Asianet Suvarna News Asianet Suvarna News

ಹಾಸನ ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ: ಪತಿ ಶವದ ಮುಂದೆ ಸಾವನ್ನಪ್ಪಿದ ಪತ್ನಿ

ಪತಿ ಸಾವಿನಿಂದ ಮನ ನೊಂದ ಪತ್ನಿಯು ಅಳುತ್ತಲೆ ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಪಡುವಳಲು ಗ್ರಾಮದಲ್ಲಿ ನಡೆದಿದೆ. 

A wife who died in front of her husbands corpse at Hassan gvd
Author
First Published May 6, 2023, 11:11 AM IST

ಹಾಸನ (ಮೇ.06): ಪತಿ ಸಾವಿನಿಂದ ಮನ ನೊಂದ ಪತ್ನಿಯು ಅಳುತ್ತಲೆ ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಪಡುವಳಲು ಗ್ರಾಮದಲ್ಲಿ ನಡೆದಿದೆ. ನಿನ್ನೆ (ಶುಕ್ರವಾರ) ರಾತ್ರಿ ಹೃದಯಾಘಾತದಿಂದ ಪತಿಯು ಸಾವನ್ನಪ್ಪಿದ್ದು, ಬೆಳಿಗ್ಗೆಯಿಂದ ಪತಿ ಶವದ ಮುಂದೆ ಪತ್ನಿ ಅಳುತ್ತಲೆ ಪ್ರಾಣ ಬಿಟ್ಟಿದ್ದಾಳೆ. ರವೀಶ್ (39) ಹಾಗೂ ಪ್ರಮೀಳಾ (32) ಮೃತ ದಂಪತಿ. ಅನಾಥವಾದ ಇಬ್ಬರು ಗಂಡು ಮಕ್ಕಳ ಅಕ್ರಂದನ ಮುಗಿಲು ಮುಟ್ಟಿದ್ದು, ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.

ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಬಲಿ: ರಾಜಾಜಿನಗರ ಹಾಗೂ ಸಿಟಿ ಮಾರ್ಕೆಟ್‌ ಸಂಚಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಜಯನಗರದ ನಿವಾಸಿ ಆಂಜಲಮ್ಮ (65) ಹಾಗೂ ಬನಶಂಕರಿಯ ಯೋಗೇಶ್‌ (19) ಮೃತ ದುರ್ದೈವಿಗಳು. ಘಟನೆ ಸಂಬಂಧ ಆರೋಪಿತ ಚಾಲಕರನ್ನು ವಶಕ್ಕೆ ಪಡೆಯಲಾಗಿದೆ. ಆರ್‌.ವಿ.ರಸ್ತೆ ಸಮೀಪದ ದೇವಾಲಯ ಮುಂದೆ ಹಣ್ಣಿನ ಅಂಗಡಿ ಇಟ್ಟುಕೊಂಡಿರುವ ಅಂಜಲಮ್ಮ ಅವರು ಗುರುವಾರ ಬೆಳಗ್ಗೆ 5.45 ರ ಸುಮಾರಿಗೆ ಅಂಗಡಿ ಬಾಗಿಲು ತೆರೆಯಲು ತೆರಳುತ್ತಿದ್ದರು. ಆಗ ಆರ್‌.ವಿ.ರಸ್ತೆ ದಾಟುವಾಗ ಆಟೋ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡ ಅಂಜಲಮ್ಮ ಮೃತಪಟ್ಟಿದ್ದಾರೆ. ಈ ಸಂಬಂಧ ಆಟೋ ಚಾಲಕ ಬಾಬು ಎಂಬಾತನನ್ನು ಬಂಧಿಸಲಾಗಿದೆ ಎಂದು ಸಿ.ಟಿ.ಮಾರ್ಕೆಟ್‌ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ.

ಮಂಡ್ಯದಲ್ಲಿ ನಿಖಿಲ್‌ ಸೋಲಿಸಿದ್ದಕ್ಕೆ ಕಾಂಗ್ರೆಸ್‌ಗೆ ಈಗ ಪಶ್ಚಾತ್ತಾಪ: ಎಚ್‌.ಡಿ.ಕುಮಾರಸ್ವಾಮಿ

ರಾಜಾಜಿನಗರ ಸಮೀಪ ಸಂಭವಿಸಿದ ಮತ್ತೊಂದು ಘಟನೆಯಲ್ಲಿ ಆಟೋ ಚಾಲಕ ಯೋಗೇಶ್‌ (19) ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ 12 ಗಂಟೆ ಸುಮಾರಿಗೆ ಪ್ರಯಾಣಿಕನನ್ನು ಕರೆದುಕೊಂಡು ಯೋಗೇಶ್‌ ಹೋಗುತ್ತಿದ್ದಾಗ ಕೂಲಿ ನಗರ ಸೇತುವೆ ಬಳಿ ಅತಿವೇಗವಾಗಿ ಬಂದ ಟಾಟಾ ಏಸ್‌ ವಾಹನ ಆಟೋಗೆ ಗುದ್ದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಯೋಗೇಶ್‌ ಮೃತಪಟ್ಟಿದ್ದಾನೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮೃತ ಯೋಗೇಶ್‌, ಹಲವು ದಿನಗಳಿಂದ ನಗರದಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬೊಂಬೆನಗ​ರಿ​ಯಲ್ಲಿ ಕು​ಮಾ​ರ​ಸ್ವಾ​ಮಿಯನ್ನು ಮಣಿಸಿ ಯೋ​ಗೇ​ಶ್ವರ್‌ ವಿಧಾ​ನ​ಸೌಧ ಪ್ರವೇ​ಶಿ​ಸು​ತ್ತಾರಾ?

ಆಟೋಗೆ ಬುಲೆರೋ ಡಿಕ್ಕಿ: ಆಟೋಗೆ ಬುಲೆರೋ ಜೀಪ್‌ ಡಿಕ್ಕಿ ಹೊಡೆದು ಆಟೋದಲ್ಲಿದ್ದ ಇಬ್ಬರು ಮೃತಪಟ್ಟು, ಆರು ಜನರು ಗಾಯಗೊಂಡ ಘಟನೆ ಸುಲ್ತಾನಪುರ-ಕಲ್ಲಹಂಗರಗಾ ರಸ್ತೆಯ ಇಟ್ಟಂಗಿ ಭಟ್ಟಿಹತ್ತಿರ ಗುರುವಾರ ರಾತ್ರಿ 9.30ರ ಸುಮಾರಿಗೆ ನಡೆದಿದೆ. ಮೃತರನ್ನು ನಂದಿಕೂರ ಗ್ರಾಮದ ತುಳಜಾಬಾಯಿ ಗಂಡ ಶಿವಲಿಂಗಪ್ಪ ಭಜಂತ್ರಿ (60) ಮತ್ತು ಕಲಬುರಗಿಯ ಬ್ರಹ್ಮಪುರ ವಡ್ಡರಗಲ್ಲಿಯ ಧರ್ಮಣ್ಣ ತಂದೆ ಈರಣ್ಣ ಭಜಂತ್ರಿ (40), ಎಂದು ಗುರುತಿಸಲಾಗಿದೆ. ಭಾಗಮ್ಮ, ನೀಲಮ್ಮ, ರೇಣುಕಾ ಸೇರಿದಂತೆ 6 ಜನರು ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ನಂತರ ಆಟೋ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಇವರು ಆಳಂದ ತಾಲ್ಲೂಕಿನ ಚಿಂಚನಸೂರ ಗ್ರಾಮದ ಮಹಾಪುರತಾಯಿ ದೇವಸ್ಥಾನಕ್ಕೆ ಅಡುಗೆ ಮಾಡಲು ಆಟೋದಲ್ಲಿ ಹೊರಟಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಸಂಚಾರಿ ಪೊಲೀಸ್‌ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios