Asianet Suvarna News Asianet Suvarna News

ಕಾವೇರಿಗಾಗಿ ಕುಶಾಲನಗರದಲ್ಲಿ ಕಾವಲುಪಡೆಯಿಂದ ಅರೆಬೆತ್ತಲೆ ಪ್ರತಿಭಟನೆ

ತಮಿಳುನಾಡಿಗೆ ರಾತ್ರೋ ರಾತ್ರಿ KRS ನಿಂದ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಅಖಂಡ ಕರ್ನಾಟಕ ಬಂದ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನ ಗಡಿಭಾಗ ಕುಶಾಲನಗರದಲ್ಲೂ ಕರ್ನಾಟಕ ಕಾವಲುಪಡೆ ವತಿಯಿಂದ ಪ್ರತಿಭಟನೆ ನಡೆಯಿತು. 

Cauvery water disputee pro kannadigas protest agains govt of karnataka at kodagu rav
Author
First Published Sep 29, 2023, 1:36 PM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಸೆ.29) : ತಮಿಳುನಾಡಿಗೆ ರಾತ್ರೋ ರಾತ್ರಿ KRS ನಿಂದ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಅಖಂಡ ಕರ್ನಾಟಕ ಬಂದ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನ ಗಡಿಭಾಗ ಕುಶಾಲನಗರದಲ್ಲೂ ಕರ್ನಾಟಕ ಕಾವಲುಪಡೆ ವತಿಯಿಂದ ಪ್ರತಿಭಟನೆ ನಡೆಯಿತು. 

ಕುಶಾಲನಗರ ಚೆಕ್ ಪೋಸ್ಟ್(Kushalanagar checkpost) ನಿಂದ ಕೊಪ್ಪಚೆಕ್ ಪೋಸ್ಟ್ ವರೆಗೆ ಮೆರವಣಿಗೆ ನಡೆಸಿದರು. ಬಳಿಕ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ಕಾವಲುಪಡೆ ಕಾರ್ಯಕರ್ತರು ಅರೆಬೆತ್ತಲೆಯಾಗಿ ಪ್ರತಿಭಟಿಸುತ್ತಾ ಕಾವೇರಿ ನದಿಗೆ ಇಳಿದು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಕಾವೇರಿ ನದಿಗೆ ಇಳಿಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳದಲ್ಲಿದ್ದು ಪ್ರತಿಭಟನಾಕಾರರನ್ನು ತಡೆದರು. ಇದರಿಂದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆಯಿತು. 

Cauvery water disputee pro kannadigas protest agains govt of karnataka at kodagu rav

ಕಾವೇರಿ ಸಂಘರ್ಷ, ರಾಜ್ಯಕ್ಕೆ ಬರಲು ತಮಿಳು ಪ್ರವಾಸಿಗರ ಹಿಂದೇಟು!

ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಇದ್ದಿದ್ದರಿಂದ ಪ್ರತಿಭಟನಾಕಾರರನ್ನು ನದಿಗೆ ಇಳಿಯಲು ಬಿಡದೆ ಎಳೆದು ದೂರ ಹಾಕಿದರು. ಇದರಿಂದ ಸಿಟ್ಟಿಗೆದ್ದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಹಾಗೂ ಸಂಸದರ ವಿರುದ್ಧ ಇನ್ನಷ್ಟು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭ ಮಾತನಾಡಿದ ಕರ್ನಾಟಕ ಕಾವಲು ಪಡೆ ಕೊಡಗು ಜಿಲ್ಲಾಧ್ಯಕ್ಷ ಎಂ. ಕೃಷ್ಣ ರಾಜ್ಯ ಸರ್ಕಾರ ರಾಜ್ಯದ ಜನತೆಯಿಂದ ಮತ ಹಾಕಿಸಿಕೊಂಡು ಗೆದ್ದು ಸರ್ಕಾರ ನಡೆಸುತ್ತಿದೆ. ಆದರೆ ತಮಿಳುನಾಡಿಗೆ ನಿಯತ್ತಾಗಿ ನೀರು ಬಿಡುತ್ತಿದೆ. ಇದೊಂದು ರಾಜ್ಯ ರೈತ ವಿರೋಧಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DCM DK Shivakumar Cauvery dispute) ಅವರು ತಮಿಳುನಾಡಿನವರನ್ನು ನಮ್ಮ ಅಣ್ಣತಮ್ಮಂದಿರು ಎನ್ನುತ್ತಾರೆ. ಹಾಗಾದರೆ ಅವರು ಗೆದ್ದಿರುವುದು ತಮಿಳುನಾಡಿನವರಿಂದಲೋ ಅಥವಾ ಕರ್ನಾಟಕದವರಿಂದಲೋ ಎಂದು ಪ್ರಶ್ನಿಸಿದರು. ಇಲ್ಲಿರುವುದಕ್ಕೆ ಬದಲಾಗಿ ಅವರು ತಮಿಳುನಾಡಿಗೆ ಹೋಗಿ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ತಾಲ್ಲೂಕು ಮುಖಂಡ ಸುಬ್ರಹ್ಮಣಿ ಮಾತನಾಡಿ ರಾಜ್ಯದಲ್ಲಿ ತೀವ್ರ ಮಳೆಯ ಸಮಸ್ಯೆಯಾಗಿದ್ದು ಕುಡಿಯುವ ನೀರಿಗೂ ಹಾಹಾಕಾರ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದರ ಮೂಲಕ ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದೆ. ಮತ್ತೊಂದೆಡೆ ರಾಜ್ಯ ಎಲ್ಲಾ ಸಂಸದರು ಬಾಯಿ ಬಿಡದೆ ಸುಮ್ಮನಿದ್ದಾರೆ. ಇದರ ಅರ್ಥ ಅವರು ತಮಿಳುನಾಡಿನವರಿಗೆ ನಿಯತ್ತಾಗಿ ಇದ್ದಾರೆ ಎಂದರ್ಥ ಅಲ್ಲವೆ. ಅವರು ಕರ್ನಾಟಕದ ಮಕ್ಕಳೋ ಇಲ್ಲ ತಮಿಳುನಾಡಿನ ಮಕ್ಕಳೋ. ಈ ರೀತಿ ಬಾಯಿ ಮುಚ್ಚಿಕೊಳ್ಳುವ ಬದಲು ಸಂಸದರು ಕೈಗೆ ಬಳೆತೊಟ್ಟುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದು ಸಣ್ಣದಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದೆ ತೀವ್ರವಾಗಿ ಸ್ವರೂಪದಲ್ಲಿ ಪ್ರತಿಭಟಿಸಲಿದ್ದೇವೆ ಎಂದರು. 

Cauvery water disputee pro kannadigas protest agains govt of karnataka at kodagu rav

ಕರ್ನಾಟಕ ಬಂದ್‌ ಬೆನ್ನಲ್ಲೇ ಅ.5ರಂದು ಕೆಆರ್‌ಎಸ್‌ಗೆ ಮುತ್ತಿಗೆಗೆ ಕರೆಕೊಟ್ಟ ವಾಟಾಳ್‌ ನಾಗರಾಜ್‌

ಕಾವೇರಿ ನೀರನ್ನು ನದಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಅಖಂಡ ಕರ್ನಾಟಕ ಬಂದ್ ನಡೆಯುತ್ತಿದ್ದು ಕೊಡಗಿನಲ್ಲಿ ಬಂದ್ ಬಿಸಿ ತಟ್ಟಿಲ್ಲ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಐದು ತಾಲ್ಲೂಕು ಕೇಂದ್ರಗಳಲ್ಲೂ ಬಂದಿನ ಯಾವುದೇ ಎಫೆಕ್ಟ್ ಕಾಣಲಿಲ್ಲ. ಮಡಿಕೇರಿಯಲ್ಲಿ ಎಂದಿನಂತೆ ಎಲ್ಲಾ ಅಂಡಿ ಮುಂಗಟ್ಟುಗಳು ತೆರಿದಿದ್ದವು. ಸಾರಿಗೆ ಸಂಚಾರವೂ ಎಂದಿನಂತೆ ಇತ್ತು. ರಾಜ್ಯ ಸರ್ಕಾರಿ ಸಾರಿಗೆ, ಖಾಸಗಿ ಬಸ್ಸುಗಳ ಸಂಚಾರ ಮತ್ತು ಆಟೋ ಹಾಗೂ ಖಾಸಗಿ ವಾಹನಗಳ ಓಡಾಟವೂ ಎಂದಿನಂತೆಯೇ ಇತ್ತು. ಎಂದಿನಂತೆ ಶಾಲಾ ಕಾಲೇಜುಗಳು ನಡೆದವು. 8.45 ಕ್ಕೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳತ್ತ ಹೆಜ್ಜೆ ಹಾಕಿದರು. 

ಇನ್ನು ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾವೇದಿಕೆ ಕೊಡಗಿನ ಮುಖಂಡರು ಶುಕ್ರವಾರವೇ ಜಿಲ್ಲೆಯಲ್ಲಿ ಬಂದಿಗೆ ನಮ್ಮ ಯಾವುದೇ ಬೆಂಬಲ ಇಲ್ಲ ಎಂದು ಘೋಷಿಸಿದ್ದರು. ಇನ್ನು ಗೋಣಿಕೊಪ್ಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು, ರೈತ ಮುಖಂಡರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಕಾವೇರಿಗಾಗಿ ಅಖಂಡ ಕರ್ನಾಟಕ ಬಂದ್ ಗೆ ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

Follow Us:
Download App:
  • android
  • ios