ಚೈತ್ರಾ ಕುಂದಾಪುರ ಗ್ಯಾಂಗ್‌ ಅಭಿನವ ಹಾಲಶ್ರೀಗೆ ವಿಐಪಿ ಸತ್ಕಾರ! ಏನಿದು ಸಿಸಿಬಿ ಪೊಲೀಸರ ಕಣ್ಣಾಮುಚ್ಚಾಲೆ?

ಚೈತ್ರಾ ಕುಂದಾಪುರ ತಂಡದ ವಂಚನೆಯ ಎ3 ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು ಅವರಿಗೆ ವಿಐಪಿ ಸತ್ಕಾರ ಮಾಡುತ್ತಿದ್ದಾರೆ.

Chaitra Kundapura gang Abhinava Halashree swamiji gets VIP treatment from CCB police sat

ಬೆಂಗಳೂರು (ಸೆ.19): ಉಡುಪಿಯ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ 5 ಕೋಟಿ ರೂ. ಹಣ ಪಡೆದು ವಂಚನೆ ಮಾಡಿದ ಚೈತ್ರ ಕುಂದಾಪುರ ಗ್ಯಾಂಗ್‌ನ ಎ3 ಆರೋಪಿ ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಗೆ ಸಿಸಿಬಿ ಪೊಲೀಸರು ವಿಐಪಿ ಸತ್ಕಾರ ಮಾಡುತ್ತಿದ್ದಾರೆ. ಯಾವುದೇ ಮಾಧ್ಯಮಗಳಿಗೂ ಕಾಣಿಸದಂತೆ ಅವರನ್ನು ಮುಚ್ಚಿಟ್ಟುಕೊಂಡು ಕರೆದೊಯ್ಯುತ್ತಿದ್ದಾರೆ.

ರಾಜ್ಯದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದ ಬಿಜೆಪಿ ಟಿಕೆಟ್‌ ವಂಚನೆಯ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿದರೂ ಎ3 ಆರೋಪಿಯಾಗಿದ್ದ ಅಭಿನವ ಹಾಲಶ್ರೀ ಸ್ವಾಮೀಜಿ ಮಾತ್ರ ಯಾರ ಕೈಗೂ ಸಿಗದೇ ಪರಾರಿ ಆಗಿದ್ದರು. ಆದರೆ, ಅವರನ್ನು ಸುಮಾರು 9 ದಿನದ ಬಳಿಕ ಟ್ರೇಸ್‌ ಮಾಡಿ ಒಡಿಶಾದ ಕಟಕ್‌ ಪೊಲೀಸರ ನೆರವಿನಿಂದ ಬಂಧಿಸಿದ ಬೆಂಗಳೂರು ಸಿಸಿಬಿ ಪೊಲೀಸರು ಇಂದು ಮಧ್ಯಾಹ್ನ ಟ್ರಾನ್ಸ್‌ ವಾರೆಂಟ್‌ ಆಧಾರದಲ್ಲಿ ಹಾಲಶ್ರೀ ಶ್ವಾಮೀಜಿಯನ್ನು ವಿಮಾನದ ಮೂಲಕ ಬೆಂಗಳೂರಿಗೆ ಕರೆತಲಾಗಿದೆ. ಆದರೆ, ಎಲ್ಲ ಆರೋಪಿಗಳನ್ನು ಸಾಮಾನ್ಯವಾಗಿ ಮಾಧ್ಯಮದ ಮುಂದೆಯೇ ಕರೆದೊಯ್ಯುತ್ತಿದ್ದ ಪೊಲೀಸರು ಹಾಲಶ್ರೀ ಸ್ವಾಮೀಜಿಯನ್ನು ಯಾರಿಗೂ ತೋರಿಸದಂತೆ ವಿಮಾನ ನಿಲ್ದಾಣದ ವಿಐಪಿ ಬಾಗಿಲ ಮೂಲಕ ಕರೆದುಕೊಂಡು ಹೋಗಿದ್ದಾರೆ.

ಅಭಿನವ ಹಾಲಶ್ರೀ ಸ್ವಾಮೀಜಿ ರೋಚಕ ಟ್ರಾವೆಲ್‌ ಹಿಸ್ಟರಿ: 4 ಹೊಸ ಮೊಬೈಲ್, 4 ಸಿಮ್‌ ಕಾರ್ಡ್‌, 50 ಲಕ್ಷ ರೂ. ಸಮೇತ ಪರಾರಿ

ಇನ್ನು ಅಭಿನವ ಹಾಲಶ್ರೀ ಸ್ವಾಮೀಜಿ ಬಂಧನದ ವಿಚಾರದಲ್ಲಿ ಸಿಸಿಬಿ ಕಣ್ಣಾಮುಚ್ಚಾಲೆ ಆಡುತ್ತಿದೆ ಎಂಬ ಅನುಮಾನವೂ ಕಂಡುಬರುತ್ತಿದೆ. ಬೆಂಗಳೂರಿಗೆ ಹಾಲಶ್ರೀ ಕರೆತಂದ ನಂತರ ವಿಐಪಿ ಸತ್ಕಾರವನ್ನು ಮಾಡಲಾಗುತ್ತಿದೆ ಎಂದು ಅನುಮಾನ ಕಂಡುಬರುತ್ತಿದೆ. ವಿಮಾನ ನಿಲ್ದಾಣದಿಂದ ವಿಐಪಿ ಮಾನ್ಯತೆ ನೀಡಿ ಪೊಲೀಸರು ಜೀಪಿನಲ್ಲಿ ಕರೆತರುತ್ತಿದ್ದಾರೆ. ಇನ್ನು ಮಾಧ್ಯಮಗಳ ಕಣ್ಣುತಪ್ಪಿಸಿ ಹಾಲಶ್ರೀಯನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ. ಇನ್ನು ಎಲ್ಲ ಆರೋಪಿಗಳನ್ನು ಬಂಧಿಸಿದ್ದರೂ, ಹಾಲಶ್ರೀಗಳನ್ನು ಬಂಧಿಸಲು ಮೀನಾಮೇಷ ಎಣಿಸಿದ ಪೊಲೀಸರು ವಂಚನೆ ಪ್ರಕರಣದ ಎಫ್ಐಆರ್ ಆದ 11 ದಿನಗಳ ಬಳಿಕ ಅರೆಸ್ಟ್ ಮಾಡಿದ್ದಾರೆ.

ವಂಚನೆಯ ಎ3 ಆರೋಪಿ ಅಭಿನವ ಹಾಲಶ್ರೀ ವಿಚಾರದಲ್ಲಿ ಮಾಧ್ಯಮಗಳಿಗೆ ದಾರಿತಪ್ಪಿಸುವ ಯತ್ನ ಮಾಡಲಾಗುತ್ತಿದೆ ಎಂಬ ಅನುಮಾನ ಕಂಡುಬರುತ್ತಿದೆ. ಹಾಲಶ್ರೀ ಸಂಬಂಧವಾಗಿ ಸಿಸಿಬಿ ಅಧಿಕಾರಿಗಳು ಯಾವುದೇ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಸಿಸಿಬಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸುತ್ತಿದೆಯೇ? ಯಾರ ಮೇಲೂ ಇಲ್ಲದ ಕಾಳಜಿ ಹಾಲಶ್ರೀ ಸ್ವಾಮಿಜಿ ಮೇಲೆಕೆ ಎಂಬ ಅನುಮಾನಗಳು ಕಂಡುಬರುತ್ತಿವೆ. ಜೊತೆಗೆ, ಈಗಾಗಲೇ ಚೈತ್ರಾ ಕುಂದಾಪುರ ಹೇಳಿದಂತೆ ಅಭಿನವ ಶ್ರೀಗಳನ್ನು ಬಂಧಿಸಿದಲ್ಲಿ ದೊಡ್ಡ ದೊಡ್ಡ ನಾಯಕರ ಹೆಸರು ಹೊರಗೆ ಬರುತ್ತದೆ ಎಂದು ಹೇಳಿದಂತೆ, ಯಾರಾದರೂ ಹಿರಿಯ ನಾಯಕರನ್ನು ಬಚಾವ್‌ ಮಾಡಲು ಯತ್ನ ನಡೆಯುತ್ತಿದೆಯೇ ಎಂಬ ಗುಮಾನಿಗಳು ಕಂಡುಬರುತ್ತಿವೆ.

ಚೈತ್ರಾ ಕುಂದಾಪುರ ಗ್ಯಾಂಗ್‌ನ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಓರಿಸ್ಸಾದಲ್ಲಿ ಬಂಧನ

ಅಭಿನವ ಹಾಲಶ್ರೀಯನ್ನ ಬೆಂಗಳೂರಿಗೆ ಕರೆತಂದ ಪೊಲೀಸರು ನಾಳೆ ಬೆಳಗ್ಗೆ 11 ಗಂಟೆಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. ಈಗಾಗಲೇ ಕೋರ್ಟ್ ಸಮಯ ಮುಗಿಯುವ ಹಿನ್ನಲೆಯಲ್ಲಿ ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಬಹುದು. ಇಂದು ಸಂಜೆ ನಂತರ ವೈದ್ಯಕೀಯ ಪರೀಕ್ಷೆ ಮುಗಿಸಲಿದ್ದಾರೆ. ನಂತರ, ಸಿಸಿಬಿ ಕಚೇರಿಗೆ ಕರೆತಂದು ಪ್ರಾಥಮಿಕ ವಿಚಾರಣೆ ಮಾಡುವ ಸಾಧ್ಯತೆಯಿದೆ. 

Latest Videos
Follow Us:
Download App:
  • android
  • ios