Asianet Suvarna News Asianet Suvarna News

ಕುರುಬೂರು ಶಾಂತಕುಮಾರ್ V/s ಕನ್ನಡ ಸಂಘಟನೆಗಳು! ಪ್ರತಿಷ್ಟೆಯ ಕದನಕ್ಕೆ ಡಬಲ್ ಬಂದ್!

ಕಾವೇರಿ ಜಲವಿವಾದ ವಿಚಾರವಾಗಿ ಮಂಗಳವಾರ ಬೆಂಗಳೂರು ಬಂದ್‌ಗೆ ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಕರೆ ನೀಡಲಾಗಿದೆ. ಆದರೆ ಇದಕ್ಕೆ ಕನ್ನಡ ಪರ ಸಂಘಟನೆಗಳು ಈ ವಿಚಾರವಾಗಿ ತಟಸ್ಥ ಧೋರಣೆ ತಾಳಿವೆ.

Cauvery river dispute bengaluru bandh issue Disagreement between pro kannada organize and kuruburu shantakumar rav
Author
First Published Sep 24, 2023, 3:49 PM IST

ಬೆಂಗಳೂರು (ಸೆ.24) ಕಾವೇರಿ ಜಲವಿವಾದ ವಿಚಾರವಾಗಿ ಮಂಗಳವಾರ ಬೆಂಗಳೂರು ಬಂದ್‌ಗೆ ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಕರೆ ನೀಡಲಾಗಿದೆ. ಆದರೆ ಇದಕ್ಕೆ ಕನ್ನಡ ಪರ ಸಂಘಟನೆಗಳು ಈ ವಿಚಾರವಾಗಿ ತಟಸ್ಥ ಧೋರಣೆ ತಾಳಿವೆ.

ಯಾವ್ದೇ ಕಾರಣಕ್ಕೂ 26ಕ್ಕೆ ಬಂದ್ ವಾಪಾಸ್ ಪಡೆಯಲ್ಲ ಅಂತಿದ್ದಾರೆ ಕುರುಬರು ಶಾಂತಕುಮಾರ್, ಇತ್ತ ಸೆ.29ಕ್ಕೆ ಕರ್ನಾಟಕ ಬಂದ್(Karnataka bandh kuruburu shantakumar) ನಡೆಸಿಯೇ ಸಿದ್ಧ ಅಂತಿರೋ ಕನ್ನಡ ಸಂಘಟನೆಗಳು. 26ಕ್ಕೆ ಬೆಂಗಳೂರು ಬಂದ್  ವಾಪಾಸ್ ಪಡೆಯುವಂತೆ ಕನ್ನಡಪರ ಸಂಘಟನೆಗಳಿಂದ ಕುರುಬರು ಶಾಂತಕುಮಾರ್ ಗೆ ಮನವಿ. ಅದರೆ ಇದಕ್ಕೆ ಒಪ್ಪದ ಕುರುಬೂರು ಶಾಂತ ಕುಮಾರ್. ಹೀಗಾಗಿ ಮಂಗಳವಾರ ನಡೆಯಲಿರುವ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎನ್ನುತ್ತಿರುವ ಕನ್ನಡ ಸಂಘಟನೆಗಳು(Kannada organization). ಅದರ ಬದಲಿ ನಾವು ಸೆ.29ರಂದು ಬಂದ್ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಇಬ್ಬರ ನಡುವಿನ ಪ್ರತಿಷ್ಠೆಗೆ ಬೆಂಗಳೂರಲ್ಲಿ ಎರಡೆರಡು ಬಂದ್ ಗಳು ನಡೆಯುವ ಸಾಧ್ಯತೆಯಿದೆ. 

ಕಾವೇರಿ ಜಲವಿವಾದ: ಮಂಗಳವಾರ ಬೆಂಗಳೂರು ಬಂದ್‌ಗೆ ಈ ಸಂಘಟನೆಗಳು ಸಾಥ್; ಪೊಲೀಸ್ ಸರ್ಪಗಾವಲು!

ಸುದ್ದಿಗೋಷ್ಠಿ ಕರೆದಿರುವ ಕುರುಬೂರು ಶಾಂತಕುಮಾರ. ಸುದ್ದಿಗೋಷ್ಠಿ ಬಳಿಕ ಬೆಂಗಳೂರು ಬಂದ್ ಬಗ್ಗೆ ಸ್ಪಷ್ಟ ನಿಲುವು ಗೊತ್ತಾಗಲಿದೆ. ಜಲಸಂರಕ್ಷಣಾ ಸಮಿತಿ ಸದಸ್ಯ ಹಾಗೂ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕೂಡ ಆಗಮನ ಆಟೋ ಯೂನಿಯನ್ ಮುಖಂಡರು ಕೂಡ ಆಗಮಿಸಿದ್ದಾರೆ. 

Follow Us:
Download App:
  • android
  • ios