದ್ದರು.

ಗಾಂಜಾ ಹಾವಳಿ ತಡೆಗೆ ಶಾಸಕರ ತಾಕೀತು

ವಿಶ್ವದ ಭೂಪಟದಲ್ಲಿ ತನ್ನದೆಯಾದ ಛಾಪು ಮೂಡಿಸಿದ ಬೇಲೂರು ಪಟ್ಟಣದಲ್ಲಿ ಗಾಂಜಾ ಚಟುವಟಿಕೆಯಿಂದ ಯುವಕರು ಹುಚ್ಚೆದ್ದು ಬೈಕ್‌ ವ್ಹೀಲಿಂಗ್‌ ಮಾಡುತ್ತಾ ಸಾರ್ವಜನಿಕರಿಗೆ ಆತಂಕ ಮೂಡಿಸಿದ್ದಾರೆ. ಪೊಲೀಸ್‌ ಇಲಾಖೆ ಈ ಬಗ್ಗೆ ಮೌನ ಮುರಿದು ಕ್ರಮಕೈಗೊಳ್ಳಬೇಕು ಎಂದು ಬೇಲೂರು ಶಾಸಕ ಎಚ್‌.ಕೆ.ಸುರೇಶ್‌ ಅ​ಧಿಕಾರಿಗಳಿಗೆ ತಾಕೀತು ಮಾಡಿದರು.

 

ಹಾಸನ ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ: ಪತಿ ಶವದ ಮುಂದೆ ಸಾವನ್ನಪ್ಪಿದ ಪತ್ನಿ

ಪಟ್ಟಣದ ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ಕಲಾ ಪರಂಪರೆ ಸಾರುವ ಊರಿನಲ್ಲಿ ಗಾಂಜಾ ವಾಸನೆ ನಿಜಕ್ಕೂ ಶೋಚನೀಯವಾಗಿದೆ. ಪೊಲೀಸರು ಬಡ-ಬಗ್ಗರಿಗೆ ದಂಡ ಹಾಕುವ ಮೊದಲು ಇಂತಹ ಜಾಲವನ್ನು ಪತ್ತೆಹಚ್ಚಬೇಕು. ಬೇಲೂರು ಪುರಸಭೆಯಲ್ಲಿನ ಸಂಪೂರ್ಣ ಕಾಮಗಾರಿಗಳು ಕಳಪೆಯಿಂದ ಕೂಡಿದೆ. ಇಲ್ಲಿನ ಅಧಿ​ಕಾರಿಗಳು ಗುತ್ತಿಗೆದಾರರ ಜೇಬು ತುಂಬಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ನ್ಯಾಷನಲ್‌ ಹೈವೇ ಅ​ಧಿಕಾರಿಗಳು ಉಡಾಪೆ ವರ್ತನೆ ಬಿಟ್ಟು ಕೆಲಸ ಮಾಡಬೇಕಿದೆ. ಇನ್ನು ಚೆಸ್ಕಾಂ,ಅರಣ್ಯ ಮತ್ತು ಪುರಸಭೆ ಜಂಟಿಯಾಗಿ ವಿದ್ಯುತ್‌ ತಂತಿಗೆ ಅಡಚಣೆಯಾದ ಮರಗಳನ್ನು ತಕ್ಷಣವೇ ತೆರವುಗೊಳಿಸಬೇಕಿದೆ. ಚುನಾವಣೆಗೆ ಮುನ್ನ ಪಕ್ಷ ಮತ್ತು ಜಾತಿ, ಚುನಾವಣೆ ಬಳಿಕ ಬೇಲೂರಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಎಲ್ಲರೂ ಬೆಂಬಲ ನೀಡಬೇಕಿದೆ. ಪುರಸಭೆ ಮೊದಲು ಮಧ್ಯವರ್ತಿಗಳ ಕಾಟವಿಲ್ಲದೆ ಆಡಳಿತಯಂತ್ರ ನಡೆಸಿ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಜನರಿಗೆ ನೀಡಬೇಕು ಎಂದರು

Latest Videos
Follow Us:
Download App:
  • android
  • ios