ಕನ್ನಡ ಸಿನಿಮಾ ಕ್ಷೇತ್ರದ ಕಡೆಯಂದ ಸಿದ್ಧಾರ್ಥ ಅವರೇ ರಿಯಲಿ ಸಾರಿ. ಇಲ್ಲಿ ನಡೆದ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಇನ್ನೊಂದು ಸಾರಿ ಈ ರೀತಿ ಮಿಸ್ಟೇಕ್‌ ಆಗೋದಿಲ್ಲ.

ಬೆಂಗಳೂರು (ಸೆ.29): ಕನ್ನಡ ಸಿನಿಮಾ ಕ್ಷೇತ್ರದ ಕಡೆಯಂದ ಸಿದ್ಧಾರ್ಥ ಅವರೇ ರಿಯಲಿ ಸಾರಿ. ಇಲ್ಲಿ ನಡೆದ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಇನ್ನೊಂದು ಸಾರಿ ಈ ರೀತಿ ಮಿಸ್ಟೇಕ್‌ ಆಗೋದಿಲ್ಲ. ಕನ್ನಡ ಜನ ತುಂಬಾ ಒಳ್ಳೆಯವರು. ಎಲ್ಲ ಭಾಷೆಯವರನ್ನು ಪ್ರೀತಿಸುತ್ತಾರೆ ಎಂದು ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ಶಿವರಾಜ್‌ ಕುಮಾರ್‌ ಕಾವೇರಿ ಹೋರಾಟದ ವೇದಿಕೆಯಲ್ಲಿಯೇ ತಮಿಳು ನಟ ಸಿದ್ಧಾರ್ಥ್‌ಗೆ ಕ್ಷಮೆ ಕೇಳಿದ್ದಾರೆ.

ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಿಂದ ಆಯೋಜಿಸಲಾಗಿದ್ದ ಕರ್ನಾಟಕ ಬಂದ್‌ಗೆ ಬೆಂಬಲಿಸಿ ಹೋರಾಟದ ವೇದಿಕೆಯಲ್ಲಿ ಮಾತನಾಡಿದ ಅವರು, ಕಾವೇರಿ ಹೋರಾಟದ ಪರಿಸ್ಥಿತಿಯನ್ನು ನಾವು ನೋಡಿಕೊಂಡು ಅಡ್ವಾಂಟೇಜ್‌ ತೆಗೆದುಕೊಳ್ಳಬಾರದು. ಬೆಂಗಳೂರಿನಲ್ಲಿ ಅನ್ಯ ಭಾಷೆಯ ಸಿನಿಮಾದ ಪ್ರಮೋಷನ್‌ ಪ್ರೆಸ್‌ ಮೀಟ್‌ ಮಾಡುವಾಗ ಕೆಲವರು ಅಡ್ಡಿಪಡಿಸಿದ್ದಾರೆಂಬ ವಿಚಾರ ತಿಳಿದು ನನಗೆ ತುಂಬಾ ನೋವಾಯಿತು. ಇವತ್ತು ನಾವು ಕನ್ನಡ ಸಿನಿಮಾ ಕ್ಷೇತ್ರದ ಕಡೆಯಂದ ಸಿದ್ಧಾರ್ಥ ಅವರೇ ರಿಯಲಿ ಸಾರಿ. ಇನ್ನೊಂದು ಸಾರಿ ಈ ರೀತಿ ಮಿಸ್ಟೇಕ್‌ ಆಗೋದಿಲ್ಲ. ಕನ್ನಡ ಜನ ತುಂಬಾ ಒಳ್ಳೆಯವರು. ಎಲ್ಲ ಭಾಷೆಯವರನ್ನು ಪ್ರೀತಿಸುತ್ತಾರೆ, ಎಲ್ಲ ಭಾಷೆಯ ಸಿನಿಮಾಗಳನ್ನು ನೋಡ್ತಾರೆಂದರೆ ಅದು ಕನ್ನಡ ಮತ್ತು ಕರ್ನಾಟಕ ಜನತೆ ಮಾತ್ರವೇ. ಇವತ್ತು ನಾವು ಜಗತ್ತಿನಲ್ಲಿ ಹೆಮ್ಮೆಯಿಂದ ಎಲ್ಲಿಯಾದರೂ ಹೇಳಿಕೊಳ್ಳಬಹುದು. ಕರ್ನಾಟಕ ಜನತೆಗೆ ಈಗಾಗಲೇ ಒಂದುಯ ಮರ್ಯಾದೆ ಇದೆ ಅದನ್ನು ನಾವು ಕಾಪಾಡಿಕೊಳ್ಳಬೇಕು ಎಂದರು.

ಕರ್ನಾಟಕ ಬಂದ್‌ ಬೆನ್ನಲ್ಲೇ ಅ.5ರಂದು ಕೆಆರ್‌ಎಸ್‌ಗೆ ಮುತ್ತಿಗೆಗೆ ಕರೆಕೊಟ್ಟ ವಾಟಾಳ್‌ ನಾಗರಾಜ್‌

ಮೊನ್ನೆ ಬೇರೆ ಭಾಷೆಯ ನಾಯಕ ಬಂದು ಮಾತನಾಡುವಾಗ ಅಲ್ಲಿ ಹೋಗಿ ಅದನ್ನು ನಿಲ್ಲಿಸಿದ್ದಾರೆ. ಅದು ತಪ್ಪಲ್ವಾ? ಆದರೆ, ಅದನ್ನು ಯಾರು ಯಾವ ಕಾರಣಕ್ಕೆ ನಿಲ್ಲಿಸಿದ್ದಾರೆ ಗೊತ್ತಿಲ್ಲ. ನಮ್ಮ ಕನ್ನಡ ಜನ ಎಲ್ಲವನ್ನೂ ಎಲ್ಲರನ್ನೂ ಸ್ವಾಗತ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಸ್ವೀಕರಿಸಬೇಕು. ಪ್ರತಿಯೊಂದು ಸಮಸ್ಯೆಯನ್ನು ನಾವು ತೆಗೆದುಕೊಳ್ಳಬೇಕು. ಸಮಸ್ಯೆ ತೆಗೆದುಕೊಳ್ಳದವನು ಮನುಷ್ಯನೇ ಅಲ್ಲ. ಇನ್ನು ಸಮಸ್ಯೆಯಿಂದ ಹೇಗೆ ಹೊರ ಬರಬೇಕು ಎಂಬುದನ್ನು ತಿಳಿದುಕೊಂಡು ಎದುರಿಸಬೇಕು. ಸುಮ್ಮನೆ ಕುಳಿತುಕೊಂಡು ಹೋರಾಟ ಮಾಡೋಣ, ಮಾತನಾಡೋಣ ಎಂದು ಹೇಳಿದರೆ ಅದಕ್ಕೆ ಪರಿಹಾರ ಸಿಗುವುದಿಲ್ಲ ಎಮದು ಹೇಳಿದರು.

ಕಾವೇರಿ ಹೋರಾಟ ಆರಂಭವಾದಾಕ್ಷಣ ರೈತರು, ಕನ್ನಡಪರ ಸಂಘಟನೆಗಳು ಹಾಗೂ ಮಾಧ್ಯಮಗಳು ಕಲಾವಿದರು ಬರಲ್ಲ ಎಂದು ಹೇಳಿದ್ದಾರೆ. ಕಲಾವಿದರು ಬಂದು ಇಲ್ಲಿ ಏನು ಮಾಡಬೇಕು? ನಾವು ಬಂದು ಇಲ್ಲಿ ನಿಂತುಕೊಳ್ಳುತ್ತೇವೆ. ಅದರಿಂದ ಸಮಸ್ಯೆ ಪರಿಹಾರ ಆಗುತ್ತದೆಯೇ? ನಮಗೆ ಸ್ಟಾರ್‌ಗಿರಿ ಕೊಟ್ಟವರೇ ನೀವು.. ಅದನ್ನು ಕಿತ್ತುಕೊಂಡುಬಿಡಿ ನೀವು ನಮಗೆ ಅದು ಬೇಡವೇ ಬೇಡ. ನೀವೇ ಸ್ಟಾರ್‌ಗಿರಿ ಕೊಟ್ಟು, ಅದನ್ನು ಕಿತ್ತುಕೊಳ್ತೀರಾ? ನಾವು 5 ನಿಮಿಷ ಬಂದು ಇಲ್ಲಿ ಕುಳಿತುಕೊಂಡು ಹೋದರೆ ಎಲ್ಲ ಸಮಸ್ಯೆ ಬಗೆಹರಿಯುತ್ತದೆಯೇ? ಸಮಸ್ಯೆ ಬಂದಾಗ ಒಂದು ಟ್ವೀಟ್‌ ಅಥವಾ ವೀಡಿಯೋ ಬಿಟ್ಟರೆ ಮಾತ್ರ ನಮಗೆ ಕಾವೇರಿ ಮೇಲೆ ಪ್ರೀತಿ ಇದೆ ಎಂದು ಹೇಳಲು ಸಾಧ್ಯವಿಲ್ಲ. ಯಾವಾಗಲೂ ನಮ್ಮ ಜನಗಳ ಮೇಲೆ ಮರ್ಯಾದೆ, ನಮ್ಮ ರೈತರ ಮೇಲೆ ಗೌರವ ಇರುವುದಿಲ್ಲವೇ ಎಂದು ನಟ ಶಿವರಾಜ್‌ ಕುಮಾರ್‌ ಹೇಳಿದರು.

ಇಂಡಿ ಒಕ್ಕೂಟದ ದೋಸ್ತಿಯನ್ನು ಕಾವೇರಿ ನೀರಿಗಾಗಿ, ಮೇಕೆದಾಟು ಯೋಜನೆಗಾಗಿ ಬಳಸಿ: ಸಂಸದ ತೇಜಸ್ವಿ ಸೂರ್ಯ

ಕಾವೇರಿ ಸಮಸ್ಯೆಗೆ ನಾವು ಆರಿಸಿರುವ ನಮ್ಮ ಸರ್ಕಾರ, ತಮಿಳುನಾಡು ಸರ್ಕಾರದ ನಾಯಕರು ಕುಳಿತುಕೊಂಡು ಒಪ್ಪಂದ ಮಾಡಿಕೊಳ್ಳಬೇಕು. ಕರ್ನಾಟಕ ರೈತರು, ತಮಿಳುನಾಡು ರೈತರು ಹಾಗೂ ಆಂಧ್ರ ರೈತರು ಬೇರೆ ಅಲ್ಲ. ಆದರೆ, ಈ ಸಮಸ್ಯೆ ಬಂದಾಗ ನಾವು ಆಯ್ಕೆ ಮಾಡಿದ ಸರ್ಕಾರ, ನ್ಯಾಯಾಲಯ ನಿರ್ಧಾರ ಮಾಡಬೇಕು. ಹೋರಾಟ ಹೋರಾಟ ಎಂದರೆ ಯಾವ ರೀತಿ ಮಾಡಬೇಕು. ದಾರಿಯಲ್ಲಿ ಹೋಗುವ ಬಸ್‌ ಮೇಲೆ ಕಲ್ಲು ಎಸೆದರೆ ಹೋರಾಟ ಆಗುತ್ತದೆಯೇ. ಅದಕ್ಕೆ ಹೋರಾಟ ಎನ್ನುವುದಿಲ್ಲ ಎಂದು ನಟ ಶಿವರಾಜ್‌ ಕುಮಾರ್‌ ಸಲಹೆ ನೀಡಿದರು.