Asianet Suvarna News Asianet Suvarna News

VISL ಕಾರ್ಖಾನೆಯನ್ನು ಮುಚ್ಚುವ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದ ಕೇಂದ್ರ ಸರ್ಕಾರ!

ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಭಾಗವತ್‌ ಕರಾಡ್ ಅವರು VISL  ಕಾರ್ಖಾನೆಯನ್ನು ಮುಚ್ಚುವ ಬಗ್ಗೆ  ಲೋಕಸಭೆಯಲ್ಲಿ ಅಧಿಕೃತ ಹೇಳಿಕೆ ನೀಡಿದ್ದಾರೆ. ಈ ಮೂಲಕ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ ರವರ ಸಲಹೆಯ ಮೇಲೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಸ್ಥಾಪಿಸಿದ್ದ 105 ವರ್ಷಗಳ ಹಳೆಯ ಕಾರ್ಖಾನೆಯ ಯುಗಾಂತ್ಯವಾಗಲಿದೆ.

central government officially announced the closure of the bhadravathi VISL factory gow
Author
First Published Feb 14, 2023, 12:27 PM IST

ಬೆಂಗಳೂರು (ಫೆ.14): ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಭಾಗವತ್‌ ಕರಾಡ್ ಅವರು VISL  ಕಾರ್ಖಾನೆಯನ್ನು ಮುಚ್ಚುವ ಬಗ್ಗೆ  ಲೋಕಸಭೆಯಲ್ಲಿ ಅಧಿಕೃತ ಹೇಳಿಕೆ ನೀಡಿದ್ದಾರೆ. ಸರ್ಕಾರಿ ಸ್ವಾಮ್ಯದ ಭದ್ರಾವತಿ “ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ' ನಷ್ಟದ ಕಾರಣದಿಂದ ಅಧಿಕೃತವಾಗಿ ಮುಚ್ಚಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಕಾರ್ಖಾನೆಯನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಮುಚ್ಚುವ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ಲೋಕಸಭೆಗೆ ತಿಳಿಸಿದೆ. ಅದರೊಂದಿಗೆ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ ರವರ ಸಲಹೆಯ ಮೇಲೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಸ್ಥಾಪಿಸಿದ್ದ 105 ವರ್ಷಗಳ ಹಳೆಯ ಕಾರ್ಖಾನೆಯ ಯುಗಾಂತ್ಯವಾಗಲಿದೆ.

 ನಷ್ಟದಲ್ಲಿರುವ ಭದ್ರಾವತಿಯ ಉಕ್ಕುಕಾರ್ಖಾನೆ ಖಾಸಗಿಯವರಿಗೆ ಮಾರಾಟ ಮಾಡಲು 2016ರಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅದರಂತೆ 2019ರಲ್ಲಿ ಬಿಡ್ ಆಹ್ವಾನಿಸಿತ್ತು. ಆದರೆ, ಬಿಡ್ ಮೂಲಕ ಆಸಕ್ತಿ ತೋರಿದವರು ಖರೀದಿಗೆ ಆಸಕ್ತಿ ತೋರಲಿಲ್ಲ. ಈ ಹಿನ್ನಲೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಖಾಸಗೀಕರಣ ಪ್ರಕ್ರಿಯೆ ಕೈಬಿಡಲು ನಿರ್ಧರಿಸಿತ್ತು. ನಂತರ ಭಾರತೀಯ ಉಕ್ಕು ಪ್ರಾಧಿಕಾರ (ಸೈಲ್)  ಖುದ್ದು ಕಾರ್ಖಾನೆಯನ್ನು ಪುನಾರಂಭ ಮಾಡಬಹುದು ಎನ್ನಲಾಗಿತ್ತು.

ಫೆ. 8 ರಂದು ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕಾರ್ಖಾನೆ ಪುನಾರಂಭಿಸಲು ಕೇಂದ್ರದ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದರು. ಆದರೆ ಕಾರ್ಖಾನೆಯನ್ನು ಮುಚ್ಚುವ ಬಗ್ಗೆ ನಿನ್ನೆ ಸಂಸತ್ತಿನಲ್ಲಿ ಕೇಂದ್ರದ ಅಂತಿಮ  ನಿರ್ಧಾರ  ಹೊರ ಬಿದ್ದಿದೆ. ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಭಾಗವತ್‌ ಕರಾಡ್, 'ಬಿಡ್ ಸಲ್ಲಿಸುವ ಮೂಲಕ ಆಸಕ್ತಿ ತೋರಿದವರು ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಕಾರ್ಖಾನೆಯಲ್ಲಿನ ಯಂತ್ರಗಳು ಹಳತಾಗಿವೆ, ಅವುಗಳ ಗಾತ್ರ ಸಾಕಷ್ಟಿಲ್ಲ. ನಿರಂತರವಾಗಿ ಕಾರ್ಖಾನೆ ನಷ್ಟದಲ್ಲಿದೆ ಹಾಗೂ ಬಹಳ ಹಿಂದೆಯೇ ಕುಲುಮೆಯನ್ನು ಮುಚ್ಚಲಾಗಿದೆ ಎಂಬ ಕಾರಣ ನೀಡುತ್ತಿದ್ದಾರೆ. ಹೀಗಾಗಿ ಕಾರ್ಖಾನೆ ಮುಚ್ಚಲು ನಿರ್ಧರಿಸಿದ್ದೇವೆ' ಎಂದು ತಿಳಿಸಿದ್ದಾರೆ. ಹೀಗಾಗಿ ವಿ ಐ ಎಸ್ ಎಲ್ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಆರಂಭವಾಗಿದೆ.

ರಾಜ್ಯದ ಕಬ್ಬಿಣ ಮತ್ತು ಉಕ್ಕು ಸ್ಥಾವರ ಉಳಿಸಲು ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡ

ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ:
ಭದ್ರಾವತಿಯ VISL ಕಾರ್ಖಾನೆ ಮುಚ್ಚುವ ಬಗ್ಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿ, VISL ನಮ್ಮ ರಾಜ್ಯದ ಪ್ರತಿಷ್ಠಿತ ಕಬ್ಬಿಣ ಕಾರ್ಖಾನೆ. ಅದು ಮುಚ್ಚವ ಹಂತಕ್ಕೆ ಬಂದಿದೆ. ಅದನ್ನ ಹಿಡಿದು ನಿಲ್ಲಿಸಲು ಏನ್ ಏನ್ ಮಾಡಬೇಕು ಅದನ್ನ ನಾವು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಜೊತೆ ವಿಶೇಷವಾಗಿ ಮಾತನಾಡುತ್ತಿದ್ದೇವೆ. ನಿನ್ನ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಕಾರ್ಖಾನೆ ಮುಚ್ಚುವ ಪ್ರೋಸೆಸ್ ಸ್ಟಾರ್ಟ್ ಆಗಿದೆ ಅಂತ ಹೇಳಿದ್ದಾರೆ. ಪ್ರೋಸೆಸ್ ಶುರುವಾಗಿದೆ ಅಂದ್ರೆ ಮುಚ್ಚೆ ಆಯ್ತು ಅಂತಲ್ಲ. ಕೆಲವು ಪ್ರೋಸೆಸ್ ಶುರುವಾಗಿದೆ ಅಷ್ಟೇ. ಆದ್ರೆ ನಾವು ಪ್ರಧಾನಮಂತ್ರಿ ಕೇಂದ್ರ ಗೃಹ ಸಚಿವರು ಕೈಗಾರಿಕೆ ಸಚಿವರ ಜೊತೆ ನಾವು ಮಾತನಾಡಿದ್ದೇವೆ. ನಮ್ಮ ಯಡಿಯೂರಪ್ಪನವರು ಹಾಗೂ ಎಂಪಿಯವರು ಸಹ ವಿಶೇಷವಾಗಿ ಆದ್ಯತೆ ಕೊಟ್ಟು ಮಾತನಾಡಿದ್ದಾರೆ.

ವಿಎಸ್‌ಐಎಲ್‌ ಉಳಿವಿಗೆ ಸಿಎಂ ಬಳಿ ನಿಯೋಗ: ಸಂಸ​ದ ಬಿ.ವೈ.​ರಾ​ಘ​ವೇಂದ್ರ

ಕಳೆದ ವಾರ ಸಿಎಂ ಶಿವಮೊಗ್ಗದಲ್ಲೂ ಸಹ ಕಾರ್ಖಾನೆ ಮುಚ್ಚಲು ಬಿಡೋದಿಲ್ಲ ಇದನ್ನ ನಾವು ಉಳಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕಾರ್ಖಾನೆಯನ್ನ ಖಾಸಗೀಕರಣ ಮಾಡಬೇಕೋ ಅಥಾವ ಸರ್ಕಾರ ನಡೆಸಬೇಕೋ ಚರ್ಚೆ ನಡೆಸುತ್ತಿದ್ದೇವೆ. ಲೋಕಸಭೆಯಲ್ಲಿ ನಿನ್ನೆಯ ಸ್ಟೆಟಸ್ ಏನಿದೆಯೋ ಅದನ್ನ ಕೊಟ್ಟಿದ್ದಾರೆ. ನನಗೂ ಇದ್ರ ಬಗ್ಗೆ ವಿಷಾದವಿದೆ. ಈ ಕಾರ್ಖಾನೆ ಮುಚ್ಚಬಾರದು. ಯಾವುದಾದರೂ ರೀತಿಯಲ್ಲಿ ನಡೆಯಬೇಕು. ನಮ್ಮ ರಾಜ್ಯದ ಹೆಮ್ಮೆಯ ಕಾರ್ಖಾನೆ ಇದು. ವಿಶ್ವೇಶ್ವರಯ್ಯನವರು ಪ್ರಾರಂಭ ಮಾಡಿದ್ದು. ನಮ್ಮ ಮೈಸೂರು  ಮಹಾರಾಜರು ಮಾಡಿದ ಉದ್ಯಮ. ಕಾರ್ಖಾನೆ ಮುಂದುವರೆಸಲು ಏನ್ ಮಾಡಬೇಕು ಅದನ್ನ ನಾವು ಮಾಡುತ್ತೇವೆ. ಈ ಕಾರ್ಖಾನೆ ಪರವಾಗಿ ನಮ್ಮ ಸರ್ಕಾರವಿದೆ ಎಂದಿದ್ದಾರೆ

Follow Us:
Download App:
  • android
  • ios