'ನಾವು ಲಿಂಗಾಯತರು ಮಾಂಸ ತಿನ್ನಲ್ಲ' : ಸದನದಲ್ಲಿ ಹೀಗೊಂದು ಸ್ವಾರಸ್ಯಕರ ಚರ್ಚೆ
ವಿಧಾನಸಭೆಯಲ್ಲಿನ ಬರ ನಿರ್ವಹಣೆ ಕುರಿತು ಚರ್ಚೆ ವೇಳೆ ಮಾಂಸಾಹಾರ ಸೇವನೆ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ನಾವು ಲಿಂಗಾಯತರು ಮಾಂಸ ತಿನ್ನಲ್ಲ ಎಂದ ಅಪ್ಪಾಜಿ ನಾಡಗೌಡ, ನೀವು ತಿನ್ನೋದ್ರಿಂದಲೇ ರೇಟು ಜಾಸ್ತಿ ಆಗಿರೋದು ಎಂದು ಕಾಲೆಳೆದ ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ರುದ್ರಪ್ಪ ಲಮಾಣಿ.
ವಿಧಾನಸrಭೆ (ಡಿ.9): ವಿಧಾನಸಭೆಯಲ್ಲಿನ ಬರ ನಿರ್ವಹಣೆ ಕುರಿತು ಚರ್ಚೆ ವೇಳೆ ಮಾಂಸಾಹಾರ ಸೇವನೆ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು.
'ಮಾಂಸಾಹಾರ ಸೇವನೆ ಮಾಡಬಾರದು ಎಂದು ಬಸವಣ್ಣ ಎಲ್ಲೂ ಹೇಳಿಲ್ಲ. ವಚನದಲ್ಲಿ ಅವರು ಹೇಳಿರುವ ಹೊಲಸೇ ಬೇರೆ. ಮಾಂಸಾಹಾರ ಆಹಾರ ಪದ್ಧತಿಯನ್ನು ನಾವ್ಯಾರೂ ತಡೆಯಲಾಗದು' ಎಂದು ಕಾಂಗ್ರೆಸ್‌ನ ಅಪ್ಪಾಜಿ ಸಿ.ಎಸ್. ನಾಡಗೌಡ ಹೇಳಿದರು.
ಬರ ಕುರಿತ ಚರ್ಚೆ ವೇಳೆ ಮಾತನಾಡಿದ ಅವರು, ಬರದಿಂದಾಗಿ ಬೆಳೆ ಹಾನಿಯ ಜತೆಗೆ ಕಾಯಿಪಲ್ಯ, ಪೌಷ್ಟಿಕ ಆಹಾರ ಲಭ್ಯವಾಗದೆ ಅಪೌಷ್ಟಿಕತೆ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಶಾಲಾ ಮಕ್ಕಳಿಗೆ ವಿತರಿಸುವಂತೆ ಅಗತ್ಯವಾದ ಸ್ಥಳಗಳಲ್ಲಿ ಪೌಷ್ಟಿಕ ಕಿಟ್ ವಿತರಿಸಬೇಕು. ಮಕ್ಕಳಿಗೆ ಮಾಂಸ ತಿನ್ನುವುದು ಕನಸಿನ ಮಾತಾಗಬಹುದು. ಚಿಕನ್ 200-250 ರು., ಕೆ.ಜಿ. ಮಾಂಸ 650-700 ರು. ಇರಬಹುದು. ನನಗೆ ಗೊತ್ತಿಲ್ಲ ಯಾಕೆಂದರೆ ನಾನು ಮಾಂಸ ತಿನ್ನುವುದಿಲ್ಲ ಎಂದು ಹೇಳಿದರು.
ಲೀಲಾವತಿ ಅವರ ಕಲಾಸೇವೆ, ಸಾಮಾಜಿಕ ಕಳಕಳಿಯ ಬದುಕೇ ನಮಗೆ ಮಾದರಿ : ಡಿಕೆ ಶಿವಕುಮಾರ
ಈ ವೇಳೆ ಕೆಲ ಸದಸ್ಯರು ಬಸನಗೌಡ ಪಾಟೀಲ್ ಯತ್ನಾಳ್ ತಿನ್ನುತ್ತಾರೆ ಎಂದು ಬೊಟ್ಟು ಮಾಡಿದಾಗ, 'ಅವರೂ ತಿನ್ನಲ್ಲ ಅವರ ಕಡೆಗೆ ಯಾಕೆ ತೋರಿಸುತ್ತೀರಿ. ಅವರು ಹಾಗೂ ನಾವು ಪಕ್ಕಾ ಲಿಂಗಾಯತರು. ನಾವ್ಯಾರೂ ತಿನ್ನೋದಿಲ್ಲ' ಎಂದು ಅಪ್ಪಾಜಿ ನಾಡಗೌಡ ಹೇಳಿದರು.
ಎದ್ದು ನಿಂತ ಯತ್ನಾಳ್, 'ನಾವು ಲಿಂಗಾಯತರು ತಿನ್ನಲ್ಲ, ತಿನ್ನುವವರು ಬೇರೆ ಇದ್ದಾರೆ' ಎಂದಾಗ ಸ್ಪೀಕರ್ ಸ್ಥಾನದಲ್ಲಿದ್ದ ರುದ್ರಪ್ಪ ಲಮಾಣಿ, ಇದನ್ನು ನೋಡಿದರೆ ನೀವಿಬ್ಬರೂ ತಿನ್ನುತ್ತೀರಿ ಎನಿಸುತ್ತದೆ ಎಂದು ಕಾಲೆಳೆದರು. ಬಿಜೆಪಿಯ ದುರ್ಯೋಧನ ಐಹೊಳೆ, 'ನೀವೆಲ್ಲಾ ತಿನ್ನೋದಕ್ಕಾಗಿಯೇ ನಮಗೆ ರೇಟು ಜಾಸ್ತಿಯಾಗಿದೆ' ಎಂದರು.
ಅಮ್ಮನ ನೆನಪಿನಲ್ಲಿ ಸದಾ ಇರುತ್ತೇನೆ, ಅವರ ಕೆಲ ಕನಸುಗಳಿದ್ವು ಅದನ್ನು ನನಸಾಗಿಸುತ್ತೇನೆ: ವಿನೋದ್ ರಾಜ್