Asianet Suvarna News Asianet Suvarna News

ರೈತರಿಗೆ ತೊಂದರೆ ಆದ್ರೆ ನಾವು ಸುಮ್ಮನೆ ಕೂರಬೇಕಾ? ರೈತಪರ ಹೋರಾಟಕ್ಕೆ ನಾನು ಸಿದ್ಧ: ನಟಿ ರಾಗಿಣಿ ದ್ವಿವೇದಿ

ನಮ್ಮ ರೈತರಿಗೆ ನೀರಿಲ್ಲ ತಮಿಳನಾಡಿಗೆ ಎಲ್ಲಿಂದ ಬಿಡೋದು ಎಂದು ಪ್ರಶ್ನಿಸಿರುವ ನಟಿ ರಾಗಿಣಿ ದ್ವಿವೇದಿ ತಮಿಳನಾಡಿಗೆ ನೀರುಬಿಡುತ್ತಿರುವ ರಾಜ್ಯಸರ್ಕಾರದ ನಡೆಗೆ ತೀವ್ರವಾಗಿ ಖಂಡಿಸಿದ್ದಾರೆ. ಮೊದಲ ನಮ್ಮ ರೈತರಿಗೆ ನೀರು ಬೇಕು. ರೈತರಿದ್ದರೆ ಬೆಳೆ, ಬೆಳೆ ಇದ್ದರೆ ನಾವು. ರೈತರು ಸಂಕಷ್ಟದಲ್ಲಿರುವಾಗ ಇಂಥ ಸಮಯದಲ್ಲಿ ತಮಿಳನಾಡಿಗೆ ನೀರು ಬಿಡುವುದು ಸರಿಯಲ್ಲ. ರೈತರ ಪರವಾಗಿ ನಾವು ಹೋರಾಟಕ್ಕೆ ಸದಾ ಸಿದ್ಧ ಎಂದಿದ್ದಾರೆ. 

Cauvery water dispute sandalwood actress ragini dwivedi reaction at KIL bengaluru rav
Author
First Published Sep 26, 2023, 11:26 PM IST

ಬೆಂಗಳೂರು (ಸೆ.26) ರಾಜ್ಯಾದ್ಯಂತ ಕಾವೇರಿ ನೀರಿಗಾಗಿ ರೈತ, ಕನ್ನಡಪರ ಸಂಘಟನೆಗಳಿಂದ ಹೋರಾಟ ತೀವ್ರಗೊಂಡಿದೆ, ಇಂದು ನಡೆದ ಬೆಂಗಳೂರು ಬಂದ್‌ಗೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ. 

ಈ ಮಧ್ಯೆ ಕನ್ನಡ ಚಲನಚಿತ್ರರಂಗದ ಕಲಾವಿದರು ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ನಟ ದರ್ಶನ, ಸುದೀಪ್, ರಾಘವೇಂದ್ರ ರಾಜಕುಮಾರ, ದ್ರುವ ಸರ್ಜಾ ಅಷ್ಟೇ ಅಲ್ಲದೆ ನಾಯಕಿಯರು ಸಹ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿ ಬೆಂಬಲ ಸೂಚಿಸಿದ್ದಾರೆ.

ಕಾವೇರಿ ಹೋರಾಟಕ್ಕೆ ಟ್ವೀಟ್‌ನಲ್ಲೇ ಬೆಂಬಲಿಸಿದ ಕಿಚ್ಚ ಸುದೀಪ್: ಬೀದಿಗಿಳಿದು ಹೋರಾಡುವಂತೆ ನೆಟ್ಟಿಗರ ತಾಕೀತು!

ನಮ್ಮ ರೈತರಿಗೆ ನೀರಿಲ್ಲ ತಮಿಳನಾಡಿಗೆ ಎಲ್ಲಿಂದ ಬಿಡೋದು ಎಂದು ಪ್ರಶ್ನಿಸಿರುವ ನಟಿ ರಾಗಿಣಿ ದ್ವಿವೇದಿ ತಮಿಳನಾಡಿಗೆ ನೀರುಬಿಡುತ್ತಿರುವ ರಾಜ್ಯಸರ್ಕಾರದ ನಡೆಗೆ ತೀವ್ರವಾಗಿ ಖಂಡಿಸಿದ್ದಾರೆ. ಮೊದಲ ನಮ್ಮ ರೈತರಿಗೆ ನೀರು ಬೇಕು. ರೈತರಿದ್ದರೆ ಬೆಳೆ, ಬೆಳೆ ಇದ್ದರೆ ನಾವು. ರೈತರು ಸಂಕಷ್ಟದಲ್ಲಿರುವಾಗ ಇಂಥ ಸಮಯದಲ್ಲಿ ತಮಿಳನಾಡಿಗೆ ನೀರು ಬಿಡುವುದು ಸರಿಯಲ್ಲ. ರೈತರ ಪರವಾಗಿ ನಾವು ಹೋರಾಟಕ್ಕೆ ಸದಾ ಸಿದ್ಧ ಎಂದಿದ್ದಾರೆ. 

ಬೆಂಗಳೂರು ಬಂದ್‌ ಭದ್ರತೆಗೆ ಬಂದ ಪೊಲೀಸರಿಗೆ ಇಲಿಯ ಊಟ ಕೊಟ್ಟ ಸರ್ಕಾರ

ರೈತರಿಗೆ ತೊಂದರೆ ಆದ್ರೆ ನಾವು ಸುಮ್ಮನೆ ಕೂರೋದಿಲ್ಲ: ಇಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಟಿ ರಾಗಿಣಿ. ನಮ್ಮ ರೈತರು ನೀರಿಲ್ಲದೆ ಸಂಕಷ್ಟದಲ್ಲಿದ್ದಾರೆ. ಇಂಥ ಸಮಯದಲ್ಲಿ ನಾವು ನೋಡಿಕೊಂಡು ಸುಮ್ಮನೆ ಕೂರಬೇಕಾ? ನಾವು ರೈತರ ಹೋರಾಟದಲ್ಲಿ ಭಾಗಿಯಾಗುತ್ತೇವೆ. ಕರ್ನಾಟಕ ನಮ್ಮ ಮನೆ, ನಮ್ಮ ರೈತರ ಹಿತ ಮುಖ್ಯ. ಕನ್ನಡ ಚಿತ್ರರಂಗ ಯಾವಾಗಲೂ ರೈತರ ಬೆಂಬಲಕ್ಕಿರುತ್ತದೆ ಎಂದಿರುವ ಅವರು,  ಶುಕ್ರವಾರ ನಡೆಯಲಿರುವ ಬಂದ್‌ಗೆ ನಾನು ಖುದ್ದು ಹೋಗಿ ಬೆಂಬಲ ಕೊಡುತ್ತೇನೆ. ರೈತರೊಂದಿಗೆ ಹೋರಾಟಕ್ಕಿಳಿಯುತ್ತೇನೆ ಎಂದರು. 

ಒಟ್ಟಿನಲ್ಲಿ ದಿನೇದಿನೆ ಹೋರಾಟ ತೀವ್ರಗೊಳ್ಳುತ್ತಿದ್ದು, ಇದಕ್ಕೆ ಈಗ ರಾಜ್ಯಾದ್ಯಂತ ಎಲ್ಲ ಸಂಘಟನೆಗಳು ಬೆಂಬಲ ಸೂಚಿಸಿ ಹೋರಾಟಕ್ಕೆ ಮುಂದಾಗಿವೆ. 

Follow Us:
Download App:
  • android
  • ios