Chandrayaan-3 Updates: ಚಂದ್ರನ ಕಕ್ಷೆಯಲ್ಲಿ ಚಂದ್ರಯಾನ-2 ಜೊತೆ ಸಂಪರ್ಕ ಸಾಧಿಸಿದ ವಿಕ್ರಮ್‌ ಲ್ಯಾಂಡರ್‌!

Chandrayaan-3: ಚಂದ್ರನ ನೆಲದ ಮೇಲೆ ಲ್ಯಾಂಡ್‌ ಮಾಡುವ ಉತ್ಸಾಹದಲ್ಲಿರುವ ವಿಕ್ರಮ್‌ ಲ್ಯಾಂಡರ್‌, ಇಸ್ರೋ ಚಂದ್ರಯಾನ-2 ಯೋಜನೆಯಲ್ಲಿ ಕಳಿಸಿದ್ದ ಆರ್ಬಿಟರ್‌ ಜೊತೆ ಸಂಪರ್ಕ ಸಾಧಿಸಿದೆ.

Welcome Buddy Chandrayaan 2 Orbiter Formally Welcomes Chandrayaan 3 Lander Module Vikram san

ಬೆಂಗಳೂರು (ಆ.21): ಇದೊಂಥರಾ ಯಾರೂ ಇಲ್ಲದ ಊರಿನಲ್ಲಿ ನಮ್ಮವರು ಸಿಕ್ಕಂಥ ಸಂಭ್ರಮ. ಚಂದ್ರಯಾನ-3 ಯೋಜನೆಯ ವಿಕ್ರಮ್‌ ಲ್ಯಾಂಡರ್‌ಗೆ ಇಂಥದ್ದೇ ಅನುಭವವಾಗಿದೆ. ಕಳೆದ ಐದು ವರ್ಷಗಳಿಂದ ಚಂದ್ರನ ಕಕ್ಷೆಯಲ್ಲಿ ಏಕಾಂಗಿಯಾಗಿ ಸುತ್ತುತ್ತಿದ್ದ ಚಂದ್ರಯಾನ-2 ಆರ್ಬಿಟರ್‌, ಸೋಮವಾರ ಚಂದ್ರಯಾನ-3ಯ ವಿಕ್ರಮ್‌ ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸಿದೆ. ಈ ಬಗ್ಗೆ ಇಸ್ರೋ ಅಧಿಕೃತ ಮಾಹಿತಿ ನೀಡಿದೆ. ಅದರೊಂದಿಗೆ ಚಂದ್ರಯಾನ-3ಯ ಯಶಸ್ಸು ಚಂದ್ರಯಾನ-2ರ ಯಶಸ್ಸು ಕೂಡ ಆಗಿರಲಿದೆ. 'ವೆಲ್‌ಕಮ್‌ ಬಡ್ಡಿ..ಚಂದ್ರಯಾನ-2 ಆರ್ಬಿಟರ್‌ ಚಂದ್ರಯಾನ-3 ಲ್ಯಾಂಡರ್‌ ಮಾಡ್ಯುಲ್‌ಅನ್ನು ಸ್ವಾಗತಿಸಿದೆ. ಇವೆರಡರ ನಡುವೆ ಎರಡೂ ಕಡೆಯ ಸಂಪರ್ಕಗಳನ್ನು ಯಶಸ್ವಿಯಾಗಿ ಸಾಧಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿರುವ ಇಸ್ಟ್ರಾಕ್‌ಗೆ ಈಗ ಲೂನಾರ್‌ ಮಾಡ್ಯುಲ್‌ ಜೊತೆ ಸಂಪರ್ಕ ಸಾಧಿಸಲು ಇನ್ನಷ್ಟು ಮಾರ್ಗಗಳು ಸಿಕ್ಕಂತಾಗಿದೆ' ಎಂದು ಇಸ್ರೋ ಟ್ವೀಟ್‌ ಮಾಡಿದೆ.ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಐತಿಹಾಸಿಕ ಸಾಫ್ಟ್‌ ಲ್ಯಾಂಡಿಂಗ್‌ ಮಾಡುವ ಗುರಿಯಲ್ಲಿದೆ. ಇನ್ನೊಂದೆಡೆ ಚಂದ್ರಯಾನ-2 ಭಾರತದ ಹಿಂದಿನ ಚಂದ್ರನ ಯೋಜನೆಯಾಗಿದೆ.

2019ರಲ್ಲಿ ಇಸ್ರೋ ಚಂದ್ರಯಾನ-2 ಯೋಜನೆ ಆರಂಭಿಸಿದಾಗ ಇದರ ಆರ್ಬಿಟರ್‌ಅನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಗಿತ್ತು. ಆದರೆ, ಇದರ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲು ವಿಫಲವಾಗಿದ್ದರಿಂದ ಇದರ ಸಂವಹನ ತಪ್ಪಿ ಹೋಗಿತ್ತು. ಕಳೆದ ಐದು ವರ್ಷಗಳಿಂದಲೂ ಮಾತಿಲ್ಲದೆ ಮೂಕವಾಗಿ ಚಂದ್ರನ ಸುತ್ತ ಸುತ್ತುತ್ತಿದ್ದ ಆರ್ಬಿಟರ್‌ಗೆ ಈಗ ವಿಕ್ರಮ್‌ ಲ್ಯಾಂಡರ್‌ನ ಸಂಪರ್ಕ ಸಿಕ್ಕಿದೆ.

ಬಹುನಿರೀಕ್ಷಿತ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡಿಂಗ್‌ನ ಕೌಂಟ್‌ಡೌನ್‌ ಈಗಾಗಲೇ ಆರಂಭಾಗಿದೆ. ಎಲ್ಲಾ ಐದೂ ಕ್ಷಕೆ ಇಳಿಸುವ ಕಾರ್ಯಗಳು ಈಗ ಸಂಪುರ್ಣವಾಗಿದ್ದು ಮಾತ್ರವಲ್ಲದೆ, ಎರಡು ಬಾರಿಯ ಡಿಬೂಸ್ಟ್‌ ಪ್ರಕ್ರಿಯೆಗಳೂ ನಡೆದಿವೆ. ಇದರಿಂದಾಗಿ ಸದ್ಯ ವಿಕ್ರಮ್‌ ಲ್ಯಾಂಡರ್‌ ಚಂದ್ರನ ತೀರಾ ಸಮೀಪದಲ್ಲಿದೆ. ಆಗಸ್ಟ್‌ 23 ರಂದು ಸಂಜೆ 6.04 ನಿಮಿಷಕ್ಕೆ ವಿಕ್ರಮ್‌ ಲ್ಯಾಂಡ್‌ ಆಗಲಿದ್ದರೆ, ಇದರ ನೇರಪ್ರಸಾರ ಅದೇ ದಿನದ ಸಂಜೆ 5.20 ರಿಂದ ಆರಂಭವಾಗಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

Chandrayaan- 3: ಇಸ್ರೋ ಮಾಜಿ ಮುಖ್ಯಸ್ಥರಿಗೆ ಪ್ರಕಾಶ್‌ ರೈ ಲೇವಡಿ: ತುಂಬಾ ಕೆಳಮಟ್ಟಕ್ಕೆ ಇಳಿದಿದ್ದೀರಾ ಎಂದು ನೆಟ್ಟಿಗರ ಟೀಕೆ

ಒಮ್ಮೆ ವಿಕ್ರಮ್‌ ಲ್ಯಾಂಡರ್‌ ಚಂದ್ರನ ನೆಲ ಸ್ಪರ್ಶ ಮಾಡಿದ ಮೇಲೆ ತಾನು ಹೊತ್ತು ತಂದ ಪೇಲೋಡ್‌ಗಳನ್ನು ಚಂದ್ರನ ಮೇಲೆ ಇಳಿಸಲಿದೆ. ಇವುಗಳಲ್ಲಿ ತಾಪಮಾನ ಮತ್ತು ಉಷ್ಣ ವಾಹಕತೆಯನ್ನು ಅಳೆಯಲು ಚಂದ್ರನ ಮೇಲ್ಮೈ ಥರ್ಮೋಫಿಸಿಕಲ್ ಪ್ರಯೋಗ (ChaSTE) ಪ್ರಮುಖವಾದುದ್ದಾಗಿದೆ. ಮತ್ತೊಂದು ಪೇಲೋಡ್, ಇನ್ಸ್ಟ್ರುಮೆಂಟ್ ಫಾರ್ ಲೂನಾರ್ ಸೆಸ್ಮಿಕ್ ಆಕ್ಟಿವಿಟಿ (ILSA), ಲ್ಯಾಂಡಿಂಗ್ ಸೈಟ್ ಸುತ್ತ ಭೂಕಂಪನ ಚಟುವಟಿಕೆಯನ್ನು ಅಳೆಯುತ್ತದೆ. ಲ್ಯಾಂಗ್ಮುಯಿರ್ ಪ್ರೋಬ್ (LP) ಪ್ಲಾಸ್ಮಾ ಸಾಂದ್ರತೆ ಮತ್ತು ಬದಲಾವಣೆಗಳನ್ನು ಅಂದಾಜು ಮಾಡುತ್ತದೆ. ಚಂದ್ರನ ಲೇಸರ್ ಅಧ್ಯಯನಕ್ಕಾಗಿ NASA ದ ಲೇಸರ್ ರೆಟ್ರೋಫ್ಲೆಕ್ಟರ್ ಅರೇ ಅನ್ನು ಬಳಸಲಾಗುತ್ತದೆ.

Chandrayaan-3: ಇಸ್ರೋ ಮಾತ್ರವಲ್ಲ ವಿಕ್ರಮನ ಬೆನ್ನುಬಿದ್ದಿದೆ ನಾಸಾ, ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ!

ರೋವರ್ ಪ್ರಗ್ಯಾನ್, ಲ್ಯಾಂಡಿಂಗ್ ಸೈಟ್‌ನ ಸುತ್ತಮುತ್ತಲಿನ ಅಂಶಗಳನ್ನು ನಿರ್ಧರಿಸಲು ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (ಎಪಿಎಕ್ಸ್‌ಎಸ್) ಮತ್ತು ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (ಎಲ್‌ಐಬಿಎಸ್) ಅನ್ನು ಒಯ್ಯುತ್ತದೆ.

 

 

Latest Videos
Follow Us:
Download App:
  • android
  • ios