ರಾಜ್ಯದ ಕಬ್ಬಿಣ ಮತ್ತು ಉಕ್ಕು ಸ್ಥಾವರ ಉಳಿಸಲು ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡ

 ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿರುವ  ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು ಎಂದು ಮಾಜಿ ಪಿಎಂ ಹೆಚ್‌ಡಿ ದೇವೇಗೌಡ ಪಿಎಂ ಮೋದಿಗೆ ಪತ್ರ ಬರೆದಿದ್ದಾರೆ.

HD Deve Gowda letter to PM Narendra Modi against plan to shut SAIL Bhadravathi plant gow

ಶಿವಮೊಗ್ಗ (ಜ.24): ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿರುವ ವಿಐಎಸ್ಎಲ್ (ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ) ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು. ಕಾರ್ಖಾನೆ ಮರು ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು  ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.  ಕಳೆದ 23 ವರ್ಷಗಳಲ್ಲಿ ಈ ಕಾರ್ಖಾನೆ ಅನೇಕ ಸಂಕಷ್ಟ ಹಾಗೂ ಗೊಂದಲಗಳನ್ನು ಎದುರಿಸಿದೆ. ಬಂಡವಾಳ ಹಿಂತೆಗೆತ, ಖಾಸಗೀಕರಣ, ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸುವುದು. ಅನೇಕ ಕಾರಣಗಳಿಂದ ಇದು ಸುದ್ದಿಯಾಗಿದೆ. ಆದರೆ ದೇಶಕ್ಕೆ ಅತ್ಯುನ್ನತ ಕೊಡುಗೆಯಾಗಿರುವ ಕಾರ್ಖಾನೆಯನ್ನು ಮುಚ್ಚುವ ತೀರ್ಮಾನ ಸಮಂಜಸವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದೇವೇಗೌಡರ ಫೋಟೋ ಹಿಡಿದು ಅಯ್ಯಪ್ಪಸ್ವಾಮಿ ದರ್ಶನ: ಕುಮಾರಸ್ವಾಮಿ ಸಿಎಂ ಆಗಲೆಂದು ಪೂಜೆ

ನಾನು 1996ರಲ್ಲಿ ಪ್ರಧಾನಿಯಾಗಿದ್ದ ವೇಳೆ ವಿಶೇಷ ಆಸಕ್ತಿ ತೆಗೆದುಕೊಂಡು ವಿಐಎಸ್‌ಎಲ್‌ನ್ನು ಸೈಲ್‌' (ಭಾರತೀಯ ಉಕ್ಕು ಪ್ರಾಧಿಕಾರ -Steel Authority of India ) ಆಧೀನಕ್ಕೆ ಒಳಪಡಿಸಿದ್ದೆ. ಈ ಕಾರ್ಖಾನೆ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂಬುದು ನನ್ನ ಆಶಯವಾಗಿತ್ತು.  650 ಕೋಟಿ ರೂ. ಬಂಡವಾಳ ಹಾಕಿ ಕಾರ್ಖಾನೆ ಆಧುನೀಕರಣ ಮಾಡಲು ತೀರ್ಮಾನಿಸಲಾಗಿತ್ತು. ಅದು ಕೈಗೂಡಲಿಲ್ಲ. ಆದರೆ 2016ರಲ್ಲಿ ನೀತಿ ಆಯೋಗವು ವಿಐಎಸ್‌ಎಲ್‌ನಿಂದ ಬಂಡವಾಳ ಹಿಂತೆಗೆದು ಖಾಸಗೀಕರಣಕ್ಕೆ ಸಲಹೆ ನೀಡಿತ್ತು. ಸರ್ಕಾರ ಕೂಡ ಇದಕ್ಕೆ ಅನುಮೋದನೆ ನೀಡಿದ್ದು ಅಪಾಯಕಾರಿ ಬೆಳವಣಿಗೆಯಾಗಿದೆ. ಕರ್ನಾಟಕದಲ್ಲಿರುವ ಏಕೈಕ ಸಾರ್ವಜನಿಕ ಸ್ವಾಮ್ಯದ ಉದ್ದಿಮೆ ಇದಾಗಿದೆ.

ನೀರಾವರಿ ಯೋಜನೆಗಾಗಿ ರಾಜೀನಾಮೆ ನೀಡಿದ್ದ ದೇವೇಗೌಡರು

 

ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಪೂರಕವಾಗಿ ಈ ಕಾರ್ಖಾನೆ ಅನೇಕ ಕೊಡುಗೆಗಳನ್ನು ನೀಡುವ ಸಾಮರ್ಥ್ಯ ಹೊಂದಿದೆ. ರಕ್ಷಣಾ ವಲಯ, ನ್ಯೂಕ್ಲಿಯರ್, ರೈಲ್ವೆ ಮುಂತಾದ ವಿಭಾಗದಲ್ಲಿ ಈ ಕಾರ್ಖಾನೆಯಿಂದ ಮಹತ್ವದ ಸಹಕಾರ ದೊರೆಯಲಿದೆ. ಮುಖ್ಯವಾಗಿ 20 ಸಾವಿರಕ್ಕೂ ಹೆಚ್ಚು ಕುಟುಂಬಗಳು ಇದೇ ಕಾರ್ಖಾನೆಯನ್ನು ಅವಲಂಬಿಸಿವೆ. ಹೀಗಾಗಿ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಡಬೇಕೆಂದು ಪತ್ರದಲ್ಲಿ ಮಾಜಿ ಪ್ರಧಾನಿ ಒತ್ತಾಯಿಸಿದ್ದಾರೆ. ಈ ಮೂಲಕ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ಕ್ಲೋಸರ್ ಸಂಗತಿ ನಿಧಾನವಾಗಿ ಕಾರ್ಮಿಕರ ಹಿತಾಸಕ್ತಿಯ ಹೆಸರಿನಲ್ಲಿ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ.

Latest Videos
Follow Us:
Download App:
  • android
  • ios