Asianet Suvarna News Asianet Suvarna News

Chandrayan-3: ಕುಕ್ಕೆ ದೇವಳದಿಂದ ಇಸ್ರೋ ಮುಖ್ಯಸ್ಥರಿಗೆ ಅಭಿನಂದನಾ ಪತ್ರ,, ಪ್ರಸಾದ

ಇಸ್ರೋ ಸಂಸ್ಥೆಯು ಚಂದ್ರಯಾನ 3ನ್ನು ಯಶಸ್ವಿಗೊಳಿಸಿದ ತಂಡದಲ್ಲಿ ಕಾರ್ಯನಿರ್ವಹಿಸಿದ ಸಂಶೋಧನಾ ವಿದ್ಯಾರ್ಥಿ ಸುಳ್ಯದ ಮಾನಸ ಜಯಕುಮಾರ್‌ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕುಟುಂಬ ಸಮೇತ ಶುಕ್ರವಾರ ಸಂಜೆ ಭೇಟಿ ನೀಡಿದರು.

Chandrayan 3 successful congratulatory letter from Kukke temple to ISRO chief rav
Author
First Published Aug 26, 2023, 9:19 PM IST

ಸುಬ್ರಹ್ಮಣ್ಯ (ಆ.26): ಇಸ್ರೋ ಸಂಸ್ಥೆಯು ಚಂದ್ರಯಾನ 3ನ್ನು ಯಶಸ್ವಿಗೊಳಿಸಿದ ತಂಡದಲ್ಲಿ ಕಾರ್ಯನಿರ್ವಹಿಸಿದ ಸಂಶೋಧನಾ ವಿದ್ಯಾರ್ಥಿ ಸುಳ್ಯದ ಮಾನಸ ಜಯಕುಮಾರ್‌ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕುಟುಂಬ ಸಮೇತ ಶುಕ್ರವಾರ ಸಂಜೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಅವರು ದೇವರಿಗೆ ಕೃತಜ್ಞತಾ ಪೂರ್ವಕವಾಗಿ ಶೇಷ ಪೂಜೆಯನ್ನು ನೆರವೇರಿದರು. ಚಂದ್ರಯಾನ 3ರಲ್ಲಿ ಭಾಗಿಯಾಗಿದ್ದ ಸಂಶೋಧನಾ ವಿದ್ಯಾರ್ಥಿ ಮಾನಸ ಜಯಕುಮಾರ್‌ ಅವರಿಗೆ ದೇವಸ್ಥಾನದ ವತಿಯಿಂದ ಗೌರವ ಸಲ್ಲಿಸಲಾಯಿತು. ಹಾಗೂ ಇಸ್ರೋ ಮುಖ್ಯಸ್ಥರಿಗೆ ದೇವಾಲಯದ ವತಿಯಿಂದ ಅಭಿನಂದನಾ ಪತ್ರ ಹಾಗು ಪ್ರಸಾದ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ ರಾಮ್‌ ಸುಳ್ಳಿ, ಸದಸ್ಯರಾದ ಶೋಭಾ ಗಿರಿಧರ್‌, ಮಾಸ್ಟರ್‌ ಪ್ಲಾನ್‌ ಸಮಿತಿಯ ಮನೋಜ್‌ ಕುಕ್ಕೆ ಮತ್ತಿತರರು ಉಪಸ್ಥಿತರಿದ್ದರು.

Chandrayaan-3 Updates: ಚಂದ್ರನ ಕಕ್ಷೆಯಲ್ಲಿ ಚಂದ್ರಯಾನ-2 ಜೊತೆ ಸಂಪರ್ಕ ಸಾಧಿಸಿದ ವಿಕ್ರಮ್‌ ಲ್ಯಾಂಡರ್‌!

ಗೋವಿಂದರಾಜ ಶೆಟ್ಟಿಗೆ ಸಿರಿಗೆರೆ ಶ್ರೀ ಅಭಿನಂದನೆ

 ಸಿರಿಗೆರೆ: ಇಸ್ರೋದ ಚಂದ್ರಯಾನ-3 ತಂಡದಲ್ಲಿದ್ದ ಗೋವಿಂದರಾಜ ಶೆಟ್ಟಿಅವರನ್ನು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿನಂದಿಸಿ, ಆಶೀರ್ವದಿಸಿದರು. ಬೆಂಗಳೂರಿನ ರವೀಂದ್ರನಾಥ ಟ್ಯಾಗೋರ್‌ ನಗರದಲ್ಲಿನ ತರಳಬಾಳು ಕೇಂದ್ರದಲ್ಲಿ ಗೌರವಿಸಲಾಯಿತು.

Chandrayaan-3: ಇಸ್ರೋ ಮಾತ್ರವಲ್ಲ ವಿಕ್ರಮನ ಬೆನ್ನುಬಿದ್ದಿದೆ ನಾಸಾ, ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ!

ಗೋವಿಂದರಾಜ ಶೆಟ್ಟಿಸಿರಿಗೆರೆಯ ತರಳಬಾಳು ವಿದ್ಯಾಸಂಸ್ಥೆಯು ವಿಜಯನಗರ ಜಿಲ್ಲೆ ತೂಲಹಳ್ಳಿಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಈಗಲೂ ಶಾಲೆಯ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಂಡು ಅಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರ್ಷವೂ ವಿದ್ಯಾರ್ಥಿ ವೇತನ ನೀಡುತ್ತಲೇ ಬಂದಿದ್ದಾರೆ. ತಾವು ಓದುತ್ತಿದ್ದ ವೇಳೆ ಹಳ್ಳಿಗಳಲ್ಲಿ ಉತ್ತಮ ಶಿಕ್ಷಣದ ಕೊರತೆ ಇತ್ತು. ಆ ಸಂದರ್ಭದಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಪ್ರೌಢಶಾಲೆ ಆರಂಭವಾಯಿತು. ಇದು ಗ್ರಾಮಾಂತರ ಮಕ್ಕಳ ಶಿಕ್ಷಣದ ಕೊರತೆಯನ್ನು ನೀಗಿತು. ಶಿಕ್ಷಣ ಸಂಸ್ಥೆ, ಶಿಕ್ಷಕರು ಗ್ರಾಮಾಂತರದ ಮಕ್ಕಳಿಗೆ ಮಾರ್ಗದರ್ಶಕರಾಗಿದ್ದರು ಎಂದು ವಿಜ್ಞಾನಿ ಗೋವಿಂದರಾಜ ಶೆಟ್ಟಿನೆನಪು ಮಾಡಿಕೊಂಡರು.

Follow Us:
Download App:
  • android
  • ios