ಎರಡೆರಡು ಬಂದ್ ಮಾಡಿದರೂ ತಲೆಕೆಡಿಸಿಕೊಳ್ಳದ ಪ್ರಾಧಿಕಾರ, ನೀರು ಬಿಡಿ ಎಂದು ಕರ್ನಾಟಕಕ್ಕೆ ಮತ್ತೆ ಸೂಚನೆ!
ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ಹೊಡೆದಿದೆ. ಮುಂದಿನ 18 ದಿನ ತಮಿಳುನಾಡಿಗೆ ಪ್ರತಿದಿನವೂ 3 ಸಾವಿರ ಕ್ಯುಸೆಕ್ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದೆ.
ಬೆಂಗಳೂರು (ಸೆ.29): ಒಂದೇ ವಾರದಲ್ಲಿ ಎರಡೆರಡು ಬಂದ್ ನಡೆಸಿದರೂ, ಕರ್ನಾಟಕದ ಪ್ರತಿಭಟನೆಗೆ ಕಿಮ್ಮತ್ತೇ ಇಲ್ಲ ಎನ್ನುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮುಂದಿನ 18 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ ಮೂರು ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಆದೇಶ ನೀಡಿದೆ. ಅದರೊಂದಿಗೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಆದೇಶವನ್ನೇ ಪ್ರಾಧಿಕಾರ ಎತ್ತಿ ಹಿಡಿದಿದೆ. ದೆಹಲಿಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಪ್ರಾಧಿಕಾರ ಈ ತೀರ್ಮಾನ ಕೈಗೊಂಡಿದೆ. ಅಕ್ಟೋಬರ್ 15ರವರೆಗೂ ತಮಿಳುನಾಡಿಗೆ 3 ಸಾವಿರ ಕ್ಯುಸೆಕ್ ನೀರು ಹರಿಸಬೇಕು ಎಂದು ಸೀಚನೆ ನೀಡಲಾಗಿದೆ. ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಪ್ರಾಧಿಕಾರ ಆದೇಶ ಎತ್ತಿಹಿಡಿದ ಬೆನ್ನಲ್ಲಿಯೇ ಮಂಡ್ಯದಲ್ಲಿ ಪ್ರತಿಭಟನೆ ಜೋರಾಗಿದೆ. ತಮಿಳುನಾಡಿಗೆ ನೀರು ಹರಿಸುವ ಆದೇಶದ ಬೆನ್ನಲ್ಲಿಯೇ ಸಭೆಯಲ್ಲಿಯೇ ಎರಡೂ ರಾಜ್ಯ ಅಧಿಕಾರಿಗಳು ಗಲಾಟೆ ನಡೆಸಿದ್ದಾರೆ ಎಂದೂ ವರದಿಯಾಗಿದೆ. 3 ಸಾವಿರ ಕ್ಯುಸೆಕ್ ನೀರು ಹರಿಸಿ ಎಂದು ಆದೇಶ ನೀಡಿದ ಬೆನಲ್ಲಿಯೇ ಕರ್ನಾಟಕ ಹಾಗೂ ತಮಿಳುನಾಡಿನ ಅಧಿಕಾರಿಗಳು ವಾಕ್ಸಮರ ನಡೆಸಿದ್ದಾರೆ ಎನ್ನಲಾಗಿದೆ.
ಇದರ ಬೆನ್ನಲ್ಲಿಯೇ ಮಾತನಾಡಿರುವ ಸಿಎಂ ಸಿದ್ಧರಾಮಯ್ಯ, ಇಂದು ಪ್ರಾಧಿಕಾರದ ಸಭೆ ಇತ್ತು. ಪ್ರಾಧಿಕಾರ ನೀಡಿರುವ ತೀರ್ಪಿನ ಬಗ್ಗೆ ಚರ್ಚೆ ಮಾಡಲಿದ್ದೇವೆ. ಇವತ್ತು ಮಾಜಿ ನ್ಯಾಯಮೂರ್ತಿಗಳ ಸಭೆಯನ್ನು ಕರೆದಿದ್ದೇನೆ. ಈ ಬಗ್ಗೆ ಅವರಲ್ಲಿ ಚರ್ಚೆ ಮಾಡಲಿದ್ದೇವೆ. ಮುಂದೆ ನಾವು ಏನ್ ಮಾಡಬೇಕು ಅನ್ನೋದರ ಬಗ್ಗೆ ತೀರ್ಮಾನ ಮಾಡುತ್ತೇವೆ. ನಾವು ವಾಸ್ತವ ವಿಚಾರ ಅವರ ಮುಂದೆ ಹೇಳುತ್ತಿದ್ದೇವೆ. ಆದರೂ ನಮಗೆ ಹಿನ್ನಡೆ ಆಗುತ್ತಿದೆ. ಇವತ್ತಿನ ಸಭೆಯಲ್ಲಿ ಎನೇನ್ ಮಾಡಬಹುದು ಅಂತ ಸಮಾಲೋಚನೆ ಮಾಡುತ್ತೇವೆ. ಸಲಹೆಯಂತೆ ಸರ್ಕಾರದ ತಿರ್ಮಾನ ಇರಲಿದೆ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲಿಯೇ ಮಾತನಾಡಿರುವ ಸಿಎಂ ಸಿದ್ಧರಾಮಯ್ಯ, ಇಂದು ಪ್ರಾಧಿಕಾರದ ಸಭೆ ಇತ್ತು. ಪ್ರಾಧಿಕಾರ ನೀಡಿರುವ ತೀರ್ಪಿನ ಬಗ್ಗೆ ಚರ್ಚೆ ಮಾಡಲಿದ್ದೇವೆ. ಇವತ್ತು ಮಾಜಿ ನ್ಯಾಯಮೂರ್ತಿಗಳ ಸಭೆಯನ್ನು ಕರೆದಿದ್ದೇನೆ. ಈ ಬಗ್ಗೆ ಅವರಲ್ಲಿ ಚರ್ಚೆ ಮಾಡಲಿದ್ದೇವೆ. ಮುಂದೆ ನಾವು ಏನ್ ಮಾಡಬೇಕು ಅನ್ನೋದರ ಬಗ್ಗೆ ತೀರ್ಮಾನ ಮಾಡುತ್ತೇವೆ. ನಾವು ವಾಸ್ತವ ವಿಚಾರ ಅವರ ಮುಂದೆ ಹೇಳುತ್ತಿದ್ದೇವೆ. ಆದರೂ ನಮಗೆ ಹಿನ್ನಡೆ ಆಗುತ್ತಿದೆ. ಇವತ್ತಿನ ಸಭೆಯಲ್ಲಿ ಎನೇನ್ ಮಾಡಬಹುದು ಅಂತ ಸಮಾಲೋಚನೆ ಮಾಡುತ್ತೇವೆ. ಸಲಹೆಯಂತೆ ಸರ್ಕಾರದ ತಿರ್ಮಾನ ಇರಲಿದೆ. ಇವತ್ತಿನ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಬಹುದಾ ಅಂತ ಲೀಗಲ್ ಟೀಮ್‌ನ ಎದುರು ಕೇಳಲಿದ್ದೇವೆ ಎಂದು ಹೇಳಿದ್ದಾರೆ.
ತಮಿಳು ನಟ ಸಿದ್ಧಾರ್ಥನಿಗೆ ಕಾವೇರಿ ಹೋರಾಟದ ವೇದಿಕೆಯಲ್ಲಿಯೇ ಕ್ಷಮೆ ಕೇಳಿದ ನಟ ಶಿವರಾಜ್ ಕುಮಾರ್!
ಇದರೊಂದಿಗೆ ಸಭೆಯಲ್ಲಿ ತಮಿಳುನಾಡು 12.5 ಟಿಎಂಸಿ ಬ್ಯಾಕ್‌ಲಾಗ್ ನೀರನ್ನು ನೀಡುವಂತೆ ಮನವಿ ಮಾಡಿತ್ತು. ಆದರೆ, ಬ್ಯಾಕ್ ಲಾಗ್ ನೀರು ಬಿಡುವ ವಿಚಾರದಲ್ಲಿ ಕರ್ನಾಟಕಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ನೀರಾವರಿ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಮಾತನಾಡಿದ್ದು, ಬ್ಯಾಕ್ ಲಾಗ್ ನೀರನ್ನು ನೀಡಲು ತಮಿಳುನಾಡು ಮನವಿ ಮಾಡಿತ್ತು. ಅದಕ್ಕೆ ಸ್ಪಷ್ಟವಾಗಿ ಇಲ್ಲ ಎಂದು ಹೇಳಿದ್ದೇವೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನ ದಾಹ ಇಂಗಿಸಲು ರಾಮನಗರದ ಡ್ಯಾಂಗಳ ಮೇಲೆ ಸರ್ಕಾರದ ವಕ್ರದೃಷ್ಟಿ..!
ನಮ್ಮ ಜಲಾಶಯಗಳ ಪರಿಸ್ಥಿತಿ ಕೆಟ್ಟದಾಗಿದೆ. ನಾವು ನೀರು ಹರಿಸಲು ಸಾಧ್ಯವಾಗದಂಥ ಪರಿಸ್ಥಿತಿ ಇದೆ. ಆದರೆ, ನಮ್ಮ ಮಾತನ್ನು ಅಧಿಕಾರಿಗಳು ರಿಜೆಕ್ಟ್ ಮಾಡಿದ್ದಾರೆ. 3 ಸಾವಿರ ಕ್ಯುಸೆಕ್ ನೀರು ಬಿಡೋದನ್ನು ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ. ಇನ್ನು ತಮಿಳುನಾಡು 12.5 ಟಿಎಂಸಿ ಬ್ಯಾಕ್ ಲಾಗ್ ನೀರಿಗೂ ಸಭೆಯಲ್ಲಿ ಬೇಡಿಕೆ ಇಟ್ಟಿತ್ತು. ಅದನ್ನು ಮೊದಲು ಬಿಡುಗಡೆ ಮಾಡಬೇಕು ಎಂದಿತ್ತು. ಅದಲ್ಲದೆ, ಅಕ್ಟೋಬರ್ 15ರ ವರೆಗೂ 12500 ಕ್ಯುಸೆಕ್ ನೀರು ಬೇಕು ಎಂದು ಕೇಳಿತ್ತು. ಇದೆಲ್ಲವನ್ನೂ ಕೇಳಿದ ಪ್ರಾಧಿಕಾರಿ 3 ಸಾವಿರ ಕ್ಯುಸೆಕ್ ನೀರುವ ಬಿಡುವಂತೆ ಆದೇಶ ನೀಡಿದೆ ಎಂದು ತಿಳಿಸಿದ್ದಾರೆ.