Asianet Suvarna News Asianet Suvarna News

ಬರ ನಿರ್ವಹಣೆಗೆ ಕೇಂದ್ರ ಸರ್ಕಾರಕ್ಕೆ ಮೂರು ಪತ್ರ ಬರೆದ್ರೂ ಸಹಕರಿಸುತ್ತಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ

ಬರ ನಿರ್ವಹಣೆಗೆ ಕೇಂದ್ರಕ್ಕೆ ಮೂರು ಪತ್ರ ಬರೆದರೂ ಅದಕ್ಕೆ ಸ್ಪಂದನೆ ಸಿಗುತ್ತಿಲ್ಲ. ಗುಳೆ ಹೋಗುವುದನ್ನು ತಪ್ಪಿಸಲು ಮನರೇಗಾ ಯೋಜನೆಯ 100 ಮಾನವ ದಿನಗಳಿಂದ 150 ಮಾನವ ದಿನಗಳನ್ನಾಗಿ ಮಾಡಿಕೊಡಿ ಎಂದು ಕೋರಿದರೂ ಸಹಕಾರ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Central government is not cooperating in drought management CM outraged at bengaluru rav
Author
First Published Dec 12, 2023, 5:01 AM IST

ವಿಧಾನಸೌಧ (ಡಿ.12): ಬರ ನಿರ್ವಹಣೆಗೆ ಕೇಂದ್ರಕ್ಕೆ ಮೂರು ಪತ್ರ ಬರೆದರೂ ಅದಕ್ಕೆ ಸ್ಪಂದನೆ ಸಿಗುತ್ತಿಲ್ಲ. ಗುಳೆ ಹೋಗುವುದನ್ನು ತಪ್ಪಿಸಲು ಮನರೇಗಾ ಯೋಜನೆಯ 100 ಮಾನವ ದಿನಗಳಿಂದ 150 ಮಾನವ ದಿನಗಳನ್ನಾಗಿ ಮಾಡಿಕೊಡಿ ಎಂದು ಕೋರಿದರೂ ಸಹಕಾರ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಪ್ರತಿಪಕ್ಷದ ಧರಣಿ ಮಧ್ಯೆಯೇ ಕಂದಾಯ ಸಚಿವ ಕೃಷ್ಣ ಭೈರೇಗೌಡ ಬರದ ವಿಷಯವಾಗಿ ಉತ್ತರ ನೀಡುವಾಗ ಮಧ್ಯ ಪ್ರವೇಶಿಸಿ ಅವರು ಮಾತನಾಡಿದರು.

'ನಾವು ಲಿಂಗಾಯತರು ಮಾಂಸ ತಿನ್ನಲ್ಲ' : ಸದನದಲ್ಲಿ ಹೀಗೊಂದು ಸ್ವಾರಸ್ಯಕರ ಚರ್ಚೆ

ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳಲ್ಲಿ ತೀವ್ರ ಬರ ಆಗಿದೆ. ರಾಜ್ಯ ಸರ್ಕಾರ ಬರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿದೆ. ಕುಡಿವ ನೀರು, ಮೇವು, ಉದ್ಯೋಗ ಕಲ್ಪಿಸುವ ಕೆಲಸಗಳನ್ನೆಲ್ಲ ಮಾಡಿದ್ದೇವೆ. ಜಿಲ್ಲಾಡಳಿತದ ಬಳಿ 900 ಕೋಟಿ ರು. ಇದೆ. ಆದರೆ ಮನರೇಗಾ ಯೋಜನೆಯಡಿ ಇರುವ 100 ಮಾನವ ದಿನಗಳನ್ನು 150ಕ್ಕೆ ಏರಿಸಿ ಕೊಡಿ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಈವರೆಗೂ ಸ್ಪಂದಿಸಿಲ್ಲ ಎಂದರು.

 

ಬರ ನಿರ್ವಹಣೆಗೆ ಬರ: ಬೆಳೆ ನಷ್ಟ ಪರಿಹಾರ ಮರೀಚಿಕೆ, ನೀರು ಮೇವಿಗೂ ಅಭಾವ..!

ಬರಪರಿಹಾರಕ್ಕಾಗಿ. ರೂ.18,171 ಕೋಟಿ ನೆರವನ್ನು ಕೇಂದ್ರ ಸರ್ಕಾರದಿಂದ ಕೇಳಿದ್ದೇವೆ. ಕೇಂದ್ರದ ತಂಡ ಬಂದು ಸಮೀಕ್ಷೆ ನಡೆಸಿ, ವರದಿಯನ್ನೂ ನೀಡಿದೆ. ನಾವು ಬರೆದ ಪತ್ರಗಳಿಗೆ ಪ್ರತಿಕ್ರಿಯೆ ಇಲ್ಲ. ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಲು ಅವಕಾಶ ಕೇಳಿದರೂ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios