ಇನ್ಮೇಲೆ ಶಾಲೇಲಿ ಎಣ್ಣೆ ಹಾಕೊಲ್ಲ ಬಿಟ್ಟುಬಿಡ್ರಪ್ಪಾ ಎಂದು ಬೇಡಿಕೊಂಡ ಸರ್ಕಾರಿ ಶಿಕ್ಷಕ
ಕಂಠಪೂರ್ತಿ ಕುಡಿದು ಶಾಲೆಯಲ್ಲಿ ಮಲಗಿದ ಶಿಕ್ಷಕನಿಗೆ ಸ್ಥಳೀಯ ನಿವಾಸಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಥಳಿಸಿದ್ದಾರೆ.
ಬೆಳಗಾವಿ (ಜೂ.10): ಕಂಠಪೂರ್ತಿ ಕುಡಿದು ಶಾಲೆಗೆ ಬಂದು ಮಲಗಿದ ಸರ್ಕಾರಿ ಶಾಲೆಯ ಶಿಕ್ಷಕನ್ನು, ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಸದಸ್ಯರು ಮತ್ತು ಸ್ಥಳೀಯ ಜನರು ಥಳಿಸಿದ್ದಾರೆ. ನಂತರ ಇನ್ನುಮುಂದೆ ಯಾವತ್ತೂ ಇಂತಹ ಕೆಲಸ ಮಾಡುವುದಿಲ್ಲವೆಂದು ಶಾಲಾ ಶಿಕ್ಷಕ ಕೈಮುಗಿದು ಬೇಡಿಕೊಂಡಿದ್ದಾರೆ.
ಪ್ರತಿನಿತ್ಯ ಶಾಲೆಗೆ ಬಂದು ಪಾಠ ಬೋಧನೆ ಮಾಡುವ ಬದಲು ಶಾಲೆಗೆ ಎಣ್ಣೆ ಬಾಟಲಿಗಳನ್ನು ತಂದು ಕಂಠಪೂರ್ತಿ ಕುಡಿದು ಮಲಗುತ್ತಿದ್ದ ಶಿಕ್ಷಕನಿಗೆ ಶಾಲಾಯ ಎಸ್‌ಡಿಎಂಸಿ ಸದಸ್ಯರು, ಸ್ಥಳೀಯರು ತರಾಟೆ ತೆಗೆದುಕೊಂಡು, ಥಳಿಸಿದ್ದಾರೆ. ಬೆಳಗಾವಿಯ ಮಾಧ್ವಾರ್ ರಸ್ತೆಯಲ್ಲಿರುವ ಸರ್ಕಾರಿ ಮರಾಠಿ ಶಾಲೆಯಲ್ಲಿ ಘಟನೆ ನಡೆದಿದೆ. ಕನ್ನಡ ಭಾಷಾ ಶಿಕ್ಷಕ ರವಿ ಪಾಟೀಲ ಅವರು ಮದ್ಯ ಸೇವಿಸಿ ಬಂದು ಶಾಲೆಯಲ್ಲಿ ಮಲಗಿದ್ದರು. ಶಿಕ್ಷಕ ಮದ್ಯ ಸೇವಿಸಿದನ್ನು ಗಮನಿಸಿದ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.
ಶಿಕ್ಷಣ ಮಂತ್ರಿಗಳೇ ಇಲ್ನೋಡಿ.! 116 ವರ್ಷದ ಅ.ಹಿ.ಪ್ರಾ. ಶಾಲೆಗೆ ಶಿಕ್ಷಕರೇ ಇಲ್ಲ
ಇನ್ನು ಮುಖ್ಯೋಪಾಧ್ಯಾಯರಿಗೆ ವಿದ್ಯಾರ್ಥಿಗಳು ದೂರು ನೀಡುವ ವೇಳೆ ಸ್ಥಳಕ್ಕೆ ಆಗಮಿಸಿದ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರು ಸೀದಾ ಶಿಕ್ಷಕರು ಮಲಗಿದ್ದ ಕೋಣೆಗೆ ತೆರಳಿದ್ದಾರೆ. ಆಗ, ಮದ್ಯ ಸೇವನೆ ಮಾಡಿ ನಿಂತುಕೊಳ್ಳಲು ಬಾರದಂತಹ ಸ್ಥಿತಿಯಲ್ಲಿದ್ದ ಶಿಕ್ಷಕನ ಬಾಯಿಂದ ದುರ್ವಾಸನೆ ಬಂದಿದೆ. ಕೂಡಲೇ ಶಿಕ್ಷಕನ್ನು ತರಾಟೆಗೆ ತೆಗೆದುಕೊಂಡಿದ್ದು, ಶಾಲೆಯಿಂದ ಅವರನ್ನು ಹೊರಗೆ ಕರೆದುತಂದು ಜೋರಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸ್ಥಳೀಯ ಯುವಕರು ಹಾಗೂ ಮಹಿಳೆಯರು ಸೇರಿಕೊಂಡು ಶಿಕ್ಷಕನಿಗೆ ಒಂದೆರೆಡು ಏಟು ಹಾಕಿದ್ದಾರೆ. ಆಗ ಶಿಕ್ಷಕ ರವಿ ಪಾಟೀಲ ಇನ್ನೊಮ್ಮೆ ಹೀಗೆ ಮಾಡಲ್ಲ ಎಂದು ಕೈಮುಗಿದು ಅಂಗಲಾಚಿ ಕೇಳಿಕೊಂಡಿದ್ದಾರೆ.
ದಾವಣಗೆರೆಯಲ್ಲಿ ಪತ್ನಿಯಿಂದಲೇ ಪತಿ ಕೊಲೆ ಆರೋಪ ದಾವಣಗೆರೆ (ಜೂ.10): ದಾವಣಗೆರೆ ಜಿಲ್ಲೆ ಬಿಸಲೇರಿ ಗ್ರಾಮದಲ್ಲಿ ಕಳೆದ ರಾತ್ರಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಸಾವಿಗೀಡಾಗಿದ್ದು, ಪತ್ನಿಯೇ ಪತಿಯನ್ನು ಹತ್ಯೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಕಾವ್ಯ ಮತ್ತು ಲಿಂಗರಾಜ್ ಕಳೆದ 5 ವರ್ಷಗಳ ಹಿಂದೆ ಮದುವೆ ಆಗಿ ಒಂದು ಮಗು ಇದೆ. ಆದರೆ, ಕಳೆದ ಒಂದು ವರ್ಷದಿಂದ ಕೌಟುಂಬಿಕ ಕಲಹ ಇತ್ತು. ಕಾವ್ಯಗೆ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಇತ್ತು. ಇದೇ ಕಾರಣಕ್ಕೆ ಕಾವ್ಯ ಕೆಲ ದಿನಗಳ ಹಿಂದೆ ಪತಿಯನ್ನು ತೊರೆದು ಪ್ರಿಯಕರನ ಜೊತೆ ಓಡಿಹೋಗಿದ್ದಳು. ಮಗುವಿನ ಕಾರಣದಿಂದ ಗ್ರಾಮದ ಹಿರಿಯರು ರಾಜೀ ಪಂಚಾಯತಿ ಮಾಡಿ ಕಾವ್ಯ ಲಿಂಗರಾಜ್ ಒಂದುಗೂಡಿಸಿದ್ದರು. ನಿನ್ನೆ ಮನೆಯಲ್ಲಿ ದೇವರ ಕಾರ್ಯ ಇತ್ತ. ಆದರೆ, ರಾತ್ರಿ ಲಿಂಗರಾಜ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾನೆ ಎಂದು ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ.
ವಸತಿ ಶಾಲೆ ಪ್ರವೇಶ, ಕೆಇಎನಿಂದ ಪಟ್ಟಿ ಬಿಡುಗಡೆ ವಿಳಂಬ: ಪೋಷಕರ ಪರದಾಟ
ಗ್ರಾಮಸ್ಥರಿಂದಲೇ ಮಹಿಳೆ ಮೇಲೆ ದೂರು: ಲಿಂಗರಾಜ್ ಸಾವಿನ ಸುದ್ದಿ ಗ್ರಾಮದಲ್ಲಿ ಗೊತ್ತಾಗುತ್ತಿದ್ದಂತೆಯೇ ಕಾವ್ಯ ಹಾಗು ಪ್ರಿಯಕರ ಲಿಂಗರಾಜುನನ್ನು ಕೊಲೆ ಮಾಡಿದ್ದಾರೆ ಎಂದು ಗ್ರಾಮಸ್ಥರ ಆರೋಪ ಮಾಡಿದ್ದಾರೆ. ದಾವಣಗೆರೆ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕೊಲೆ ಪ್ರಕರಣದ ಬಗ್ಗೆ ತೀವ್ರಗೊಂಡ ತನಿಖೆ ಕೈಗೊಂಡಿದ್ದಾರೆ. ಕೊಲೆ ಮಾಡಿದವರನ್ನು ಬಂಧಿಸಲು ದಾವಣಗೆರೆಯ ಶವಗಾರದ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.