ಹುಬ್ಬಳ್ಳಿ ಏರ್‌ಪೋರ್ಟ್‌ಗೆ ಕೇಂದ್ರ ಸರ್ಕಾರದ ಭರ್ಜರಿ ಗಿಫ್ಟ್‌: 73 ಕೋಟಿ ಅನುದಾನ ಬಿಡುಗಡೆ

ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ವಿಮಾನ ನಿಲ್ದಾಣದ ಟರ್ಮಿನಲ್‌ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 273 ಕೋಟಿ ರೂಪಾಯಿ ಅನುದಾನವನ್ನು ನೀಡಿದೆ. 

Central govt has released 273 crore grant to Hubli airport terminal development sat

ಹುಬ್ಬಳ್ಳಿ (ಜೂ.10): ರಾಜ್ಯದ ರಾಜ್ಯಧಾನಿ ಬೆಂಗಳೂರಿನಲ್ಲಿ 2ನೇ ಟರ್ಮಿನಲ್‌ ಅಭಿವೃದ್ಧಿ ಆಯ್ತು. ಈಗ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ವಿಮಾನ ನಿಲ್ದಾಣದ ಟರ್ಮಿನಲ್‌ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 273 ಕೋಟಿ ರೂಪಾಯಿ ಅನುದಾನವನ್ನು ನೀಡಿದೆ. 

ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ಕೇಂದ್ರ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ. ಈಗ ಒಂದು ಹೆಜ್ಜೆ ಮುಂದುವರೆದು 273 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ನೂತನ ಯೋಜನೆಯಂತೆ ವಿಮಾನ ನಿಲ್ದಾಣದ ಟರ್ಮಿನಲ್ 20,000 ಚ.ಮೀ ವಿಸ್ತರಣೆಗೊಳ್ಳಲಿದೆ. ನೆಲಮಹಡಿ ಹಾಗೂ ಮೊದಲ ಮಹಡಿ ಸೇರಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಏಕಕಾಲಕ್ಕೆ 1,400ಕ್ಕೂ ಅಧಿಕ ಪ್ರಯಾಣಿಕರನ್ನು  (ಆಗಮಿಸುವ ಮತ್ತು ನಿರ್ಗಮಿಸುವ) ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ.

ಇನ್ಮೇಲೆ ಶಾಲೇಲಿ ಎಣ್ಣೆ ಹಾಕೊಲ್ಲ ಬಿಟ್ಟುಬಿಡ್ರಪ್ಪಾ ಎಂದು ಬೇಡಿಕೊಂಡ ಸರ್ಕಾರಿ ಶಿಕ್ಷಕ

2 ವರ್ಷದಲ್ಲಿ ಅಭಿವೃದ್ಧಿ ಕಾಮಗಾರಿ ಪೂರ್ಣ:  ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ಸಂಬಂಧಿಸಿದಂತೆ ನಮ್ಮ ಪ್ರಸ್ತಾವನೆಗೆ ಶೀಘ್ರವಾಗಿ ಸ್ಪಂದಿಸಿ ರೂ.273 ಕೋಟಿ ಬಿಡುಗಡೆ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರಿಗೆ ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳು. ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್‌ ವಿಸ್ತರಣೆ ಕಾಮಗಾರಿಯು ಅಧಿಕೃತವಾಗಿ ಜನವರಿಯಲ್ಲಿ ಆರಂಭವಾಗಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಟ್ವೀಟ್ ಮಾಡಿದ್ದಾರೆ. 

ಅತ್ಯಾಧುನಿಕ ಸೌಲಭ್ಯಗಳ ಟರ್ಮಿನಲ್‌ ಆಗಿ ಪರಿವರ್ತನೆ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗ ಟರ್ಮಿನಲ್‌ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ವಿಮಾನ‌ ನಿಲ್ದಾಣದ ರನ್ ವೇ ಹಾಗು ಟರ್ಮಿನಲ್ ವಿಸ್ತರಣೆ ಮಾಡಲಾಗುತ್ತಿದೆ. ಈ ಮೂಲಕ ವಿಮಾನ‌ ನಿಲ್ದಾಣದ‌ ಮೇಲ್ದರ್ಜೆಗೆರಿಸಲು ತಿರ್ಮಾನ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರು, ಮಂಗಳೂರು ನಂತರದ ಅತ್ಯಾಧುನಿಕ ಸೌಲಭ್ಯಗಳುಳ್ಳ ದೊಡ್ಡ ವಿಮಾನ‌ ನಿಲ್ದಾಣವೆಂಬ ಖ್ಯಾತಿಗೆ ಒಳಗಾಗಿದೆ. ಸದ್ಯ 45×2600 ಮೀ‌ ಉದ್ದದ ರನ್ ವೇ ಹೊಂದಿದ್ದು, ಅದನ್ನು ವಿಸ್ತರಿಸಲಾಗುತ್ತಿದೆ. 

ಷರತ್ತು ಹೇರಿ ಗ್ಯಾರಂಟಿ ಸಿಗದಂತೆ ಕಾಂಗ್ರೆಸ್‌ ಹುನ್ನಾರ:
ಧಾರವಾಡ(ಜೂ.10):  ಗ್ಯಾರಂಟಿ ಯೋಜನೆಗಳು ಯಾರಿಗೂ ಸಿಗದಂತೆ ಕಾಂಗ್ರೆಸ್‌ ಸರ್ಕಾರ ಹೊಸ ಹೊಸ ಷರತ್ತುಗಳನ್ನು ಹಾಕುತ್ತಿದ್ದು, ಅವರ ಯೋಜನೆಗಳು ಗೊಂದಲಮಯವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಘೋಷಿಸಿದ ಎಲ್ಲ ಐದೂ ಗ್ಯಾರಂಟಿಗಳಿಗೆ ದಿನದಿಂದ ದಿನಕ್ಕೆದಿನದಿಂದ ದಿನಕ್ಕೆ ಹೊಸ ಹೊಸ ಷರತ್ತುಗಳನ್ನು ಹಾಕಲಾಗುತ್ತಿದೆ. ಇದೀಗ ಗೃಹಲಕ್ಷ್ಮೀಗೂ ಹೊಸ ಕಂಡಿಷನ್‌ ಹಾಕಿದೆ. ಈ ಮೂಲಕ ಯಾರಿಗೂ ಯೋಜನೆ ಸಿಗದಂತೆ ಹುನ್ನಾರ ಮಾಡಲಾಗುತ್ತಿದೆ. ಎಲ್ಲ ಗ್ಯಾರಂಟಿಗಳಲ್ಲಿ ಸುಳ್ಳು ಹೇಳಲಾಗುತ್ತಿದೆ, ಜನರ ದಾರಿ ತಪ್ಪಿಸಿ ಮತ ಗಿಟ್ಟಿಸಿಕೊಳ್ಳಲಾಗಿದೆ ಎಂದು ಟೀಕಿಸಿದರು.

ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಕಾಲೇಜಿನ ಇಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಸಿದ್ದರಾಮಯ್ಯನವರು ಹತ್ತು ಕೆಜಿ ಅಕ್ಕಿ ಕೊಡುತ್ತೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಹತ್ತು ಕೆಜಿಯಲ್ಲಿ ಐದನ್ನು ಕೇಂದ್ರ ಕೇಂದ್ರ ಸರ್ಕಾರವೇ ನೀಡುತ್ತಿದ್ದು, ಆಹಾರ ಭದ್ರತಾ ಕಾಯ್ದೆ ಅಡಿ ರಾಜ್ಯಕ್ಕೆ ಸಿಗುತ್ತಿದೆ. ಈ ವಿಷಯವನ್ನು ರಾಜ್ಯದ ಜನತೆಗೆ ಸ್ಪಷ್ಟವಾಗಿ ಸಿದ್ದರಾಮಯ್ಯ ಹೇಳಬೇಕು. ಇಲ್ಲವಾದರೆ ಕೇಂದ್ರದ ಅಕ್ಕಿ ಬೇಡ ಎಂದು ಹೇಳಿ. ಈ ರೀತಿ ಸುಳ್ಳು ಹೇಳಬೇಡಿ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios