Asianet Suvarna News Asianet Suvarna News

World Cancer Day: ಅಗ್ಗದ ದರಲ್ಲಿ ಕ್ಯಾನ್ಸರ್‌ ಔಷಧಿಗೆ ಚಿಂತನೆ: ಸಿಎಂ ಬೊಮ್ಮಾಯಿ

*   ಕ್ಯಾನ್ಸರ್‌ ಔಷಧಿ ನೀಡಲು ಸಂಸ್ಥೆ ರಚನೆ
*   ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ ಆಧುನಿಕರಣ
*   ಕ್ಯಾನ್ಸರ್‌ ಪತ್ತೆಗೆ 2 ಪೆಟ್‌ ಸ್ಕ್ಯಾನ್‌ ಯಂತ್ರ ಖರೀದಿ
 

Central Government Thinking Cheap Cancer Medicine Says CM Basavaraj Bommai grg
Author
Bengaluru, First Published Feb 5, 2022, 4:46 AM IST

ಬೆಂಗಳೂರು(ಫೆ.05): ರಾಜ್ಯದ(Karnataka) ಎಲ್ಲ ಪ್ರಾದೇಶಿಕ ವಲಯದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರವನ್ನು(Cancer Treatment Center) ಪ್ರಾರಂಭಿಸುತ್ತೇವೆ. ಜನೌಷಧಿ ಕೇಂದ್ರಗಳಲ್ಲಿ ಕ್ಯಾನ್ಸರ್‌ ಔಷಧಿಗಳು ಕಡಿಮೆ ದರದಲ್ಲಿ ಸಿಗುವಂತೆ ಮಾಡುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದರು.

ವಿಶ್ವ ಕ್ಯಾನ್ಸರ್‌ ದಿನದ(World Cancer Day) ಅಂಗವಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ(Department of Health and Family Welfare) ವತಿಯಿಂದ ಒಂದು ವಾರದ ಕಾಲ ರಾಜ್ಯಾದ್ಯಂತ ನಡೆಯಲಿರುವ ಕ್ಯಾನ್ಸರ್‌ ಬಗ್ಗೆಗಿನ ಜನಜಾಗೃತಿ ಅಭಿಯಾನಕ್ಕೆ ಉತ್ತರಹಳ್ಳಿ ಬಿಬಿಎಂಪಿ(BBMP) ಪಿಯು ಕಾಲೇಜು ಮೈದಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

Cancer Day ಬಾಯಿ ಕ್ಯಾನ್ಸರ್ ಗೆ ಕಾರಣವಾಗುವ 114 ವಂಶವಾಹಿನಿ ರೂಪಾಂತರಗಳ ಪತ್ತೆ

ಕ್ಯಾನ್ಸರ್‌ ಔಷಧಿಗಳ(Cancer Medicine) ದುಬಾರಿ ದರದ ಹೊರೆ ತಪ್ಪಿಸಲು ಕ್ಯಾನ್ಸರ್‌ ಔಷಧಿ ಉತ್ಪಾದಕರು ಹಾಗೂ ಕೇಂದ್ರ ಸರ್ಕಾರದ(Central Government) ಜೊತೆ ಮಾತುಕತೆ ನಡೆಸುತ್ತೇವೆ. ರಾಜ್ಯಾದ್ಯಂತ ಅಗ್ಗದ ದರದಲ್ಲಿ ಕ್ಯಾನ್ಸರ್‌ ಔಷಧಿ ನೀಡಲು ಒಂದು ಸಂಸ್ಥೆ ರೂಪಿಸಲಾಗುವುದು. ಆ್ಯಂಬುಲೆನ್ಸ್‌ ವ್ಯವಸ್ಥೆಯನ್ನು ಸದೃಢಗೊಳಿಸುತ್ತೇವೆ ಎಂದು ಅವರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌, ಶಾಸಕ ಎಂ.ಕೃಷ್ಣಪ್ಪ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಭಾಗಿಯಾಗಿದ್ದರು.

ಸ್ತನ ಕ್ಯಾನ್ಸರ್‌ಗೆ ವಿಶೇಷ ಅಭಿಯಾನ:

ಮಹಿಳೆಯರಲ್ಲಿ(Woman) ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್‌(Breast Cancer) ಸೇರಿದಂತೆ ಯಾವುದೇ ರೀತಿಯ ಕ್ಯಾನ್ಸರ್‌ಗೆ ಚಿಕಿತ್ಸೆ ಲಭ್ಯವಿದ್ದು ಧೃತಿಗೆಡುವ ಅಗತ್ಯವಿಲ್ಲ. ತಾಲೂಕು ಮಟ್ಟದ ಆಸ್ಪತ್ರೆಯಿಂದ ಹಿಡಿದು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯವರೆಗೆ ಒಂದು ವರ್ಷ ಸ್ತನ ಕ್ಯಾನ್ಸರ್‌ ನಿವಾರಣೆಯ ಬಗ್ಗೆ ಜಾಗೃತಿ ಅಭಿಯಾನ ಮತ್ತು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ ಆಧುನಿಕರಣದ ಭಾಗವಾಗಿ ಕ್ಯಾನ್ಸರ್‌ ಪತ್ತೆ ಹಚ್ಚುವ ಎರಡು ಪೆಟ್‌ ಸ್ಕಾ್ಯನ್‌ ಯಂತ್ರ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಯಂತ್ರದ ಮೂಲಕ ನಡೆಸುವ ಪರೀಕ್ಷೆಗೆ .25 ಸಾವಿರ ವೆಚ್ಚವಾಗುತ್ತದೆ. ಆದರೆ ಬಡರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಈ ಸ್ಕ್ಯಾನ್‌(Scan) ಸೌಲಭ್ಯವನ್ನು 8ರಿಂದ ಹತ್ತು ಸಾವಿರದೊಳಗೆ ಕಿದ್ವಾಯಿಯಲ್ಲಿ ನೀಡಲು ತೀರ್ಮಾನಿಸಿರುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದರು.

‘ಸಮುದಾಯ ಕೇಂದ್ರದಲ್ಲೂ ಕ್ಯಾನ್ಸರ್‌ ತಪಾಸಣೆಗೆ ವ್ಯವಸ್ಥೆ’

ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌(Dr K Sudhakar), ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್‌ ತಪಾಸಣೆಗೆ ವ್ಯವಸ್ಥೆ ಇದೆ. ಇದನ್ನು ತಾಲೂಕು ಆಸ್ಪತ್ರೆಗಳಿಗೂ ವಿಸ್ತರಣೆ ಮಾಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೂ ಶೀಘ್ರದಲ್ಲೇ ವಿಸ್ತರಣೆ ಮಾಡಲಾಗುವುದು. ಮೈಸೂರು ಮತ್ತು ತುಮಕೂರಿನಲ್ಲಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಹುಬ್ಬಳ್ಳಿಯಲ್ಲೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದೆ ಎಂದರು.

World Cancer Day: ಆರಂಭದಲ್ಲೇ ಕ್ಯಾನ್ಸರ್‌ ಪತ್ತೆಗೆ ಪರೀಕ್ಷೆ ಮಾಡಿಸಿ: ಡಾ.ತೌಸಿಫ್‌

ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಕ್ಯಾನ್ಸರ್‌ ಶಿಬಿರ ಹಮ್ಮಿಕೊಂಡಿದೆ. ಕಿದ್ವಾಯಿ ಸಂಸ್ಥೆ, ಅನೇಕ ಸಂಘ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಇದಕ್ಕೆ ಕೈ ಜೋಡಿಸಿವೆ. ಎಷ್ಟುಬೇಗ ಕ್ಯಾನ್ಸರ್‌ ಪತ್ತೆಯಾಗುತ್ತದೋ ಅಷ್ಟುಬೇಗ ಗುಣಪಡಿಸಬಹುದು. ಕ್ಯಾನ್ಸರ್‌ ರೋಗಿಗಳನ್ನು ಪ್ರೀತಿ ಮತ್ತು ಎಚ್ಚರಿಕೆಯಿಂದ ಆರೈಕೆ ಮಾಡಿ ಎಂದು ಹೇಳಿದರು.

ಕ್ಯಾನ್ಸರ್‌ ಬಗ್ಗೆ ಜನಜಾಗೃತಿ ಸಪ್ತಾಹ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ಉತ್ತರಹಳ್ಳಿ ಬಿಬಿಎಂಪಿ ಪಿಯು ಕಾಲೇಜು ಮೈದಾನದಲ್ಲಿ ಚಾಲನೆ ನೀಡಿದರು. ಕಂದಾಯ ಸಚಿವ ಆರ್‌.ಅಶೋಕ್‌, ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಮುಂತಾದವರು ಉಪಸ್ಥಿತರಿದ್ದರು.
 

Follow Us:
Download App:
  • android
  • ios