ಸಿಎಂ ಸಿದ್ಧರಾಮಯ್ಯ ಅವರೇ ಚೋರ್ ಗುರು, ಪ್ರಿಯಾಂಕಾ ಖರ್ಗೆ ಚಂಡಾಲ ಶಿಷ್ಯ: ಛಲವಾದಿ ನಾರಾಯಣಸ್ವಾಮಿ
ಚೋರ್ ಗುರು, ಚಂಡಾಲ ಶಿಷ್ಯ ಎಂಬ ಪ್ರಿಯಾಂಕಾ ಖರ್ಗೆ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕ್ ಖರ್ಗೆಯನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು (ಮಾ.22): ಸಚಿವ ಪ್ರಿಯಾಂಕ್ ಖರ್ಗೆ ಅವರ ಚೋರ್ ಗುರು - ಚಂಡಾಲ ಶಿಷ್ಯ ಎಂಬ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕಾ ಖರ್ಗೆ ಬೀದಿ ಬಸವ. ಮೂಗುದಾರ ಇಲ್ಲದ ಬೀದಿ ಬಸವ. ಎಲ್ಲಿ ಬೇಕಾದರೂ ಮೇಯ್ತಾ ಅಲೆದಾಡುವ ಎಲ್ಲಿ ಬೇಕಾದರೂ ಸಗಣಿ ಹಾಕುವ ಬೀದಿ ಬಸವ ಎಂದು ವಾಗ್ದಾಳಿ ಮಾಡಿದ್ದಾರೆ. ಪ್ರಧಾನಿ ಬಗ್ಗೆ ಮೂದಲಿಸಿ ಹೇಳಿಕೆ ನೀಡಿದ್ದೀರಿ.. ಅವರ ಕಾಲಿನ ಧೂಳಿನ ಸಮ ಇಲ್ಲ ನೀವು ಎಂದು ಟೀಕೆ ಮಾಡಿದ್ದಾರೆ. ಅದಲ್ಲದೆ, ಚಂಡಾಲ ಅನ್ನೋದು ಒಂದು ಸಮುದಾಯ. ಆ ಸಮುದಾಯವನ್ನು ಅವಮಾನ ಮಾಡಿದ್ದೀರಿ. ಇಂತಹ ಅವಮಾನ ಮಾಡಿರುವ ಪ್ರಿಯಾಂಕಾ ಖರ್ಗೆಯನ್ನು ಸಂಪುಟದಿಂದ ವಜಾ ಮಾಡಬೇಕು. ಸಿಎಂ ಸಿದ್ದರಾಮಯ್ಯ ಅವರು ಪ್ರಿಯಾಂಕಾ ಖರ್ಗೆ ಅವರನ್ನು ಸಂಪುಟದಿಂದ ವಜಾ ಮಾಡದಿದ್ದರೆ, ಸಿಎಂ ಅವರೇ ಚೋರ್ ಗುರು - ಪ್ರಿಯಾಂಕಾ ಖರ್ಗೆ ಚಂಡಾಲ ಶಿಷ್ಯ ಅಂತಾ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮೊನ್ನೆ ಸಿದ್ದರಾಮಯ್ಯ ಒಂದು ಹೇಳಿಕೆ ಕೊಟ್ಟಿದ್ದಾರೆ. ನಾನೇ ಸ್ಟ್ರಾಂಗ್ ಸಿಎಂ ಅಂತ ಸಿದ್ದರಾಮಯ್ಯ ಹೇಳಿಕೊಂಡು ಓಡಾಡುತ್ತಾರೆ. ಇವರಿಗೆ ಸ್ಟ್ರಾಂಗ್ ಸಿಎಂ ಅಂತ ಸರ್ಟಿಫಿಕೇಟ್ ಕೊಟ್ಟವರು ಯಾರು..? ದಲಿತರನ್ನು ಮುಗಿಸುವುದರಲ್ಲಿ ಸಿದ್ದರಾಮಯ್ಯ ಬಹಳ ಸ್ಟ್ರಾಂಗ್ ಇರಬಹುದು. ಕಾಂಗ್ರೆಸ್ ಪಕ್ಷ ಮುಗಿಸುವುದರಲ್ಲಿ ಬಹಳ ಸ್ಟ್ರಾಂಗ್ ಇದ್ದಾರೆ. ನೀವು ಮೋದಿ ಕಾಲಿನ ಧೂಳಿಗೂ ಸಮವಲ್ಲ. ಸಿದ್ದರಾಮಯ್ಯ ಬಹಳ ತಪ್ಪಾಗಿ ಹೋಲಿಕೆ ಮಾಡುತ್ತಿದ್ದೀರಿ. ಮೋದಿ ಬಹಳ ವೀಕ್ ಪ್ರಧಾನಿ ಅಂತ ಹೇಳಿದ್ದೀರಿ. ಚುನಾವಣೆ ಮೊದಲು ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ಮಾಡಿದ್ದೀರಿ. ಬಿಜೆಪಿ ಸರ್ಕಾರಕ್ಕೆ ಮೇಕೆದಾಟು ಬಗ್ಗೆ ಕಾಳಜಿ ಇಲ್ಲ ಅಂತ ಹೇಳಿದ್ದೀರಿ. ಒಕೆ.. ನಾವು ಮಾಡಿಲ್ಲ ಈಗ ನೀವು ಯಾಕೆ ಮಾಡಿಲ್ಲ ಎಂದು ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಡಿಎಂಕೆ ನಿಮ್ಮ ಬ್ರದರ್ಸ್.. ತಮ್ಮ ಪ್ರಣಾಳಿಕೆಯಲ್ಲಿ ಹಾಕಿಕೊಂಡಿದ್ದಾರೆ.. ಇಂಡಿಯಾ ಮೈತ್ರಿ ಗೆದ್ದರೆ ಮೇಕೆದಾಟು ಮಾಡಲು ಅವಕಾಶ ಕೊಡಲ್ಲ ಅಂತ ಹೇಳಿದ್ದಾರೆ. ಹಾಗಾದರೆ ನೀವೇ ಇಂಡಿಯಾ ಅಲೆಯನ್ಸ್‌ನಿಂದ ಹೊರಗಡೆ ಬರ್ತೀರಾ..? ಹಾಗಾದರೆ ಮೇಕೆದಾಟು ವಿರೋಧ ಮಾಡುವ ಡಿಎಂಕೆ ವಿರುದ್ಧ ಯಾವಾಗಾ ಪಾದಯಾತ್ರೆ ಮಾಡ್ತೀರಾ? ಎಂದು ಕೇಳಿದ್ದಾರೆ.
ಕಾಂಗ್ರೆಸ್ ಸಾಂಧರ್ಬಿಕವಾಗಿ ನಾಟಕ ಮಾಡುತ್ತದೆ. ಎಸ್‌ಸಿ/ಎಸ್‌ಟಿಗೆ ಇರುವ ಹಣವನ್ನು ಗ್ಯಾರಂಟಿಗಾಗಿ ಬಳಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಪ್ರಿಯಾಂಕಾ ಖರ್ಗೆ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಪ್ರಿಯಾಂಕಾ ಖರ್ಗೆ ಬೀದಿ ಬಸವ ಇದ್ದಂಗೆ. ಎಲ್ಲಾದರೂ ಸಿಕ್ಕ ಸಿಕ್ಕ ಕಡೆ ಮೇಯಿಸಿಕೊಂಡು ಬರಬಹುದು. ಹಾಗೆಯೇ ಗೃಹ ಸಚಿವರು ಮಾತನಾಡುವ ಮೊದಲೇ ತಾವೇ ಮಾತನಾಡುತ್ತಾರೆ. ಮೋದಿ ಅವರನ್ನು ಪ್ರಿಯಾಂಕಾ ಖರ್ಗೆ ಚೋರ್ ಗುರು ಅಂತಾರೆ. ನಿಜವಾದ ಚೋರ್ ಗುರು ನಿಮ್ಮ ಸಿದ್ದರಾಮಯ್ಯ. ಬೆಳಗ್ಗೆಯಿಂದ ಸಿದ್ದರಾಮಯ್ಯಗೆ ಸುಳ್ಳು ಹೇಳ್ತಾರೆ. ಪ್ರಿಯಾಂಕಾ ಖರ್ಗೆ ಅಪ್ಪನ ಹೆಸರಲ್ಲಿ ಬಂದು ಬಿಟ್ಟಿದ್ದಾರೆ. ಮೋದಿ ಅವರನ್ನು ಈ ರೀತಿಯಾಗಿ ಪ್ರಿಯಾಂಕಾ ಖರ್ಗೆ ಮಾತಾಡಿದ್ದು ಸರಿಯಾಗಿದ್ಯಾ..? ಚಂಡಾಳ ಅಂದರೆ ಅಸಂವಿಧಾನಿಕ ಪದ. ಪ್ರಜಾಪ್ರಭುತ್ವದ ಬಗ್ಗೆ ಸಿದ್ದರಾಮಯ್ಯ ಗೌರವ ಇದ್ರೆ ಬೀದಿ ಬಸವ ಪ್ರಿಯಾಂಕಾ ಖರ್ಗೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಇಲ್ಲ ಅಂದರೆ ನೀವೇ ಚೋರ್ ಗುರು, ಪ್ರಿಯಾಂಕಾ ಖರ್ಗೆ ಚಂಡಾಳ್ ಶಿಷ್ಯ ಎಂದಿದ್ದಾರೆ.
ಅನಂತಕುಮಾರ್ ಹೆಗಡೆ ಬದಲು ಕಾರ್ಯಕರ್ತರಿಗೆ ಟಿಕೆಟ್ ಕೊಡಿ: ಛಲವಾದಿ ನಾರಾಯಣಸ್ವಾಮಿ
ಸದಾನಂದಗೌಡ ಶುದ್ಧೀಕರಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಇದು ಅವರ ವೈಯಕ್ತಿಕ ವಿಚಾರ. ಮೋದಿ ಅವರು ಇಡೀ ದೇಶವನ್ನೇ ಶುದ್ದೀಕರಣ ಮಾಡಬೇಕು ಅಂತ ಹೇಳಿದ್ದರು. ಅದೇ ರೀತಿಯಲ್ಲಿ ಈಗ ಇಡಿ ದೇಶದ ಶುದ್ದೀಕರಣ ಆಗುತ್ತಿದೆ. ಸದಾನಂದಗೌಡ ಅವರು ಯಾರ ಹೆಸರನ್ನು ಹೇಳಿಲ್ಲ. ಅರ್ಥ ಮಾಡಿಕೊಂಡಿರುವವರು ತಪ್ಪು ಅರ್ಥ ಮಾಡಿಕೊಂಡಿದ್ದಾರೆ ಅಂತ ಸದಾನಂದಗೌಡರೇ ಹೇಳಿದ್ದಾರೆ. ನಾನು ಬೆಳಗ್ಗೆಯಷ್ಟೇ ಸದಾನಂದಗೌಡ ಜೊತೆಗೆ ಮಾತನಾಡಿದ್ದೇನೆ. ಯಾವುದೇ ಗೊಂದಲ ಇಲ್ಲ, ಏನಾದರೂ ಇದ್ದರೆ ಹೈಕಮಾಂಡ್ ನಾಯಕರನ್ನೇ ಕೇಳಬೇಕು. ಟಿಕೆಟ್ ಸಿಕ್ಕಿದವರು ಸಹ ಯಡಿಯೂರಪ್ಪನಿಂದಲೇ ನಮಗೆ ಟಿಕೆಟ್ ಸಿಕ್ಕಿದೆ ಅಂತ ಯಾರು ಹೇಳ್ತಿಲ್ಲ ಎಂದಿದ್ದಾರೆ.
ಸಂವಿಧಾನ ಬದಲಾವಣೆ ಹೇಳಿಕೆ; ಅನಂತಕುಮಾರ ಹೆಗ್ಡೆಗೆ ಟಿಕೆಟ್ ನೀಡಬೇಡಿ; ಛಲವಾದಿ ನಾರಾಯಣಸ್ವಾಮಿ ಆಗ್ರಹ